ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ ಬಿಎಸ್-6 ಹ್ಯುಂಡೈ ಐ20 ಕಾರು

ಹ್ಯುಂಡೈ ಕಂಪನಿಯು ತನ್ನ ಹೊಸ ತಲೆಮಾರಿನ ಐ20 ಕಾರನ್ನು ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಬಿಎಸ್-6 ಹ್ಯುಂಡೈ ಐ20 ಕಾರಿನಲ್ಲಿ ಹೊಸ ಫೀಚರ್‌ಗಳನ್ನು ಹೊಂದಿರಲಿದೆ.

ಬಿಡುಗಡೆಯಾಗಲಿದೆ ಬಿಎಸ್-6 ಹ್ಯುಂಡೈ ಐ20 ಕಾರು

ಈ ಹ್ಯುಂಡೈ ಕಾರಿನ ಮುಂಭಾಗದಲ್ಲಿರು ಕ್ಯಾಸ್ಕೇಡಿಂಗ್ ಗ್ರಿಲ್ ಅನ್ನು ಹೊಂದಿದೆ. ಹಿಂದಿನ ಐ20 ಮಾದರಿಗೆ ಹೋಲಿಸಿದರೆ ಹೆಡ್ ಲ್ಯಾಂಪ್ ಮತ್ತು ಸೈಡ್ ಫ್ರೋಪೈಲ್ ವಿನ್ಯಾಸವನ್ನು ನವೀಕರಿಸಲಾಗಿದೆ ದೊಡ್ಡ ಕ್ರೀಸ್ ಲೈನ್ ಗಳನ್ನು ಒಳಗೊಂಡಿದೆ. ಈ ಹೊಸ ಐ20 ಕಾರು ಸಾಕಷ್ಟು ಸ್ಪೋರ್ಟಿಯರ್ ಮತ್ತು ಸ್ಟೈಲಿಶ್ ಲುಕ್ ಅನ್ನು ಹೊಂದಿದೆ. ಹೊಸ ಹ್ಯುಂಡೈ ಐ20 ಕಾರು ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆಯಾಗಲಿದೆ ಎಂದು ವರದಿಗಳು ಪ್ರಕಟವಾಗಿದೆ. ಆದರೆ ಹ್ಯುಂಡೈ ಕಂಪನಿಯು ಈ ಕಾರಿನ ಬಿಡುಗಡೆಯ ಬಗ್ಗೆ ಅಧಿಕೃತ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.

ಬಿಡುಗಡೆಯಾಗಲಿದೆ ಬಿಎಸ್-6 ಹ್ಯುಂಡೈ ಐ20 ಕಾರು

ಹೊಸ ಹುಂಡೈ ಐ20 ಕಾರಿನ ಬದಿಯ ಪಿಲ್ಲರ್‍‍ಗಳು ಕಪ್ಪು ಬಣ್ಣವನ್ನು ಹೊಂದಿದೆ. ಎರಡು ಟೇಲ್‍ ಲ್ಯಾಂಪ್‍‍ಗಳನ್ನು ಅಳವಡಿಸಲಾಗಿದೆ. ವಿಡಬ್ಲ್ಯೂ ಟೈಗನ್‍‍‍ನಲ್ಲಿ ಇರುವಂತಹ ಕೆಂಪು ಇ‍ಲ್‍ಇಡಿ ಡಿಆರ್‍ಎಲ್ ಸ್ಟಾಪ್ ಲೈಟ್ ಹಿಂಭಾಗದಲ್ಲಿ ಟೇಲ್‍‍ಲೈಟ್ ಹೊಂದಿದೆ.

MOST READ: ಬಹಿರಂಗವಾಯ್ತು ಹೊಸ ಸ್ಕೋಡಾ ರ‍್ಯಾಪಿಡ್ ಕಾರಿನ ಮಾಹಿತಿ

ಬಿಡುಗಡೆಯಾಗಲಿದೆ ಬಿಎಸ್-6 ಹ್ಯುಂಡೈ ಐ20 ಕಾರು

ಹೊಸ ಹ್ಯುಂಡೈ ಕಾರಿನ ಇಂಟಿರಿಯರ್‍‍ನಲ್ಲಿ 4 ಸ್ಫೋಕ್ ಸ್ಟೀಟಿಯರಿಂಗ್ ವ್ಹೀಲ್ ಅನ್ನು ಅಳವಡಿಸಲಾಗಿದೆ. ಇದು ಹೊಸ ಹ್ಯುಂಡೈ ಕ್ರೆಟಾ ಕಾರಿನಲ್ಲಿರುವ ಸ್ಟಿಟಿಯರಿಂಗ್ ಮಾದರಿಯಲ್ಲಿದೆ. ಹೊಸ ಹ್ಯುಂಡೈ ಐ20 ಕಾರಿನಲ್ಲಿ ಆಡಿಯೊ ಸಿಸ್ಟಂ, ಕ್ರೂಸ್ ಕಂಟ್ರೋಲ್ ಮತ್ತು ಫುಲ್-ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್‌ ಅನ್ನು ಒಳಗೊಂಡಿದೆ. ಇದರೊಂದಿಗೆ ಬ್ಲೂ ಲಿಂಕ್ ಟೆಕ್ನಾಲಜಿಯನ್ನು ಕೂಡ ಹೊಂದಿರಲಿದೆ.

ಬಿಡುಗಡೆಯಾಗಲಿದೆ ಬಿಎಸ್-6 ಹ್ಯುಂಡೈ ಐ20 ಕಾರು

ಈ ಹೊಸ ಕಾರಿನಲ್ಲಿ 10.25 ಇಂಚಿನ ಡಿಜಿಟಲ್ ಕ್ಲಸ್ಟರ್ ಅನ್ನು ಅಳವಡಿಸಲಾಗಿದೆ. ಈ ಕಾರಿನ ಇಂಟಿರಿಯರ್‍‍ನಲ್ಲಿ ಆ್ಯಪಲ್ ಕಾರ್‍‍ಪ್ಲೇ ಮತ್ತು ಆಂಡ್ರಾಯ್ಡ್ ಆಟೋ, ಹ್ಯುಂಡೈನ ಕನೆಕ್ಟಿವಿಟಿ ಸೂಟ್ ಮತ್ತು ಇತರ ಹಲವಾರು ಫೀಚರ್‍‍ಗಳನ್ನು ಹೊಂದಿದೆ. ಯುಎಸ್‌ಬಿ ಪೋರ್ಟ್‌ ಮತ್ತು ವೈರ್‌ಲೆಸ್ ಚಾರ್ಜಿಂಗ್ ಪ್ಯಾಡ್ ಅನ್ನು ಸಹ ಹೊಂದಿದೆ.

MOST READ: ಹೊಸ ಟರ್ಬೋ ಪೆಟ್ರೋಲ್ ಎಂಜಿನ್‌ನೊಂದಿಗೆ ಬಿಡುಗಡೆಯಾಗಲಿದೆ ನಿಸ್ಸಾನ್ ಕಿಕ್ಸ್

ಬಿಡುಗಡೆಯಾಗಲಿದೆ ಬಿಎಸ್-6 ಹ್ಯುಂಡೈ ಐ20 ಕಾರು

ಹೊಸ ಹ್ಯುಂಡೈ ಐ20 ಕಾರಿನಲ್ಲಿ ಹೊಸ 16 ಡ್ಯುಯಲ್ ಟೋನ್ ಅಲಾಯ್ ವ್ಹೀಲ್‍‍ಗಳು, ಇಂಟಿಗ್ರೇಟೆಡ್ ಟರ್ನ್ ಇಂಡಿಕೇಟರ್‍‍ಗಳೊಂದಿಗೆ ಸ್ಲಿಕ್ ಒಆರ್‍‍ವಿಎಂಗಳು ಮತ್ತು ಶಾರ್ಕ್ ಫಿನ್ ಆಂಟೆನಾವನ್ನು ಕೂಡ ಆಳವಡಿಸಲಾಗಿದೆ.

ಬಿಡುಗಡೆಯಾಗಲಿದೆ ಬಿಎಸ್-6 ಹ್ಯುಂಡೈ ಐ20 ಕಾರು

ಗ್ರ್ಯಾಂಡ್ ಐ10 ನಿಯೋಸ್ ಕಾರಿನಲ್ಲಿರುವ ಮಾದರಿಯ 1.0 ಲೀಟರ್ ಪೆಟ್ರೋಲ್ ಟರ್ಬೊ ಎಂಜಿನ್ ಅನ್ನು ಅಳವಡಿಸುವ ಸಾಧ್ಯತೆಗಳಿದೆ. ಈ ಎಂಜಿನ್ 100 ಬಿ‍‍ಹೆಚ್‍‍ಪಿ ಪವರ್ ಮತ್ತು 172 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍‍ನೊಂದಿಗೆ 5 ಸ್ಫೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಿದೆ. ಈ ಎಂಜಿನ್ ಪ್ರತಿ ಲೀಟರ್‍‍ಗೆ 20.3 ಕಿ.ಮೀ ಮೈಲೇಜ್ ನೀಡಬಹುದು.

MOST READ: ಬಹಿರಂಗವಾಯ್ತು ದಟ್ಸನ್ ರೆಡಿ ಗೋ ಫೇಸ್‍‍ಲಿಫ್ಟ್ ಕಾರಿನ ಮಾಹಿತಿ

ಬಿಡುಗಡೆಯಾಗಲಿದೆ ಬಿಎಸ್-6 ಹ್ಯುಂಡೈ ಐ20 ಕಾರು

ಇದರೊಂದಿಗೆ ಪ್ರಸ್ತುತ ಮಾರುಕಟ್ಟೆಯಲ್ಲಿ ಇರುವ ಮಾದರಿಯಂತೆ 1.2-ಲೀಟರ್ ಪೆಟ್ರೋಲ್ ಎಂಜಿನ್ ಮತ್ತು ಕಿಯಾ ಸೆಲ್ಟೋಸ್‌ನಿಂದ ಎರವಲು ಪಡೆದ 1.5-ಲೀಟರ್ ಡಿಟೂನ್ಡ್ ಡೀಸೆಲ್ ಎಂಜಿನ್ ಅನ್ನು ಹೊಂದಿರಲಿದೆ.

ಬಿಡುಗಡೆಯಾಗಲಿದೆ ಬಿಎಸ್-6 ಹ್ಯುಂಡೈ ಐ20 ಕಾರು

ಹೊಸ ಹ್ಯುಂಡೈ ಐ20 ಕಾರು ಬಿಡುಗಡೆಯಾದ ನಂತರ ಮಾರುತಿ ಸುಜುಕಿ ಕಂಪನಿಯ ಬಲೆನೊ, ಫೋರ್ಡ್ ಫ್ರೀ‍‍ಸ್ಟೈಲ್, ಟಾಟಾ ಆಲ್ಟ್ರೋಜ್ ಹಾಗೂ ಹೋಂಡಾ ಜಾಜ್‍ ಕಾರುಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
Next-Gen Hyundai i20 Will Be A Connected Car. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X