Just In
Don't Miss!
- Finance
ಬಜೆಟ್ 2021: ಸ್ಟ್ಯಾಂಡರ್ಡ್ ಡಿಡಕ್ಷನ್ ರು. 1 ಲಕ್ಷಕ್ಕೆ ಹೆಚ್ಚಳ ನಿರೀಕ್ಷೆ
- Sports
ಬೈರ್ಸ್ಟೋವ್ಗೆ 2 ಪಂದ್ಯಗಳ ವಿಶ್ರಾಂತಿ ನೀಡಿರುವುದನ್ನು ಸಮರ್ಥಿಸಿದ ಇಂಗ್ಲೆಂಡ್ ಕೋಚ್
- Education
WCD Chitradurga Recruitment 2021: ಅಂಗನವಾಡಿಯಲ್ಲಿ 129 ಹುದ್ದೆಗಳಿಗೆ ಅರ್ಜಿ ಆಹ್ವಾನ
- News
ಕೊರೊನಾ ಬಂದಿದ್ದು ಚೀನಾದಿಂದ ಅಲ್ಲ... ಶಿವನಿಂದ, ನಾನೇ ಶಿವ!
- Movies
'ಬೆಲ್ ಬಾಟಂ-2' ಟೈಟಲ್ ಪೋಸ್ಟರ್ ಅನಾವರಣ: ಡಿಟೆಕ್ಟಿವ್ ದಿವಾಕರ್ ಈಸ್ ಬ್ಯಾಕ್
- Lifestyle
ಗರ್ಭಾವಸ್ಥೆಯಲ್ಲಿ ಥೈರಾಯ್ಡ್ ಸಮಸ್ಯೆ: ಇದರ ಅಪಾಯಗಳೇನು, ತಡೆಗಟ್ಟುವುದು ಹೇಗೆ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬರ್ತ್ ಡೇ ಸ್ಪೆಷಲ್: ಸೂಪರ್‌ಸ್ಟಾರ್ ರಜನಿಕಾಂತ್ ಕಾರು ಕಲೆಕ್ಷನ್
ಒಂದು ಸಿನಿಮಾದಲ್ಲಿ ನಟಿಸಿದ ತಕ್ಷಣ ಮುಂದಿನ ಸಿನಿಮಾಗೆ ಆಡಿ ಕಾರನ್ನೇ ನೀಡಬೇಕೆಂದು ಒಪ್ಪಂದ ಮಾಡಿಕೊಳ್ಳುವ ಕಾಲಮಾನವಿದು. ಆದರೆ ಸುಮಾರು 45 ವರ್ಷಕ್ಕೂ ಹೆಚ್ಚು ಕಾಲದಿಂದ ಸಿನಿಮಾ ರಂಗದಲ್ಲಿರುವ ಸೂಪರ್‌ಸ್ಟಾರ್ ಬಳಿಯಿರುವ ಕಾರುಗಳು ಅಚ್ಚರಿ ಮೂಡಿಸುತ್ತವೆ.

ಇಂದು ತಮ್ಮ 70ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿರುವ ಸೂಪರ್‌ಸ್ಟಾರ್ ರಜನಿಕಾಂತ್ ಹಣ, ಖ್ಯಾತಿ ಎಲ್ಲವನ್ನೂ ಗಳಿಸಿದ್ದಾರೆ. ಆದರೂ ಸರಳ ಜೀವನಕ್ಕೆ ಆದ್ಯತೆಯನ್ನು ನೀಡುತ್ತಾರೆ. ತಮ್ಮ ಸರಳತೆಯ ಮೂಲಕವೇ ಮನೆ ಮಾತಾದ ಸೂಪರ್ ಸ್ಟಾರ್ ರಜನಿಕಾಂತ್ ರವರ ಬಳಿಯಿರುವ ಕಾರುಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಮೊದಲ ಕಾರು
ರಜನಿಕಾಂತ್ ರವರ ಮೊದಲ ಕಾರು ಪ್ರೀಮಿಯರ್ ಪದ್ಮಿನಿ. ಈ ಕಾರನ್ನು ಅವರು 1980ರಿಂದ 1990ರವರೆಗೆ ಬಳಸುತ್ತಿದ್ದರು.
MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಅಂಬಾಸಿಡರ್
1990ರಿಂದ 2000ದವರೆಗೆ ರಜನಿಕಾಂತ್ ಅಂಬಾಸಿಡರ್ ಕಾರನ್ನು ಬಳಸುತ್ತಿದ್ದರು. ವಿಶೇಷವೆಂದರೆ ಈ ಕಾರನ್ನು ರಜನಿಕಾಂತ್ ತಮ್ಮ ಪ್ರೀತಿಯ ಸಹೋದರ ಎಂದು ಕರೆಯುತ್ತಿದ್ದರು.

ಹೋಂಡಾ ಸಿವಿಕ್
ಹಿಂದೂಸ್ತಾನ್ ಮೋಟಾರ್ಸ್'ನ ಅಂಬಾಸಿಡರ್ ಕಾರಿನ ನಂತರ ರಜನಿಕಾಂತ್ ಹಲವು ವರ್ಷಗಳ ಕಾಲ ಹೋಂಡಾ ಸಿವಿಕ್ ಕಾರನ್ನು ಬಳಸಿದರು.
MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಟೊಯೊಟಾಇನೋವಾ
ಹೋಂಡಾ ಸಿವಿಕ್ ನಂತರ ರಜನಿಕಾಂತ್ ಟೊಯೊಟಾ ಇನೋವಾ ಕಾರನ್ನು ಬಳಸಿದರು. ಈ ಕಾರನ್ನು ಯಾವುದೇ ರೀತಿಯಲ್ಲಿ ಕಸ್ಟಮೈಸ್ ಮಾಡದೇ ಮೂಲ ಸ್ವರೂಪದಲ್ಲಿಯೇ ಬಳಸಿದರು.

ಬಿಎಂಡಬ್ಲ್ಯು 7 ಸೀರಿಸ್
ಶಾರುಖ್ ಖಾನ್ ಅಭಿನಯದ ರಾ.ಒನ್ ಹಿಂದಿ ಚಿತ್ರದಲ್ಲಿ ರಜನಿಕಾಂತ್ ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಈ ಕಾರಣಕ್ಕೆ ಶಾರುಖ್ ಖಾನ್, ರಜನಿಕಾಂತ್ ರವರಿಗೆ ರೂ.1 ಕೋಟಿ ಬೆಲೆಯ ಬಿಎಂಡಬ್ಲ್ಯು 7 ಸೀರಿಸ್ ಕಾರನ್ನು ಉಡುಗೊರೆಯಾಗಿ ನೀಡಿದರು. ಆದರೆ ರಜನಿಕಾಂತ್ ಈ ಕಾರನ್ನು ಸ್ವೀಕರಿಸಲು ಪ್ರೀತಿಯಿಂದಲೇ ನಿರಾಕರಿಸಿದರು.
MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ರೋಲ್ಸ್ ರಾಯ್ಸ್
ನಿರ್ದೇಶಕ ಶಂಕರ್, ನಟ ವಿಜಯ್, ರಜನಿಕಾಂತ್ ಅಳಿಯ ಧನುಷ್ ಸೇರಿದಂತೆ ಹಲವು ಸೆಲೆಬ್ರಿಟಿಗಳು ರೋಲ್ಸ್ ರಾಯ್ಸ್ ಕಾರನ್ನು ಹೊಂದಿದ್ದರು. ತಮ್ಮ ನೆಚ್ಚಿನ ನಟ ರಜನಿಕಾಂತ್ ಬಳಿ ಈ ಕಾರು ಇಲ್ಲದಿರುವ ಕಾರಣಕ್ಕೆ ಅವರ ಅಭಿಮಾನಿಗಳು ಬೇಸರಗೊಂಡಿದ್ದರು. ಈ ಕಾರಣಕ್ಕೆ ಲಿಂಗಾ ಚಿತ್ರದಲ್ಲಿ ರಜನಿಕಾಂತ್ ಹಲವಾರು ರೋಲ್ಸ್ ರಾಯ್ಸ್ ಕಾರುಗಳನ್ನು ಹೊಂದಿರುವುದನ್ನು ತೋರಿಸಲಾಗಿತ್ತು.

ವಿಂಟೇಜ್ ಕಾರುಗಳು
ಈ ಸಿನಿಮಾದಲ್ಲಿ ರಜನಿಕಾಂತ್ ರೋಲ್ಸ್ ರಾಯ್ಸ್ ಕಾರು ಮಾತ್ರವಲ್ಲದೇ ಹಲವು ವಿಂಟೇಜ್ ಕಾರುಗಳನ್ನು ಬಳಸಿದ್ದರು. ಈ ದೃಶ್ಯಗಳು ಅಭಿಮಾನಿಗಳಿಂದ ಶಿಳ್ಳೆ, ಚಪ್ಪಾಳೆಗಿಟ್ಟಿಸಿದ್ದವು.
MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಸ್ಟೈಲ್
ರಜನಿಕಾಂತ್ ತಮ್ಮ ಸ್ಟೈಲ್'ಗಳಿಗೆ ಹೆಸರುವಾಸಿಯಾದವರು. ಈ ಕಾರಣಕ್ಕೆ ಲಿಂಗಾ ಸಿನಿಮಾದಲ್ಲಿ ರೋಲ್ಸ್ ರಾಯ್ಸ್ ಕಾರುಗಳನ್ನು ಮರೆಸುವಂತಹ ರೀತಿಯಲ್ಲಿ ಸ್ಟೈಲ್'ಗಳನ್ನು ಮಾಡಿಸಲಾಗಿತ್ತು. ಈ ಮೂಲಕ ವಯಸ್ಸಾದರೂ ಸ್ಟೈಲ್ ಬದಲಾಗಿಲ್ಲ ಎಂಬುದನ್ನು ಸ್ಪಷ್ಟಪಡಿಸಲಾಗಿತ್ತು.

ಅದ್ದೂರಿತನ
ನಿಜ ಜೀವನದಲ್ಲಿ ಸರಳವಾಗಿದ್ದರೂ ಲಿಂಗಾ ಸಿನಿಮಾದಲ್ಲಿ ರಜನಿಕಾಂತ್'ರವರ ಶ್ರೀಮಂತಿಕೆಯನ್ನು ತೋರಿಸುವ ಹಲವಾರು ಅದ್ದೂರಿ ದೃಶ್ಯಗಳಿದ್ದವು. ಒಂದು ದೃಶ್ಯದಲ್ಲಿ ಅಬುಧಾಬಿಯ ಫೆರಾರಿ ವರ್ಲ್ಡ್ ಅಮ್ಯೂಸ್ಮೆಂಟ್ ಪಾರ್ಕ್'ನಲ್ಲಿದ್ದ ಐಷಾರಾಮಿ ಕಾರುಗಳನ್ನು ಪ್ರದರ್ಶಿಸಲಾಗಿತ್ತು.
MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಆಡಿ
ಲಿಂಗಾ ಸಿನಿಮಾದಲ್ಲಿ ಆಡಿ ಕ್ಯೂ 7 ಐಷಾರಾಮಿ ಎಸ್‌ಯುವಿಯನ್ನು ಸಹ ಬಳಸಲಾಗಿತ್ತು.