ವಿದೇಶಗಳಿಂದ ಹಿಂದಿರುಗಿದ ಭಾರತೀಯರಿಗೆ ಶಾಕ್ ಕೊಟ್ಟ ಸರ್ಕಾರ

ವಿದೇಶದಿಂದ ದೆಹಲಿಗೆ ಬಂದು ನೋಯ್ಡಾ ಅಥವಾ ಗಾಜಿಯಾಬಾದ್‌ಗೆ ಹೋಗಲು ಬಯಸುವವರಿಗೆ ಉತ್ತರ ಪ್ರದೇಶ ಸರ್ಕಾರವು ಭಾರೀ ಶಾಕ್ ನೀಡಿದೆ. ವಂದೇ ಭಾರತ್ ಮಿಷನ್ ಅಡಿಯಲ್ಲಿ ವಿದೇಶದಿಂದ ಹಿಂದಿರುಗುವ ಭಾರತೀಯರಿಗೆ ಉತ್ತರ ಪ್ರದೇಶ ಸರ್ಕಾರವು ಟ್ಯಾಕ್ಸಿ ಸೌಲಭ್ಯವನ್ನು ಕಲ್ಪಿಸುವುದರ ಜೊತೆಗೆ ಜೇಬಿಗೆ ಭರ್ಜರಿ ಕತ್ತರಿ ಹಾಕಿದೆ.

ವಿದೇಶಗಳಿಂದ ಹಿಂದಿರುಗಿದ ಭಾರತಿಯರಿಗೆ ಭಾರಿ ಶಾಕ್ ನೀಡಿದ ಸರ್ಕಾರ

ನೋಯ್ಡಾ, ಗಾಜಿಯಾಬಾದ್ ಸೇರಿದಂತೆ 250 ಕಿ.ಮೀ ವ್ಯಾಪ್ತಿಯಲ್ಲಿ ಬರುವ ಪ್ರದೇಶಗಳಿಗೆ ಜನರನ್ನು ಟ್ಯಾಕ್ಸಿಯಲ್ಲಿ ಕರೆದೊಯ್ಯಲಿದೆ. ಈ ಟ್ಯಾಕ್ಸಿಗಳ ಕನಿಷ್ಠ ಶುಲ್ಕವನ್ನು ರೂ.10,000ಗಳಿಗೆ ನಿಗದಿಪಡಿಸಿದೆ. ಈ ಟ್ಯಾಕ್ಸಿಗಳನ್ನು ಉತ್ತರ ಪ್ರದೇಶ ರಸ್ತೆ ಸಾರಿಗೆ ನಿಗಮ (ಯುಪಿಎಸ್ಆರ್‌ಟಿಸಿ) ನಡೆಸುತ್ತಿದೆ. ಈ ಬೆಲೆ ಸೆಡಾನ್ ಕಾರುಗಳಿಗೆ ಅನ್ವಯಿಸಲಿದೆ. ಎಸ್‌ಯುವಿಯನ್ನು ಕಾಯ್ದಿರಿಸಿದರೆ ರೂ.12,000ಗಳನ್ನು ಪಾವತಿಸಬೇಕಾಗುತ್ತದೆ.

ವಿದೇಶಗಳಿಂದ ಹಿಂದಿರುಗಿದ ಭಾರತಿಯರಿಗೆ ಭಾರಿ ಶಾಕ್ ನೀಡಿದ ಸರ್ಕಾರ

ಶುಲ್ಕದ ಬಗ್ಗೆ ಹೇಳುವುದಾದರೆ, ಸೆಡಾನ್ ಕಾರಿನಲ್ಲಿ ಪ್ರತಿ ಕಿ.ಮೀಗೆ ರೂ.40 ಹಾಗೂ ಎಸ್‌ಯುವಿಗಳಿಗೆ ಪ್ರತಿ ಕಿ.ಮೀಗೆ ರೂ.50 ನಿಗದಿಪಡಿಸಲಾಗಿದೆ. ಪ್ರತಿ ಟ್ಯಾಕ್ಸಿಯಲ್ಲಿ, ಚಾಲಕನನ್ನು ಹೊರತುಪಡಿಸಿ ಇಬ್ಬರು ಮಾತ್ರ ಪ್ರಯಾಣ ಬೆಳೆಸಲು ಅವಕಾಶ ನೀಡಲಾಗುತ್ತದೆ.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ವಿದೇಶಗಳಿಂದ ಹಿಂದಿರುಗಿದ ಭಾರತಿಯರಿಗೆ ಭಾರಿ ಶಾಕ್ ನೀಡಿದ ಸರ್ಕಾರ

ಈ ಮಾರ್ಗದಲ್ಲಿ ಬಸ್‌ಗಳ ಸೇವೆಯನ್ನು ಸಹ ನೀಡಲಾಗಿದೆ. ಸಾಮಾನ್ಯ ಬಸ್‌ನಲ್ಲಿ ಒಬ್ಬರಿಗೆ ರೂ.1000 ಶುಲ್ಕ ವಿಧಿಸಿದರೆ, ಎಸಿ ಬಸ್‌ನಲ್ಲಿ ಒಬ್ಬರಿಗೆ ರೂ.1,320 ಶುಲ್ಕ ವಿಧಿಸಲಾಗುತ್ತದೆ. ಈ ಶುಲ್ಕವನ್ನು 100 ಕಿಲೋಮೀಟರ್‌ಗಳಿಗೆ ನಿಗದಿಪಡಿಸಲಾಗಿದೆ. 100 ಕಿಲೋಮೀಟರ್‌ಗಿಂತ ಹೆಚ್ಚು ಪ್ರಯಾಣ ಬೆಳೆಸಿದರೆ ಶುಲ್ಕವು ಡಬಲ್ ಆಗಲಿದೆ.

ವಿದೇಶಗಳಿಂದ ಹಿಂದಿರುಗಿದ ಭಾರತಿಯರಿಗೆ ಭಾರಿ ಶಾಕ್ ನೀಡಿದ ಸರ್ಕಾರ

ಬಸ್‌ನಲ್ಲಿ 26 ಪ್ರಯಾಣಿಕರಿಗೆ ಸೀಟುಗಳನ್ನು ಮಾತ್ರ ಮೀಸಲಿಡಲಾಗಿದೆ. ಯುಪಿಎಸ್ಆರ್‌ಟಿಸಿ ಮೇ 9ರಂದು ನೋಯ್ಡಾ ಹಾಗೂ ಗಾಜಿಯಾಬಾದ್‌ನಲ್ಲಿರುವ ಆರ್‌ಟಿಒ ಕಚೇರಿಗಳಿಗೆ ಹೊಸ ದರಗಳ ಬಗ್ಗೆ ನೋಟೀಸ್ ಕಳುಹಿಸಿದೆ.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ವಿದೇಶಗಳಿಂದ ಹಿಂದಿರುಗಿದ ಭಾರತಿಯರಿಗೆ ಭಾರಿ ಶಾಕ್ ನೀಡಿದ ಸರ್ಕಾರ

ವಂದೇ ಭಾರತ್ ಮಿಷನ್ ಅಡಿಯಲ್ಲಿ ವಿದೇಶಗಳಿಂದ ಹಿಂದಿರುಗುವ ಭಾರತೀಯರನ್ನು ಮೊದಲು ದೆಹಲಿಯಲ್ಲಿರುವ ವಿಶೇಷ ಕ್ವಾರಂಟೈನ್ ಸೆಂಟರ್‌ಗಳಲ್ಲಿ 14 ದಿನಗಳವರೆಗೆ ಇರಿಸಲಾಗುವುದು. ನಂತರ ಅವರಿಗೆ ಮನೆಗೆ ತೆರಳಲು ಅವಕಾಶ ನೀಡಲಾಗುತ್ತದೆ.

ವಿದೇಶಗಳಿಂದ ಹಿಂದಿರುಗಿದ ಭಾರತಿಯರಿಗೆ ಭಾರಿ ಶಾಕ್ ನೀಡಿದ ಸರ್ಕಾರ

ವಂದೇ ಭಾರತ್ ಮಿಷನ್‌ನ ಮೊದಲ ಹಂತದಲ್ಲಿ ಇದುವರೆಗೂ 14,800 ಭಾರತೀಯರನ್ನು ವಿದೇಶಗಳಿಂದ ಕರೆತರಲಾಗಿದೆ. ಎರಡನೇ ಹಂತವು ಮೇ 16ರಿಂದ 22ರವರೆಗೆ ನಡೆಯಲಿದೆ.

ವಿದೇಶಗಳಿಂದ ಹಿಂದಿರುಗಿದ ಭಾರತಿಯರಿಗೆ ಭಾರಿ ಶಾಕ್ ನೀಡಿದ ಸರ್ಕಾರ

ಎರಡನೇ ಹಂತದಲ್ಲಿ ಉಕ್ರೇನ್, ಕಿರ್ಗಿಸ್ತಾನ್, ಅರ್ಮೇನಿಯಾ, ಬೆಲಾರಸ್, ಜಾರ್ಜಿಯಾ, ಕಜಕಿಸ್ತಾನ್, ನೈಜೀರಿಯಾ ಸೇರಿದಂತೆ 31 ದೇಶಗಳಲ್ಲಿರುವ 30,000 ಭಾರತೀಯ ಪ್ರಜೆಗಳನ್ನು 149 ವಿಮಾನಗಳಲ್ಲಿ ವಾಪಸ್ ಕರೆತರಲಾಗುವುದು.

ವಿದೇಶಗಳಿಂದ ಹಿಂದಿರುಗಿದ ಭಾರತಿಯರಿಗೆ ಭಾರಿ ಶಾಕ್ ನೀಡಿದ ಸರ್ಕಾರ

ಬೇರೆ ದೇಶಗಳಲ್ಲಿ ಸಿಕ್ಕಿಬಿದ್ದಿರುವ ಭಾರತೀಯರನ್ನು ಭಾರತಕ್ಕೆ ಮರಳಿ ಕರೆತರಲು ಏರ್ ಇಂಡಿಯಾ ನಡೆಸುತ್ತಿರುವ ವಂದೇ ಭಾರತ್ ಮಿಷನ್ ಅಭಿಯಾನದಡಿಯಲ್ಲಿ ಮೊದಲ ಐದು ದಿನಗಳಲ್ಲಿ 6,037 ಭಾರತೀಯರನ್ನು ಮರಳಿ ಕರೆತರಲಾಗಿದೆ ಎಂದು ಭಾರತೀಯ ವಿಮಾನಯಾನ ಇಲಾಖೆ ಹೇಳಿದೆ.

Article Published On: Friday, May 15, 2020, 15:36 [IST]
English summary
Cabs service between Delhi Airport to Noida Ghaziabad cost Rs.10000 set by UP government. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+