ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಜಿಎಂಸಿ ಹಮ್ಮರ್ ಎಲೆಕ್ಟ್ರಿಕ್ ಆಫ್-ರೋಡ್ ಎಸ್‍ಯುವಿ

ಜನರಲ್ ಮೋಟಾರ್ಸ್(ಜಿಎಂಸಿ) ಕಂಪನಿಯು ಕಳೆದ ವರ್ಷ ಹಮ್ಮರ್ ಇವಿ ಪಿಕಪ್ ಟ್ರಕ್ ಅನ್ನು ಆಲ್-ಎಲೆಕ್ಟ್ರಿಕ್ ಅವತಾರದಲ್ಲಿ ಅನಾವರಣಗೊಳಿಸುವ ಮೂಲಕ ಹಮ್ಮರ್ ಬ್ರ್ಯಾಂಡ್ ಅನ್ನು ಪುನರುಜ್ಜೀವನಗೊಳಿಸಿತು. ಇದೀಗ ಅಮೆರಿಕ ಮೂಲದ ಜಿಎಂಸಿ ಕಂಪನಿಯು ಹೊಸ ಎಲೆಕ್ಟ್ರಿಕ್ ಎಸ್‍ಯುವಿಯನ್ನು ಅಭಿವೃದ್ದಿ ಪಡಿಸಿದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಜಿಎಂಸಿ ಹಮ್ಮರ್ ಆಫ್-ರೋಡ್ ಎಲೆಕ್ಟ್ರಿಕ್ ಎಸ್‍ಯುವಿ

ಇದು ಜಿಎಂಸಿಯ ಹಮ್ಮರ್ ಪಿಕಪ್‌ನ ಎಸ್‍ಯುವಿ ಮಾದರಿಯಾಗಿದೆ. ಈ ಹಮ್ಮರ್ ಎಸ್‍ಯುವಿಯ ಉತ್ಪಾದನೆ ಎರಡು ವರ್ಷಗಳಲ್ಲಿ ಪ್ರಾರಂಭವಾಗಲಿದೆ. ಜನರಲ್ ಮೋಟಾರ್ಸ್‌ನ ಮುಂದಿನ ತಲೆಮಾರಿನ ಅಲ್ಟಿಯಮ್ ಪ್ಲಾಟ್‌ಫಾರ್ಮ್ ಆಧರಿಸಿ, ಹೊಸ ಹಮ್ಮರ್ ಇವಿ ಎಸ್‌ಯುವಿಯು ಇವಿ 2, ಇವಿ 2 ಎಕ್ಸ್, ಇವಿ 3 ಎಕ್ಸ್ ಮತ್ತು ಎಡಿಷನ್ 1 ಮಾದರಿಯ ನಾಲ್ಕು ಆವೃತ್ತಿಗಳಲ್ಲಿ ಪರಿಚಯಿಸಲಾಗುತ್ತದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಜಿಎಂಸಿ ಹಮ್ಮರ್ ಆಫ್-ರೋಡ್ ಎಲೆಕ್ಟ್ರಿಕ್ ಎಸ್‍ಯುವಿ

ಈ ಹೊಸ ಜಿಎಂಸಿ ಹಮ್ಮರ್ ಎಸ್‍ಯುವಿಯು 2023ರ ಆರಂಭದಲ್ಲಿ ಬಿಡುಗಡೆಯಾಗಲಿದೆ. ಜಿಎಂಸಿಯ ಹಮ್ಮರ್ ಇವಿ ಎಸ್‌ಯುವಿಯು ಅತ್ಯಂತ ಉತ್ತಮ ಮಾದರಿಯಾಗಿರುತ್ತದೆ ಎನ್ನಲಾಗುತ್ತಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಜಿಎಂಸಿ ಹಮ್ಮರ್ ಆಫ್-ರೋಡ್ ಎಲೆಕ್ಟ್ರಿಕ್ ಎಸ್‍ಯುವಿ

ಈ ಹೊಸ ಹಮ್ಮರ್ ಎಸ್‍ಯುವಿಯು 402 ಕಿ.ಮೀ ಮೈಲೇಜ್ ಅಥವಾ ರೇಂಜ್ ಅನ್ನು ಹೊಂದಿರುತ್ತದೆ. ಈ ಹೊಸ ಎಸ್‍ಯುವಿಯು 616 ಬಿಎಚ್‌ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಬೇಸ್ ಮಾದರಿಯನ್ನು ಹೊರತುಪಡಿಸಿ, ಹಮ್ಮರ್ ಇವಿ ಎಸ್‍ಯುವಿಯಲ್ಲಿ ಹೆಚ್ಚುವರಿ ತೀವ್ರ ಆಫ್-ರೋಡ್ ಪ್ಯಾಕೇಜ್ ಅನ್ನು ಸಹ ನೀಡುತ್ತದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಜಿಎಂಸಿ ಹಮ್ಮರ್ ಆಫ್-ರೋಡ್ ಎಲೆಕ್ಟ್ರಿಕ್ ಎಸ್‍ಯುವಿ

ಇನ್ನು ಜಿಎಂಸಿ ಇದರ ಹಿರಿಯ ಸಹೋದರ ಎಂದೇ ಹೇಳಬಹುದಾದ ಎಲೆಕ್ಟ್ರಿಕ್ ಪಿಕ್ ಅಪ್ ಟ್ರಕ್ ಅನ್ನು ಈಗಗಾಲೇ ಅನಾವರಣಗೊಳಿಸಿದೆ. ಜಿಎಂಸಿ ನಿರ್ಮಿಸಿರುವ ಮೊದಲ ಎಲೆಕ್ಟ್ರಿಕ್ ಸೂಪರ್ ಟ್ರಕ್" ಇದಾಗಿದೆ. ಹೊಸ ಜಿಎಂಸಿ ಹಮ್ಮರ್ ಇವಿ 1,000 ಬಿಹೆಚ್‍ಪಿ ಪವರ್ ಉತ್ಪಾದಿಸುತ್ತದೆ.

MOST READ: 2020ರ ಡಿಸೆಂಬರ್‌ ತಿಂಗಳ ಮಾರಾಟದಲ್ಲಿ ಬೆಳವಣಿಗೆಯನ್ನು ಸಾಧಿಸಿದ ಟೊಯೊಟಾ

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಜಿಎಂಸಿ ಹಮ್ಮರ್ ಆಫ್-ರೋಡ್ ಎಲೆಕ್ಟ್ರಿಕ್ ಎಸ್‍ಯುವಿ

ಹಮ್ಮರ್ ನಲ್ಲಿ 24-ಮಾಡ್ಯೂಲ್, ಡಬಲ್-ಸ್ಟ್ಯಾಕ್ಡ್ ಅಲ್ಟಿಯಮ್ ಬ್ಯಾಟರಿಯನ್ನು ಅಳವಡಿಸಲಾಗಿದೆ. ಇನ್ನು ಹಮ್ಮರ್ ಇವಿ ಸರಿಸುಮಾರು 563 ಕಿ.ಮೀ ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿರುತ್ತದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಜಿಎಂಸಿ ಹಮ್ಮರ್ ಆಫ್-ರೋಡ್ ಎಲೆಕ್ಟ್ರಿಕ್ ಎಸ್‍ಯುವಿ

ಈ ಹಮ್ಮರ್ ಇವಿ ಪಿಕ್ ಅಪ್ ಟ್ರಕ್ 800 ವೋಲ್ಟ್ ವೇಗದ ಚಾರ್ಜಿಂಗ್ ವ್ಯವಸ್ಥಯನ್ನು ಹೊಂದಿದೆ. ಈ ವಾಹನವನ್ನು ಕೇವಲ 10 ನಿಮಿಷ ಚಾರ್ಜ್ ಮಾಡಿದರೆ 100 ಕಿ.ಮೀ ನಷ್ಟು ಚಲಿಸುವ ಸಾಮರ್ಥ್ಯವನ್ನು ಹೊಂದಿದೆ. ಹಮ್ಮರ್ ಇವಿ ಉತ್ತಮ ಪರ್ಫಾಮೆನ್ಸ್ ಮಾದರಿಯಾಗಿದೆ. ಕೇವಲ 3 ಸೆಕೆಂಡುಗಳಲ್ಲಿ ಈ ಹಮ್ಮರ್ ಇವಿ 0-60 ಕಿ.ಮೀ ವೇಗವನ್ನು ಕ್ರಮಿಸುತ್ತದೆ.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಜಿಎಂಸಿ ಹಮ್ಮರ್ ಆಫ್-ರೋಡ್ ಎಲೆಕ್ಟ್ರಿಕ್ ಎಸ್‍ಯುವಿ

ಈ ವಾಹನದಲ್ಲಿ 35 ಇಂಚಿನ ಟಯರ್ ಗಳೊಂದಿಗೆ ಸ್ಟ್ಯಾಂಡರ್ಡ್ ಆಗಿ 4ಡಬ್ಲ್ಯುಡಿಯನ್ನು ಅಳವಡಿಸಿದ್ದಾರೆ. ಈ ಹಮ್ಮರ್ ಇವಿಯಲ್ಲಿ ವಿಶಿಷ್ಟವಾದ ಡ್ರೈವಿಂಗ್ ಮೋಡ್ ಅನ್ನು ಸಹ ಹೊಂದಿದೆ. ಇದನ್ನು ‘ಕ್ರ್ಯಾಬ್ ಮೋಡ್' ಎಂದು ಕರೆಯಲಾಗುತ್ತದೆ. ಇದು ಆಫ್-ರೋಡ್ ನಲ್ಲಿ ಹೆಚ್ಚು ಉಪಯೋಗವಾಗುವ ಫೀಚರ್ ಆಗಿದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಜಿಎಂಸಿ ಹಮ್ಮರ್ ಆಫ್-ರೋಡ್ ಎಲೆಕ್ಟ್ರಿಕ್ ಎಸ್‍ಯುವಿ

ಹಮ್ಮರ್ ಇವಿಯಲ್ಲಿ 13.4-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಜೊತೆಗೆ 12.3-ಇಂಚಿನ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿರಲಿದೆ. ಇದರಲ್ಲಿ ಕ್ಲೈಮೆಂಟ್ ಕಂಟ್ರೋಲ್ ಫೀಚರ್ ಅನ್ನು ಒಳಗೊಂಡಿದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಜಿಎಂಸಿ ಹಮ್ಮರ್ ಆಫ್-ರೋಡ್ ಎಲೆಕ್ಟ್ರಿಕ್ ಎಸ್‍ಯುವಿ

ಹಿಂದಿನ ತಲೆಮಾರಿನ ಹಮ್ಮರ್ ಎಸ್‍ಯುವಿ ರೂಪದಲ್ಲಿ ಮಾರಾಟವಾಗುತ್ತಿತ್ತು. ಈ ಆಫ್-ರೋಡ್ ಹಮ್ಮರ್ ಎಸ್‍‍ಯುವಿಯು ಕಠಿಣವಾದ ಅಡೆತಡೆಗಳಲ್ಲಿ ಸುಲಭವಾಗಿ ಸಾಗುತ್ತದೆ. ಆಫ್ ರೋಡ್ ವಾಹನ ಪ್ರಿಯರ ಮೆಚ್ಚಿನ ಎಸ್‍‍ಯುವಿಯಾಗಿತ್ತು. ಅಮೆರಿಕಾದ ಸೈನ್ಯ ಯುಎಸ್ ಸೈನ್ಯ, ಯುಎಸ್ ಮೆರೈನ್ ಕಾಪ್ಸ್ ಮತ್ತು ಇತರ ಅರೆಸೈನಿಕ ಪಡೆಗಳಿಗೂ ಇದು ಮೆಚ್ಚಿನ ಎಸ್‍ಯುವಿ ಮಾದರಿಯಾಗಿತ್ತು

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಜಿಎಂಸಿ ಹಮ್ಮರ್ ಆಫ್-ರೋಡ್ ಎಲೆಕ್ಟ್ರಿಕ್ ಎಸ್‍ಯುವಿ

ಅಮೆರಿಕಾದ ಪಡೆಗಳು ಕಾರ್ಯಾಚರಣೆಗಾಗಿ ವಿಶೇಷವಾಗಿ ತಯಾರಿಸಿ ಹಮ್ಮರ್ ಅನ್ನು ಬಳಸುತ್ತಿದ್ದರು. ಹಮ್ಮರ್ ಎಸ್‍‍ಯುವಿಯನ್ನು ಮೊದಲ ಬಾರಿಗೆ 1992ರಲ್ಲಿ ಬಿಡುಗಡೆ ಮಾಡಿದ್ದರು. ಈ ಹಮ್ಮರ್‍‍ನ ಉತ್ಪಾದನೆಯನ್ನು 2010ರಲ್ಲಿ ಸ್ಥಗಿತಗೊಳಿಸಲಾಗಿತ್ತು. ಆದರೆ ಇದೀಗ ಎಲೆಕ್ಟ್ರಿಕ್ ರೂಪದಲ್ಲಿ ಅದೇ ಬಲಿಷ್ಠ ಅಫ್-ರೋಡ್ ಎಸ್‍ಯುವಿಯಾಗಿ ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜಾಗಿದೆ.

Most Read Articles

Kannada
Read more on ಹಮ್ಮರ್ hummer
English summary
2024 GMC Hummer EV SUV Officially Unveiled. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X