ಟ್ರಕ್‌ಗಳಿಗೆ ಸ್ಯಾನಿಟೈಜರ್ ಸಿಂಪಡಿಸಲಿದೆ ಖ್ಯಾತ ಟಯರ್ ಕಂಪನಿ

ಕರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ಹಲವು ವಾಹನ ತಯಾರಕ ಕಂಪನಿಗಳು ಸರ್ಕಾರದ ಜೊತೆಗೆ ಕೈಜೋಡಿಸಿವೆ. ತಮ್ಮದೇ ಆದ ರೀತಿಯಲ್ಲಿ ಸಹಾಯ ಮಾಡುತ್ತಿವೆ. ಕೆಲ ಕಂಪನಿಗಳು ಧನ ಸಹಾಯ ಮಾಡುತ್ತಿವೆ. ಇನ್ನೂ ಕೆಲವು ಕಂಪನಿಗಳು ವೆಂಟಿಲೇಟರ್ ತಯಾರಿಕೆಗೆ ಮುಂದಾಗಿವೆ.

ಟ್ರಕ್‌ಗಳಿಗೆ ಸ್ಯಾನಿಟೈಜರ್ ಸಿಂಪಡಿಸಲಿದೆ ಖ್ಯಾತ ಟಯರ್ ಕಂಪನಿ

ಈಗ ಖ್ಯಾತ ಟಯರ್ ತಯಾರಕ ಕಂಪನಿಯಾದ ಸಿಯೆಟ್ ಸಹ ಕರೋನಾ ವಿರುದ್ಧದ ಹೋರಾಟದಲ್ಲಿ ಕೈಜೋಡಿಸಿದೆ. ಸಿಯೆಟ್ ಟಯರ್ಸ್ ಮುಂಬೈಯಲ್ಲಿ ಅಗತ್ಯ ವಸ್ತುಗಳನ್ನು ಸರಬರಾಜು ಮಾಡುತ್ತಿರುವ ಟ್ರಕ್‌ಗಳನ್ನು ಸ್ವಚ್ವಗೊಳಿಸುತ್ತಿದೆ. ಇದಕ್ಕಾಗಿ ಸಿಯೆಟ್ ಕಂಪನಿಯು ಆಲ್ ಇಂಡಿಯಾ ಟ್ರಕ್ ವರ್ಕರ್ಸ್ ಅಸೋಸಿಯೇಷನ್ ​​(ಎಐಟಿಡಬ್ಲ್ಯೂಎ)ಹಾಗೂ ವೆಸ್ಟರ್ನ್ ಯೂನಿಯನ್ ಎಲ್ಪಿಜಿ ಅಸೋಸಿಯೇಶನ್ (ವುಲಾ)ನೊಂದಿಗೆ ಪಾಲುದಾರಿಕೆ ಮಾಡಿಕೊಂಡಿದೆ.

ಟ್ರಕ್‌ಗಳಿಗೆ ಸ್ಯಾನಿಟೈಜರ್ ಸಿಂಪಡಿಸಲಿದೆ ಖ್ಯಾತ ಟಯರ್ ಕಂಪನಿ

ಮುಂಬೈನ ನ್ಹಾವಾ ಶೆವಾ, ಮಾಹುಲ್, ಜಸೈ ಹಾಗೂ ವಿಮಾನ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶಗಳ ಟ್ರಕ್ ಲೋಡಿಂಗ್ ಪಾಯಿಂಟ್‌ಗಳಲ್ಲಿರುವ ಟ್ರಕ್‌ಗಳನ್ನು ಕಂಪನಿಯು ಸ್ವಚ್ವಗೊಳಿಸುತ್ತಿದೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಟ್ರಕ್‌ಗಳಿಗೆ ಸ್ಯಾನಿಟೈಜರ್ ಸಿಂಪಡಿಸಲಿದೆ ಖ್ಯಾತ ಟಯರ್ ಕಂಪನಿ

ಈ ನೈರ್ಮಲ್ಯ ಅಭಿಯಾನದಲ್ಲಿ, ಸಿಯೆಟ್ ಕಂಪನಿಯು ಟ್ರಕ್‌ಗಳ ಕ್ಯಾಬಿನ್‌ಗಳನ್ನು ಸ್ವಚ್ವಗೊಳಿಸುತ್ತಿದೆ. ಇದರ ಜೊತೆಗೆ ಮಾಸ್ಕ್‌ಗಳನ್ನು ಚಾಲಕರಿಗೆ ಹಾಗೂ ಸಹಾಯಕರಿಗೆ ನೀಡುತ್ತಿದೆ.

ಟ್ರಕ್‌ಗಳಿಗೆ ಸ್ಯಾನಿಟೈಜರ್ ಸಿಂಪಡಿಸಲಿದೆ ಖ್ಯಾತ ಟಯರ್ ಕಂಪನಿ

ಸಿಯೆಟ್ ಕಂಪನಿಯು ಇದುವರೆಗೂ 1000 ಟ್ರಕ್‌ಗಳನ್ನು ನೈರ್ಮಲ್ಯ ಅಭಿಯಾನದಡಿಯಲ್ಲಿ ಸ್ವಚ್ವಗೊಳಿಸಿದೆ. ಏಪ್ರಿಲ್ 19ರೊಳಗೆ ಇನ್ನೂ 1000 ಟ್ರಕ್‌ಗಳನ್ನು ಸ್ವಚ್ವಗೊಳಿಸುವ ಗುರಿಯನ್ನು ಹೊಂದಿದೆ.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಟ್ರಕ್‌ಗಳಿಗೆ ಸ್ಯಾನಿಟೈಜರ್ ಸಿಂಪಡಿಸಲಿದೆ ಖ್ಯಾತ ಟಯರ್ ಕಂಪನಿ

ಲಾಕ್‌ಡೌನ್ ಸಮಯದಲ್ಲಿ ಅಗತ್ಯವಿರುವವರಿಗೆ ಸಹಾಯ ಮಾಡಲು ಕಂಪನಿಯು ಅಗತ್ಯ ಸಾಮಗ್ರಿಗಳು ಹಾಗೂ ಆಹಾರ ಪ್ಯಾಕೆಟ್‌ಗಳನ್ನು ವಿತರಿಸುತ್ತಿದೆ.

ಟ್ರಕ್‌ಗಳಿಗೆ ಸ್ಯಾನಿಟೈಜರ್ ಸಿಂಪಡಿಸಲಿದೆ ಖ್ಯಾತ ಟಯರ್ ಕಂಪನಿ

ಮುಂಬೈ, ನಾಸಿಕ್, ಚೆನ್ನೈ, ವಡೋದರಾ, ಜೈಪುರದಂತಹ ನಗರಗಳಲ್ಲಿ ಕಂಪನಿಯು ಈವರೆಗೆ 68,500 ಕ್ಕೂ ಹೆಚ್ಚು ಆಹಾರ ಪ್ಯಾಕೆಟ್‌ಗಳನ್ನು ವಿತರಿಸಿದೆ. ಕಂಪನಿಯು ಪ್ರತಿದಿನ 5,800 ತಾಜಾ ಆಹಾರ ಪ್ಯಾಕೆಟ್‌ಗಳನ್ನು ವಿತರಿಸುತ್ತಿದೆ.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಟ್ರಕ್‌ಗಳಿಗೆ ಸ್ಯಾನಿಟೈಜರ್ ಸಿಂಪಡಿಸಲಿದೆ ಖ್ಯಾತ ಟಯರ್ ಕಂಪನಿ

ಸಿಯೆಟ್ ಟಯರ್ಸ್ ಲಿಮಿಟೆಡ್‌ನ ಸಿಇಒ ಅರ್ನಾಬ್ ಬ್ಯಾನರ್ಜಿರವರು ಮಾತನಾಡಿ ಈ ಸಂಕಷ್ಟದ ಸಮಯದಲ್ಲಿ ಕಂಪನಿಯು ಸರ್ಕಾರದ ಹಾಗೂ ದೇಶದ ಜನರ ಜೊತೆಗೆ ನಿಲ್ಲಲಿದೆ ಎಂದು ಹೇಳಿದ್ದಾರೆ. ಲಾಕ್‌ಡೌನ್ ಅವಧಿಯಲ್ಲಿ ಊರಿಗೆ ಹಿಂದಿರುಗಲಾರದೇ ಸಿಕ್ಕಿಬಿದ್ದವರ ಸಹಾಯಕ್ಕಾಗಿ ಸಿಯೆಟ್ ಕಂಪನಿಯ ಕರೋನಾ ವಾರಿಯರ್ಸ್ ಸನ್ನದ್ಧವಾಗಿದೆ.

Most Read Articles

Kannada
English summary
Ceat Tyres Sanitizes 811 trucks delivering goods. Read in Kannada.
Story first published: Thursday, April 16, 2020, 16:33 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X