ಸ್ಪಾಟ್ ಟೆಸ್ಟ್ನಲ್ಲಿ ಕಾಣಿಸಿಕೊಂಡ ಹೊಸ ಮಾರುತಿ ಸುಜುಕಿ ಎಕ್ಸ್‌ಎಲ್5 ಕಾರು
ಮಾರುತಿ ಸುಜುಕಿ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ವ್ಯಾಗನ್ಆರ್ ಹ್ಯಾಚ್‌ಬ್ಯಾಕ್‌ನ ಪ್ರೀಮಿಯಂ ಆವೃತ್ತಿಯಾದ ಮಾರುತಿ ಎಕ್ಸ್‌ಎಲ್5 ಅನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಇದರ ಭಾಗವಾಗಿ ಈ ಹೊಸ ಎಕ್ಸ್‌ಎಲ್5 ಪ್ರೀಮಿಯಂ ಕಾರನ್ನು ಭಾರತದಲ್ಲಿ ಸ್ಪಾಟ್ ನಡೆಸಿದೆ.

ಈ ಹೊಸ ಮಾರುತಿ ಎಕ್ಸ್‌ಎಲ್5 ಕಾರು ಗುರುಗ್ರಾಮದ ಬಳಿ ಸ್ಫಾಟ್ ಟೆಸ್ಟ್ ಇತ್ತೀಚೆಗೆ ನಡಿಸಿದೆ. ಈ ಪ್ರೀಮಿಯಂ ಕಾರು ಸ್ಪಾಟ್ ಟೆಸ್ಟ್ ನಡೆಸುತ್ತಿರುವುದನ್ನು ಕಾರ್ ಅಂಡ್ ಬೈಕ್ ಬಹಿರಂಗ ಪಡಿಸಿದೆ. ಈ ಎಕ್ಸ್‌ಎಲ್5 ಕಾರು ಸಂಪೂರ್ಣವಾಗಿ ಮರೆಮಾಚಿ ಸ್ಪಾಟ್ ಟೆಸ್ಟ್ ಅನ್ನು ನಡೆಸಲಾಗಿದೆ. ಈ ಹೊಸ್ ಮಾರುತಿ ಸುಜುಕಿ ಎಕ್ಸ್‌ಎಲ್5 ಕಾರಿಗೆ ಸ್ಪ್ಲಿಟ್ ಹೆಡ್‌ಲ್ಯಾಂಪ್ ಸೆಟಪ್, ಮುಂಭಾಗದ ಬಂಪರ್‌ನಲ್ಲಿ ಏರ್ ಡ್ಯಾಮ್ ಮತ್ತು ಎರಡೂ ತುದಿಯಲ್ಲಿ ಫಾಗ್ ಲ್ಯಾಂಪ್ ಅನ್ನು ಹೊಂದಿದೆ.

ಈ ಎಕ್ಸ್‌ಎಲ್5 ಕಾರಿನಲ್ಲಿ ಸ್ಲಿಕ್ ಗ್ರಿಲ್ ಮತ್ತು ಹಿಂಭಾಗದಲ್ಲಿ ಕೆಲವು ಸಣ್ಣ ಬದಲಾವಣೆಗಳೊಂದಿಗೆ ವ್ಯಾಗನ್ಆರ್ ಗಿಂತ ಭಿನ್ನವಾಗಿ ಕಾಣುತ್ತದೆ. ಎಕ್ಸ್‌ಎಲ್5 ಕಾರು 15-ಇಂಚಿನ ಅಲಾಯ್ ವ್ಹೀಲ್ ಗಳನ್ನು ಅಳವಡಿಸಲಾಗಿದೆ.
MOST READ: ಸ್ಪಾಟ್ ಟೆಸ್ಟ್ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್

ಈ ಎಕ್ಸ್‌ಎಲ್5 ಒಟ್ಟಾರೆ ಸಿಲೂಯೆಟ್ ವ್ಯಾಗನ್ಆರ್ ಕಾರಿಗೆ ಹೋಲುತ್ತದೆ. ಸ್ಪೈ ಚಿತ್ರಗಳಲ್ಲಿ ಕಂಡು ಬಂದ ಹಾಗೆ ಎಕ್ಸ್‌ಎಲ್5 ಕಾರು ಸ್ಟ್ಯಾಂಡರ್ಡ್ ವ್ಯಾಗನ್ಆರ್ ಕಂಡುಬರುವಂತಹ ಕ್ಯಾಬಿನ್ ವಿನ್ಯಾಸವನ್ನು ಹೊಂದಿರುತ್ತದೆ.

ಎಕ್ಸ್‌ಎಲ್5 ಕಾರಿನಲ್ಲಿ ಕ್ಲೈಮೆಂಟ್ ಕಂಟ್ರೋಲ್ ಏರ್-ಕಾನ್ ಯುನಿಟ್ ಮತ್ತು 7.0 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಹೊಂದಿರುತ್ತದೆ. ಇನ್ನು ಇತರ ಪ್ರೀಮಿಯಂ ಫೀಚರ್ ಗಳನ್ನು ಕೂಡ ಹೊಂದಿರುತ್ತದೆ.
MOST READ: ಪೋರ್ಷೆ ಇಂಡಿಯಾ ನಿರ್ದೇಶಕ ಸ್ಥಾನಕ್ಕೆ ಪವನ್ ಶೆಟ್ಟಿ ರಾಜೀನಾಮೆ

ಹೊಸ ಮಾರುತಿ ಬಿಎಸ್-6 ಎಕ್ಸ್‌ಎಲ್5 ಕಾರಿನಲ್ಲಿ 1.2-ಲೀಟರ್ ಕೆ12ಬಿ ಪೆಟ್ರೋಲ್ ಎಂಜಿನ್ ಅನ್ನು ಹೊಂದಿರಲಿದೆ. ವ್ಯಾಗನ್ಆರ್ ಹ್ಯಾಚ್‌ಬ್ಯಾಕ್‌ನಲ್ಲಿಯು ಇದೇ ಮಾದರಿಯ ಎಂಜಿನ್ ಅನ್ನು ಹೊಂದಿರಲಿದೆ.

ಈ ಎಂಜಿನ್ 82 ಬಿಹೆಚ್‍ಪಿ ಪವರ್ ಮತ್ತು 114 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಎಜಿಎಸ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ಅದೇ 5-ಸ್ಪೀಡ್ ಮ್ಯಾನ್ಯುವಲ್ ಗೇರ್‌ಬಾಕ್ಸ್ ಅನ್ನು ಅಳವಡಿಸಲಿದೆ.
MOST READ: ದಾಖಲೆ ಪ್ರಮಾಣದ ಬುಕ್ಕಿಂಗ್ ಪಡೆದ ಎಂಜಿ ಹೆಕ್ಟರ್ ಎಸ್‍ಯುವಿ

ಮಾರುತಿ ಎಕ್ಸ್‌ಎಲ್5 ಕಾರನ್ನು ಬ್ರ್ಯಾಂಡ್‌ನ ಪ್ರೀಮಿಯಂ ನೆಕ್ಸಾ ಡೀಲರ್ ಗಳ ಮೂಲಕ ಪ್ರತ್ಯೇಕವಾಗಿ ಮಾರಾಟ ಮಾಡಲಾಗುತ್ತದೆ. ನೆಕ್ಸಾ ಪ್ರೀಮಿಯಂ ವಿಭಾಗದಲ್ಲಿ ಈ ಕಾರನ್ನು ಎಂಟ್ರಿ-ಲೆವೆಲ್ ಮಾದರಿಯಾಗಿ ಮಾರಾಟ ಮಾಡಲಾಗುವುದು, ನೆಕ್ಸಾ ಡೀಲರ್ ಗಳು ಇಗ್ನೀಸ್, ಬಲೆನೊ, ಎಸ್-ಕ್ರಾಸ್ ಮತ್ತು ಎಕ್ಸ್‌ಎಲ್6 ಕಾರುಗಳನ್ನು ಕೂಡ ಮಾರಾಟ ಮಾಡಲಾಗುತ್ತದೆ,

ಮಾರುತಿ ಸುಜುಕಿ ವ್ಯಾಗನ್ಆರ್ ಹ್ಯಾಚ್‌ಬ್ಯಾಕ್‌ನ ಪ್ರೀಮಿಯಂ ಆವೃತ್ತಿಯಾಗಿ ಎಕ್ಸ್‌ಎಲ್5 ಅನ್ನು ಬಿಡುಗಡೆಗೊಳಿಸುತ್ತಿದೆ. ಈ ಹೊಸ ಮಾರುತಿ ಸುಜುಕಿ ಎಕ್ಸ್‌ಎಲ್5 ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಮುಂದಿನ ವರ್ಷ ಬಿಡುಗಡೆಯಾಗಲಿದೆ.


Click it and Unblock the Notifications