ದೀಪಾವಳಿ ಸಂಭ್ರಮ: ಗಗನಕ್ಕೇರಿದ ವಾಹನ ಮಾರಾಟ ಪ್ರಮಾಣ

ಈ ವರ್ಷದ ಮಾರ್ಚ್ ತಿಂಗಳಿನಲ್ಲಿ ಕರೋನಾ ವೈರಸ್ ಹರಡಬಾರದು ಎಂಬ ಕಾರಣಕ್ಕೆ ದೇಶಾದ್ಯಂತ ಲಾಕ್‌ಡೌನ್ ಜಾರಿಗೊಳಿಸಲಾಯಿತು. ಈ ಅವಧಿಯಲ್ಲಿ ದೇಶಾದ್ಯಂತ ಎಲ್ಲಾ ವಾಹನ ತಯಾರಕ ಕಂಪನಿಗಳ ಮಾರಾಟವು ಸ್ಥಗಿತಗೊಂಡಿತ್ತು.

ದೀಪಾವಳಿ ಸಂಭ್ರಮ: ಗಗನಕ್ಕೇರಿದ ವಾಹನ ಮಾರಾಟ ಪ್ರಮಾಣ

ಸುಮಾರು 4 ತಿಂಗಳವರೆಗೆ ವಾಹನ ಮಾರಾಟವು ಕುಸಿಯುತ್ತಲೇ ಇತ್ತು. ಕರೋನಾ ವೈರಸ್ ಹರಡಬಹುದೆಂಬ ಭೀತಿಯಿಂದಾಗಿ ಜನರು ಸಾರ್ವಜನಿಕ ಸಾರಿಗೆಗಳಲ್ಲಿ ಸಂಚರಿಸುವ ಬದಲು ತಮ್ಮ ಸ್ವಂತ ವಾಹನಗಳಲ್ಲಿ ಸಂಚರಿಸುವುದಕ್ಕೆ ಆದ್ಯತೆ ನೀಡಿದ ಕಾರಣ ವಾಹನ ಮಾರಾಟ ಪ್ರಮಾಣವು ಏರಿಕೆಯಾಗಿದೆ. ಈಗ ಹಬ್ಬದ ಹಿನ್ನೆಲೆಯಲ್ಲಿ ವಾಹನ ಮಾರಾಟವು ಮತ್ತಷ್ಟು ಹೆಚ್ಚಿದೆ.

ದೀಪಾವಳಿ ಸಂಭ್ರಮ: ಗಗನಕ್ಕೇರಿದ ವಾಹನ ಮಾರಾಟ ಪ್ರಮಾಣ

ಭಾರತದ ನಗರವೊಂದರಲ್ಲಿ ವಾಹನ ಮಾರಾಟ ಪ್ರಮಾಣವು ನಂಬಲಾಸಾಧ್ಯ ರೀತಿಯಲ್ಲಿ ಏರಿಕೆಯಾಗಿದೆ ಎಂದು ವರದಿಯಾಗಿದೆ. ಮಧ್ಯಪ್ರದೇಶದ ಭೋಪಾಲ್ ನಗರದಲ್ಲಿ ವಾಹನಗಳು ಅತಿ ಹೆಚ್ಚು ಮಾರಾಟವಾಗಿವೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ದೀಪಾವಳಿ ಸಂಭ್ರಮ: ಗಗನಕ್ಕೇರಿದ ವಾಹನ ಮಾರಾಟ ಪ್ರಮಾಣ

ಈ ಬಗ್ಗೆ ಮಾತನಾಡಿರುವ ಭೋಪಾಲ್ ನಗರದ ಆಟೋಮೊಬೈಲ್ ಅಸೋಸಿಯೇಶನ್ ಅಧ್ಯಕ್ಷರಾದ ಆಶಿಶ್ ಪಾಂಡೆ, ಪ್ರಮುಖ ಕಂಪನಿಗಳ ವಾಹನಗಳು ಈಗಾಗಲೇ ಮಾರಾಟವಾಗಿವೆ. ಆದರೂ ವಾಹನಗಳಿಗೆ ಬುಕ್ಕಿಂಗ್ ಮುಂದುವರೆದಿದೆ ಎಂದು ಹೇಳಿದರು.

ದೀಪಾವಳಿ ಸಂಭ್ರಮ: ಗಗನಕ್ಕೇರಿದ ವಾಹನ ಮಾರಾಟ ಪ್ರಮಾಣ

ಸಾಕಷ್ಟು ಜನರು ದೀಪಾವಳಿಗಿಂತ ಮುಂಚಿತವಾಗಿ ವಾಹನಗಳನ್ನು ಬುಕ್ಕಿಂಗ್ ಮಾಡಿದ್ದಾರೆ. ವಾಹನಗಳ ಕಾಯುವ ಅವಧಿ ದೀರ್ಘವಾಗಿದೆ ಎಂದು ತಿಳಿದಿದ್ದರೂ ಹೊಸ ವಾಹನಗಳನ್ನು ಬುಕ್ಕಿಂಗ್ ಮಾಡುತ್ತಿದ್ದಾರೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ದೀಪಾವಳಿ ಸಂಭ್ರಮ: ಗಗನಕ್ಕೇರಿದ ವಾಹನ ಮಾರಾಟ ಪ್ರಮಾಣ

ಇದರಿಂದಾಗಿ ದೀಪಾವಳಿಯ ನಂತರವೂ ವಾಹನ ಮಾರಾಟವು ಏರಿಕೆಯಾಗುವ ನಿರೀಕ್ಷೆಗಳಿವೆ. ಕಳೆದ ವರ್ಷ ಈ ಅವಧಿಯಲ್ಲಿ 3,500ರಿಂದ 4,000 ವಾಹನಗಳು ಮಾರಾಟವಾಗಿದ್ದವು ಎಂದು ಅವರು ಹೇಳಿದರು.

ದೀಪಾವಳಿ ಸಂಭ್ರಮ: ಗಗನಕ್ಕೇರಿದ ವಾಹನ ಮಾರಾಟ ಪ್ರಮಾಣ

ಈ ವರ್ಷವೂ ಇದೇ ರೀತಿ ಮಾರಾಟವಾಗುವ ನಿರೀಕ್ಷೆಗಳಿವೆ. ವಿಶೇಷವಾಗಿ ಧಂತೆರಾಸ್ ದಿನದಂದು ಹೆಚ್ಚು ವಾಹನಗಳು ಮಾರಾಟವಾಗಿವೆ. ದ್ವಿಚಕ್ರ ವಾಹನ ಮಾರಾಟವು ಮುಂಬರುವ ದಿನಗಳಲ್ಲಿ ಹೆಚ್ಚುವ ಸಾಧ್ಯತೆಗಳಿವೆ ಎಂದು ಅವರು ತಿಳಿಸಿದರು.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ದೀಪಾವಳಿ ಸಂಭ್ರಮ: ಗಗನಕ್ಕೇರಿದ ವಾಹನ ಮಾರಾಟ ಪ್ರಮಾಣ

ದೇಶಿಯ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಯ ಎಸ್‌ಯುವಿಗಳನ್ನು ಬಿಡುಗಡೆಗೊಳಿಸುತ್ತಿರುವುದರಿಂದ ಎಸ್‌ಯುವಿಗಳ ಮಾರಾಟವು ಗಗನಕ್ಕೇರುತ್ತಿದೆ. ಕರೋನಾ ವೈರಸ್ ಭಯದಿಂದಾಗಿಯೂ ಜನರು ಸಾರ್ವಜನಿಕ ವಾಹನಗಳ ಬದಲು ಸ್ವಂತ ವಾಹನಗಳತ್ತ ಸಾಗುತ್ತಿದ್ದಾರೆ ಎಂದು ಆಶಿಶ್ ಪಾಂಡೆ ಹೇಳಿದರು.

ದೀಪಾವಳಿ ಸಂಭ್ರಮ: ಗಗನಕ್ಕೇರಿದ ವಾಹನ ಮಾರಾಟ ಪ್ರಮಾಣ

ದ್ವಿಚಕ್ರ ವಾಹನ ಮಾರಾಟದ ಬಗ್ಗೆ ಮಾತನಾಡಿದ ಆಶಿಶ್ ಪಾಂಡೆ, ಧಂತೆರಾಸ್ ದಿನದಂದು ಸುಮಾರು 6,000-7,000 ದ್ವಿಚಕ್ರ ವಾಹನಗಳು ಮಾರಾಟವಾಗಿವೆ. ಕಳೆದ ವರ್ಷ ಸುಮಾರು 10,000 ದ್ವಿಚಕ್ರ ವಾಹನಗಳು ಮಾರಾಟವಾಗಿದ್ದವು. ವಾಹನಗಳ ಮಾರಾಟವು ನಿಧಾನವಾಗಿ ಹೆಚ್ಚಾಗುತ್ತಿದೆ ಎಂದು ಹೇಳಿದರು.

Most Read Articles

Kannada
English summary
Car and two wheeler sales drastically increased in Bhopal. Read in Kannada.
Story first published: Saturday, November 14, 2020, 13:27 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X