ದಾಖಲೆ ಪ್ರಮಾಣದ ಬುಕ್ಕಿಂಗ್ ಪಡೆದ ಎಂಜಿ ಹೆಕ್ಟರ್ ಎಸ್‍ಯುವಿ

ಎಂಜಿ ಮೋಟಾರ್ ಸಂಸ್ಥೆಯು ತನ್ನ ಜನಪ್ರಿಯ ಹೆಕ್ಟರ್ ಎಸ್‍ಯುವಿಯನ್ನು ಕಳೆದ ವರ್ಷ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತು. ಎಂಜಿ ಹೆಕ್ಟರ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಹೂಸ ಸಂಚಲನವನ್ನು ಮೂಡಿಸಿತ್ತು.

ದಾಖಲೆ ಪ್ರಮಾಣದ ಬುಕ್ಕಿಂಗ್ ಪಡೆದ ಎಂಜಿ ಹೆಕ್ಟರ್ ಎಸ್‍ಯುವಿ

ಎಂಜಿ ಹೆಕ್ಟರ್ ಎಸುಯುವಿಗಾಗಿ ಭರ್ಜರಿ ಬುಕ್ಕಿಂಗ್ ಅನ್ನು ಎಂಜಿ ಮೋಟಾರ್ ಸಂಸ್ಥೆಯು ಪಡೆದುಕೊಂಡಿದೆ. ಆದರೆ ಕರೋನ ಭೀತಿಯಿಂದ ಎಂಜಿ ಹೆಕ್ಟರ್ ಉತ್ಪಾದನೆಯನ್ನು ಸ್ಥಗಿತಗೊಳಿಸಿದ್ದರು. ಇದರಿಂದ ಬೇಡಿಕೆಗೆ ಅನುಗುಣವಾಗಿ ಗ್ರಾಹಕರಿಗೆ ಹೆಕ್ಟರ್ ಎಸ್‍ಯುವಿಯನ್ನು ಪೂರೈಸಲು ಸಾಧ್ಯವಾಗಲಿಲ್ಲ. ಎಂಜಿ ಹೆಕ್ಟರ್ ಎಸ್‍ಯುವಿಗಾಗಿ 50,000 ಕ್ಕೂ ಹೆಚ್ಚು ಬುಕ್ಕಿಂಗ್ ಅನ್ನು ಪಡೆದುಕೊಂಡಿದೆ. ಇದರಲ್ಲಿ 20,000 ಕ್ಕೂ ಹೆಚ್ಚು ಯುನಿಟ್ ಗಳನ್ನು ಗ್ರಾಹಕರಿಗೆ ವಿತರಿಸಲಾಗಿದೆ.

ದಾಖಲೆ ಪ್ರಮಾಣದ ಬುಕ್ಕಿಂಗ್ ಪಡೆದ ಎಂಜಿ ಹೆಕ್ಟರ್ ಎಸ್‍ಯುವಿ

ಎಂಜಿ ಹೆಕ್ಟರ್ ಎಸ್‍ಯುವಿಯ ಉತ್ಪಾದನೆ ಕೆಲವು ದಿನಗಳ ಕಾಲ ಸ್ಥಗಿತಗೊಂಡಿದ್ದ ಕಾರಣ ಗ್ರಾಹಕರಿಗೆ ವಿತರಿಸಲು ಸಾಧ್ಯವಾಗಿಲ್ಲವೆಂದು ಕಂಪನಿ ಹೇಳಿಕೊಂಡಿದೆ. ಅಲ್ಲದೇ ಗ್ರಾಹಕರ ಬೇಡಿಕೆಗೆ ತಕ್ಕಂತೆ ಪೂರೈಸಲು ಕಂಪನಿಯ ಹ್ಯಾಲೊಲ್ ಸ್ಥಾವರ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದೆ.

MOST READ: ಭರ್ಜರಿಯಾಗಿ ಮಾರಾಟವಾಯ್ತು ಫೋಕ್ಸ್‌ವ್ಯಾಗನ್ ಟಿ-ರಾಕ್ ಎಸ್‍ಯುವಿ

ದಾಖಲೆ ಪ್ರಮಾಣದ ಬುಕ್ಕಿಂಗ್ ಪಡೆದ ಎಂಜಿ ಹೆಕ್ಟರ್ ಎಸ್‍ಯುವಿ

ಎಂಜಿ ಹೆಕ್ಟರ್ ಎಸ್‍ಯುವಿಯಲ್ಲಿ 1.5 ಲೀಟರ್ ಟಬೋಜಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 143 ಬಿಹೆಚ್‍‍ಪಿ ಪವರ್ ಮತ್ತು 250 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಇ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಮತ್ತು ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಅಳವಡಿಸಲಾಗಿದೆ. ಇನ್ನು ಈ ಎಸ್‍ಯುವಿಯ 2.0 ಲೀಟರ್ 143 ಬಿಹೆಚ್‍‍ಪಿ ಪವರ್ ಮತ್ತು 250 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

ದಾಖಲೆ ಪ್ರಮಾಣದ ಬುಕ್ಕಿಂಗ್ ಪಡೆದ ಎಂಜಿ ಹೆಕ್ಟರ್ ಎಸ್‍ಯುವಿ

ಈ ಎಸ್‍‍ಯು‍ವಿನಲ್ಲಿ ಲೈವ್ ಟ್ರಾಫಿಕ್ ಅಲರ್ಟ್‍‍ಗಳು, ಟಯರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ(ಟಿ‍‍ಪಿಎಂಎಸ್), ಜಿಯೋ-ಫೆನ್ಸಿಂಗ್, ತುರ್ತು ಕರೆ, ಸಾಮಾನ್ಯ ಸಹಾಯಕ್ಕಾಗಿ ಸಂಪರ್ಕಿಸಲು ಒಂದು ಬಟನ್ ಮತ್ತು ಪ್ರೀಮಿಯಂ ಗಾನಾ ಆ್ಯಪ್‍ನ ವೈವಿಧ್ಯಮಯ ಮ್ಯೂಸಿಕ್ ಸಂಗ್ರಹ, ಆನ್-ಬೋರ್ಡ್ ನ್ಯಾವಿಗೇಷನ್ ಅನ್ನು ಹೊಂದಿದೆ.

MOST READ: ಅನಾವರಣವಾಯ್ತು ಹೊಸ ಫೋಕ್ಸ್‌ವ್ಯಾಗನ್ ಟಿಗ್ವಾನ್ ಫೇಸ್‍‍ಲಿಫ್ಟ್ ಎಸ್‍ಯುವಿ

ದಾಖಲೆ ಪ್ರಮಾಣದ ಬುಕ್ಕಿಂಗ್ ಪಡೆದ ಎಂಜಿ ಹೆಕ್ಟರ್ ಎಸ್‍ಯುವಿ

ಸ್ಮಾರ್ಟ್‍‍ಪೋನ್ ಅಪ್ಲಿಕೇಶನ್ ಮತ್ತು ವಾಯ್ಸ್ ಕಾಮೆಂಡ್‍‍ಗಳ ಮೂಲಕ ಎಸ್‍‍ಯು‍ವಿ ವಿವಿಧ ವೈಶಿಷ್ಟ್ಯಗಳನ್ನು ನಿಯಂತ್ರಿಸಬಹುದು. ಇದರಲ್ಲಿ ಎಸಿ, ಸನ್‍‍ರೂಫ್‍, ಟೈಲ್‍‍ಗೇಟ್ ಮತ್ತು ಡೋರ್‍‍ಗಳು ಸೇರಿವೆ.

ದಾಖಲೆ ಪ್ರಮಾಣದ ಬುಕ್ಕಿಂಗ್ ಪಡೆದ ಎಂಜಿ ಹೆಕ್ಟರ್ ಎಸ್‍ಯುವಿ

ಇದರಲ್ಲಿ ಬ್ಲ್ಯಾಕ್ ಕಲರ್ ಥೀಮ್ ಹೊಂದಿರುವ ಇಂಟರಿಯರ್‍‍ನೊಂದಿಗೆ ಆಡಿಯೋ ಸಿಸ್ಟಂ, ಕ್ಲೈಮೆಟ್ ಕಂಟ್ರೋಲ್, ಇನ್ಫೋಟೇನ್‌ಮೆಂಟ್ ಕಂಟ್ರೋಲ್, ಆಟೋ ಎಸಿ, ಪವರ್ ವಿಂಡೋ, ಫಾಸ್ಟ್ ಚಾರ್ಜಿಂಗ್, ಆಟೋಮ್ಯಾಟಿಕ್ ಹೆಡ್‍‍‍ಲ್ಯಾಂಪ್, 10.4 ಇಂಚಿನ ಟಚ್‍‍ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಡಿಸ್‍‍ಪ್ಲೇ ಸೌಲಭ್ಯವಿದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ದಾಖಲೆ ಪ್ರಮಾಣದ ಬುಕ್ಕಿಂಗ್ ಪಡೆದ ಎಂಜಿ ಹೆಕ್ಟರ್ ಎಸ್‍ಯುವಿ

ಹೆಕ್ಟರ್ ಎಸ್‍ಯುವಿಯಲ್ಲಿ ಸುರಕ್ಷತೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದ್ದು, ಏರ್‍‍ಬ್ಯಾಗುಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಫ್ರಂಟ್ ಆಂಡ್ ರಿಯರ್ ಪಾರ್ಕಿಂಗ್ ಸೆನ್ಸಾರ್, ರೇರ್ ಪಾರ್ಕಿಂಗ್ ಕ್ಯಾಮೆರಾ, ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ ಸೌಲಭ್ಯವನ್ನು ಒದಗಿಸಲಾಗಿದೆ.

ದಾಖಲೆ ಪ್ರಮಾಣದ ಬುಕ್ಕಿಂಗ್ ಪಡೆದ ಎಂಜಿ ಹೆಕ್ಟರ್ ಎಸ್‍ಯುವಿ

ಎಂಜಿ ಹೆಕ್ಟರ್ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಕಿಯಾ ಸೆಲ್ಟೋಸ್, ಜೀಪ್ ಕಂಪಾಸ್, ಮಹೀಂದ್ರಾ ಎಕ್ಸ್‌ಯುವಿ 500 ಮತ್ತು ಟಾಟಾ ಹ್ಯಾರಿಯರ್ ಎಸ್‍ಯುವಿಗಳಿಗೆ ಪೈಪೋಟಿಯನ್ನು ನೀಡುತ್ತದೆ.

Most Read Articles

Kannada
English summary
MG Hector Receives More Than 50,000 Bookings Since Its Inception In The Indian Market. Read In Kannada.
Story first published: Thursday, July 2, 2020, 14:24 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X