ಹೊಸ ಪ್ರವಾಸಿ ನಿಯಮ ಜಾರಿಗೆ ಮುಂದಾದ ಕೇಂದ್ರ ಸರ್ಕಾರ

ಭಾರತದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು, ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಇಲಾಖೆಯು ರಾಷ್ಟ್ರೀಯ ಪರವಾನಗಿ ಯೋಜನೆಯನ್ನು ಜಾರಿಗೊಳಿಸುವ ಚಿಂತನೆಯಲ್ಲಿದೆ. ಈ ಯೋಜನೆಯನ್ನು ಕೇಂದ್ರ ಮೋಟಾರು ವಾಹನ ಕಾಯ್ದೆ 1989ರ ಅಡಿಯಲ್ಲಿ ಜಾರಿಗೊಳಿಸಲಾಗುವುದು.

ಹೊಸ ಪ್ರವಾಸಿ ನಿಯಮ ಜಾರಿಗೆ ಮುಂದಾದ ಕೇಂದ್ರ ಸರ್ಕಾರ

ಮಾಹಿತಿಯ ಪ್ರಕಾರ, ರಾಷ್ಟ್ರೀಯ ಪರವಾನಗಿ ವ್ಯವಸ್ಥೆಯಡಿ ಕಾರ್ಗೋ ವಾಹನಗಳು ಯಶಸ್ಸು ಕಂಡ ನಂತರ, ಟೂರಿಸ್ಟ್ ವಾಹನಗಳಿಗೂ ಸಹ ಈ ವ್ಯವಸ್ಥೆಯಲ್ಲಿ ದೇಶಾದ್ಯಂತ ಪ್ರಯಾಣಿಸಲು ಅವಕಾಶ ನೀಡಲು ಕೇಂದ್ರ ಸರ್ಕಾರವು ಮುಂದಾಗಿದೆ. ಇದರಿಂದಾಗಿ ಭಾರತದಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಉತ್ತೇಜನ ಸಿಗಲಿದೆ ಎಂಬುದು ಸರ್ಕಾರದ ಅಭಿಪ್ರಾಯವಾಗಿದೆ.

ಹೊಸ ಪ್ರವಾಸಿ ನಿಯಮ ಜಾರಿಗೆ ಮುಂದಾದ ಕೇಂದ್ರ ಸರ್ಕಾರ

ಸಾರ್ವಜನಿಕರಿಗಾಗಿ 2020ರ ಅಖಿಲ ಭಾರತ ಪ್ರವಾಸಿ ವಾಹನ ಪ್ರಾಧಿಕಾರ ಹಾಗೂ ಪರವಾನಗಿ ನಿಯಮವನ್ನು ಜುಲೈ 1ರಂದು ಜಿಎಸ್ಆರ್ 425 (ಇ) ನಲ್ಲಿ ದಾಖಲಿಸಿ, ಪ್ರಕಟಿಸಲಾಗಿದೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಹೊಸ ಪ್ರವಾಸಿ ನಿಯಮ ಜಾರಿಗೆ ಮುಂದಾದ ಕೇಂದ್ರ ಸರ್ಕಾರ

39ನೇ ಸಾರಿಗೆ ಅಭಿವೃದ್ಧಿ ಮಂಡಳಿ ಸಭೆಯಲ್ಲಿ ಈ ವಿಷಯದ ಬಗ್ಗೆ ಚರ್ಚೆ ನಡೆಸಲಾಗಿದೆ. ಹೊಸ ಪರವಾನಗಿ ನಿಯಮದಡಿಯಲ್ಲಿ ಯಾವುದೇ ಟೂರಿಸ್ಟ್ ವೆಹಿಕಲ್ ಆಪರೇಟರ್ ಗಳು ಆನ್‌ಲೈನ್ ಮೂಲಕ ಅಖಿಲ ಭಾರತ ಪ್ರವಾಸಿ ಪರವಾನಗಿಗೆ ಅರ್ಜಿ ಸಲ್ಲಿಸಬಹುದು.

ಹೊಸ ಪ್ರವಾಸಿ ನಿಯಮ ಜಾರಿಗೆ ಮುಂದಾದ ಕೇಂದ್ರ ಸರ್ಕಾರ

ಅರ್ಜಿ ಸಲ್ಲಿಸಿದ ನಂತರ ಈ ವ್ಯವಸ್ಥೆಯಲ್ಲಿನ ನಿಯಮಗಳ ಪ್ರಕಾರ ಅಗತ್ಯವಿರುವ ಎಲ್ಲಾ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತದೆ. ನಂತರ ಸಂಬಂಧಪಟ್ಟ ಪರವಾನಗಿಯನ್ನು ನೀಡಲಾಗುತ್ತದೆ. ಅರ್ಜಿಯನ್ನು ಸಲ್ಲಿಸಿದ 30 ದಿನಗಳ ಒಳಗೆ ರಾಷ್ಟ್ರವ್ಯಾಪಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಹೊಸ ಪ್ರವಾಸಿ ನಿಯಮ ಜಾರಿಗೆ ಮುಂದಾದ ಕೇಂದ್ರ ಸರ್ಕಾರ

ಈ ಯೋಜನೆಯಿಂದ ಟೂರಿಸ್ಟ್ ಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ಈ ಪರವಾನಗಿಯನ್ನು ಮೂರು ತಿಂಗಳ ಮಟ್ಟಿಗೆ ಅಥವಾ ಆರು ತಿಂಗಳ ಮಟ್ಟಿಗೆ ನೀಡಲಾಗುತ್ತದೆ. ಆದರೆ ಈ ಪರವಾನಗಿಯ ಅವಧಿಯು ಮೂರು ವರ್ಷಗಳನ್ನು ಮೀರುವಂತಿಲ್ಲ ಎಂಬುದನ್ನು ಗಮನಿಸಬೇಕು.

ಹೊಸ ಪ್ರವಾಸಿ ನಿಯಮ ಜಾರಿಗೆ ಮುಂದಾದ ಕೇಂದ್ರ ಸರ್ಕಾರ

ಟೂರಿಸ್ಟ್ ಗಳು ಯಾವುದೇ ಪ್ರದೇಶದಲ್ಲಿ ಸೀಮಿತ ಅವಧಿವರೆಗೆ ಮಾತ್ರ ಇರುತ್ತಾರೆ. ಇಂತಹ ಪ್ರದೇಶಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರವು ಈ ಯೋಜನೆಯನ್ನು ಜಾರಿಗೊಳಿಸುತ್ತಿದೆ. ಈ ಯೋಜನೆಯಿಂದಾಗಿ ಸೀಮಿತ ಹಣಕಾಸಿನ ವಹಿವಾಟು ಹೊಂದಿರುವ ಆಪರೇಟರ್ ಗಳಿಗೆ ನೆರವಾಗಲಿದೆ.

Most Read Articles

Kannada
English summary
Central Government to introduce new all India tourist permit rules. Read in Kannada.
Story first published: Saturday, July 4, 2020, 10:38 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X