ಅಮ್ಮನ ಹುಟ್ಟು ಹಬ್ಬಕ್ಕೆ ಸ್ಪೋರ್ಟ್ಸ್ ಕಾರು ಗಿಫ್ಟ್ ನೀಡಿದ ಬಾಲಿವುಡ್ ನಟ
ಬಾಲಿವುಡ್‍ನಲ್ಲಿ ನಟ-ನಟಿಯರು ಹುಟ್ಟು ಹಬ್ಬಕ್ಕೆ ದುಬಾರಿ ಗಿಫ್ಟ್ ಗಳನ್ನು ನೀಡುವುದು ಸಾಮಾನ್ಯ. ಬಾಲಿವುಡ್ ನಟ-ನಟಿಯರು ತಮ್ಮ ಸ್ನೇಹಿತರುಗಳಿಗೆ ದುಬಾರಿ ಕಾರುಗಳನ್ನು ಗಿಫ್ಟ್ ನೀಡುತ್ತಾರೆ ಅಥವಾ ತಮ್ಮ ಮಕ್ಕಳಿಗೆ ದುಬಾರಿ ಕಾರನ್ನು ಹುಟ್ಟು ಹಬ್ಬದಂದು ಗಿಫ್ಟ್ ನೀಡುವುದು ಸಾಮಾನ್ಯವಾದ ವಿಷಯ.

ಆದರೆ ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ತಮ್ಮ ಅಮ್ಮನ ಹುಟ್ಟುಹಬ್ಬಕ್ಕೆ ಸ್ಪೋಟ್ಸ್ ಕಾರನ್ನು ಗಿಫ್ಟ್ ನೀಡಿದ್ಡಾರೆ. ಪ್ಯಾರ್ ಕಾ ಪಂಚ್‍ನಾಮ ಚಿತ್ರ ಖ್ಯಾತಿಯ ನಟ ಕಾರ್ತಿಕ್ ಆರ್ಯನ್ ತಮ್ಮ ಅಮ್ಮ ಮಾಲಾ ತಿವಾರಿ ಅವರಿಗೆ ಮಿನಿ ಕೂಪರ್ ಎಸ್ ಕನ್ವರ್ಟಿಬಲ್ ಸ್ಪೋರ್ಟ್ಸ್ ಕಾರ್ ಅನ್ನು ಗಿಫ್ಟ್ ನೀಡಿದ್ದಾರೆ.

ಅಲ್ಲದೇ ತಮ್ಮ ಅಮ್ಮನನ್ನು ಅದೇ ಹೊಸ ಕಾರಿನಲ್ಲಿ ಕರೆದುಕೊಂಡು ಮುಂಬೈ ರೌಂಡ್ಸ್ ಹೋಗಿದ್ದಾರೆ. ನಟ ಕಾರ್ತಿಕ್ ಆರ್ಯನ್ ತಮ್ಮ ಅಮ್ಮನಿಗೆ ಸ್ಪೋರ್ಟ್ಸ್ ಕಾರು ಗಿಫ್ಟ್ ನೀಡಿರುವುದು ವಿಶೇಷವಾಗಿದೆ. ಮಿನಿ ಕೂಪರ್ ಎಸ್ ಕನ್ವರ್ಟಿಬಲ್ ಸ್ಪೋರ್ಟ್ಸ್ ಕಾರು 2.0-ಲೀಟರಿನ ನಾಲ್ಕು ಸಿಲಿಂಡರ್, ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ.

ಈ ಎಂಜಿನ್ 189 ಬಿಹೆಚ್‌ಪಿ ಪವರ್ ಹಾಗೂ 280 ಎನ್‌ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍ನೊಂದಿಗೆ 7 ಸ್ಪೀಡ್ ಟ್ವಿನ್ ಕ್ಲಚ್ ಆಟೋಮ್ಯಾಟಿಕ್ ಗೇರ್‍ಬಾಕ್ಸ್ ಅನ್ನು ಅಳವಡಿಸಲಾಗಿದೆ. ಈ ಕಾರಿನ ಮುಂಬೈನ ಆನ್‍ರೋಡ್ ಬೆಲೆಯು ರೂ.49.8 ಲಕ್ಷಗಳಾಗಿದೆ.

ಈ ಕಾರು ಕೇವಲ 7 ಸೆಕೆಂಡ್‍ನಲ್ಲಿ 0 ದಿಂದ 100 ಕಿ.ಮೀ ಕ್ರಮಿಸುತ್ತದೆ. ಈ ಕಾರು ಪ್ರತಿ ಗಂಟೆಗೆ 225 ಟಾಪ್ ಸ್ಪೀಡ್ ಅನ್ನು ಹೊಂದಿದೆ. ಈ ಮಿನಿ ಕೂಪರ್ ಕಾರಿನ ಮುಂಭಾಗದಲ್ಲಿ ಗ್ರಿಲ್, ಜೆಸಿಡಬ್ಲ್ಯೂ ಕಾರ್ಬನ್ ಫೈಬರ್ ಒಆರ್‍ವಿಎಂ, ಹೆಡ್‌ಲೈಟ್ ಹಾಗೂ ಟೇಲ್‌ಲೈಟ್‌ಗಳಿಗಾಗಿ ಪಿಯಾನೋ ಬ್ಲ್ಯಾಕ್ ಟ್ರಿಮ್, ಜೊತೆಗೆ ಟೇಲ್‌ಗೇಟ್ ಅನ್ನು ಹೊಂದಿದೆ.

ಮಿನಿ ಕೂಪರ್ ಎಸ್ ಕನ್ವರ್ಟಿಬಲ್ ನಾಲ್ಕು ಸೀಟುಗಳನ್ನು ಹೊಂದಿದೆ. ಆದರೆ ಎರಡನೇ ಸಾಲಿನಲ್ಲಿ ಮಕ್ಕಳಿಗೆ ಮಾತ್ರ ಹೆಚ್ಚಿನ ಕಂಫರ್ಟ್ ಆಗಿ ಕೂರಬಹುದು. ಎರಡನೇ ಸಾಲಿನ ಡೋರ್ ಮೂಲಕ ಕಾರಿನ ಒಳಗೆ ಪ್ರವೇಶಿಸಲು ಸ್ವಲ್ಪ ಕಷ್ಟವಾಗಲಿದೆ.

ಕಾರಿನಲ್ಲಿ ಪ್ರಯಾಣಿಕರ ಸುರಕ್ಷತೆಗೆ ಉನ್ನತ ಮಟ್ಟದ ಫೀಚರ್ಸ್‍ಗಳನ್ನು ಅಳವಡಿಸಲಾಗಿದೆ. ಎರಡು ಏರ್‍ಬ್ಯಾಗ್‍ಗಳಿದ್ದು, ಒಂದು ಚಾಲಕನಿಗೆ ಮತ್ತೊಂದನ್ನು ಸಹ ಪ್ರಯಾಣಿಕರಿಗೆ ನೀಡಲಾಗಿದೆ. ಇನ್ನೂ ಟ್ರಾಕ್ಷನ್ ಕಂಟ್ರೋಲ್, ಹಿಲ್ ಹೋಲ್ಡ್, ಫ್ರಂಟ್ ಮತ್ತು ರೇರ್ ಪಾರ್ಕಿಂಗ್ ಸೆನ್ಸಾರ್‍ಗಳು ಮತ್ತು ಎಲೆಕ್ಟ್ರಾನಿಕ್ ಸ್ಟ್ರೆಬಿಲಿಟಿ ಪ್ರೋಗ್ರಾಂ ಜೊತೆಯಲ್ಲಿ ಇತರ ಸುರಕ್ಷತಾ ಫೀಚರ್ಸ್‍ಗಳಿವೆ.

ಇನ್ನೂ ಈ ಕಾರಿನ ಇಂಟಿರಿಯರ್‍ನಲ್ಲಿ ಆಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್‍ಪ್ಲೇ ಹೊಂದಿರುವ ಟಚ್‍ಸ್ಕ್ರೀನ್ ಇನ್ಪೋಟೇನ್‍ಮೆಂಟ್ ಸಿಸ್ಟಂಗಳಿವೆ. ಇದರೊಂದಿಗೆ ಕ್ರೂಸ್ ಕಂಟ್ರೋಲ್, ಕ್ಲೈಮೆಂಟ್ ಕಂಟ್ರೋಲ್ ಮತ್ತು ಎಲೆಕ್ಟ್ರಿಕಲ್ ಆಗಿ ಅಡ್ಜಸ್ಟ್ ಮಾಡಬಹುದಾದ ಫ್ರಂಟ್ ಸೀಟ್ ಅನ್ನು ಹೊಂದಿದೆ.

ಮಿನಿ ಕೂಪರ್ ಎಸ್ ಕನ್ವರ್ಟಿಬಲ್ ಹೊರತುಪಡಿಸಿ ಮಿನಿ ಹಾರ್ಡ್-ಟಾಪ್ ಕೂಪರ್, ಕಂಟ್ರಿಮ್ಯಾನ್ ಮತ್ತು ಕ್ಲಬ್‍ಮ್ಯಾನ್ ನಂತಹ ರೂಪಾಂತರಗಳಿವೆ. ಇದರಲ್ಲಿ ಕೆಲವು ರೂಪಾಂತರಗಳು ಡೀಸೆಲ್ ಎಂಜಿನ್ ಅನ್ನು ಹೊಂದಿದೆ.

ಮಿನಿ ಕೂಪರ್ ಎಸ್ ಕನ್ವರ್ಟಿಬಲ್ ಜನಪ್ರಿಯ ಸ್ಪೋರ್ಟ್ಸ್ ಕಾರು ಆಗಿದೆ. ಹಲವಾರು ಯುವಕರ ಕನಸಿನ ಕಾರು ಇದಾಗಿದೆ. ಈ ದುಬಾರಿ ಸ್ಪೋಟ್ಸ್ ಕಾರನ್ನು ಅಮ್ಮನಿಗೆ ಹುಟ್ಟು ಹಬ್ಬಕ್ಕೆ ಗಿಫ್ಟ್ ನೀಡಿರುವುದು ವಿಶೇಷವಾಗಿದೆ.


Click it and Unblock the Notifications








