ಡಿಸೆಂಬರ್ ಅವಧಿಯ ಕಾರು ಮಾರಾಟದಲ್ಲಿ ಮಾರುತಿ ಸುಜುಕಿಯೇ ನಂ 1..!

2019ರ ಡಿಸೆಂಬರ್ ತಿಂಗಳಿನ ಕಾರು ಮಾರಾಟ ವರದಿಯನ್ನು ಬಿಡುಗಡೆಗೊಳಿಸಲಾಗಿದೆ. ಈ ಮಾರಾಟದ ವರದಿಯಲ್ಲಿ ಕಳೆದ ದಶಕದ ಕೊನೆಯ ತಿಂಗಳಿನಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಏಳು ಬೀಳು ಕಂಡ ಕಾರು ಕಂಪನಿಗಳ ಮಾರಾಟ ಪ್ರಮಾಣವನ್ನು ಕಾಣಬಹುದು.

ಡಿಸೆಂಬರ್ ಅವಧಿಯ ಕಾರು ಮಾರಾಟದಲ್ಲಿ ಮಾರುತಿ ಸುಜುಕಿಯೇ ನಂ 1..!

ಕಳೆದ ವರ್ಷ ಬಹುತೇಕ ಎಲ್ಲಾ ಕಾರು ತಯಾರಕ ಕಂಪನಿಗಳು ಮಾರಾಟದಲ್ಲಿ ಕುಸಿತವನ್ನು ಕಂಡಿದ್ದವು. ಈ ಕುಸಿತವು ಕಳೆದ ತಿಂಗಳಿನಲ್ಲಿಯೂ ಮುಂದುವರೆದಿತ್ತು. ಡಿಸೆಂಬರ್ ತಿಂಗಳಿನಲ್ಲಿ ಮಾರುತಿ ಸುಜುಕಿ ಹಾಗೂ ರೆನಾಲ್ಟ್ ಕಂಪನಿಯ ಮಾರಾಟದಲ್ಲಿ ಏರಿಕೆಯಾಗಿದೆ.

ಡಿಸೆಂಬರ್ ಅವಧಿಯ ಕಾರು ಮಾರಾಟದಲ್ಲಿ ಮಾರುತಿ ಸುಜುಕಿಯೇ ನಂ 1..!

ಆದರೆ ಕಿಯಾ, ಹ್ಯುಂಡೈ, ಟಾಟಾ ಹಾಗೂ ಟೊಯೊಟಾ ಕಂಪನಿಯ ಮಾರಾಟದಲ್ಲಿ ಕುಸಿತ ಉಂಟಾಗಿದೆ. 2019ರ ಡಿಸೆಂಬರ್ ತಿಂಗಳಿನಲ್ಲಿ ದೇಶಿಯ ಮಾರುಕಟ್ಟೆಯಲ್ಲಿನ ಕಾರು ತಯಾರಕ ಕಂಪನಿಗಳ ಮಾರಾಟ ಪ್ರಮಾಣವನ್ನು ಈ ಲೇಖನದಲ್ಲಿ ನೋಡೋಣ.

ಡಿಸೆಂಬರ್ ಅವಧಿಯ ಕಾರು ಮಾರಾಟದಲ್ಲಿ ಮಾರುತಿ ಸುಜುಕಿಯೇ ನಂ 1..!

ಈ ಪಟ್ಟಿಯಲ್ಲಿ ಮಾರುತಿ ಸುಜುಕಿ ಕಂಪನಿಯ ಕಾರುಗಳ ಮಾರಾಟವು ಏರಿಕೆಯಾಗಿರುವುದನ್ನು ಕಾಣಬಹುದು. ಕಳೆದ ವರ್ಷ ಮಾರಾಟದಲ್ಲಿ ಕುಸಿತವನ್ನು ಕಾಣುತ್ತಿದ್ದ ಮಾರುತಿ ಸುಜುಕಿ ಕಂಪನಿಯು ವರ್ಷದ ಕೊನೆಯ ತಿಂಗಳಿನಲ್ಲಿ ಏರಿಕೆಯನ್ನು ಕಂಡಿದೆ.

Rank Models Dec'19 Dec'18 Growth (%)
1 Maruti Baleno 18,465 11,135 65.83
2 Maruti Alto 15,489 25,121 -38.34
3 Maruti Dzire 15,286 16,797 -9.00
4 Maruti Swift 14,749 11,970 23.22
5 Maruti Brezza 13,658 9,667 41.28
6 Maruti Wagonr 10,781 2,540 324.45
7 Hyundai Venue 9,521 0 -
8 Maruti S-Presso 8,394 0 -
9 Hyundai i20 7,720 11,940 -35.34
10 Maruti Eeco 7,634 8,532 -10.53
ಡಿಸೆಂಬರ್ ಅವಧಿಯ ಕಾರು ಮಾರಾಟದಲ್ಲಿ ಮಾರುತಿ ಸುಜುಕಿಯೇ ನಂ 1..!

ಭಾರತದ ನಂ 1 ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ 2019ರ ಡಿಸೆಂಬರ್ ತಿಂಗಳಿನಲ್ಲಿ 1,22,784 ಯುನಿಟ್‍‍ಗಳ ಮಾರಾಟವನ್ನು ದಾಖಲಿಸಿದ್ದರೆ, 2018ರ ಡಿಸೆಂಬರ್ ತಿಂಗಳಿನಲ್ಲಿ 1,19,804 ಯುನಿಟ್‍‍ಗಳನ್ನು ಮಾರಾಟ ಮಾಡಿತ್ತು.

ಡಿಸೆಂಬರ್ ಅವಧಿಯ ಕಾರು ಮಾರಾಟದಲ್ಲಿ ಮಾರುತಿ ಸುಜುಕಿಯೇ ನಂ 1..!

ಭಾರತದ ನಂ 2 ಕಾರು ತಯಾರಕ ಕಂಪನಿಯಾದ ದಕ್ಷಿಣ ಕೊರಿಯಾ ಮೂಲದ ಹ್ಯುಂಡೈ ಕಂಪನಿಯು 2019ರ ಡಿಸೆಂಬರ್ ತಿಂಗಳಿನಲ್ಲಿ 37,953 ಯುನಿಟ್‍‍ಗಳನ್ನು ಮಾರಾಟ ಮಾಡಿದೆ. 2018ರ ಡಿಸೆಂಬರ್ ತಿಂಗಳಿನಲ್ಲಿ 42,093 ಯುನಿಟ್‍‍ಗಳನ್ನು ಮಾರಾಟ ಮಾಡಿತ್ತು. 2018ರ ಡಿಸೆಂಬರ್ ತಿಂಗಳಿಗೆ ಹೋಲಿಸಿದರೆ 10%ನಷ್ಟು ಕುಸಿತ ಕಂಡಿದೆ.

ಡಿಸೆಂಬರ್ ಅವಧಿಯ ಕಾರು ಮಾರಾಟದಲ್ಲಿ ಮಾರುತಿ ಸುಜುಕಿಯೇ ನಂ 1..!

ಹ್ಯುಂಡೈ ಕಂಪನಿಯು 2019ರಲ್ಲಿ ವೆನ್ಯೂ, ಗ್ರಾಂಡ್ ಐ10 ನಿಯೋಸ್ ಸೇರಿದಂತೆ ಹಲವು ಹೊಸ ಕಾರುಗಳನ್ನು ಬಿಡುಗಡೆಗೊಳಿಸಿತ್ತು. ಇದರ ಜೊತೆಗೆ ಕಂಪನಿಯು ಎಲಾಂಟ್ರಾ ಕಾರ್ ಅನ್ನು ಅಪ್‍‍ಡೇಟ್‍‍ಗೊಳಿಸಿ ಬಿಡುಗಡೆಗೊಳಿಸಿತ್ತು.

ಡಿಸೆಂಬರ್ ಅವಧಿಯ ಕಾರು ಮಾರಾಟದಲ್ಲಿ ಮಾರುತಿ ಸುಜುಕಿಯೇ ನಂ 1..!

ಮಹೀಂದ್ರಾ ಕಂಪನಿಯು ಈ ಪಟ್ಟಿಯಲ್ಲಿ 15,726 ಯುನಿಟ್‍‍ಗಳ ಮಾರಾಟದೊಂದಿಗೆ ಮೂರನೇ ಸ್ಥಾನದಲ್ಲಿದೆ. ಮಾರಾಟವು 2018ರ ಡಿಸೆಂಬರ್ ತಿಂಗಳಿಗೆ ಹೋಲಿಸಿದರೆ 9%ನಷ್ಟು ಏರಿಕೆಯಾಗಿದೆ. ಮಹೀಂದ್ರಾ ಕಂಪನಿಯು ಕಳೆದ ತಿಂಗಳು ಬಿ‍ಎಸ್ 6 ಪೆಟ್ರೋಲ್ ಎಂಜಿನ್ ಹೊಂದಿರುವ ಎಕ್ಸ್ ಯುವಿ 300ಯನ್ನು ಬಿಡುಗಡೆಗೊಳಿಸಿತ್ತು.

ಡಿಸೆಂಬರ್ ಅವಧಿಯ ಕಾರು ಮಾರಾಟದಲ್ಲಿ ಮಾರುತಿ ಸುಜುಕಿಯೇ ನಂ 1..!

ಐದನೇ ಸ್ಥಾನದಲ್ಲಿರುವ ಟಾಟಾ ಮೋಟಾರ್ಸ್ ದೇಶಿಯ ಮಾರುಕಟ್ಟೆಯಲ್ಲಿ 10%ನಷ್ಟು ಕುಸಿತವನ್ನು ಕಂಡಿದೆ. ಆರನೇ ಸ್ಥಾನದಲ್ಲಿರುವ ರೆನಾಲ್ಟ್ 2019ರ ಡಿಸೆಂಬರ್ ತಿಂಗಳಿನಲ್ಲಿ 65%ನಷ್ಟು ಏರಿಕೆಯನ್ನು ದಾಖಲಿಸಿದೆ.

ಡಿಸೆಂಬರ್ ಅವಧಿಯ ಕಾರು ಮಾರಾಟದಲ್ಲಿ ಮಾರುತಿ ಸುಜುಕಿಯೇ ನಂ 1..!

ಟಾಟಾ ಮೋಟಾರ್ಸ್ 2018ರ ಡಿಸೆಂಬರ್ ತಿಂಗಳಿನಲ್ಲಿ 14,260 ಯುನಿಟ್‍‍ಗಳನ್ನು ಮಾರಾಟ ಮಾಡಿದ್ದರೆ, 2019ರ ಡಿಸೆಂಬರ್‍‍ನಲ್ಲಿ 12,785 ಯುನಿಟ್‍ಗಳನ್ನು ಮಾರಾಟ ಮಾಡಿದೆ. ರೆನಾಲ್ಟ್ ಕಂಪನಿಯ ಮಾರಾಟವು 2018ರ ಡಿಸೆಂಬರ್ ತಿಂಗಳಿನಲ್ಲಿ 7,263 ಯುನಿಟ್‍‍ಗಳಾಗಿತ್ತು.

ಡಿಸೆಂಬರ್ ಅವಧಿಯ ಕಾರು ಮಾರಾಟದಲ್ಲಿ ಮಾರುತಿ ಸುಜುಕಿಯೇ ನಂ 1..!

ಈ ಪ್ರಮಾಣವು 2019ರ ಡಿಸೆಂಬರ್‍‍ನಲ್ಲಿ 11,964 ಗಳಾಗಿದೆ. ರೆನಾಲ್ಟ್ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಹೊಸದಾಗಿ ಬಿಡುಗಡೆಗೊಳಿಸಿದ ಸಬ್ 4 ಮೀಟರ್‍‍ನ ಟ್ರೈಬರ್ ಎಂಪಿವಿಯಿಂದಾಗಿ ರೆನಾಲ್ಟ್ ಕಂಪನಿಯ ಮಾರಾಟವು ಏರಿಕೆಯಾಗಿದೆ.

ಡಿಸೆಂಬರ್ ಅವಧಿಯ ಕಾರು ಮಾರಾಟದಲ್ಲಿ ಮಾರುತಿ ಸುಜುಕಿಯೇ ನಂ 1..!

ಕೊನೆಯ ಐದು ಸ್ಥಾನಗಳಲ್ಲಿ ಹೋಂಡಾ, ಟೊಯೊಟಾ, ಕಿಯಾ ಮೋಟಾರ್ಸ್, ಫೋಕ್ಸ್‌ವ್ಯಾಗನ್ ಹಾಗೂ ಫೋರ್ಡ್ ಕಂಪನಿಯ ಕಾರುಗಳಿವೆ. ಕಳೆದ ತಿಂಗಳು ಹೋಂಡಾ ಕಂಪನಿಯ ಮಾರಾಟದಲ್ಲಿ 36% ಕುಸಿತ ಉಂಟಾಗಿದ್ದರೆ, ಟೊಯೊಟಾ ಕಂಪನಿಯ ಮಾರಾಟದಲ್ಲಿ 45% ಕುಸಿತ ಉಂಟಾಗಿದೆ.

ಡಿಸೆಂಬರ್ ಅವಧಿಯ ಕಾರು ಮಾರಾಟದಲ್ಲಿ ಮಾರುತಿ ಸುಜುಕಿಯೇ ನಂ 1..!

ಕಿಯಾ ಮೋಟಾರ್ಸ್ ಇದೇ ಮೊದಲ ಬಾರಿಗೆ ಮಾರಾಟದಲ್ಲಿ ಕುಸಿತವನ್ನು ಕಂಡಿದೆ. 2019ರ ಆಗಸ್ಟ್ ನಲ್ಲಿ ಬಿಡುಗಡೆಯಾದಾಗಿನಿಂದ ಕಿಯಾ ಸೆಲ್ಟೋಸ್ ಕಾರು ಪ್ರತಿ ತಿಂಗಳು ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತಿತ್ತು.

ಡಿಸೆಂಬರ್ ಅವಧಿಯ ಕಾರು ಮಾರಾಟದಲ್ಲಿ ಮಾರುತಿ ಸುಜುಕಿಯೇ ನಂ 1..!

ನವೆಂಬರ್ ತಿಂಗಳಿನಲ್ಲಿ ಸೆಲ್ಟೋಸ್‍‍ನ 14,000 ಯುನಿಟ್‍‍ಗಳು ಮಾರಾಟವಾಗಿದ್ದವು. ಈ ಪ್ರಮಾಣವು ಡಿಸೆಂಬರ್ ತಿಂಗಳಿನಲ್ಲಿ 4,000 ಯುನಿಟ್‍ಗಳಿಗೆ ಇಳಿದು, 67%ನಷ್ಟು ಕುಸಿತ ಉಂಟಾಗಿದೆ. ಕಿಯಾ ಕಂಪನಿಯು ಸೆಲ್ಟೋಸ್‍‍ನ ಬೆಲೆಯನ್ನು ಏರಿಕೆ ಮಾಡಿರುವ ಕಾರಣ ಮಾರಾಟದಲ್ಲಿ ಮತ್ತಷ್ಟು ಕುಸಿತ ಉಂಟಾಗುವ ಸಾಧ್ಯತೆಗಳಿವೆ.

ಡಿಸೆಂಬರ್ ಅವಧಿಯ ಕಾರು ಮಾರಾಟದಲ್ಲಿ ಮಾರುತಿ ಸುಜುಕಿಯೇ ನಂ 1..!

ಒಂಭತ್ತನೇ ಸ್ಥಾನದಲ್ಲಿರುವ ಫೋಕ್ಸ್‌ವ್ಯಾಗನ್ ಕಂಪನಿಯ 3,483 ಯುನಿಟ್‍‍ಗಳು 2019ರ ಡಿಸೆಂಬರ್ ತಿಂಗಳಿನಲ್ಲಿ ಮಾರಾಟವಾಗಿವೆ. ಇದು 2018ರ ಡಿಸೆಂಬರ್‍‍ಗೆ ಹೋಲಿಸಿದರೆ 24%ನಷ್ಟು ಏರಿಕೆಯಾಗಿದೆ.

ಡಿಸೆಂಬರ್ ಅವಧಿಯ ಕಾರು ಮಾರಾಟದಲ್ಲಿ ಮಾರುತಿ ಸುಜುಕಿಯೇ ನಂ 1..!

ಹತ್ತನೇ ಸ್ಥಾನದಲ್ಲಿರುವ ಫೋರ್ಡ್ ಕಂಪನಿಯು 2019ರ ಡಿಸೆಂಬರ್ ತಿಂಗಳಿನಲ್ಲಿ 3,021 ಯುನಿಟ್‍‍ಗಳನ್ನು ಮಾರಾಟ ಮಾಡಿದ್ದು, 2018ರ ಡಿಸೆಂಬರ್ ತಿಂಗಳಿಗೆ ಹೋಲಿಸಿದರೆ 48%ನಷ್ಟು ಕುಸಿತವನ್ನು ಅನುಭವಿಸಿದೆ.

ಡಿಸೆಂಬರ್ ಅವಧಿಯ ಕಾರು ಮಾರಾಟದಲ್ಲಿ ಮಾರುತಿ ಸುಜುಕಿಯೇ ನಂ 1..!

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

2019ರ ಡಿಸೆಂಬರ್ ತಿಂಗಳ ಕಾರು ಮಾರಾಟದಲ್ಲಿ ಹಲವಾರು ಏರಿಳಿತಗಳು ಉಂಟಾಗಿವೆ. ಮುಂಬರುವ ದಿನಗಳಲ್ಲಿ ಬಹುತೇಕ ಕಂಪನಿಗಳು ಬಿ‍ಎಸ್ 6 ಎಂಜಿನ್ ಹೊಂದಿರುವ ಅಪ್‍‍ಡೇಟೆಡ್ ಕಾರುಗಳನ್ನು ಬಿಡುಗಡೆಗೊಳಿಸಲಿದ್ದು, ಮಾರಾಟವು ಯಾವ ರೀತಿಯಲ್ಲಿರಲಿದೆ ಎಂಬುದನ್ನು ಕಾದು ನೋಡಬೇಕಿದೆ.

Source: Rushlane

Most Read Articles

Kannada
English summary
Car Sales Report In India For December 2019: Here Is The Sales Performance Of The Top-10 Brands - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more