ಆಟೋಮೊಬೈಲ್ ಉದ್ಯಮಕ್ಕೆ ವರವಾದ ಕೇಂದ್ರ ಸರ್ಕಾರದ ನಿರ್ಧಾರ

ಇಂದು ನಡೆದ ಕೇಂದ್ರ ಸರ್ಕಾರದ ಕ್ಯಾಬಿನೆಟ್ ಸಭೆಯಲ್ಲಿ 10 ಪ್ರಮುಖ ಕ್ಷೇತ್ರಗಳ ಉತ್ಪಾದನೆ ಸಂಬಂಧಿತ ಹೂಡಿಕೆ (ಪಿಎಲ್ಐ) ಯೋಜನೆಗೆ ರೂ.1.46 ಲಕ್ಷ ಕೋಟಿಗಳ ಅನುಮೋದನೆ ನೀಡಲಾಗಿದೆ.

ಆಟೋಮೊಬೈಲ್ ಉದ್ಯಮಕ್ಕೆ ವರವಾದ ಕೇಂದ್ರ ಸರ್ಕಾರದ ನಿರ್ಧಾರ

ಈ ಯೋಜನೆಯಿಂದಾಗಿ ಭಾರತದ ವಾಹನ ಉದ್ಯಮ ಹಾಗೂ ಬಿಡಿಭಾಗಗಳ ತಯಾರಕರು ಹೆಚ್ಚು ಲಾಭ ಪಡೆಯಲಿದ್ದಾರೆ. ಕೇಂದ್ರ ಸರ್ಕಾರದ ಪ್ರೋತ್ಸಾಹಕ ಯೋಜನೆಗೆ ಭಾರತೀಯ ಆಟೋಮೊಬೈಲ್ ಅಸೋಸಿಯೇಷನ್ ​​(ಎಫ್‌ಎಡಿಎ) ಬೆಂಬಲ ನೀಡಿದೆ. ಪ್ರೋತ್ಸಾಹಕ ಯೋಜನೆಯನ್ನು ಫಾಡಾ ಸ್ವಾಗತಿಸಿದ್ದು, ಈ ಯೋಜನೆಯಿಂದ ಭಾರತೀಯ ಆಟೋಮೊಬೈಲ್ ಉದ್ಯಮವು ಹೆಚ್ಚಿನ ಲಾಭ ಪಡೆಯಲಿದೆ ಎಂದು ಹೇಳಿದೆ.

ಆಟೋಮೊಬೈಲ್ ಉದ್ಯಮಕ್ಕೆ ವರವಾದ ಕೇಂದ್ರ ಸರ್ಕಾರದ ನಿರ್ಧಾರ

ಮುಂದಿನ ಐದು ವರ್ಷಗಳಲ್ಲಿ ಆಟೋಮೊಬೈಲ್ ಉದ್ಯಮಕ್ಕೆ ರೂ.57,042 ಕೋಟಿಗಳ ನೆರವು ದೊರೆಯಲಿದೆ ಎಂದು ಫಾಡಾ ಹೇಳಿದೆ. ಭಾರತದ ಕೈಗಾರಿಕೆಗಳ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವ ಹಾಗೂ ಜಾಗತಿಕವಾಗಿ ಉತ್ಪನ್ನಗಳನ್ನು ಸುಧಾರಿಸುವ ಉದ್ದೇಶದಿಂದ ಈ ಯೋಜನೆಯನ್ನು ಪರಿಚಯಿಸಲಾಗಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಆಟೋಮೊಬೈಲ್ ಉದ್ಯಮಕ್ಕೆ ವರವಾದ ಕೇಂದ್ರ ಸರ್ಕಾರದ ನಿರ್ಧಾರ

ಈ ಯೋಜನೆಯು ಭಾರತದ ಕಂಪನಿಗಳನ್ನು ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸುವಂತೆ ಮಾಡಲಿದೆ. ಜೊತೆಗೆ ರಫ್ತು ಹೆಚ್ಚಿಸಲು ಸಹಾಯ ಮಾಡಲಿದೆ. ಈ ಯೋಜನೆಯನ್ನು ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಹಾಗೂ ಮಾಹಿತಿ ಮತ್ತು ಪ್ರಸಾರ ಸಚಿವರಾದ ಪ್ರಕಾಶ್ ಜಾವೇಡ್ಕರ್ ಅವರು ಸಂಪುಟ ಸಭೆಯಲ್ಲಿ ಪ್ರಕಟಿಸಿದ್ದಾರೆ.

ಆಟೋಮೊಬೈಲ್ ಉದ್ಯಮಕ್ಕೆ ವರವಾದ ಕೇಂದ್ರ ಸರ್ಕಾರದ ನಿರ್ಧಾರ

ಕಳೆದ ಕೆಲ ವರ್ಷಗಳಿಂದ ಆಟೋಮೊಬೈಲ್ ವಲಯವು ಮಾರಾಟದಲ್ಲಿ ಕುಸಿತ ಸೇರಿಂದತೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಕೆಲವು ತಿಂಗಳ ಹಿಂದೆ ಜಾರಿಯಾದ ಲಾಕ್‌ಡೌನ್ ಈ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಆಟೋಮೊಬೈಲ್ ಉದ್ಯಮಕ್ಕೆ ವರವಾದ ಕೇಂದ್ರ ಸರ್ಕಾರದ ನಿರ್ಧಾರ

ಮಾರ್ಚ್ ನಂತರ ಸತತ ಮೂರು ತಿಂಗಳವರೆಗೆ ಆಟೋಮೊಬೈಲ್ ಕಂಪನಿಗಳು ಶೂನ್ಯ ಮಾರಾಟವನ್ನು ದಾಖಲಿಸಿದ್ದವು. ಲಾಕ್‌ಡೌನ್ ತೆರವುಗೊಂಡ ನಂತರ ಆಟೋಮೊಬೈಲ್ ಶೋರೂಂಗಳು ತೆರೆದು, ವಾಹನ ಮಾರಾಟವು ಸಹಜ ಸ್ಥಿತಿಯನ್ನು ತಲುಪಿದೆ.

ಆಟೋಮೊಬೈಲ್ ಉದ್ಯಮಕ್ಕೆ ವರವಾದ ಕೇಂದ್ರ ಸರ್ಕಾರದ ನಿರ್ಧಾರ

ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಿನಲ್ಲಿ ಹೆಚ್ಚಾದ ವಾಹನಗಳ ಮಾರಾಟ ಇದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ. ಬಹುತೇಕ ಎಲ್ಲಾ ವಾಹನ ತಯಾರಕ ಕಂಪನಿಗಳು 2019ರ ಅಕ್ಟೋಬರ್ ತಿಂಗಳಿಗಿಂತ ಈ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ಹೆಚ್ಚು ಮಾರಾಟವನ್ನು ದಾಖಲಿಸಿವೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಆಟೋಮೊಬೈಲ್ ಉದ್ಯಮಕ್ಕೆ ವರವಾದ ಕೇಂದ್ರ ಸರ್ಕಾರದ ನಿರ್ಧಾರ

ಲಾಕ್‌ಡೌನ್ ತೆರವುಗೊಂಡ ನಂತರ ಉತ್ಪಾದನಾ ಘಟಕಗಳು ಉತ್ಪಾದನಾ ಕಾರ್ಯವನ್ನು ಪುನರಾರಂಭಿಸಿವೆ. ಇದರಿಂದಾಗಿ ಬೇಡಿಕೆಗೆ ಅನುಗುಣವಾಗಿ ಉತ್ಪಾದನೆಯೂ ಹೆಚ್ಚಾಗುತ್ತಿದೆ. ಆದರೆ ಸುಮಾರು 120 ದಿನಗಳ ಲಾಕ್‌ಡೌನ್ ನಿಂದಾಗಿ ದೇಶದ ಆರ್ಥಿಕತೆ ಕುಸಿದಿದೆ.

ಆಟೋಮೊಬೈಲ್ ಉದ್ಯಮಕ್ಕೆ ವರವಾದ ಕೇಂದ್ರ ಸರ್ಕಾರದ ನಿರ್ಧಾರ

ಈ ಹಿನ್ನೆಲೆಯಲ್ಲಿ ಕೈಗಾರಿಕೆಗಳ ಅಭಿವೃದ್ಧಿಯತ್ತ ಕೇಂದ್ರ ಸರ್ಕಾರವು ಗಮನ ಹರಿಸಿದ್ದು ಈ ಯೋಜನೆಯನ್ನು ಘೋಷಿಸಿದೆ. ಈ ಯೋಜನೆಯಿಂದಾಗಿ ವಾಹನ ಹಾಗೂ ಬಿಡಿಭಾಗಗಳ ತಯಾರಕರಿಗೆ ಸಾಕಷ್ಟು ಪ್ರಯೋಜನವಾಗಲಿದೆ.

Most Read Articles

Kannada
English summary
Central cabinet gives big relief for automobile sector. Read in Kannada.
Story first published: Thursday, November 12, 2020, 18:29 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X