Just In
Don't Miss!
- News
ಗಗನಕ್ಕೇರಿದ ಪೆಟ್ರೋಲ್, ಡೀಸೆಲ್ ದರ: ಹೊಸ ದಾಖಲೆ ಸೃಷ್ಟಿ
- Sports
'ಭಾರತೀಯರಿಗೆ ಹೋಲಿಸಿದರೆ ಯುವ ಆಸೀಸ್ ಇನ್ನೂ ಪ್ರೈಮರಿ ಶಾಲೆಯಲ್ಲಿದೆ'
- Lifestyle
ಕೊಲೆಸ್ಟ್ರಾಲ್ ಹೆಚ್ಚಾಗಿದೆಯೇ? ಈ ಆಹಾರ ಸೇವಿಸಿ
- Education
RITES Limited Recruitment 2021: ವಿವಿಧ 9 ಹುದ್ದೆಗಳಿಗೆ ಅರ್ಜಿ ಆಹ್ವಾನ
- Movies
ದುಬಾರಿ ವಿವಾಹ; ವರುಣ್ ಧವನ್ ಮದುವೆ ನಡೆಯುತ್ತಿರುವ ಐಷಾರಾಮಿ ಹೋಟೆಲ್ ಗೆ ಇಷ್ಟೊಂದು ಖರ್ಚು ಮಾಡುತ್ತಿದ್ದಾರಾ?
- Finance
ಬಜೆಟ್ 2021: ಜ. 23ರಂದು ಹಲ್ವಾ ಕಾರ್ಯಕ್ರಮ- ಇದೇನು, ಎತ್ತ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಶೀಘ್ರದಲ್ಲಿಯೇ ಹರಾಜಾಗಲಿವೆ ಡಬಲ್ ಡೆಕ್ಕರ್ ಬಸ್ಸುಗಳು
ಬೃಹನ್ಮುಂಬೈ ಎಲೆಕ್ಟ್ರಿಕ್ ಸಪ್ಲೈ ಅಂಡ್ ಟ್ರಾನ್ಸ್ ಪೋರ್ಟ್ (ಬೆಸ್ಟ್) ನಿಗಮವು ಶೀಘ್ರದಲ್ಲೇ ಮುಂಬಯಿಯಲ್ಲಿ ಹಳೆಯ ಡಬಲ್ ಡೆಕ್ಕರ್ ಬಸ್ಸುಗಳನ್ನು ಹರಾಜು ಹಾಕಲಿದೆ. 15 ವರ್ಷಕ್ಕಿಂತ ಹಳೆಯದಾದ ಬಸ್ಸುಗಳನ್ನು ಮಾತ್ರ ಹರಾಜು ಹಾಕಲಾಗುತ್ತದೆ.

ಸದ್ಯ ಬೆಸ್ಟ್ 120 ಡಬಲ್ ಡೆಕ್ಕರ್ ಬಸ್ಸುಗಳನ್ನು ಹೊಂದಿದ್ದು, ಅವುಗಳಲ್ಲಿ 100 ಹಳೆಯ ಬಸ್ಸುಗಳಿವೆ. ಹಂತ ಹಂತವಾಗಿ ಇವುಗಳ ಬದಲಿಗೆ ಹೊಸ ಬಸ್ಸುಗಳನ್ನು ಖರೀದಿಸಲಾಗುವುದು. ಮುಂದಿನ ವರ್ಷ ಮುಂಬೈನಲ್ಲಿ ಮತ್ತೆ ಡಬಲ್ ಡೆಕ್ಕರ್ ಬಸ್ಸುಗಳು ಸಂಚರಿಸಲಿವೆ. ಡಬಲ್ ಡೆಕ್ಕರ್ ಬಸ್ಸುಗಳು ಒಂದು ಕಾಲದಲ್ಲಿ ಮುಂಬಯಿಯ ವಿಶಿಷ್ಟ ಸಾರಿಗೆ ಲಕ್ಷಣವಾಗಿದ್ದವು.

ಈ ಡಬಲ್ ಡೆಕ್ಕರ್ ಬಸ್ಸುಗಳು ಅಶೋಕ್ ಲೇಲ್ಯಾಂಡ್ ಕಂಪನಿಗೆ ಸೇರಿವೆ. ಮುಂಬೈನಲ್ಲಿ ಈ ಬಸ್ಸುಗಳನ್ನು ಲಂಡನ್ ನಗರದಲ್ಲಿ ಸಂಚರಿಸುವ ಎಇಸಿ ರೂಟ್ ಮಾಸ್ಟರ್ ಬಸ್ ಮಾದರಿಗಳೊಂದಿಗೆ ಚಾಲನೆ ಮಾಡಲಾಗುತ್ತಿತ್ತು. ಸಾರ್ವಜನಿಕರ ಒತ್ತಾಯದ ಮೇರೆಗೆ ಬೆಸ್ಟ್ ನಿಗಮವು ಈ ಬಸ್ಸುಗಳ ಸಂಚಾರವನ್ನು ಪುನರಾರಂಭಿಸಲಿದೆ.
MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಬೆಸ್ಟ್ ನಿಗಮವು ಈಗ ಚಾಲನೆಯಲ್ಲಿರುವ 75 ಬಸ್ಸುಗಳನ್ನು ಬದಲಿಸಿ ಶೀಘ್ರದಲ್ಲೇ 100 ಹೊಸ ಡಬಲ್ ಡೆಕ್ಕರ್ ಬಸ್ಸುಗಳ ಸಂಚಾರವನ್ನು ಆರಂಭಿಸಲಿದೆ. ಈ ಹೊಸ ಬಸ್ಸುಗಳು ಹಲವಾರು ಆಧುನಿಕ ಫೀಚರ್ ಗಳನ್ನು ಹೊಂದಿವೆ.

ಈ ಬಸ್ಸುಗಳಲ್ಲಿ ಸಿಸಿಟಿವಿ ಕ್ಯಾಮೆರಾ, ಡ್ರೈವರ್ ಹಾಗೂ ಕಂಡಕ್ಟರ್‌ಗಳಿಗಾಗಿ ಕಮ್ಯೂನಿಕೇಷನ್ ಡಿವೈಸ್, ಹೆಲ್ತ್ ಕಿಟ್‌ಗಳನ್ನು ನೀಡಲಾಗಿದೆ. ಈ ಬಸ್‌ಗಳಲ್ಲಿ ಪ್ರಯಾಣಿಕರು ಹತ್ತಲು ಹಾಗೂ ಇಳಿಯಲು ಮುಂಭಾಗದ ಮತ್ತು ಹಿಂಭಾಗದ ಡೋರುಗಳನ್ನು ನೀಡಲಾಗಿದೆ.
MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಸುಮಾರು 15 ವರ್ಷಗಳ ನಂತರ ಹೊಸ ಬಸ್‌ಗಳನ್ನು ಖರೀದಿಸಲಾಗುತ್ತಿದೆ ಎಂದು ಬೆಸ್ಟ್ ನಿಗಮದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನಿಗಮವು ಸುಮಾರು 120 ಬಸ್ಸುಗಳನ್ನು ಓಡಿಸುವ ಯೋಜನೆಯನ್ನು ಹೊಂದಿದೆ. ಬೆಸ್ಟ್ ನಿಗಮವು 75 ಡಬಲ್ ಡೆಕ್ಕರ್ ಬಸ್ಸುಗಳು ಸೇರಿದಂತೆ 896 ಹಳೆಯ ಬಸ್ಸುಗಳನ್ನು ಗುರುತಿಸಿದೆ.

1947ರಲ್ಲಿ ಮುಂಬೈನಲ್ಲಿ 247 ಡಬಲ್ ಡೆಕ್ಕರ್ ಬಸ್ಸುಗಳು ಕಾರ್ಯನಿರ್ವಹಿಸುತ್ತಿದ್ದವು. 2010ರಲ್ಲಿ ಈ ಸಂಖ್ಯೆ 122ಕ್ಕೆ ಇಳಿಯಿತು. ಈಗ ಈ ಸಂಖ್ಯೆ ಮತ್ತಷ್ಟು ಕಡಿಮೆಯಾಗಿದೆ. ಮುಂಬೈನಲ್ಲಿ ಡಬಲ್ ಡೆಕ್ಕರ್ ಬಸ್ಸುಗಳು ಕೆಲವು ಮಾರ್ಗಗಳಲ್ಲಿ ಸಂಚರಿಸುತ್ತವೆ.
MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

140 ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯವುಳ್ಳ ಈ ಬಸ್ಸುಗಳು ರೈಲ್ವೆ ನಿಲ್ದಾಣದಿಂದ ಸಿಎಸ್‌ಎಂಟಿ-ನಾರಿಮನ್ ಪಾಯಿಂಟ್, ಬಾಂದ್ರಾ ನಿಲ್ದಾಣ / ಕುರ್ಲಾ ನಿಲ್ದಾಣ-ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಂತಹ ಇತರ ಕಮರ್ಷಿಯಲ್ ಪ್ರದೇಶಗಳಿಗೆ ಜನರನ್ನು ಕರೆದೊಯ್ಯುತ್ತವೆ.
ಮೂಲ: ರಾಜೇಂದ್ರ ಅಕ್ಲೆಕರ್