ಭಾರತದ ಬೇರೆ ಕಡೆಗಿಂತ ಗುಜರಾತ್ ನಲ್ಲೇ ವಾಹನ ಮಾರಾಟ ಕುಸಿತ ಪ್ರಮಾಣ ಹೆಚ್ಚು

ಭಾರತದ ಆಟೋಮೊಬೈಲ್ ಉದ್ಯಮವು ಕಳೆದ ವರ್ಷದ ಆರಂಭದಿಂದಲೂ ಆರ್ಥಿಕ ಹಿಂಜರಿತವನ್ನು ಎದುರಿಸುತ್ತಿದೆ. ಕಳೆದ ವರ್ಷ ದೀಪಾವಳಿ ಹಬ್ಬದ ಸಂದರ್ಭದಲ್ಲಿ ವಾಹನಗಳ ಮಾರಾಟ ಹೆಚ್ಚಿದ ಕಾರಣ ಸಮಸ್ಯೆ ತಾತ್ಕಾಲಿಕವಾಗಿ ಶಮನಗೊಂಡಿತ್ತು.

ಭಾರತದ ಬೇರೆ ಕಡೆಗಿಂತ ಗುಜರಾತ್ ನಲ್ಲೇ ವಾಹನ ಮಾರಾಟ ಕುಸಿತ ಪ್ರಮಾಣ ಹೆಚ್ಚು

ಆದರೆ ಆಟೋಮೊಬೈಲ್ ಉದ್ಯಮವು ಇನ್ನೂ ಚೇತರಿಸಿಕೊಂಡಿಲ್ಲ. ಇದನ್ನು ಕೆಲವು ಅಂಕಿಅಂಶಗಳೇ ಸಾಬೀತು ಪಡಿಸುತ್ತಿವೆ. ನವರಾತ್ರಿ-ದೀಪಾವಳಿ ಹಬ್ಬದ ನಂತರ ಗುಜರಾತ್ ರಾಜ್ಯದ ವಾಹನಗಳ ಮಾರುಕಟ್ಟೆಯು ಕುಸಿಯುತ್ತಿದೆ. ಫೆಬ್ರವರಿ ತಿಂಗಳಿನಲ್ಲಿ ಅಲ್ಲಿನ ಕಾರು ಹಾಗೂ ದ್ವಿಚಕ್ರ ವಾಹನಗಳ ಮಾರಾಟವು ತೀವ್ರವಾಗಿ ಕುಸಿದಿದೆ.

ಭಾರತದ ಬೇರೆ ಕಡೆಗಿಂತ ಗುಜರಾತ್ ನಲ್ಲೇ ವಾಹನ ಮಾರಾಟ ಕುಸಿತ ಪ್ರಮಾಣ ಹೆಚ್ಚು

ಗುಜರಾತ್ ರಾಜ್ಯದಲ್ಲಿ ವಾಹನಗಳ ಮಾರಾಟವು ನವೆಂಬರ್‌ನಿಂದ ಸತತವಾಗಿ ಕುಸಿಯುತ್ತಿದೆ. ಆರ್ಥಿಕ ಹಿಂಜರಿತ, ಬಿಎಸ್ -6 ನಿಯಮಗಳ ಅಳವಡಿಕೆ ಹಾಗೂ ಈಗ ಕರೋನಾ ವೈರಸ್ ನಿಂದ ಮಾರಾಟವು ಕುಸಿತ ಕಾಣುತ್ತಿದೆ.

ಭಾರತದ ಬೇರೆ ಕಡೆಗಿಂತ ಗುಜರಾತ್ ನಲ್ಲೇ ವಾಹನ ಮಾರಾಟ ಕುಸಿತ ಪ್ರಮಾಣ ಹೆಚ್ಚು

2019ರ ಫೆಬ್ರವರಿ ತಿಂಗಳಲ್ಲಿ ಗುಜರಾತ್‌ನಲ್ಲಿ 23,317 ಕಾರುಗಳ ಮಾರಾಟವಾಗಿದ್ದಾರೆ, ಈ ವರ್ಷದ ಫೆಬ್ರವರಿ ತಿಂಗಳಿನಲ್ಲಿ 20,413 ಕಾರುಗಳು ಮಾರಾಟವಾಗಿವೆ. ಒಟ್ಟಾರೆಯಾಗಿ 12.4%ನಷ್ಟು ಕುಸಿತವಾಗಿದೆ. ಫೆಡರೇಶನ್ ಆಫ್ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ ​​- ಫಾಡಾ ಪ್ರಕಟಿಸಿದ ಈ ವರದಿಯನ್ನು ಪ್ರಕಟಿಸಿದೆ.

ಭಾರತದ ಬೇರೆ ಕಡೆಗಿಂತ ಗುಜರಾತ್ ನಲ್ಲೇ ವಾಹನ ಮಾರಾಟ ಕುಸಿತ ಪ್ರಮಾಣ ಹೆಚ್ಚು

ಆಟೋ ಉದ್ಯಮದ ಅಧಿಕಾರಿಯೊಬ್ಬರು ಮಾತನಾಡಿ, ಆರ್ಥಿಕ ಹಿಂಜರಿತ, ಕರೋನ ವೈರಸ್ ಹಾಗೂ ಬಿಎಸ್ 6 ಮಾಲಿನ್ಯ ನಿಯಮಗಳ ಜಾರಿಯಿಂದಾಗಿ ವಾಹನಗಳ ಮಾರಾಟದ ಮೇಲೆ ಪರಿಣಾಮ ಉಂಟಾಗಿದೆ ಎಂದು ಹೇಳಿದರು.

ಭಾರತದ ಬೇರೆ ಕಡೆಗಿಂತ ಗುಜರಾತ್ ನಲ್ಲೇ ವಾಹನ ಮಾರಾಟ ಕುಸಿತ ಪ್ರಮಾಣ ಹೆಚ್ಚು

ಕಾರುಗಳ ಮಾರಾಟದಂತೆ ಗುಜರಾತ್‌ನಲ್ಲಿ ದ್ವಿಚಕ್ರ ವಾಹನಗಳ ಮಾರಾಟವೂ ಸಹ ಕುಸಿದಿದೆ. ಫೆಬ್ರವರಿ ತಿಂಗಳಿನಲ್ಲಿ ಗುಜರಾತ್‌ನಲ್ಲಿ 78,711 ದ್ವಿಚಕ್ರ ವಾಹನಗಳು ಮಾರಾಟವಾಗಿವೆ. 2019ರ ಫೆಬ್ರವರಿ ತಿಂಗಳಿನಲ್ಲಿ 84,300 ದ್ವಿಚಕ್ರ ವಾಹನಗಳು ಮಾರಾಟವಾಗಿದ್ದವು. ಇದರಿಂದಾಗಿ ಫೆಬ್ರವರಿ ತಿಂಗಳಿನಲ್ಲಿ 6.6%ನಷ್ಟು ಕುಸಿತವಾಗಿದೆ.

ಭಾರತದ ಬೇರೆ ಕಡೆಗಿಂತ ಗುಜರಾತ್ ನಲ್ಲೇ ವಾಹನ ಮಾರಾಟ ಕುಸಿತ ಪ್ರಮಾಣ ಹೆಚ್ಚು

ಗಮನಿಸಬೇಕಾದ ಸಂಗತಿಯೆಂದರೆ, ಭಾರತದಲ್ಲಿ, ಕಾರುಗಳ ಮಾರಾಟವು 1.1% ಕುಸಿತವಾಗಿದ್ದಾರೆ, ಗುಜರಾತ್ ರಾಜ್ಯದಲ್ಲಿ 12.4%ನಷ್ಟು ಕುಸಿದಿದೆ. ಆಟೋಮೊಬೈಲ್ ಉದ್ಯಮದ ಪ್ರಕಾರ, ಹೊಸ ವಾಹನಗಳ ಅಗತ್ಯವಿರುವವರು ಮಾತ್ರ ಹೊಸ ಕಾರುಗಳನ್ನು ಖರೀದಿಸುತ್ತಿದ್ದಾರೆ. ಮಾರಾಟವು ಶೀಘ್ರದಲ್ಲೇ ಸಹಜ ಸ್ಥಿತಿಗೆ ಮರಳುವ ಸಾಧ್ಯತೆಗಳಿವೆ.

ಭಾರತದ ಬೇರೆ ಕಡೆಗಿಂತ ಗುಜರಾತ್ ನಲ್ಲೇ ವಾಹನ ಮಾರಾಟ ಕುಸಿತ ಪ್ರಮಾಣ ಹೆಚ್ಚು

ಹೊಸ ಮಾಲಿನ್ಯ ನಿಯಮಗಳು ಏಪ್ರಿಲ್ 1 ರಿಂದ ಜಾರಿಗೆ ಬರಲಿವೆ. ಮಾರ್ಚ್ ಅಂತ್ಯದ ವೇಳೆಗೆ ಬಿಎಸ್ 4 ವಾಹನಗಳ ಮೇಲೆ ಆಕರ್ಷಕ ಕೊಡುಗೆಗಳು ದೊರೆಯಲಿವೆ ಎಂಬುದು ಗ್ರಾಹಕರು ಆಶಾವಾದ. ಇದಕ್ಕಾಗಿಯೇ ದ್ವಿಚಕ್ರ ವಾಹನಗಳು ಸೇರಿದಂತೆ ಹೊಸ ಕಾರು ಖರೀದಿಸುವ ನಿರ್ಧಾರವನ್ನು ಕೆಲವರು ಮುಂದಿಡುತ್ತಿದ್ದಾರೆ.

Article Published On: Monday, March 16, 2020, 15:58 [IST]
English summary
Car two wheeler sales down in Gujarat. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+