ಅರಬ್‌ ರಾಷ್ಟ್ರದಲ್ಲಿದೆ ವಿಶ್ವದ ಅತಿ ಎತ್ತರದ ಕಾರು..ಏಣಿಯಿಲ್ಲದೆ ಈ ಕಾರನ್ನು ಏರುವುದು ಅಸಾಧ್ಯ

ವಿಶ್ವದಲ್ಲಿ ಅತಿ ಉದ್ದದ ಕಾರು, ಐಷಾರಾಮಿ ಕಾರು, ದುಬಾರಿ ಕಾರು, ಅತಿ ವೇಗದ ಕಾರುಗಳನ್ನು ನೋಡಿರುತ್ತೀರ, ಆದರೆ ವಿಶ್ವದ ಅತಿ ಎತ್ತರದ ಕಾರನ್ನು ನೋಡಿರಲು ಸಾಧ್ಯವಿಲ್ಲ. ನಾವು ಹೇಳಲು ಹೊರಟಿರುವ ಈ ಕಾರು ಬೃಹತ್‌ ಗಾತ್ರವಿದ್ದು, ಸುಮಾರು ಅಪಾರ್ಟ್‌ಮೆಂಟ್‌ನ ಮೊದಲ ಮಹಡಿಯಷ್ಟು ಎತ್ತರವಿದೆ. ವಿಶ್ವದ ಅತಿದೊಡ್ಡ ಕಾರು ಎಂದು ಖ್ಯಾತಿ ಪಡೆದುಕೊಂಡಿದೆ.

ವಿಶ್ವದ ಅತಿ ಎತ್ತರದ ಕಾರನ್ನು ನೋಡಿದ್ದೀರಾ?..ಏಣಿಯಿಲ್ಲದೆ ಈ ಕಾರನ್ನು ಏರುವುದು ಅಸಾಧ್ಯ

ಹಮ್ಮರ್ ಎಚ್ 1 ವಿಶ್ವದಾದ್ಯಂತ ಅತ್ಯಂತ ಜನಪ್ರಿಯ ಕಾರು ಮಾದರಿಗಳಲ್ಲಿ ಒಂದಾಗಿದೆ. ಇದು ಯುಎಸ್ ಸೇನೆಯ ಅಧಿಕೃತ ವಾಹನವೂ ಹೌದು. ಸೈನಿಕರನ್ನು ಅವರ ನಿರ್ದಿಷ್ಟ ಸ್ಥಳಗಳಿಗೆ ಕರೆದೊಯ್ಯಲು ಈ ವಾಹನವನ್ನು ಹೆಚ್ಚಾಗಿ ಬಳಸುತ್ತಾರೆ. ಇದು ಕಠಿಣ ರಸ್ತೆಗಳನ್ನು ಸುಲಭವಾಗಿ ನಿಭಾಯಿಸಬಲ್ಲ ವಾಹನವಾಗಿದೆ. ಇಷ್ಟು ಸಾಮರ್ಥ್ಯ ಹೊಂದಿರುವ ಕಾರನ್ನು ಬೃಹತ್‌ ಗಾತ್ರದಲ್ಲಿ ನಿರ್ಮಿಸಿ ಅರಬ್‌ ದೇಶದ ವ್ಯಕ್ತಿಯೋರ್ವ ಸುದ್ದಿಯಾಗಿದ್ದಾನೆ.

ವಿಶ್ವದ ಅತಿ ಎತ್ತರದ ಕಾರನ್ನು ನೋಡಿದ್ದೀರಾ?..ಏಣಿಯಿಲ್ಲದೆ ಈ ಕಾರನ್ನು ಏರುವುದು ಅಸಾಧ್ಯ

ಇಂತಹ ವಾಹನಗಳಿಗೆ ಅರಬ್‌ ರಾಷ್ಟ್ರಗಳೇ ಹೆಚ್ಚು ಖ್ಯಾತಿ ಪಡೆದುಕೊಂಡಿವೆ. ಇಲ್ಲಿನ ಮರುಳುಗಾಡು ಪ್ರದೇಶಗಳಿಗೆ ಅನುಗುಣವಾಗಿ ಹಮ್ಮರ್‌ನಂತಹ ವಾಹನಗಳನ್ನು ಬಳಸಲಾಗುತ್ತದೆ. ಸಾಮಾನ್ಯವಾಗಿ ಇಲ್ಲಿನ ಪ್ರತಿಯೊಬ್ಬರು ಇಂತಹ ವಾಹನಗಳನ್ನೇ ಇಷ್ಟ ಪಡುತ್ತಾರೆ. ಹಾಗಾಗಿಯೇ ಅರಬ್‌ನ ವಾಹನ ಪ್ರೇಮಿಯೊಬ್ಬ ಬೃಹತ್‌ ಹಮ್ಮರ್‌ ಕಾರನ್ನು ನಿರ್ಮಿಸಿದ್ದಾನೆ.

ವಿಶ್ವದ ಅತಿ ಎತ್ತರದ ಕಾರನ್ನು ನೋಡಿದ್ದೀರಾ?..ಏಣಿಯಿಲ್ಲದೆ ಈ ಕಾರನ್ನು ಏರುವುದು ಅಸಾಧ್ಯ

ಈ ಕಾರಿನ ಬಗ್ಗೆ ಸ್ಪಷ್ಟವಾಗಿ ಹೇಳುವುದಾದರೆ, ವಾಹನವನ್ನು ಸಣ್ಣ ಮನೆಯಂತೆ ವಿನ್ಯಾಸಗೊಳಿಸಲಾಗಿದೆ. ಇದರ ಎತ್ತರ ಅಪಾರ್ಟ್‌ಮೆಂಟ್‌ನ ಮೊದಲ ಮಹಡಿಗೆ ಸಮಾನ ಪ್ರಮಾಣದಲ್ಲಿ ಇರುತ್ತದೆ. ಬೃಹತ್ ಗಾತ್ರದ ವಾಹನಕ್ಕೆ ಹಮ್ಮರ್ ಎಚ್ 1 ಎಕ್ಸ್ 3 ಎಂದು ಹೆಸರಿಡಲಾಗಿದೆ. ಇದು ಸಾಮಾನ್ಯ ಹಮ್ಮರ್‌ಗಿಂತ ಅನೇಕ ಪಟ್ಟು ದೊಡ್ಡದಾಗಿರುವುದರಿಂದ ಈ ಹೆಸರನ್ನು ಇಡಲಾಗಿದೆ.

ವಿಶ್ವದ ಅತಿ ಎತ್ತರದ ಕಾರನ್ನು ನೋಡಿದ್ದೀರಾ?..ಏಣಿಯಿಲ್ಲದೆ ಈ ಕಾರನ್ನು ಏರುವುದು ಅಸಾಧ್ಯ

ಈ ಕಾರನ್ನು ಅರಬ್ ದೇಶದ ಅಲ್‌ಮಟ್‌ನಲ್ಲಿರುವ ವಾಹನ ವಸ್ತುಸಂಗ್ರಹಾಲಯವಾದ ಆಫ್-ರೋಡ್ ಹಿಸ್ಟರಿಯಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಹಮ್ಮರ್ ಎಚ್1 ಎಕ್ಸ್3 ಸುಮಾರು 6.6 ಮೀಟರ್ ಎತ್ತರ, 14 ಮೀಟರ್ ಉದ್ದ ಮತ್ತು 6 ಮೀಟರ್ ಅಗಲವಿದೆ. ಇದನ್ನು ಕೇವಲ ಆಟಿಕೆಯಂತೆ ಪ್ರದರ್ಶನಕ್ಕೆ ಮಾತ್ರ ಇಟ್ಟಿಲ್ಲ. ಈ ವಾಹನವನ್ನು ಓಡಿಸಬಹುದು ಎಲ್ಲಾ ಕಾರು ಮಾದರಿಗಳಂತೆ ಬೃಹತ್‌ ಎಂಜಿನ್‌ ಅನ್ನು ಹೊಂದಿದೆ.

ವಿಶ್ವದ ಅತಿ ಎತ್ತರದ ಕಾರನ್ನು ನೋಡಿದ್ದೀರಾ?..ಏಣಿಯಿಲ್ಲದೆ ಈ ಕಾರನ್ನು ಏರುವುದು ಅಸಾಧ್ಯ

ಈ ಕಾರಿನ ಕಾರ್ಯಕ್ಷಮತೆಯೂ ಎಚ್1 ಎಕ್ಸ್3 ಸಾಮಾನ್ಯ ಹಮ್ಮರ್ ಎಚ್1 ನಂತೆ ಸಮರ್ಥವಾಗಿದೆ. ಕಾರಿನೊಳಗೆ ಕೋಣೆಯಂತಹ ದೊಡ್ಡ ಮನೆಯ ರಚನೆ ಇದೆ. ಇದರ ಜೊತೆಗೆ ಎಲ್ಲಾ ಭಾಗಗಳನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಒಟ್ಟಾರೆ ಹಮ್ಮರ್ ಎಚ್ 1 ಅನ್ನು ಪ್ರತಿಬಿಂಬಿಸುವಂತೆ ನಿರ್ಮಿಸಲಾಗಿದೆ.

ವಿಶ್ವದ ಅತಿ ಎತ್ತರದ ಕಾರನ್ನು ನೋಡಿದ್ದೀರಾ?..ಏಣಿಯಿಲ್ಲದೆ ಈ ಕಾರನ್ನು ಏರುವುದು ಅಸಾಧ್ಯ

ಈ ವಾಹನವು ಅರಬ್ ರಾಷ್ಟ್ರೀದ ಶೇಖ್ ಹಮದ್ ಬಿನ್ ಹಮ್ದಾನ್ ಅಲ್ ನಹ್ಯಾನ್ ಗೆ ಸೇರಿದೆ ಎನ್ನಲಾಗಿದೆ. ಅವರನ್ನು ರೇನ್ ಬೋ ಶೇಖ್ ಎಂದೂ ಕರೆಯಲಾಗುತ್ತದೆ. ಅವರು ಕಾರು ಸಂಗ್ರಹ ಮಾಡುವುದರಲ್ಲಿ ಖ್ಯಾತಿ ಪಡೆದಿದ್ದಾರೆ. ಮಾಹಿತಿಯ ಪ್ರಕಾರ ಇಂತಹ ಅನೇಕ ವಾಹನಗಳನ್ನು ಅಭಿವೃದ್ಧಿಪಡಿಸಲು ತನ್ನ ಲಕ್ಷಾಂತರ ಡಾಲರ್‌ಗಳನ್ನು ಕಾರುಗಳಿಗಾಗಿ ವ್ಯಯಿಸುತ್ತಿದ್ದಾರೆ.

ವಿಶ್ವದ ಅತಿ ಎತ್ತರದ ಕಾರನ್ನು ನೋಡಿದ್ದೀರಾ?..ಏಣಿಯಿಲ್ಲದೆ ಈ ಕಾರನ್ನು ಏರುವುದು ಅಸಾಧ್ಯ

ಮಲಗುವ ಕೋಣೆಯನ್ನು ಹೊರತುಪಡಿಸಿ, ಕಾರಿನಲ್ಲಿ ಅಡುಗೆ ಮನೆ, ಶೌಚಾಲಯ ಸೇರಿದಂತೆ ಇತರ ಅನೇಕ ಕೋಣೆಗಳಿವೆ. ಇದು ಸಾಮಾನ್ಯ ಕಾರಿನಂತೆ ಚಲಿಸುತ್ತದೆ. ಟೈರ್‌ಗಳನ್ನು ವಿಮಾನದ ಚಕ್ರಗಳಂತೆ ವಿನ್ಯಾಸಗೊಳಿಸಲಾಗಿದೆ. ಉತ್ತಮ ಕಾರ್ಯಾಚರಣೆಗಾಗಿ ಪ್ರತ್ಯೇಕವಾಗಿ ಯುಎಸ್ ಕಾರು ತಯಾರಕರಿಂದ ಎಂಜಿನ್‌ಗಳನ್ನು ಪಡೆಯಲಾಗಿದೆ. ಕಾರು ಮಹಡಿಯಷ್ಟು ಎತ್ತರವಿರುವುದರಿಂದ ಕಾರಿನೊಳಗೆ ಪ್ರವೇಶಿಸಲು ಪ್ರತ್ಯೇಕ ಏಣಿಯ ಅಗತ್ಯವಿದೆ. ಈ ಮೂಲಕ ಮಾತ್ರ ಪ್ರಯಾಣಿಕರು ಕಾರನ್ನು ಪ್ರವೇಶಿಸಬಹುದು.

More from DriveSpark

Article Published On: Saturday, March 19, 2022, 10:54 [IST]
English summary
Here is video about world s biggest hummer h1 suv
Read more on ಹಮ್ಮರ್ hummer
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+