ಹೊಸ ಜಿಎಂಸಿ ಹಮ್ಮರ್ ಇವಿ ಪಿಕ್ಅಪ್ ಟ್ರಕ್ ವಿತರಣೆ ಆರಂಭ

ಜನರಲ್ ಮೋಟಾರ್ಸ್ (GM) ತನ್ನ ಜಿಎಂಸಿ ಹಮ್ಮರ್ ಇವಿ ಪಿಕ್ಅಪ್ ಟ್ರಕ್‌ನ ವಿತರಣೆಯನ್ನು ಪ್ರಾರಂಭಿಸಿದೆ ಎಂದು ಘೋಷಿಸಿದೆ. ಹಮ್ಮರ್ ಇವಿ ಪಿಕ್ಅಪ್ ಟ್ರಕ್ ಅನ್ನು ಆಲ್-ಎಲೆಕ್ಟ್ರಿಕ್ ಅವತಾರದಲ್ಲಿ ಪರಿಚಯಿಸುವ ಮೂಲಕ ಹಮ್ಮರ್ ಬ್ರ್ಯಾಂಡ್ ಅನ್ನು ಪುನರುಜ್ಜೀವನಗೊಳಿಸಿತು.

ಹೊಸ ಜಿಎಂಸಿ ಹಮ್ಮರ್ ಇವಿ ಪಿಕ್ಅಪ್ ಟ್ರಕ್ ವಿತರಣೆ ಆರಂಭ

ರಿವಿಯನ್ R1T ನಂತರ ಮಾರುಕಟ್ಟೆಗೆ ಬಂದ ಎರಡನೇ ಆಲ್-ಎಲೆಕ್ಟ್ರಿಕ್ ಪಿಕ್ಅಪ್ ಟ್ರಕ್ ಹಮ್ಮರ್ ಇವಿ ಆಗಿದೆ. ಫೋರ್ಡ್ ಕಂಪನಿಯು ಎಫ್-150 ಲೈಟ್ನಿಂಗ್ ಅನ್ನು ಪ್ರಾರಂಭಿಸಲು ತಯಾರಿ ನಡೆಸುತ್ತಿದೆ ಮತ್ತು ಟೆಸ್ಲಾ 2022ರ ಉತ್ತರಾರ್ಧದಲ್ಲಿ ಸೈಬರ್‌ಟ್ರಕ್‌ನ ವಿತರಣೆಯನ್ನು ಪ್ರಾರಂಭಿಸುವ ನಿರೀಕ್ಷೆಯಿದೆ. ಜಿಎಂ ಒಂದು ಸೂಪರ್ ಟ್ರಕ್ ಅನ್ನು ಭರವಸೆ ನೀಡಿದ್ದು, ಜಿಎಂಸಿ ಹಮ್ಮರ್ ಇವಿ ಪಿಕ್ಅಪ್ ಟ್ರಕ್ ಮಾದರಿಯು ಅಸಾಧಾರಣ ಆಫ್-ರೋಡ್ ಸಾಮರ್ಥ್ಯವನ್ನು ಹೊಂದಿದೆ.

ಹೊಸ ಜಿಎಂಸಿ ಹಮ್ಮರ್ ಇವಿ ಪಿಕ್ಅಪ್ ಟ್ರಕ್ ವಿತರಣೆ ಆರಂಭ

ಜಿಎಂಸಿ ಹಮ್ಮರ್ ಇವಿಯ ಮೊಟ್ಟ ಮೊದಲ ಯುನಿಟ್ ಅನ್ನು ಅಮೆರಿಕದಲ್ಲಿ ನಡೆದ ಬ್ಯಾರೆಟ್ ಜಾಕ್ಸನ್ ಹರಾಜಿನಲ್ಲಿ ರೂ.18.15 ಕೋಟಿಗೆ ಹರಾಜಾಗಿತ್ತು. ಹರಾಜಿನಿಂದ ಬಂದ ಸಂಪೂರ್ಣ ಮೊತ್ತವನ್ನು ಟನಲ್ ಟು ಟವರ್ಸ್ ಫೌಂಡೇಶನ್‌ಗೆ ನೀಡಲಾಗುತ್ತದೆ.

ಹೊಸ ಜಿಎಂಸಿ ಹಮ್ಮರ್ ಇವಿ ಪಿಕ್ಅಪ್ ಟ್ರಕ್ ವಿತರಣೆ ಆರಂಭ

ಸೆಪ್ಟೆಂಬರ್ 11, 2001ರಂದು ನಡೆದ ದಾಳಿಯಲ್ಲಿ ಇತರರನ್ನು ಉಳಿಸಲು ತನ್ನ ಪ್ರಾಣವನ್ನು ತ್ಯಾಗ ಮಾಡಿದ ಅಗ್ನಿಶಾಮಕ ಸಿಬ್ಬಂದಿ ಸ್ಟೀಫನ್ ಸಿಲ್ಲರ್ ಅವರನ್ನು ಸ್ಮರಣೆಯನ್ನು ಗೌರವಿಸಲು ಟನಲ್ ಟು ಟವರ್ಸ್ ಫೌಂಡೇಶನ್ ಸ್ಥಾಪಿಸಲಾಯಿತು. ಈ ಫೌಂಡೇಶನ್‌ ಹಲವಾರು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿದೆ. ಇನ್ನು ಜಿಎಂಸಿ ಹಮ್ಮರ್ ಪಿಕ್ಅಪ್ ಟ್ರಕ್ ಉಳಿದ ಎರಡು ಮಾದರಿಗಳು ಉತ್ತಮ ಮೊತ್ತಕ್ಕೆ ಹರಾಜಿಗಿತ್ತು.

ಹೊಸ ಜಿಎಂಸಿ ಹಮ್ಮರ್ ಇವಿ ಪಿಕ್ಅಪ್ ಟ್ರಕ್ ವಿತರಣೆ ಆರಂಭ

ಜಿಎಂಸಿ ಟ್ವಿಟ್ಟರ್‌ನಲ್ಲಿ ಹಮ್ಮರ್ ಇವಿಗಳ ಉತ್ಪಾದನೆಯನ್ನು ಪ್ರದರ್ಶಿಸುವ ವೀಡಿಯೊವನ್ನು ಪೋಸ್ಟ್ ಮಾಡಿದೆ ಮತ್ತು ಗ್ರಾಹಕರ ವಿತರಣೆಗಾಗಿ ಮೊದಲ ಯುನಿಟ್ ಅನ್ನು ಹೊರತರುತ್ತಿದೆ. ಆಲ್-ಎಲೆಕ್ಟ್ರಿಕ್ ಭವಿಷ್ಯಕ್ಕಾಗಿ ಜನರಲ್ ಮೋಟಾರ್ಸ್‌ನ ದೃಷ್ಟಿಯನ್ನು ಮುನ್ನಡೆಸಲು ಉತ್ತಮ ಕಾರ್ಯಕ್ಷಮತೆಯನ್ನು ನೀಡುತ್ತದೆ.

ಹೊಸ ಜಿಎಂಸಿ ಹಮ್ಮರ್ ಇವಿ ಪಿಕ್ಅಪ್ ಟ್ರಕ್ ವಿತರಣೆ ಆರಂಭ

ವಾಹನ ತಯಾರಕರು 2025ರ ವೇಳೆಗೆ ಹಮ್ಮರ್ ಪಿಕ್ಅಪ್ ಮತ್ತು ಅದರ ಮುಂಬರುವ ಎಸ್‍ಯುವಿ ರೂಪಾಂತರದಂತಹ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಮತ್ತು ಅಭಿವೃದ್ಧಿಗಾಗಿ ಸುಮಾರು $30 ಬಿಲಿಯನ್ ಹೂಡಿಕೆ ಮಾಡುತ್ತಿದ್ದಾರೆ. ಕಂಪನಿಯು ಫಿಡೆಕ್ಸ್'ಗೆ ಹೊಸ ಎಲೆಕ್ಟ್ರಿಕ್ ವಾಣಿಜ್ಯ ವಿತರಣಾ ವ್ಯಾನ್‌ನ ಮೊದಲ ಗ್ರಾಹಕ ವಿತರಣೆಯನ್ನು ಪ್ರಾರಂಭಿಸುತ್ತದೆ.

ಹೊಸ ಜಿಎಂಸಿ ಹಮ್ಮರ್ ಇವಿ ಪಿಕ್ಅಪ್ ಟ್ರಕ್ ವಿತರಣೆ ಆರಂಭ

ಈ ಹೊಸ ಎಲೆಕ್ಟ್ರಿಕ್ ವಾಹನವನ್ನು ಡೆಟ್ರಾಯಿಟ್ ಮತ್ತು ಹ್ಯಾಮ್‌ಟ್ರಾಮ್ಕ್‌ನ ಜನರಲ್ ಮೋಟಾರ್ಸ್ ಸಂಸ್ಥೆಯ(ಜಿಎಂಸಿ) ಸ್ಥಾವರದಲ್ಲಿ ಉತ್ಪಾದಿಸಲಾಗುತ್ತಿದೆ, ಜನರಲ್ ಮೋಟಾರ್ಸ್ ಸಂಸ್ಥೆಯು ಹಮ್ಮರ್ ಇವಿ ಪಿಕಪ್ ಟ್ರಕ್ ಗಾಗಿ ಪಡೆದ ಬುಕ್ಕಿಂಗ್‌ಗಳ ಸಂಖ್ಯೆಯನ್ನು ಬಹಿರಂಗಪಡಿಸಿಲ್ಲ, ಹಮ್ಮರ್ ಇವಿ ಮಾದರಿಯನ್ನು ಎಸ್‍ಯುವಿ ಮಾದರಿಯಲ್ಲಿಯು ಕೂಡ ಬಿಡುಗಡೆಗೊಳಿಸಲಿದೆ.

ಹೊಸ ಜಿಎಂಸಿ ಹಮ್ಮರ್ ಇವಿ ಪಿಕ್ಅಪ್ ಟ್ರಕ್ ವಿತರಣೆ ಆರಂಭ

ಜಿಎಂಸಿ ನಿರ್ಮಿಸಿರುವ ಮೊದಲ ಎಲೆಕ್ಟ್ರಿಕ್ ಸೂಪರ್ ಟ್ರಕ್" ಇದಾಗಿದೆ. ಹೊಸ ಜಿಎಂಸಿ ಹಮ್ಮರ್ ಇವಿ 1,000 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಹಮ್ಮರ್ ನಲ್ಲಿ 24-ಮಾಡ್ಯೂಲ್, ಡಬಲ್-ಸ್ಟ್ಯಾಕ್ಡ್ ಅಲ್ಟಿಯಮ್ ಬ್ಯಾಟರಿಯನ್ನು ಅಳವಡಿಸಲಾಗಿದೆ. ಇನ್ನು ಹಮ್ಮರ್ ಇವಿ ಸರಿಸುಮಾರು 563 ಕಿ.ಮೀ ರೇಂಜ್ ನೀಡುವ ಸಾಮರ್ಥ್ಯವಿದೆ.

ಹೊಸ ಜಿಎಂಸಿ ಹಮ್ಮರ್ ಇವಿ ಪಿಕ್ಅಪ್ ಟ್ರಕ್ ವಿತರಣೆ ಆರಂಭ

ಹಮ್ಮರ್ ಇವಿ 800 ವೋಲ್ಟ್ ವೇಗದ ಚಾರ್ಜಿಂಗ್ ವ್ಯವಸ್ಥಯನ್ನು ಹೊಂದಿದೆ. ಈ ವಾಹನವನ್ನು ಕೇವಲ 10 ನಿಮಿಷ ಚಾರ್ಜ್ ಮಾಡಿದರೆ 100 ಕಿ.ಮೀ ನಷ್ಟು ಚಲಿಸುವ ಸಾಮರ್ಥ್ಯವನ್ನು ಹೊಂದಿದೆ. ಹಮ್ಮರ್ ಇವಿ ಉತ್ತಮ ಪರ್ಫಾಮೆನ್ಸ್ ಮಾದರಿಯಾಗಿದೆ. ಕೇವಲ 3 ಸೆಕೆಂಡುಗಳಲ್ಲಿ ಈ ಹಮ್ಮರ್ ಇವಿ 0-60 ಕಿ.ಮೀ ವೇಗವನ್ನು ಕ್ರಮಿಸುತ್ತದೆ. ಈ ವಾಹನದಲ್ಲಿ 35 ಇಂಚಿನ ಟಯರ್ ಗಳೊಂದಿಗೆ ಸ್ಟ್ಯಾಂಡರ್ಡ್ ಆಗಿ 4ಡಬ್ಲ್ಯುಡಿಯನ್ನು ಅಳವಡಿಸಿದ್ದಾರೆ.

ಹೊಸ ಜಿಎಂಸಿ ಹಮ್ಮರ್ ಇವಿ ಪಿಕ್ಅಪ್ ಟ್ರಕ್ ವಿತರಣೆ ಆರಂಭ

ಈ ಹಮ್ಮರ್ ಇವಿಯಲ್ಲಿ ವಿಶಿಷ್ಟವಾದ ಡ್ರೈವಿಂಗ್ ಮೋಡ್ ಅನ್ನು ಸಹ ಹೊಂದಿದೆ. ಇದನ್ನು 'ಕ್ರ್ಯಾಬ್ ಮೋಡ್' ಎಂದು ಕರೆಯಲಾಗುತ್ತದೆ. ಇದು ಆಫ್-ರೋಡ್ ನಲ್ಲಿ ಹೆಚ್ಚು ಉಪಯೋಗವಾಗುವ ಪೀಚರ್ ಆಗಿದೆ. ಹಮ್ಮರ್ ಇವಿಯಲ್ಲಿ 13.4-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಜೊತೆಗೆ 12.3-ಇಂಚಿನ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿರಲಿದೆ. ಇದರಲ್ಲಿ ಕ್ಲೈಮೆಂಟ್ ಕಂಟ್ರೋಲ್ ಫೀಚರ್ ಅನ್ನು ಒಳಗೊಂಡಿದೆ,

ಹೊಸ ಜಿಎಂಸಿ ಹಮ್ಮರ್ ಇವಿ ಪಿಕ್ಅಪ್ ಟ್ರಕ್ ವಿತರಣೆ ಆರಂಭ

ಈ ವಾಹನವು ಅಡಾಪ್ಟಿವ್ ಏರ್ ಸಸ್ಪೆಂಕ್ಷನ್ (ಇದು 6 ಇಂಚುಗಳಷ್ಟು ಗ್ರೌಂಡ್ ಕ್ಲಿಯರೆನ್ಸ್ ಹೆಚ್ಚಿಸಬಹುದು), ಇನ್ನು ಆಫ್-ರೋಡಿಂಗ್‌ಗಾಗಿ ಅಂಡರ್‌ಬಾಡಿ ಅರ್ಮರ್ ಮತ್ತು ಕಾರಿನ ಸುತ್ತಲಿನ ದೃಶ್ಯವನ್ನು ಒದಗಿಸಲು 18 ಕ್ಯಾಮೆರಾಗಳನ್ನು ಸಹ ನೀಡುತ್ತದೆ.

ಹೊಸ ಜಿಎಂಸಿ ಹಮ್ಮರ್ ಇವಿ ಪಿಕ್ಅಪ್ ಟ್ರಕ್ ವಿತರಣೆ ಆರಂಭ

ಹಿಂದಿನ ತಕೆಮಾರಿನ ಹಮ್ಮರ್ ಎಸ್‍ಯುವಿ ರೂಪದಲ್ಲಿ ಮಾರಾಟವಾಗುತ್ತಿತ್ತು. ಈ ಆಫ್-ರೋಡ್ ಹಮ್ಮರ್ ಎಸ್‍‍ಯುವಿಯು ಕಠಿಣವಾದ ಅಡೆತಡೆಗಳಲ್ಲಿ ಸುಲಭವಾಗಿ ಸಾಗುತ್ತದೆ. ಆಫ್ ರೋಡ್ ವಾಹನ ಪ್ರಿಯರ ಮೆಚ್ಚಿನ ಎಸ್‍‍ಯುವಿಯಾಗಿತ್ತು. ಅಮೆರಿಕಾದ ಸೈನ್ಯ ಯುಎಸ್ ಸೈನ್ಯ, ಯುಎಸ್ ಮೆರೈನ್ ಕಾಪ್ಸ್ ಮತ್ತು ಇತರ ಅರೆಸೈನಿಕ ಪಡೆಗಳಿಗೂ ಇದು ಮೆಚ್ಚಿನ ಎಸ್‍ಯುವಿಯಾಗಿದೆ. ಅಮೆರಿಕಾದ ಪಡೆಗಳು ಕಾರ್ಯಾಚರಣೆಗಾಗಿ ವಿಶೇಷವಾಗಿ ತಯಾರಿಸಿ ಹಮ್ಮರ್ ಅನ್ನು ಬಳಸುತ್ತಿದ್ದರು. ಹಮ್ಮರ್ ಎಸ್‍‍ಯುವಿಯನ್ನು ಮೊದಲ ಬಾರಿಗೆ 1992ರಲ್ಲಿ ಬಿಡುಗಡೆ ಮಾಡಿದ್ದರು. ಹಮ್ಮರ್‍‍ನ ಉತ್ಪಾದನೆಯನ್ನು 2010ರಲ್ಲಿ ಸ್ಥಗಿತಗೊಳಿಸಲಾಗಿತ್ತು.

ಹೊಸ ಜಿಎಂಸಿ ಹಮ್ಮರ್ ಇವಿ ಪಿಕ್ಅಪ್ ಟ್ರಕ್ ವಿತರಣೆ ಆರಂಭ

ಇನ್ನು ಹೊಸ ಹಮ್ಮರ್ ಇವಿ ಪಿಕ್ಅಪ್ ಟ್ರಕ್ ರೂಫ್ ಪ್ಯಾನೆಲ್ ಗಳನ್ನು ಸಹ ಪಡೆಯುತ್ತದೆ, ಅದು ಮುಂಭಾಗದ ಬೂಟ್‌ನೊಳಗೆ ಹೊಂದಿಕೊಳ್ಳುತ್ತದೆ. ಹೊಸ ಹಮ್ಮರ್ ಇವಿಯಲ್ಲಿ ಆಲ್-ಎಲ್ಇಡಿ ಲೈಟಿಂಗ್ ಅನ್ನು ಅಳವಡಿಸಿದೆ. ಈ ವಾಹನವು ಬಾಕ್ಸಿ-ಲುಕ್ ನೊಂದಿಗೆ ಆಕರ್ಷಕ ವಿನ್ಯಾಸವನ್ನು ಹೊಂದಿದೆ.

Most Read Articles

Kannada
Read more on ಹಮ್ಮರ್ hummer
English summary
Gm begins deliveries of new gmc hummer ev pickup truck details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X