ಅಕ್ಟೋಬರ್ ತಿಂಗಳಿನಲ್ಲಿ ಭಾರತದಲ್ಲಿ ಬಿಡುಗಡೆಯಾದ ಕಾರುಗಳಿವು

ಈ ವರ್ಷದ ಆರಂಭದಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ವಾಹನಗಳ ಮಾರಾಟ ಪ್ರಮಾಣವು ಕಡಿಮೆಯಾಗಿತ್ತು. ಕರೋನಾ ವೈರಸ್ ಕಾರಣದಿಂದಾಗಿ ವಾಹನಗಳ ಮಾರಾಟವು ಮತ್ತಷ್ಟು ಕಡಿಮೆಯಾಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಪ್ರತಿ ತಿಂಗಳು ಹೆಚ್ಚು ಹೆಚ್ಚು ವಾಹನಗಳು ಬಿಡುಗಡೆಯಾಗುತ್ತಿವೆ.

ಅಕ್ಟೋಬರ್ ತಿಂಗಳಿನಲ್ಲಿ ಭಾರತದಲ್ಲಿ ಬಿಡುಗಡೆಯಾದ ಕಾರುಗಳಿವು

ಅಕ್ಟೋಬರ್ ತಿಂಗಳಿನಲ್ಲಿಯೂ ಹಲವಾರು ಹೊಸ ಕಾರುಗಳು ಬಿಡುಗಡೆಯಾಗಿವೆ. ಇವುಗಳಲ್ಲಿ ಮಹೀಂದ್ರಾ ಥಾರ್, ಎಂಜಿ ಗ್ಲೋಸ್ಟರ್, ಮರ್ಸಿಡಿಸ್ ಇಕ್ಯೂಸಿ, ಕಿಯಾ ಸೆಲ್ಟೋಸ್ ಆನಿವರ್ಸರಿ ಎಡಿಶನ್, ರೆನಾಲ್ಟ್ ಕ್ವಿಡ್ ನಿಯೋಟೆಕ್, ಲ್ಯಾಂಡ್ ರೋವರ್ ಡಿಫೆಂಡರ್, ಆಡಿ ಕ್ಯೂ 2ಗಳು ಸೇರಿವೆ. ಅಕ್ಟೋಬರ್ ತಿಂಗಳಿನಲ್ಲಿ ಯಾವ ಕಾರುಗಳು ಬಿಡುಗಡೆಯಾದವು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಅಕ್ಟೋಬರ್ ತಿಂಗಳಿನಲ್ಲಿ ಭಾರತದಲ್ಲಿ ಬಿಡುಗಡೆಯಾದ ಕಾರುಗಳಿವು

1. ಹೊಸ ಮಹೀಂದ್ರಾ ಥಾರ್

ಅಕ್ಟೋಬರ್ ತಿಂಗಳಿನಲ್ಲಿ ಹೊಸ ಮಹೀಂದ್ರಾ ಥಾರ್ ಎಸ್‌ಯುವಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸಲಾಗಿದೆ. ಮಹೀಂದ್ರಾ ಥಾರ್ ಎಸ್‌ಯುವಿಯನ್ನು ಎಎಕ್ಸ್ ಹಾಗೂ ಎಲ್ಎಕ್ಸ್ ಎಂಬ ಎರಡು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ. 2020ರ ಹೊಸ ಮಹೀಂದ್ರಾ ಥಾರ್ ಹಲವಾರು ಫೀಚರ್ ಹಾಗೂ ಎಕ್ವಿಪ್ ಮೆಂಟ್ ಗಳನ್ನು ಹೊಂದಿದೆ. ಈ ಎಸ್‌ಯುವಿಯ ವಿತರಣೆಯು ನವೆಂಬರ್ 1ರಿಂದ ಆರಂಭವಾಗಲಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಅಕ್ಟೋಬರ್ ತಿಂಗಳಿನಲ್ಲಿ ಭಾರತದಲ್ಲಿ ಬಿಡುಗಡೆಯಾದ ಕಾರುಗಳಿವು

2. ಎಂಜಿ ಗ್ಲೋಸ್ಟರ್

ಎಂಜಿ ಗ್ಲೋಸ್ಟರ್ ಎಸ್‌ಯುವಿಯು ಭಾರತದಲ್ಲಿ ಬಿಡುಗಡೆಯಾಗಿದೆ. ಇದರ ಬೆಲೆ ರೂ.28.98 ಲಕ್ಷಗಳಾಗಿದೆ. ಎಂಜಿ ಗ್ಲೋಸ್ಟರ್ ಎಸ್‌ಯುವಿಯನ್ನು 6 ಹಾಗೂ 7 ಸೀಟುಗಳ ಆಯ್ಕೆಯೊಂದಿಗೆ ಬಿಡುಗಡೆಗೊಳಿಸಲಾಗಿದೆ. ಈ ಎಸ್‌ಯುವಿಯನ್ನು ಸೂಪರ್, ಸ್ಮಾರ್ಟ್, ಶಾರ್ಪ್, ಸ್ಯಾವಿ ಎಂಬ ನಾಲ್ಕು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ. ಗ್ಲೋಸ್ಟರ್ ಎಸ್‌ಯುವಿಯ ಟಾಪ್ ಎಂಡ್ ಮಾದರಿಯ ಬೆಲೆ ರೂ.35.38 ಲಕ್ಷಗಳಾಗಿದೆ.

ಅಕ್ಟೋಬರ್ ತಿಂಗಳಿನಲ್ಲಿ ಭಾರತದಲ್ಲಿ ಬಿಡುಗಡೆಯಾದ ಕಾರುಗಳಿವು

3. ರೆನಾಲ್ಟ್ ಕ್ವಿಡ್ ನಿಯೋಟೆಕ್

ರೆನಾಲ್ಟ್ ಕಂಪನಿಯು ಕ್ವಿಡ್ ನಿಯೋಟೆಕ್ ಆವೃತ್ತಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ. ರೆನಾಲ್ಟ್ ಕ್ವಿಡ್ ನಿಯೋಟೆಕ್ ಆವೃತ್ತಿಯ ಬೆಲೆ ರೂ. 4.29 ಲಕ್ಷಗಳಾಗಿದೆ. ಈ ಕಾರನ್ನು 0.8 ಲೀಟರ್ ಹಾಗೂ 1.0 ಲೀಟರ್ ಎಂಜಿನ್ ಆಯ್ಕೆಗಳಲ್ಲಿ ಮಾರಾಟ ಮಾಡಲಾಗುತ್ತದೆ. ಈ ಹಬ್ಬದ ಹಿನ್ನೆಲೆಯಲ್ಲಿ ಗ್ರಾಹಕರನ್ನು ಆಕರ್ಷಿಸಲು ಈ ವಿಶೇಷ ಆವೃತ್ತಿಯನ್ನು ಬಿಡುಗಡೆಗೊಳಿಸಲಾಗಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಅಕ್ಟೋಬರ್ ತಿಂಗಳಿನಲ್ಲಿ ಭಾರತದಲ್ಲಿ ಬಿಡುಗಡೆಯಾದ ಕಾರುಗಳಿವು

4. ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್

ಮರ್ಸಿಡಿಸ್ ಕಂಪನಿಯು ತನ್ನ ಇಕ್ಯೂಸಿ ಎಲೆಕ್ಟ್ರಿಕ್ ಎಸ್‌ಯುವಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಎಸ್‌ಯುವಿಯ ಬೆಲೆ ರೂ.99.30 ಲಕ್ಷಗಳಾಗಿದೆ. ಈ ಬೆಲೆ ಮೊದಲ 50 ಯೂನಿಟ್‌ಗಳಿಗೆ ಮಾತ್ರ ಅನ್ವಯವಾಗುತ್ತದೆ. ಇದು ಮರ್ಸಿಡಿಸ್ ಕಂಪನಿಯ ಮೊದಲ ಪ್ರೀಮಿಯಂ ಎಲೆಕ್ಟ್ರಿಕ್ ಎಸ್‌ಯುವಿಯಾಗಿದೆ. ಈ ಎಸ್‌ಯುವಿಯನ್ನು ಆನ್‌ಲೈನ್‌ ಮೂಲಕವೂ ಬುಕ್ ಮಾಡಬಹುದು.

ಅಕ್ಟೋಬರ್ ತಿಂಗಳಿನಲ್ಲಿ ಭಾರತದಲ್ಲಿ ಬಿಡುಗಡೆಯಾದ ಕಾರುಗಳಿವು

5. ಸೆಲ್ಟೋಸ್ ಆನಿವರ್ಸರಿ ಎಡಿಶನ್

ಕಿಯಾ ಮೋಟಾರ್ಸ್ ಕಂಪನಿಯು ತನ್ನ ಸೆಲ್ಟೋಸ್ ಕಾರಿನ ಆನಿವರ್ಸರಿ ಎಡಿಶನ್ ಕಾರನ್ನು ಬಿಡುಗಡೆಗೊಳಿಸಿದೆ. ಈ ಕಾರಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ.13.74 ಲಕ್ಷಗಳಾಗಿದೆ. ಈ ಕಾರನ್ನು ಎರಡು ಎಂಜಿನ್ ಆಯ್ಕೆಗಳಲ್ಲಿ ಮಾರಾಟ ಮಾಡಲಾಗುತ್ತದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಅಕ್ಟೋಬರ್ ತಿಂಗಳಿನಲ್ಲಿ ಭಾರತದಲ್ಲಿ ಬಿಡುಗಡೆಯಾದ ಕಾರುಗಳಿವು

6. ಹೊಸ ಲ್ಯಾಂಡ್ ರೋವರ್ ಡಿಫೆಂಡರ್

ಹೊಸ ಲ್ಯಾಂಡ್ ರೋವರ್ ಡಿಫೆಂಡರ್ ಎಸ್‌ಯುವಿಯನ್ನು ಭಾರತದಲ್ಲಿ 90 ಹಾಗೂ 110 ಎಂಬ ಎರಡು ಮಾದರಿಗಳಲ್ಲಿ ಬಿಡುಗಡೆಗೊಳಿಸಲಾಗಿದೆ. ಈ ಎಸ್‌ಯುವಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ.73.98 ಲಕ್ಷಗಳಾಗಿದೆ. ಈ ಎಸ್‌ಯುವಿಯನ್ನು 3 ಡೋರ್ ಹಾಗೂ 5 ಡೋರ್ ಗಳಲ್ಲಿ ಮಾರಾಟ ಮಾಡಲಾಗುತ್ತದೆ. 5 ಡೋರ್ ಮಾದರಿಯ ಬೆಲೆ ರೂ.79.94 ಲಕ್ಷಗಳಾಗಿದೆ. ಹೊಸ ಲ್ಯಾಂಡ್ ರೋವರ್ ಡಿಫೆಂಡರ್ ಎಸ್‌ಯುವಿಯನ್ನು ಬೇಸ್, ಎಸ್, ಎಸ್ಇ, ಹೆಚ್ಎಸ್ಇ ಹಾಗೂ ಫಸ್ಟ್ ಎಡಿಶನ್ ಎಂಬ ಐದು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ.

ಅಕ್ಟೋಬರ್ ತಿಂಗಳಿನಲ್ಲಿ ಭಾರತದಲ್ಲಿ ಬಿಡುಗಡೆಯಾದ ಕಾರುಗಳಿವು

7. ಆಡಿ ಕ್ಯೂ 2

ಆಡಿ ಕಂಪನಿಯು ತನ್ನ ಕ್ಯೂ 2 ಎಸ್‌ಯುವಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ. ಈ ಎಸ್‌ಯುವಿಯ ಬೆಲೆ ರೂ.34.99 ಲಕ್ಷಗಳಾಗಿದೆ. ಈ ಎಸ್‌ಯುವಿಯನ್ನು ಅಡ್ವಾನ್ಸ್ ಲೈನ್ ಹಾಗೂ ಡಿಸೈನ್ ಲೈನ್ ಟ್ರಿಮ್ ಅಡಿಯಲ್ಲಿ ಒಟ್ಟು ಐದು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ.

Most Read Articles

Kannada
English summary
Cars launched in India during October 2020. Read in Kannada.
Story first published: Saturday, October 31, 2020, 15:19 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X