ಭಾರತದಲ್ಲಿ ಬಿಡುಗಡೆಯಾಗಲಿದೆ ಐಷಾರಾಮಿ ಬಿಎಂಡಬ್ಲ್ಯೂ 8 ಸೀರಿಸ್
ಬಿಎಂಡಬ್ಲ್ಯೂ ಕಂಪನಿಯು ತನ್ನ 8 ಸೀರಿಸ್ ಗ್ರಾಂಡ್ ಕೂಪೆ ಐಷಾರಾಮಿ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ ಬಿಎಂಡಬ್ಲ್ಯೂ 8 ಸೀರಿಸ್ ಗ್ರಾಂಡ್ ಕೂಪೆ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಇದೆ ತಿಂಗಳು 8ರಂದು ಬಿಡುಗಡೆಯಾಗಲಿದೆ.

ಕ್ಲಾರ್ಕ್ ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಾಣವಾಗಿರುವ ಹೊಸ ಬಿಎಂಡಬ್ಲ್ಯು 8 ಸೀರಿಸ್ ಕಾರನ್ನು 2018ರಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಯಿತು. ಇವುಗಳ ಮಾರಾಟವನ್ನು 2019ರಲ್ಲಿ ಆರಂಭಿಸಲಾಯಿತು. 8 ಸೀರಿಸ್ ಐಷಾರಾಮಿ ಕೂಪೆ ಕಾರುಗಳು ಹಲವಾರು ಕಸ್ಟಮ್ ಆಯ್ಕೆಗಳನ್ನು ಹೊಂದಿವೆ. ಈ ಹೊಸ ಕೂಪೆ ಕಾರ್ ಅನ್ನು 12 ಬಣ್ಣಗಳಲ್ಲಿ ಮಾರಾಟ ಮಾಡಲಾಗುವುದು. ಇವುಗಳಲ್ಲಿ ಹೊರ ಭಾಗದ ಬಣ್ಣ, 15 ಸಂಯೋಜನೆಗಳ ಡ್ಯುಯಲ್-ಟೋನ್ ಹಾಗೂ 5 ಟ್ರಿಮ್ ಗಳು ಸೇರಿರಲಿವೆ.

ಈ ಕಾರನ್ನು 19 ಇಂಚಿನ ಅಲಾಯ್ ವ್ಹೀಲ್ ಹಾಗೂ ಹೆಚ್ಚುವರಿಯಾದ 20 ಇಂಚಿನ ಅಲಾಯ್ ವ್ಹೀಲ್ ಗಳನ್ನು ಅಳವಡಿಸಲಾಗಿದೆ. ಈ ಹೊಸ ಬಿಎಂಡಬ್ಲ್ಯೂ 8 ಸೀರಿಸ್ ಗ್ರಾಂಡ್ ಕೂಪೆ ಕಾರು ಆಕರ್ಷಕ ಲುಕ್ ಅನ್ನು ಹೊಂದಿದೆ.
MOST READ: ಬಿಡುಗಡೆಯಾಗಲಿದೆ ಹಮ್ಮರ್ ಎಲೆಕ್ಟ್ರಿಕ್ ಎಸ್‍ಯುವಿ

ಈ ಕಾರಿನಲ್ಲಿ ಅಡ್ಜಸ್ಟ್ ಮಾಡಬಹುದಾದ ಫ್ರಂಟ್ ಸೀಟುಗಳು, ವಿಂಗ್ ಮಿರರ್, ಪನೋರಮಿಕ್ ಸನ್‌ರೂಫ್, ಮೂರು ಹಂತದ ಕ್ಲೈಮೇಟ್ ಕಂಟ್ರೋಲ್, ಒಂದು ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಹಾಗೂ ಇನ್ಫೋಟೇನ್‌ಮೆಂಟ್ ಸ್ಲೀವ್ ಡ್ಯಾಶ್‌ಬೋರ್ಡ್‌ಗಳನ್ನು ನೀಡಲಾಗಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಕಾರಿನ ಆವೃತ್ತಿಯಲ್ಲಿ ಅಳವಡಿಸಲಾಗುವ ಹೊಸ 3.0-ಲೀಟರ್ ಡೈರೆಕ್ಟ್-ಗ್ಯಾಸೋಲಿನ್ ಮತ್ತು ಡೀಸೆಲ್ ಟರ್ಬೋಚಾರ್ಜ್ಡ್ ಎಂಜಿನ್ ಗಳು 300 ಬಿಹೆಚ್‌ಪಿ ಪವರ್ ಉತ್ಪಾದಿಸುತ್ತವೆ.
MOST READ: ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ ಬಿಎಸ್-6 ಹ್ಯುಂಡೈ ಐ20 ಕಾರು

ಬಿಎಂಡಬ್ಲ್ಯು ಕಂಪನಿಯ 8 ಸ್ಪೀಡಿನ ಝಡ್ಎಫ್ಎಫ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಈ ಕೂಪೆ ಕಾರಿನಲ್ಲಿ ಅಳವಡಿಸಲಾಗಿದೆ. ಎಕ್ಸ್ ಟ್ರಿಮ್ ಆಲ್ ವ್ಹೀಲ್ ಡ್ರೈವ್ ಅನ್ನು ಪೆಟ್ರೋಲ್ ಮಾದರಿಯಲ್ಲಿ ಮಾತ್ರ ನೀಡಲಾಗುವುದು.

8 ಸೀರಿಸ್ ಕೂಪೆ ಕಾರಿನ ಮುಂಭಾಗದಲ್ಲಿ ಐ ಶೇಪಿನ ಹೆಡ್‌ಲ್ಯಾಂಪ್‌ಗಳು ಹಾಗೂ ಡಿಆರ್‌ಎಲ್ ಸಿಸ್ಟಂ ಹೊಂದಿರುವ ದೊಡ್ಡ ಗ್ರಿಲ್ ನೀಡಲಾಗಿದೆ. ಇವುಗಳ ಜೊತೆಗೆ ದೊಡ್ಡ ಗಾತ್ರದ ವ್ಹೀಲ್ ಗಳು, ಲಾಂಗ್‌ಬೋರ್ಡ್ ಹಾಗೂ ಸ್ಲೊಪ್ ರೂಫ್‌ಲೈನ್ ಗಳಿದ್ದು, ಹೊಸ ಬಿಎಂಡಬ್ಲ್ಯು ಕಾರನ್ನು ಆಕರ್ಷಕವಾಗಿ ಕಾಣುವಂತೆ ಮಾಡುತ್ತವೆ.
MOST READ: ಬಿಡುಗಡೆಯಾಗಲಿದೆ ಹೊಸ ಸ್ಕೋಡಾ ಕರೋಕ್ ಎಸ್‍ಯುವಿ

ಹಿಂಭಾಗದಲ್ಲಿ ಹಾರಿಜಾಂಟಲ್ ಆಗಿರುವ ಟೇಲ್ ಲ್ಯಾಂಪ್‌ಗಳಿವೆ. ಮರ್ಸಿಡಿಸ್ ಬೆಂಜ್‌ನ ಸಿಎಲ್‌ಎಸ್ ಹಾಗೂ ಆಡಿ 7 ಕಾರುಗಳು 8 ಸೀರೀಸ್ ಗ್ರಾಂಡ್ ಕೂಪೆ ಕಾರಿಗೆ ಅಂತರ್ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೈಪೋಟಿ ನೀಡುತ್ತವೆ.

ಬಿಎಂಡಬ್ಲ್ಯು 8 ಸೀರೀಸ್ ಕಾರನ್ನು ಸಿಬಿಯು ರೂಪದಲ್ಲಿ ತರಲಾಗುತ್ತದೆ. ಭಾರತದಲ್ಲಿ ಬಿಎಂಡಬ್ಲ್ಯು 8 ಸೀರಿಸ್ ಕಾರು ಬಿಡುಗಡೆಯಾದ ಬಳಿಕ ಆಡಿ ಆರ್ ಎಸ್ 7 ಕಾರಿಗೆ ಪೈಪೋಟಿ ನೀಡುತ್ತದೆ.


Click it and Unblock the Notifications








