ರೋಡ್ ಸೈಡ್ ಅಸಿಸ್ಟ್ ಸರ್ವಿಸ್ ಆರಂಭಿಸಿದ ಸಿಯೆಟ್ ಟೈರ್

ದೇಶದ ಮುಂಚೂಣಿ ಟೈರ್ ಉತ್ಪಾದನಾ ಕಂಪನಿಯಾದ ಸಿಯೆಟ್ ಟೈರ್ ಭಾರತದಲ್ಲಿ ಮೊದಲ ಬಾರಿಗೆ ರೋಡ್ ಸೈಡ್ ಅಸಿಸ್ಟ್ ಸರ್ವಿಸ್ ಸೇವೆಗಳನ್ನು ಆರಂಭಿಸಿದ್ದು, ಮೊದಲ ಹಂತದಲ್ಲಿ ಹೊಸ ಯೋಜನೆಯನ್ನು ಬೆಂಗಳೂರು ಮತ್ತು ಹೈದ್ರಾಬಾದ್ ನಗರಗಳಲ್ಲಿ ಆರಂಭಿಸಿದೆ.

ರೋಡ್ ಸೈಡ್ ಅಸಿಸ್ಟ್ ಸರ್ವಿಸ್ ಆರಂಭಿಸಿದ ಸಿಯೆಟ್ ಟೈರ್

ಪ್ರಯಾಣದ ಸಂದರ್ಭದಲ್ಲಿ ಎದುರಾಗುವ ಟೈರ್‌ಗೆ ಸಂಬಂಧಿಸಿದಂತೆ ಎದುರಾಗುವ ಸಮಸ್ಯೆಗಳಿಗೆ ಕೆಲವೇ ನಿಮಿಷಗಳಲ್ಲಿ ಸೇವೆಗಳನ್ನು ಒದಗಿಸುವುದಕ್ಕಾಗಿ 24x7 ಮಾದರಿಯ ರೋಡ್ ಸೈಡ್ ಅಸಿಸ್ಟ್ ಸೇವೆಗಳನ್ನು ಜಾರಿಗೆ ತಂದಿದ್ದು, ಗ್ರಾಹಕರು ಬೇಡಿಕೆ ಮೇರೆಗೆ ಟೈರ್ ಹಾನಿ, ಪಂಚರ್ ಸೇವೆಗಳನ್ನು ಆನ್ ಸ್ಪಾಟ್ ಅಥವಾ ಮನೆಬಾಗಿಲಿಗೆ ಸೇವೆಗಳನ್ನು ಅತಿ ಕಡಿಮೆ ದರಗಳಲ್ಲಿ ಪೂರೈಸಲು ಸಿದ್ದವಾಗಿದೆ.

ರೋಡ್ ಸೈಡ್ ಅಸಿಸ್ಟ್ ಸರ್ವಿಸ್ ಆರಂಭಿಸಿದ ಸಿಯೆಟ್ ಟೈರ್

ಹೊಸದಾಗಿ ಆರಂಭಿಸಲಾಗಿರುವ ರೋಡ್ ಸೈಡ್ ಅಸಿಸ್ಟ್ ಸೇವೆಗಳನ್ನು ಸಮರ್ಥವಾಗಿ ನಿಭಾಯಿಸಲು ರೆಡಿಅಸಿಸ್ಟ್ ಕಂಪನಿಯೊಂದಿಗೆ ಸಹಭಾಗಿತ್ವ ಹೊಂದಿರುವ ಸಿಯೆಟ್ ಟೈರ್ ಕಂಪನಿಯು ಆರಂಭಿಕವಾಗಿ ರೂ.200ರಿಂದ ಸೇವೆಗಳನ್ನು ಆರಂಭಿಸಿದೆ.

ರೋಡ್ ಸೈಡ್ ಅಸಿಸ್ಟ್ ಸರ್ವಿಸ್ ಆರಂಭಿಸಿದ ಸಿಯೆಟ್ ಟೈರ್

ಟೈರ್ ಪಂಚರ್‌ಗೆ ರೂ.200ರಿಂದ ಆರಂಭವಾಗಿ ವಿವಿಧ ಮಾದರಿಯ ರೋಡ್ ಸೈಡ್ ಅಸಿಸ್ಟ್ ಸೇವೆಗಳನ್ನು ಒದಗಿಸಲಿದ್ದು, ಹೊಸ ಸೇವೆಗಳಲ್ಲಿ ಪಂಚರ್ ರಿಪೇರಿ, ಬ್ಯಾಟರಿ ಜಂಪ್‌ಸ್ಟಾರ್ಟ್, ಕೀ ಅನ್‌ಲಾಕ್ ಅಸಿಸ್ಟ್, ಫ್ಯೂರ್ ಡಿಲೆವರಿ ಸೇರಿದಂತೆ ಸಣ್ಣಪುಟ್ಟ ತಾಂತ್ರಿಕ ದೋಷಗಳನ್ನು ಸರಿಪಡಿಸಿಕೊಡುವುದರ ಜೊತೆಗೆ ಅಗತ್ಯತೆ ಅನುಗುಣವಾಗಿ ಟೊಯಿಂಗ್ ಸರ್ವಿಸ್ ಸಹ ಲಭ್ಯವಿರುತ್ತದೆ.

ರೋಡ್ ಸೈಡ್ ಅಸಿಸ್ಟ್ ಸರ್ವಿಸ್ ಆರಂಭಿಸಿದ ಸಿಯೆಟ್ ಟೈರ್

ಇದಕ್ಕಾಗಿ 24x7 ಸೇವೆಗಳನ್ನು ಆರಂಭಿಸಿರುವ ಸಿಯೆಟ್ ಟೈರ್ ಕಂಪನಿಯು ತುರ್ತು ಸೇವೆಗಳಿಗಾಗಿ 9740828080 ಹಾಟ್‌ಲೈನ್ ನಂಬರ್ ನೀಡಿದ್ದು, ಬೆಂಗಳೂರು ಮತ್ತು ಹೈದ್ರಾಬಾದ್ ನಗರವ್ಯಾಪ್ತಿಯಲ್ಲಿ ಸೇವೆಗಳನ್ನು ನೀಡಲಿದೆ.

ರೋಡ್ ಸೈಡ್ ಅಸಿಸ್ಟ್ ಸರ್ವಿಸ್ ಆರಂಭಿಸಿದ ಸಿಯೆಟ್ ಟೈರ್

ಸದ್ಯ ಆರಂಭಿಕವಾಗಿ ಬೆಂಗಳೂರು ಮತ್ತು ಹೈದ್ರಾಬಾದ್ ನಗರಗಳಲ್ಲಿ ಮಾತ್ರವೇ ಹೊಸ ಸೇವೆಯನ್ನು ತೆರೆದಿರುವ ಸಿಯೆಟ್ ಟೈರ್ ಕಂಪನಿಯು ಮುಂದಿನ ಕೆಲವೇ ದಿನಗಳಲ್ಲಿ ದೇಶದ ಪ್ರಮುಖ 20 ನಗರಗಳಲ್ಲಿ ಹೊಸ ಯೋಜನೆಯನ್ನು ಜಾರಿಗೆ ತರುವ ಸಿದ್ದತೆ ನಡೆಸಿದೆ.

ರೋಡ್ ಸೈಡ್ ಅಸಿಸ್ಟ್ ಸರ್ವಿಸ್ ಆರಂಭಿಸಿದ ಸಿಯೆಟ್ ಟೈರ್

ಇನ್ನು ಹೊಸ ಸೇವೆಗಳನ್ನು ಪಡೆಯುವ ಗ್ರಾಹಕರಿಗೆ ಕೆಲವು ಉಚಿತ ಸೇವೆಗಳನ್ನು ಸಹ ಆಫರ್ ನೀಡಿರುವ ಸಿಯೆಟ್ ಟೈರ್ ಕಂಪನಿಯು ರೆಡಿಅಸಿಸ್ಟ್ ಮೂಲಕ ರೋಡ್ ಸೈಡ್ ಸೇವೆಗಳನ್ನು ಪಡೆಯುವ ವಾಹನಗಳಿಗೆ ಉಚಿತವಾಗಿ ಸ್ಯಾನಿಟೈಜ್ ಸೇವೆಗಳನ್ನು ನೀಡುತ್ತಿದೆ.

ರೋಡ್ ಸೈಡ್ ಅಸಿಸ್ಟ್ ಸರ್ವಿಸ್ ಆರಂಭಿಸಿದ ಸಿಯೆಟ್ ಟೈರ್

ಟಚ್ ಪಾಯಿಂಟ್‌ಗಳನ್ನು ಸ್ಯಾನಿಟೈಜ್ ಮಾಡಿಕೊಡುತ್ತಿರುವ ಸಿಯೆಟ್ ಟೈರ್ ಕಂಪನಿಯು ಕರೋನಾ ವೈರಸ್ ಭೀತಿಯನ್ನು ಹೊಗಲಾಡಿಸಲಿದ್ದು, ರಾತ್ರಿ ವೇಳೆಗಳಲ್ಲಿ ಟೈರ್‌ಗೆ ಸಂಬಂಧಿಸಿದ ತಾಂತ್ರಿಕ ದೋಷಗಳನ್ನು ಸರಿಪಡಿಸಿಕೊಳ್ಳಲು ಇದು ಸಾಕಷ್ಟು ಸಹಕಾರಿಯಾಗಲಿದೆ.

Most Read Articles

Kannada
English summary
Ceat Tyres Forays Into Road Side Assistance In India. Read in Kannada.
Story first published: Friday, August 21, 2020, 22:26 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X