ಎಸ್ 95 ಫೇಸ್ ಮಾಸ್ಕ್ ಬಿಡುಗಡೆಗೊಳಿಸಿದ ಟಯರ್ ತಯಾರಕ ಕಂಪನಿ

ಕೋವಿಡ್ -19 ಸಾಂಕ್ರಾಮಿಕದ ಈ ಸಂದರ್ಭದಲ್ಲಿ ಅನೇಕ ಹೊಸ ಹೊಸ ಉದ್ಯಮಗಳು ತಲೆ ಎತ್ತುತ್ತಿವೆ. ಮಹೀಂದ್ರಾ, ಮಾರುತಿ ಸುಜುಕಿ ಕಂಪನಿಯಂತಹ ದೊಡ್ಡ ದೊಡ್ಡ ಕಂಪನಿಗಳು ಫೇಸ್‌ಮಾಸ್ಕ್ ಹಾಗೂ ಪಿಪಿಇ ಕಿಟ್‌ನಂತಹ ರಕ್ಷಣಾ ಸಾಧನಗಳನ್ನು ತಯಾರಿಸುತ್ತಿವೆ.

ಎಸ್ 95 ಫೇಸ್‌ಮಾಸ್ಕ್ ಬಿಡುಗಡೆಗೊಳಿಸಿದ ಟಯರ್ ತಯಾರಕ ಕಂಪನಿ

ಕೋವಿಡ್ -19 ಹರಡದಂತೆ ತಡೆಯಲು ಭಾರತವೂ ಸೇರಿದಂತೆ ಪ್ರಪಂಚದ ಹಲವು ದೇಶಗಳಲ್ಲಿ ಲಾಕ್ ಡೌನ್ ಜಾರಿಗೊಳಿಸಲಾಗಿತ್ತು. ಲಾಕ್ ಡೌನ್ ನಿಂದಾಗಿ ಬಹುತೇಕ ಕಂಪನಿಗಳು ನಷ್ಟದ ಸುಳಿಗೆ ಸಿಲುಕಿ ಮುಚ್ಚಲ್ಪಟ್ಟಿವು. ಇನ್ನು ಕೆಲವು ಕಂಪನಿಗಳು ವೆಚ್ಚ ಕಡಿತವೆಂದು ನೌಕರರನ್ನು ಕೆಲಸದಿಂದ ವಜಾಗೊಳಿಸಿದವು. ಆದರೆ ಕರೋನಾ ವೈರಸ್ ನಿಂದಾಗಿ ವೈಯಕ್ತಿಕ ರಕ್ಷಣಾ ಸಾಧನಗಳಿಗೆ ಬೇಡಿಕೆಯ ಹೆಚ್ಛಾಗಿದೆ. ಈ ಕಾರಣಕ್ಕೆ ಅವುಗಳನ್ನು ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸಲಾಗುತ್ತಿದೆ.

ಎಸ್ 95 ಫೇಸ್‌ಮಾಸ್ಕ್ ಬಿಡುಗಡೆಗೊಳಿಸಿದ ಟಯರ್ ತಯಾರಕ ಕಂಪನಿ

ಈಗ ಖ್ಯಾತ ಟಯರ್ ತಯಾರಕ ಕಂಪನಿಯಾದ ಸಿಯೆಟ್ ಟಯರ್ಸ್ ಸಹ ವೈಯಕ್ತಿಕ ರಕ್ಷಣಾ ಸಾಧನಗಳ ತಯಾರಿಕೆಯಲ್ಲಿ ತೊಡಗಿದೆ. ಕಂಪನಿಯು ಇತ್ತೀಚೆಗೆ ತಾನು ಉತ್ಪಾದಿಸಿರುವ ಪಿಪಿಇ ಕಿಟ್‌ ಹಾಗೂ ಎಸ್ 95 ಫೇಸ್ ಮಾಸ್ಕ್‌ಗಳ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಹಾಗೂ ಮಾರಾಟದ ಉದ್ದೇಶದಿಂದ ಶೇರ್ ಮಾಡಿದೆ.

MOSTREAD: ಕರೋನಾ ವೈರಸ್ ಎಫೆಕ್ಟ್: ಕಾರಿಗೂ ಬಂತು ಪೋರ್ಟಬಲ್ ಟಾಯ್ಲೆಟ್

ಎಸ್ 95 ಫೇಸ್‌ಮಾಸ್ಕ್ ಬಿಡುಗಡೆಗೊಳಿಸಿದ ಟಯರ್ ತಯಾರಕ ಕಂಪನಿ

ಸಿಯೆಟ್ ಕಂಪನಿಯು ಅಭಿವೃದ್ದಿಪಡಿಸಿರುವ ಗೋಸೆಫ್ ಎಸ್ 95 ಮಾಸ್ಕ್ ಬೆಲೆ ರೂ.295ಗಳಾಗಿದೆ. ಈ ಮಾಸ್ಕ್ ಗಳನ್ನು ಸ್ವಚ್ವಗೊಳಿಸಿದ ನಂತರ ಈ ಮರುಬಳಕೆ ಮಾಡಬಹುದೆಂದು ಕಂಪನಿ ಹೇಳಿದೆ. ಇದನ್ನು 30 ಬಾರಿ ಸ್ವಚ್ವಗೊಳಿಸಿ, ಬಳಸಬಹುದು.

ಎಸ್ 95 ಫೇಸ್‌ಮಾಸ್ಕ್ ಬಿಡುಗಡೆಗೊಳಿಸಿದ ಟಯರ್ ತಯಾರಕ ಕಂಪನಿ

ಎಸ್ 95 ಆರು ಲೇಯರ್ ಗಳ ಏರ್ ಫಿಲ್ಟರ್ ಹೊಂದಿದೆ. ಈ ಮಾಸ್ಕ್ ನಲ್ಲಿರುವ ಒಳಗಿನ ಪದರವು ಬ್ಯಾಕ್ಟೀರಿಯಾ ವಿರೋಧಿ ಫಿಲ್ಟರ್‌ಗಳನ್ನು ಬಳಸುತ್ತದೆ. ಮುಂದಿನ ಮೂರು ಲೇಯರ್ ಗಳು ಸಣ್ಣ ಕಾರ್ನರ್ ಗಳನ್ನು ತುಂಬಲು ಬಟ್ಟೆಯ ಪದರವನ್ನು ಹೊಂದಿವೆ.

MOST READ:ಪೊಲೀಸರಿಗೆ ತಲೆ ನೋವು ತಂದಿಟ್ಟ ಸೀಜ್ ಆದ ವಾಹನಗಳು

ಎಸ್ 95 ಫೇಸ್‌ಮಾಸ್ಕ್ ಬಿಡುಗಡೆಗೊಳಿಸಿದ ಟಯರ್ ತಯಾರಕ ಕಂಪನಿ

ನೋಸ್ ಕ್ಲಿಪ್ ಅನ್ನು ಮಾಸ್ಕ್ ನಲ್ಲಿರಿಸಿರುವುದರಿಂದ ಅದು ಮೂಗಿನ ಸುತ್ತಲೂ ಸರಿಯಾಗಿ ಕುಳಿತುಕೊಳ್ಳುತ್ತದೆ. ಮಾಸ್ಕ್ ನೊಂದಿಗೆ ಮಲ್ಟಿ ಯುಟಿಲಿಟಿ ಬ್ಯಾಗ್ ಸಹ ನೀಡಲಾಗುತ್ತದೆ. ಮಾಸ್ಕ್ ಗಳನ್ನು ಬಳಸದೇ ಇದ್ದಾಗ ಈ ಬ್ಯಾಗ್ ನಲ್ಲಿಟ್ಟುಕೊಳ್ಳಬಹುದು.

ಎಸ್ 95 ಫೇಸ್‌ಮಾಸ್ಕ್ ಬಿಡುಗಡೆಗೊಳಿಸಿದ ಟಯರ್ ತಯಾರಕ ಕಂಪನಿ

ಫ್ಲಿಪ್‌ಕಾರ್ಟ್, ಅಮೆಜಾನ್, ಮೈಂತ್ರಾದಂತಹ ಆನ್‌ಲೈನ್ ಶಾಪಿಂಗ್ ಸೈಟ್‌ಗಳಿಂದ ಗ್ರಾಹಕರು ಎಸ್ 95 ಫೇಸ್ ಮಾಸ್ಕ್ ಗಳನ್ನು ಖರೀದಿಸಬಹುದೆಂದು ಕಂಪನಿ ಹೇಳಿದೆ. ಮೂಲಗಳ ಪ್ರಕಾರ, ಕಂಪನಿಯು ಶೀಘ್ರದಲ್ಲೇ ಕೋವಿಡ್ -19 ಫೇಸ್ ಶೀಲ್ಡ್, ಗ್ಲೌಸ್ ಹಾಗೂ ಫುಲ್ ಸೂಟ್ ಗಳನ್ನು ಸಹ ಬಿಡುಗಡೆಗೊಳಿಸಲಿದೆ.

Most Read Articles

Kannada
English summary
Ceat Tyres introduces S 95 face-mask. Read in Kannada.
Story first published: Thursday, July 9, 2020, 18:16 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X