ಅಪಘಾತದ ಸಾಧ್ಯತೆಯನ್ನು ಮತ್ತಷ್ಟು ಹೆಚ್ಚಿಸುತ್ತವೆ ಬುಲ್ ಬಾರ್‌ಗಳು

ಭಾರತದಲ್ಲಿ ಕಾರುಗಳಲ್ಲಿ ಆಫ್ಟರ್ ಮಾರ್ಕೆಟ್ ಬುಲ್ ಬಾರ್‌ಗಳನ್ನು ಅಳವಡಿಸುವುದನ್ನು ನಿಷೇಧಿಸಲಾಗಿದೆ. ಯಾವುದೇ ಖಾಸಗಿ ವಾಹನಗಳಲ್ಲಿ ಬುಲ್ ಬಾರ್ ಅಳವಡಿಸುವಂತಿಲ್ಲ. ಮೋಟಾರು ಸಾಗಣೆ ಕಾಯ್ದೆಯನ್ವಯ ಬುಲ್ ಬಾರ್‌ಗಳನ್ನು ಹೊಂದಿರುವ ವಾಹನಗಳಿಗೆ ದಂಡ ವಿಧಿಸಲಾಗುತ್ತದೆ.

ಅಪಘಾತದ ಸಾಧ್ಯತೆಯನ್ನು ಮತ್ತಷ್ಟು ಹೆಚ್ಚಿಸುತ್ತವೆ ಬುಲ್ ಬಾರ್‌ಗಳು

ಆದರೂ ಕೆಲವರು ನಿಯಮಗಳನ್ನು ಉಲ್ಲಂಘಿಸಿ ತಮ್ಮ ಕಾರುಗಳಲ್ಲಿ ಬುಲ್ ಬಾರ್‌ಗಳನ್ನು ಅಳವಡಿಸಿಕೊಂಡಿದ್ದಾರೆ. ಬುಲ್ ಬಾರ್ ಗಳು ಸಾಕಷ್ಟು ಸಮಸ್ಯೆಗಳನ್ನು ಉಂಟು ಮಾಡುತ್ತವೆ. ಪಾದಚಾರಿಗಳೊಂದಿಗೆ ಸಂಭವಿಸುವ ಅಪಘಾತಗಳಲ್ಲಿ ಈ ಬುಲ್ ಬಾರ್ ಗಳು ಮಾರಕವಾಗಬಲ್ಲವು. ಟಾಟಾ ಗ್ರಾಹಕರೊಬ್ಬರು ತಮ್ಮ ನೆಕ್ಸಾನ್ ಕಾರಿನಲ್ಲಿ ಬುಲ್ ಬಾರ್ ಅಳವಡಿಸಿಕೊಂಡಿದ್ದ ಬಗ್ಗೆ ಟಾಟಾ ಮೋಟಾರ್ಸ್‌ನ ಗ್ಲೋಬಲ್ ಡಿಸೈನ್ ಹೆಡ್ ಪ್ರತಾಪ್ ಬೋಸ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಪಘಾತದ ಸಾಧ್ಯತೆಯನ್ನು ಮತ್ತಷ್ಟು ಹೆಚ್ಚಿಸುತ್ತವೆ ಬುಲ್ ಬಾರ್‌ಗಳು

ಟಾಟಾ ಮೋಟಾರ್ಸ್ ವಿಶ್ವ ಎಲೆಕ್ಟ್ರಿಕ್ ವಾಹನಗಳ ದಿನಾಚರಣೆಯ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 10ರಂದು ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಗ್ರಾಹಕರಿಗಾಗಿ ಸಮಾರಂಭವನ್ನು ಆಯೋಜಿಸಿತ್ತು. ಈ ಸಮಾರಂಭದಲ್ಲಿ ಸಾಕಷ್ಟು ಜನರು ತಮ್ಮ ನೆಕ್ಸಾನ್ ಎಲೆಕ್ಟ್ರಿಕ್ ಕಾರಿನೊಂದಿಗೆ ಭಾಗಿಯಾಗಿದ್ದರು. ಇದರಲ್ಲಿ ಭಾಗವಹಿಸಿದ್ದ ವ್ಯಕ್ತಿಯೊಬ್ಬರು ತಮ್ಮ ನೆಕ್ಸಾನ್ ಕಾರಿನ ಮೇಲೆ ಬುಲ್ ಬಾರ್ ಅಳವಡಿಸಿಕೊಂಡಿದ್ದರು.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಅಪಘಾತದ ಸಾಧ್ಯತೆಯನ್ನು ಮತ್ತಷ್ಟು ಹೆಚ್ಚಿಸುತ್ತವೆ ಬುಲ್ ಬಾರ್‌ಗಳು

ಟಾಟಾ ಮೋಟಾರ್ಸ್ ಈ ಸಮಾರಂಭದ ಫೋಟೋಗಳನ್ನು ತನ್ನ ಅಧಿಕೃತ ಟ್ವಿಟರ್ ಪೇಜ್ ನಲ್ಲಿ ಶೇರ್ ಮಾಡಿತ್ತು. ಈ ಫೋಟೋಗಳನ್ನು ಕಂಪನಿಯ ಡಿಸೈನ್ ಹೆಡ್ ಪ್ರತಾಪ್ ಬೋಸ್ ಗಮನಿಸಿದ್ದಾರೆ. ಇದರ ಬಗ್ಗೆ ಟ್ವೀಟ್ ಮಾಡಿರುವ ಅವರು ಕಾರಿನಲ್ಲಿ ಬುಲ್ ಬಾರ್ ಅಳವಡಿಸುವುದು ಕಾನೂನುಬಾಹಿರ. ಇದರಿಂದ ಪಾದಚಾರಿಗಳಿಗೆ ಅಪಾಯವಾಗಲಿದೆ ಎಂದು ಹೇಳಿದ್ದಾರೆ.

ಅಪಘಾತದ ಸಾಧ್ಯತೆಯನ್ನು ಮತ್ತಷ್ಟು ಹೆಚ್ಚಿಸುತ್ತವೆ ಬುಲ್ ಬಾರ್‌ಗಳು

ಬುಲ್ ಬಾರ್ ಗಳು ಅಪಘಾತದಿಂದ ರಕ್ಷಿಸುವುದಿಲ್ಲ. ಆದರೆ ಅವುಗಳು ಹೆಚ್ಚು ಅಪಾಯಕಾರಿ ಎಂದು ಅವರು ಹೇಳಿದ್ದಾರೆ. ಅನೇಕ ಕಾರು ಗ್ರಾಹಕರು ಹೊಸ ಕಾರು ಖರೀದಿಸುವಾಗ ಬುಲ್ ಬಾರ್‌ಗಳನ್ನು ಅಳವಡಿಸಿಕೊಳ್ಳುತ್ತಾರೆ. ಅಪಘಾತದ ಸಮಯದಲ್ಲಿ ಬುಲ್ ಬಾರ್ ಗಳು ಕಾರಿಗೆ ಹಾನಿಯಾಗುವುದನ್ನು ತಡೆಯುತ್ತವೆ ಎಂಬುದು ಅವರ ಅಭಿಪ್ರಾಯ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಅಪಘಾತದ ಸಾಧ್ಯತೆಯನ್ನು ಮತ್ತಷ್ಟು ಹೆಚ್ಚಿಸುತ್ತವೆ ಬುಲ್ ಬಾರ್‌ಗಳು

ಆದರೆ ಬುಲ್ ಬಾರ್‌ಗಳಿಂದ ಹೆಚ್ಚಿನ ಹಾನಿ ಸಂಭವಿಸುತ್ತದೆ ಎಂದು ಕಂಡುಬಂದಿದೆ. ಬುಲ್ ಬಾರ್ ಗಳನ್ನು ಕಾರಿನ ಚಾಸಿಸ್ ಗೆ ಅಳವಡಿಸಲಾಗುತ್ತದೆ. ಕಾರಿನ ಮುಂಭಾಗಕ್ಕೆ ಹಾನಿಯಾದರೆ ಅದರ ಪರಿಣಾಮವು ಕಾರಿನ ಮುಂಭಾಗಕ್ಕೆ ಬದಲು ನೇರವಾಗಿ ಚಾಸಿಸ್ ನ ಮೇಲಾಗುತ್ತದೆ. ಇದು ಕಾರಿನ ರಚನೆ ಹದಗೆಡಲು ಕಾರಣವಾಗುತ್ತದೆ. ಇದರಿಂದ ಕಾರಿನ ಒಳಗಿರುವ ಜನರು ಭಾರೀ ಹಾನಿಯನ್ನು ಅನುಭವಿಸ ಬೇಕಾಗುತ್ತದೆ.

ಅಪಘಾತದ ಸಾಧ್ಯತೆಯನ್ನು ಮತ್ತಷ್ಟು ಹೆಚ್ಚಿಸುತ್ತವೆ ಬುಲ್ ಬಾರ್‌ಗಳು

ಕಾರಿನ ಮುಂಭಾಗವನ್ನು ಅಪಘಾತವನ್ನು ತಡೆದುಕೊಳ್ಳುವಂತೆ ತಯಾರಿಸಲಾಗಿರುತ್ತದೆ. ಇದರಿಂದ ಕಾರಿನೊಳಗಿರುವವರಿಗೆ ಹೆಚ್ಚು ತೊಂದರೆಯಾಗುವುದಿಲ್ಲ. ಅಪಘಾತದ ಸಮಯದಲ್ಲಿ ಮುಂಭಾಗವು ಹಾನಿಯಾಗುವ ಕಾರಣಕ್ಕೆ ಒಳಗಿರುವ ಜನರ ಮೇಲೆ ಕಡಿಮೆ ಇರುತ್ತದೆ. ಬುಲ್ ಬಾರ್ ಗಳು ಈ ಸಾಧ್ಯತೆಯನ್ನು ಕಡಿಮೆಗೊಳಿಸುತ್ತವೆ.

Most Read Articles

Kannada
English summary
Bull bars increases chances of danger says Tata Motors design head. Read in Kannada.
Story first published: Saturday, September 12, 2020, 13:08 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X