Just In
Don't Miss!
- Lifestyle
'ಮಂಗಳವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್ಯ '
- News
ಕೋವಿಡ್ ಲಸಿಕೆ ಪಡೆದುಕೊಂಡಿದ್ದ ಆರೋಗ್ಯ ಇಲಾಖೆ ಉದ್ಯೋಗಿ ಹೃದಯಾಘಾತದಿಂದ ಸಾವು
- Sports
ಐಎಸ್ಎಲ್: ಅಂಕ ಹಂಚಿಕೊಂಡ ಈಸ್ಟ್ ಬೆಂಗಾಲ್ ಮತ್ತು ಚೆನ್ನೈಯಿನ್
- Finance
ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ, ಮೆಣಸು, ಕಾಫೀ ಜ. 18ರ ದರ
- Movies
ಶಿವಲಿಂಗಕ್ಕೆ ಅಪಮಾನ: ನಟಿಯ ವಿರುದ್ಧ ಮಾಜಿ ರಾಜ್ಯಪಾಲ ದೂರು
- Education
IIMB Recruitment 2021: ಪ್ರಾಜೆಕ್ಟ್ ಎಕ್ಸಿಕ್ಯುಟಿವ್- ಡೆವಲಪ್ಮೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಭಾರೀ ಪ್ರಮಾಣದಲ್ಲಿ ಏರಿಕೆಯಾದ ಆಗಸ್ಟ್ ತಿಂಗಳ ಕಾರು ಮಾರಾಟ
ಆಗಸ್ಟ್ ತಿಂಗಳಿನಲ್ಲಿ ದೇಶಿಯ ಮಾರುಕಟ್ಟೆಯಲ್ಲಿನ ಕಾರು ಮಾರಾಟವು ಚೇತರಿಕೆಯನ್ನು ಕಂಡಿದೆ. ಮಾರುತಿ ಸುಜುಕಿ, ಹ್ಯುಂಡೈ, ಟಾಟಾ ಮೋಟಾರ್ಸ್, ಮಹೀಂದ್ರಾ, ಕಿಯಾ ಮೋಟಾರ್ಸ್, ರೆನಾಲ್ಟ್ ಹಾಗೂ ಎಂಜಿ ಮೋಟಾರ್ ಕಾರುಗಳ ಮಾರಾಟ ಪ್ರಮಾಣವು ಹೆಚ್ಚಾಗಿದ್ದರೆ, ಇತರ ಕಂಪನಿಗಳ ಮಾರಾಟ ಪ್ರಮಾಣವು ಕಡಿಮೆಯಾಗಿದೆ.

ಹೋಂಡಾ ಕಂಪನಿಯ ಮಾರಾಟವು ಜುಲೈ ತಿಂಗಳ ಮಾರಾಟಕ್ಕಿಂತ 39%ನಷ್ಟು ಏರಿಕೆಯಾಗಿದೆ. ಟಾಟಾ ಮೋಟಾರ್ಸ್ ಮಾರಾಟವು ಕಳೆದ ವರ್ಷಕ್ಕಿಂತ 154%ನಷ್ಟು ಹೆಚ್ಚಳವಾಗಿದೆ ಎಂದು ವರದಿಯಾಗಿದೆ. ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಆಗಸ್ಟ್ ತಿಂಗಳಿನಲ್ಲಿ 1.13 ಲಕ್ಷ ವಾಹನಗಳನ್ನು ಮಾರಾಟ ಮಾಡಿದೆ. ಕಳೆದ ತಿಂಗಳ ಮಾರಾಟವು ಜುಲೈ ತಿಂಗಳಿಗಿಂತ 16%ನಷ್ಟು ಹೆಚ್ಚಳವಾಗಿದೆ.

ಹ್ಯುಂಡೈ ಕಂಪನಿಯು 45,809 ಯುನಿಟ್ ವಾಹನಗಳನ್ನು ಮಾರಾಟ ಮಾಡಿ, ಹಿಂದಿನ ತಿಂಗಳು ಹಾಗೂ ಹಿಂದಿನ ವರ್ಷಕ್ಕಿಂತ 20%ನಷ್ಟು ಏರಿಕೆಯನ್ನು ದಾಖಲಿಸಿದೆ. ಹೊಸದಾಗಿ ಬಿಡುಗಡೆಯಾಗಿರುವ ಕ್ರೆಟಾ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿರುವ ಕಾರಣದಿಂದಾಗಿ ಹ್ಯುಂಡೈ ಕಂಪನಿಯ ಮಾರಾಟ ಪ್ರಮಾಣವು ಏರಿಕೆಯಾಗಿದೆ.
MOSTREAD: ಮದುವೆ ಉಂಗುರದ ಶೋಧಕ್ಕಾಗಿ ಚೆಲ್ಲಾಪಿಲ್ಲಿಯಾದ ಕಾರಿನ ಇಂಟಿರಿಯರ್

ಟಾಟಾ ಮೋಟಾರ್ಸ್ 18,583 ಯುನಿಟ್ ವಾಹನಗಳ ಮಾರಾಟದೊಂದಿಗೆ ಕಳೆದ ವರ್ಷಕ್ಕಿಂತ 154%ನಷ್ಟು ಹೆಚ್ಚು ಬೆಳವಣಿಗೆಯನ್ನು ದಾಖಲಿಸಿದೆ. ಮಹೀಂದ್ರಾ ಕಂಪನಿಯು 13,651 ಯುನಿಟ್ ವಾಹನಗಳನ್ನು ಮಾರಾಟ ಮಾಡಿ ಹಿಂದಿನ ವರ್ಷಕ್ಕಿಂತ 4%ನಷ್ಟು ಹೆಚ್ಚು ಏರಿಕೆಯನ್ನು ದಾಖಲಿಸಿದೆ.

ಆಗಸ್ಟ್‌ನಲ್ಲಿ ಕಿಯಾ ಮೋಟಾರ್ಸ್‌ನ ಮಾರಾಟ ಪ್ರಮಾಣವು ಕಡಿಮೆಯಾಗಿದ್ದು, ಕಂಪನಿಯು ಮೂರನೇ ಸ್ಥಾನದಿಂದ ಐದನೇ ಸ್ಥಾನಕ್ಕೆ ಕುಸಿದಿದೆ. ಕಿಯಾ ಮೋಟಾರ್ಸ್ 10,853 ಯುನಿಟ್ ವಾಹನಗಳನ್ನು ಮಾರಾಟ ಮಾಡಿದೆ. ಈ ಪ್ರಮಾಣವು ಕಳೆದ ವರ್ಷಕ್ಕಿಂತ ಹೆಚ್ಚಾಗಿದೆ.
MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ರೆನಾಲ್ಟ್ ಕಂಪನಿಯು ಟ್ರೈಬರ್ ಕಾರಿನ ಮೂಲಕ ಯಶಸ್ಸನ್ನು ಕಾಣುತ್ತಿದೆ. ಕಂಪನಿಯು ಆಗಸ್ಟ್ ತಿಂಗಳಿನಲ್ಲಿ 8060 ಯುನಿಟ್ ವಾಹನಗಳನ್ನು ಮಾರಾಟ ಮಾಡಿದೆ. ಆಗಸ್ಟ್ ತಿಂಗಳಿನಲ್ಲಿ ಹೋಂಡಾ ಕಂಪನಿಯ 7509 ಹಾಗೂ ಟೊಯೊಟಾ ಕಂಪನಿಯ 5555 ಯುನಿಟ್ ವಾಹನಗಳು ಮಾರಾಟವಾಗಿವೆ.

ಫೋರ್ಡ್ ಕಂಪನಿಯು 4731 ಯುನಿಟ್ ವಾಹನಗಳನ್ನು ಮಾರಾಟ ಮಾಡಿದೆ. ಎಂಜಿ ಮೋಟಾರ್ ಕಂಪನಿಯು 2851 ಯುನಿಟ್ ವಾಹನಗಳನ್ನು ಮಾರಾಟ ಮಾಡುವ ಮೂಲಕ ಹಿಂದಿನ ವರ್ಷ ಹಾಗೂ ಹಿಂದಿನ ತಿಂಗಳಿಗಿಂತ ಹೆಚ್ಕಿನ ಬೆಳವಣಿಗೆಯನ್ನು ದಾಖಲಿಸಿದೆ. ಫೋಕ್ಸ್‌ವ್ಯಾಗನ್ ಹೊರತುಪಡಿಸಿ ಉಳಿದ ಕಂಪನಿಗಳು ಮಾರಾಟದಲ್ಲಿ ಏರಿಕೆಯನ್ನು ದಾಖಲಿಸಿವೆ.
MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಲಾಕ್ ಡೌನ್ ನಂತರ ಕಾರು ಮಾರಾಟವು ಇದೇ ಮೊದಲ ಬಾರಿಗೆ ಏರಿಕೆಯನ್ನು ಕಂಡಿದೆ. ಇದರ ಜೊತೆಗೆ ದೊಡ್ಡ ಕಂಪನಿಗಳು ಹೊಸ ಹೊಸ ವಾಹನಗಳನ್ನು ಬಿಡುಗಡೆಗೊಳಿಸುತ್ತಿವೆ. ಆಗಸ್ಟ್‌ನಲ್ಲಿ ಒಟ್ಟಾರೆಯಾಗಿ 2,34,343 ಯುನಿಟ್ ವಾಹನಗಳು ಮಾರಾಟವಾಗಿವೆ. ಈ ಪ್ರಮಾಣವು ಜುಲೈ ತಿಂಗಳಿಗೆ ಹೋಲಿಸಿದರೆ 19%ನಷ್ಟು ಹಾಗೂ ಕಳೆದ ವರ್ಷದ ಆಗಸ್ಟ್ ತಿಂಗಳಿಗೆ ಹೋಲಿಸಿದರೆ 20%ನಷ್ಟು ಹೆಚ್ಚಾಗಿದೆ.