ಹತ್ತು ಸಾವಿರ ಕೋಟಿ ವೆಚ್ಚದಲ್ಲಿ ತಲೆ ಎತ್ತಲಿವೆ ಒಂದು ಸಾವಿರ ಎಲ್‌ಎನ್‌ಜಿ ಕೇಂದ್ರಗಳು

ಮುಂದಿನ 3 ವರ್ಷಗಳಲ್ಲಿ ಕೇಂದ್ರ ಸರ್ಕಾರವು ಲಿಕ್ವಿಡ್ ನ್ಯಾಚುರಲ್ ಗ್ಯಾಸ್ (ಎಲ್‌ಎನ್‌ಜಿ) ಕೇಂದ್ರಗಳಿಗಾಗಿ ರೂ.10,000 ಕೋಟಿ ಹೂಡಿಕೆ ಮಾಡುವುದಾಗಿ ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ತಿಳಿಸಿದ್ದಾರೆ.

ಹತ್ತು ಸಾವಿರ ಕೋಟಿ ವೆಚ್ಚದಲ್ಲಿ ತಲೆ ಎತ್ತಲಿವೆ ಒಂದು ಸಾವಿರ ಎಲ್‌ಎನ್‌ಜಿ ಕೇಂದ್ರಗಳು

ಎಲ್‌ಎನ್‌ಜಿ, ಪೆಟ್ರೋಲಿಯಂ ಉತ್ಪನ್ನಗಳಿಗಿಂತ ಹೆಚ್ಚಿನ ಶಕ್ತಿಯನ್ನು ಒದಗಿಸುವುದರ ಜೊತೆಗೆ ವಾಹನಗಳಿಗೆ ಹೆಚ್ಚಿನ ಮೈಲೇಜ್ ನೀಡುತ್ತದೆ. ಇದರ ಜೊತೆಗೆ ಎಲ್‌ಎನ್‌ಜಿ, ಡೀಸೆಲ್ ಗಿಂತ 30% - 40%ನಷ್ಟು ಕಡಿಮೆ ಮಾಲಿನ್ಯವನ್ನು ಹೊರಸೂಸುತ್ತದೆ.

ಹತ್ತು ಸಾವಿರ ಕೋಟಿ ವೆಚ್ಚದಲ್ಲಿ ತಲೆ ಎತ್ತಲಿವೆ ಒಂದು ಸಾವಿರ ಎಲ್‌ಎನ್‌ಜಿ ಕೇಂದ್ರಗಳು

ಎಲ್‌ಎನ್‌ಜಿಯ ಬೆಲೆ ಡೀಸೆಲ್‌ ಬೆಲೆಗಿಂತ 40%ನಷ್ಟು ಕಡಿಮೆಯಾಗಿದೆ ಎಂದು ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ. ವಾಹನಗಳ ಪ್ಯೂಯಲ್ ಟ್ಯಾಂಕ್ ಗಳಲ್ಲಿ ಎಲ್‌ಎನ್‌ಜಿಯನ್ನು ಪೂರ್ತಿಯಾಗಿ ಭರ್ತಿ ಮಾಡಿದರೆ 500 ಕಿ.ಮೀನಿಂದ 600 ಕಿ.ಮೀಗಳವರೆಗೆ ಚಲಿಸಬಹುದು.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಹತ್ತು ಸಾವಿರ ಕೋಟಿ ವೆಚ್ಚದಲ್ಲಿ ತಲೆ ಎತ್ತಲಿವೆ ಒಂದು ಸಾವಿರ ಎಲ್‌ಎನ್‌ಜಿ ಕೇಂದ್ರಗಳು

ಸಾಮಾನ್ಯವಾಗಿ ಕ್ಯಾಬ್ ಹಾಗೂ ಆಟೋ, ಟ್ಯಾಕ್ಸಿಗಳನ್ನು ಸಿಎನ್‌ಜಿ ಹಾಗೂ ಎಲ್‌ಪಿಜಿಗಳಿಂದ ಚಾಲನೆ ಮಾಡಲಾಗುತ್ತದೆ. ಎಲ್‌ಎನ್‌ಜಿಯಿಂದ ಟ್ರಕ್‌, ಬಸ್‌, ನಿರ್ಮಾಣ ಯಂತ್ರೋಪಕರಣ ಹಾಗೂ ರೈಲು ಎಂಜಿನ್‌ಗಳನ್ನು ಸಹ ಚಾಲನೆ ಮಾಡಬಹುದು.

ಹತ್ತು ಸಾವಿರ ಕೋಟಿ ವೆಚ್ಚದಲ್ಲಿ ತಲೆ ಎತ್ತಲಿವೆ ಒಂದು ಸಾವಿರ ಎಲ್‌ಎನ್‌ಜಿ ಕೇಂದ್ರಗಳು

ಎಲ್‌ಎನ್‌ಜಿಯ ಅನುಕೂಲಗಳ ಬಗ್ಗೆ ತಿಳಿಸಿದ ಧರ್ಮೇಂದ್ರ ಪ್ರಧಾನ್, ದೇಶದಲ್ಲಿ ಹಂತ ಹಂತವಾಗಿ ಎಲ್‌ಎನ್‌ಜಿ ಕೇಂದ್ರಗಳನ್ನು ಕೇಂದ್ರ ಸರ್ಕಾರವು ನಿರ್ಮಿಸಲಿದೆ ಎಂದು ಹೇಳಿದರು. ಮೊದಲ ಹಂತದಲ್ಲಿ 50 ಎಲ್‌ಎನ್‌ಜಿ ಕೇಂದ್ರಗಳನ್ನು ಸ್ಥಾಪಿಸಲಾಗುವುದು.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಹತ್ತು ಸಾವಿರ ಕೋಟಿ ವೆಚ್ಚದಲ್ಲಿ ತಲೆ ಎತ್ತಲಿವೆ ಒಂದು ಸಾವಿರ ಎಲ್‌ಎನ್‌ಜಿ ಕೇಂದ್ರಗಳು

ಮುಂದಿನ 3 ವರ್ಷಗಳಲ್ಲಿ 1,000 ಎಲ್‌ಎನ್‌ಜಿ ಕೇಂದ್ರಗಳನ್ನು ನಿರ್ಮಿಸಲಾಗುವುದು ಎಂದು ತಿಳಿಸಿದ ಅವರು ಇದಕ್ಕಾಗಿ ರೂ.10,000 ಕೋಟಿ ವೆಚ್ಚ ಮಾಡಲಾಗುವುದು ಎಂದು ತಿಳಿಸಿದರು. ಈ ನಿಲ್ದಾಣಗಳನ್ನು ಖಾಸಗಿ ಹಾಗೂ ಸಾರ್ವಜನಿಕ ಸಹಭಾಗಿತ್ವದಲ್ಲಿ ನಿರ್ಮಿಸಲಾಗುವುದು.

ಹತ್ತು ಸಾವಿರ ಕೋಟಿ ವೆಚ್ಚದಲ್ಲಿ ತಲೆ ಎತ್ತಲಿವೆ ಒಂದು ಸಾವಿರ ಎಲ್‌ಎನ್‌ಜಿ ಕೇಂದ್ರಗಳು

ಎಲ್‌ಎನ್‌ಜಿ, ಆಟೋಮೊಬೈಲ್ ಉದ್ಯಮದಲ್ಲಿ ಕ್ರಾಂತಿಯನ್ನುಂಟು ಮಾಡುತ್ತದೆ ಎಂದು ಅವರು ಹೇಳಿದರು. ಪೆಟ್ರೋಲ್ ಹಾಗೂ ಡೀಸೆಲ್‌ಗೆ ಪರ್ಯಾಯವಾಗಿ ಎಲ್‌ಎನ್‌ಜಿಯನ್ನು ಸುಲಭವಾಗಿ ಬಳಸಬಹುದು.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಹತ್ತು ಸಾವಿರ ಕೋಟಿ ವೆಚ್ಚದಲ್ಲಿ ತಲೆ ಎತ್ತಲಿವೆ ಒಂದು ಸಾವಿರ ಎಲ್‌ಎನ್‌ಜಿ ಕೇಂದ್ರಗಳು

ದೇಶದಲ್ಲಿ 10 ಮಿಲಿಯನ್‌ಗಿಂತಲೂ ಹೆಚ್ಚು ಟ್ರಕ್‌ಗಳು ಸಂಚರಿಸುತ್ತಿವೆ. ಈ ಪೈಕಿ 1 ಲಕ್ಷ ಟ್ರಕ್‌ಗಳಲ್ಲಿ ಡೀಸೆಲ್ ಬದಲು ಡೀಸೆಲ್‌ಗಿಂತ 40%ನಷ್ಟು ಕಡಿಮೆ ಬೆಲೆಯನ್ನು ಹೊಂದಿರುವ ಎಲ್‌ಎನ್‌ಜಿ ಬಳಸಿದರೆ ಪ್ರತಿವರ್ಷ ಕೋಟ್ಯಾಂತರ ರೂಪಾಯಿಗಳನ್ನು ಉಳಿಸಬಹುದು.

ಹತ್ತು ಸಾವಿರ ಕೋಟಿ ವೆಚ್ಚದಲ್ಲಿ ತಲೆ ಎತ್ತಲಿವೆ ಒಂದು ಸಾವಿರ ಎಲ್‌ಎನ್‌ಜಿ ಕೇಂದ್ರಗಳು

ಎಲ್‌ಎನ್‌ಜಿಯನ್ನು ಇಂಧನ ರೂಪದಲ್ಲಿ ಬಳಸುವುದರಿಂದ ಕಾರ್ಬನ್ ಡೈಆಕ್ಸೈಡ್ ಹೊರಸೂಸುವಿಕೆ ಹಾಗೂ ನೈಟ್ರೊಜನ್ ಆಕ್ಸೈಡ್ ಹೊರಸೂಸುವಿಕೆ ಪ್ರಮಾಣವು 85% ನಷ್ಟು ಕಡಿಮೆಯಾಗುತ್ತದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಹತ್ತು ಸಾವಿರ ಕೋಟಿ ವೆಚ್ಚದಲ್ಲಿ ತಲೆ ಎತ್ತಲಿವೆ ಒಂದು ಸಾವಿರ ಎಲ್‌ಎನ್‌ಜಿ ಕೇಂದ್ರಗಳು

ಮೊದಲ ಹಂತದಲ್ಲಿ ದೆಹಲಿ, ಮುಂಬೈ, ಕೋಲ್ಕತಾ ಹಾಗೂ ಚೆನ್ನೈ ನಗರಗಳನ್ನು ಸಂಪರ್ಕಿಸುವ ಗೋಲ್ಡನ್ ಹೆದ್ದಾರಿಯಲ್ಲಿ 50 ಎಲ್‌ಎನ್‌ಜಿ ನಿಲ್ದಾಣಗಳನ್ನು ನಿರ್ಮಿಸಲಾಗುವುದು.

Most Read Articles

Kannada
English summary
Central government to open 1000 LNG stations in next 3 years. Read in Kannada.
Story first published: Saturday, November 21, 2020, 9:58 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X