ಬಿಡುಗಡೆಯಾಗಲಿದೆ ಹಮ್ಮರ್ ಎಲೆಕ್ಟ್ರಿಕ್ ಎಸ್‍ಯುವಿ
ಜನರಲ್ ಮೋಟಾರ್ಸ್ ಕಂಪನಿಯು ತನ್ನ ಹಮ್ಮರ್ ಎಸ್‍ಯುವಿಯನ್ನು ಮತ್ತೊಮ್ಮೆ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ನಿರ್ಧರಿಸಿದೆ. ಆದರೆ ಈ ಬಾರಿ ಜನಪ್ರಿಯ ಹಮ್ಮರ್ ಎಸ್‍ಯುವಿಯನ್ನು ಎಲೆಕ್ಟ್ರಿಕ್ ರೂಪದಲ್ಲಿ ಪರಿಚಯಿಸಲಿದೆ.

ಈ ಹೊಸ ಹಮ್ಮರ್ ಎಲೆಕ್ಟ್ರಿಕ್ ಎಸ್‍ಯುವಿಯನ್ನು ಈ ವರ್ಷ ಬಿಡುಗಡೆಗೊಳಿಸಲಿದೆ ಎಂದು ವರದಿಗಳು ಪ್ರಕಟವಾಗಿತ್ತು. ಆದರೆ ಈ ಎಲೆಕ್ಟ್ರಿಕ್ ಎಸ್‍ಯುವಿಯ ಬಿಡುಗಡೆಯನ್ನು ಮುಂದೂಡಲಾಗಿದೆ. ಹೊಸ ಹಮ್ಮರ್ ಎಸ್‍ಯುವಿಯು ಮುಂದಿನ ವರ್ಷ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಹಲವು ಪ್ರಮುಖ ಕಂಪನಿಗಳು ತಮ್ಮ ಸರಣಿಯಲ್ಲಿರುವ ವಾಹನಗಳನ್ನು ಎಲೆಕ್ಟ್ರಿಕ್ ರೂಪಾಂತರವಾಗಿ ಪರಿವರ್ತಿಸುತ್ತಿವೆ. ಇದರಲ್ಲಿ ಪ್ರಮುಖವಾಗಿ ಸೂಪರ್‍ಬೈಕ್ ಮತ್ತು ಸೂಪರ್‍ಕಾರುಗಳನ್ನು ಕೂಡ ಎಲೆಕ್ಟ್ರಿಕ್ ಆವೃತ್ತಿಯಲ್ಲಿ ಅಭಿವೃದ್ದಿಪಡಿಸಲಾಗುತ್ತಿದೆ. ಕೆಲವು ಕಂಪನಿಗಳು ತಮ್ಮ ದೊಡ್ಡ ಎಸ್‍ಯುವಿಗಳನ್ನು ಎಲೆಕ್ಟ್ರಿಕ್ ಆವೃತ್ತಿಯಲ್ಲಿ ಬಿಡುಗಡೆಗೊಳಿಸಲು ಚಿಂತಿಸುತ್ತಿದೆ.

ಹಮ್ಮರ್ ಎಲೆಕ್ಟ್ರಿಕ್ ಎಸ್‍ಯುವಿಯ ಟೀಸರ್ ವೀಡಿಯೋವನ್ನು ಜಿಎಂಸಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಟೀಸರ್‍ನಲ್ಲಿ ಹೊಸ ಎಸ್‍ಯುವಿಯು ಶಾರ್ಪ್ ಲೈನ್ ವಿನ್ಯಾಸವನ್ನು ಹೊಂದಿದೆ. ಹಳೆಯ ಮಾದರಿಯಿಂದ ಹೊಸ ಮಾದರಿಯು ಪ್ರತ್ಯೇಕಿಸುವ ಅಂಶವೆಂದರೆ ಎಲ್‍ಇಡಿ ಲೈಟಿಂಗ್, ಹೆಡ್‍ಲ್ಯಾಂಪ್, ಗ್ರಿಲ್ ಮತ್ತು ಡೇ ಟೈಮ್ ರನ್ನಿಂಗ್ ಲೈಟ್ ಆಗಿದೆ.
MOST READ: ಬಹಿರಂಗವಾಯ್ತು ದಟ್ಸನ್ ರೆಡಿ ಗೋ ಫೇಸ್‍ಲಿಫ್ಟ್ ಕಾರಿನ ಮಾಹಿತಿ

ಎಲೆಕ್ಟ್ರಿಕ್ ಹಮ್ಮರ್ ಎಸ್‍ಯುವಿಯ ವಿನ್ಯಾಸ ಮತ್ತು ಸ್ಟೈಲಿಂಗ್ ಬಗ್ಗೆ ಹೆಚ್ಚಿನ ಮಾಹಿತಿ ಅಧಿಕೃತವಾಗಿ ಬಹಿರಂಗಪಡಿಸಿಲ್ಲ. ಹೊಸ ಹಮ್ಮರ್ ಆಫ್-ರೋಡ್ ಎಸ್‍ಯುವಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿದೆ.

ಹಮ್ಮರ್ ಸರಳವಾದ ಆಫ್-ರೋಡ್ ಎಸ್‍ಯುವಿಯಾಗಿದೆ. ಈ ಎಸ್‍ಯುವಿಯು ಕಠಿಣವಾದ ಅಡೆತಡೆಗಳಲ್ಲಿ ಸುಲಭವಾಗಿ ಸಾಗುತ್ತದೆ. ಆಫ್ ರೋಡ್ ವಾಹನ ಪ್ರಿಯರ ಮೆಚ್ಚಿನ ಎಸ್‍ಯುವಿಯಾಗಿದೆ. ಅಮೆರಿಕಾದ ಸೈನ್ಯ ಯುಎಸ್ ಸೈನ್ಯ, ಯುಎಸ್ ಮೆರೈನ್ ಕಾಪ್ಸ್ ಮತ್ತು ಇತರ ಅರೆಸೈನಿಕ ಪಡೆಗಳಿಗೂ ಇದು ಮೆಚ್ಚಿನ ಎಸ್‍ಯುವಿಯಾಗಿದೆ.
MOST READ: ಮಾರಾಟದಲ್ಲಿ ಶೂನ್ಯ ಸಾಧನೆ ಮಾಡಿದ ಎಂಜಿ ಮೋಟಾರ್

ಅಮೆರಿಕಾದ ಪಡೆಗಳು ಕಾರ್ಯಾಚರಣೆಗಾಗಿ ವಿಶೇಷವಾಗಿ ತಯಾರಿಸಿ ಹಮ್ಮರ್ ಅನ್ನು ಬಳಸುತ್ತಿದ್ದರು. ಹಮ್ಮರ್ ಎಸ್‍ಯುವಿಯನ್ನು ಮೊದಲ ಬಾರಿಗೆ 1992ರಲ್ಲಿ ಬಿಡುಗಡೆ ಮಾಡಿದ್ದರು. ಹಮ್ಮರ್‍ನ ಉತ್ಪಾದನೆಯನ್ನು 2010ರಲ್ಲಿ ಸ್ಥಗಿತಗೊಳಿಸಲಾಗಿತ್ತು.

ಈ ಎಸ್‍ಯುವಿಯಲ್ಲಿ ವಿ8 ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ.ಈ ಎಂಜಿನ್ ಅಪಾರ ಪ್ರಮಾಣದ ಮಾಲಿನ್ಯವನ್ನು ಉಂಟುಮಾಡುತ್ತದೆ. ಇದನ್ನು ಪರಿಸರವಾದಿಗಳು ತೀವ್ರವಾಗಿ ಟೀಕಿಸಿದರು. ಈ ಟೀಕೆಗಳಿಂದ ಹೊರಗೆ ಬರಲು ಹಮ್ಮರ್ ಎಲೆಕ್ಟ್ರಿಕ್ ಆವೃತ್ತಿಯಲ್ಲಿ ಬಿಡುಗಡೆ ಮಾಡಲು ಮುಂದಾಗಿದೆ. ಜಿಎಂಸಿ ಕಂಪನಿಯು ಹಮ್ಮರ್ ಎಲೆಕ್ಟ್ರಿಕ್ ಎಸ್‍ಯುವಿಯನ್ನು ಅಭಿವೃದ್ದಿಪಡಿಸುವುದರಲ್ಲಿ ನಿರತವಾಗಿದೆ.
MOST READ: ಹೊಸ ಟರ್ಬೋ ಪೆಟ್ರೋಲ್ ಎಂಜಿನ್‌ನೊಂದಿಗೆ ಬಿಡುಗಡೆಯಾಗಲಿದೆ ನಿಸ್ಸಾನ್ ಕಿಕ್ಸ್

ಎಲೆಕ್ಟ್ರಿಕ್ ಹಮ್ಮರ್ ಎಸ್‍ಯುವಿಯ ಮೋಟಾರ್ 1,000 ಬಿಹೆಚ್‍ಪಿ ಪವರ್ ಮತ್ತು 15,000 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇಷ್ಟು ಪವರ್ ಅನ್ನು ಉತ್ಪಾದಿಸಲು ದೊಡ್ಡ ಬ್ಯಾಟರಿ ಪ್ಯಾಕ್‍ಗಳನ್ನು ಅಳವಡಿಸಲಾಗಿದೆ. ಕೇವಲ 0-100 ಕಿ.ಮೀ ಅನ್ನು ಕೇವಲ 3 ಸೆಕೆಂಡುಗಳಲ್ಲಿ ಉತ್ಪಾದಿಸುತ್ತದೆ.

ಹಮ್ಮರ್ ಎಸ್‍ಯುವಿಯು ಹೆಚ್ಚು ತೂಕ , ಇಂಧನ ದಕ್ಷತೆ ಅಂಕಿ ಅಂಶಗಳು, ಪವರ್ ಮತ್ತು ಟಾರ್ಕ್ ಉತ್ಪಾದನೆಯು ಅಂಕಿ ಅಂಶಗಳು ಹೆಚ್ಚಿದೆ. ಪವರ್‍ಫುಲ್ ಹಮ್ಮರ್ ಎಸ್‍ಯುವಿ ಮುಂದಿನ ದಿನಗಳಲ್ಲಿ ಎಲೆಕ್ಟ್ರಿಕ್ ಆವೃತ್ತಿಯಲ್ಲಿ ಬಿಡುಗಡೆಯಾಗುವ ಮೂಲಕ ಪರಿಸರ ಸ್ನೇಹಿಯಾಗಿರಲಿದೆ.


Click it and Unblock the Notifications








