ಬೀಟಲ್ ಕಾರನ್ನು ಎಲೆಕ್ಟ್ರಿಕ್ ವಾಹನವಾಗಿ ಬದಲಿಸಿದ ಸಿಇಆರ್‌ಸಿಎ

ದೆಹಲಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ದಿ ಸೆಂಟರ್ ಆಫ್ ಎಕ್ಸಲೆನ್ಸ್ ಫಾರ್ ರಿಸರ್ಚ್ ಆನ್ ಕ್ಲೀನ್ ಏರ್ (ಸಿಇಆರ್‌ಸಿಎ) ಎಂಬ ಹೆಸರಿನ ಶೈಕ್ಷಣಿಕ ಚಿಂತನೆ ಹಾಗೂ ಸಂಶೋಧನಾ ಕೇಂದ್ರವನ್ನು ಹೊಂದಿದೆ.

ಬೀಟಲ್ ಕಾರನ್ನು ಎಲೆಕ್ಟ್ರಿಕ್ ವಾಹನವಾಗಿ ಬದಲಿಸಿದ ಸಿಇಆರ್‌ಸಿಎ

ಈ ಕೇಂದ್ರವು 1948ರ ಮಾದರಿಯ ಬೀಟಲ್ ಕಾರನ್ನು ಎಲೆಕ್ಟ್ರಿಕ್ ಕಾರ್ ಆಗಿ ಪರಿವರ್ತಿಸಿದೆ. ಈ ಹಳೆಯ ಕಾರನ್ನು ಎಲೆಕ್ಟ್ರಿಕ್ ವಾಹನವಾಗಿ ಬದಲಿಸುವುದು ನಮ್ಮ ಯೋಜನೆಯ ಮೊದಲ ಹಂತವಾಗಿದೆ ಎಂದು ಸಿಇಆರ್‌ಸಿಎ ಹೇಳಿದೆ. ಈ ಕಾರ್ಯಕ್ರಮದಲ್ಲಿ ಹೆರಿಟೇಜ್ ಮೋಟಾರಿಂಗ್ ಕ್ಲಬ್ ಆಫ್ ಇಂಡಿಯಾದ ಅನೇಕ ಸದಸ್ಯರು ಭಾಗವಹಿಸಿದ್ದರು.

ಬೀಟಲ್ ಕಾರನ್ನು ಎಲೆಕ್ಟ್ರಿಕ್ ವಾಹನವಾಗಿ ಬದಲಿಸಿದ ಸಿಇಆರ್‌ಸಿಎ

ಈ ಕಾರ್ಯಕ್ರಮದಲ್ಲಿ ಮಾತನಾಡಿದ ಐಐಟಿ ದೆಹಲಿಯ ನಿರ್ದೇಶಕರಾದ ಪ್ರೊ. ವಿ. ರಾಮ್‌ಗೋಪಾಲ್ ರಾವ್, ಆಟೋಮೊಬೈಲ್ ಉದ್ಯಮದಲ್ಲಿ ಇ-ಮೊಬಿಲಿಟಿಗೆ ಹೆಚ್ಚು ಆದ್ಯತೆ ನೀಡಲಾಗುತ್ತಿದ್ದು, ಇ-ಮೊಬಿಲಿಟಿಯನ್ನು ಅಳವಡಿಸಿಕೊಂಡು ಪರಿಸರವನ್ನು ಸಂರಕ್ಷಿಸುವ ಅಗತ್ಯವಿದೆ ಎಂದು ಹೇಳಿದರು.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಬೀಟಲ್ ಕಾರನ್ನು ಎಲೆಕ್ಟ್ರಿಕ್ ವಾಹನವಾಗಿ ಬದಲಿಸಿದ ಸಿಇಆರ್‌ಸಿಎ

ಕಳೆದ ಕೆಲವು ವರ್ಷಗಳಿಂದ ಭಾರತದಲ್ಲಿರುವ ಸ್ಟಾರ್ಟ್ಅಪ್ ಗಳು ಈ ಕ್ಷೇತ್ರದಲ್ಲಿ ಕ್ರಾಂತಿಯನ್ನುಂಟು ಮಾಡಿವೆ. ಈ ಸ್ಟಾರ್ಟ್ಅಪ್ ಗಳು ಬ್ಯಾಟರಿ ಟೆಕ್ನಾಲಜಿ, ವಾಹನದ ವಿಶ್ಲೇಷಣೆ ಹಾಗೂ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್'ಗಾಗಿ ವಿಶೇಷ ಕೆಲಸಗಳನ್ನು ಮಾಡುತ್ತಿವೆ ಎಂದು ಅವರು ಹೇಳಿದರು.

ಬೀಟಲ್ ಕಾರನ್ನು ಎಲೆಕ್ಟ್ರಿಕ್ ವಾಹನವಾಗಿ ಬದಲಿಸಿದ ಸಿಇಆರ್‌ಸಿಎ

ಸಿಇಆರ್‌ಸಿಎ ಸ್ಥಾಪಕರು ಹಾಗೂ ಐಐಟಿ ದೆಹಲಿಯ ಹಳೆಯ ವಿದ್ಯಾರ್ಥಿಯಾದ ಅರುಣ್ ದುಗ್ಗಲ್ ಮಾತನಾಡಿ, ಎಲೆಕ್ಟ್ರಿಕ್ ಬೀಟಲ್ ಸಾಂಕೇತಿಕವಾಗಿದ್ದು, ದೆಹಲಿ ಎನ್‌ಸಿಆರ್‌ನಲ್ಲಿ ಹೊಸ ಟೆಕ್ನಾಲಜಿಗಳನ್ನು ಬಳಸುವುದರ ಮೂಲಕ ವಾಯುಮಾಲಿನ್ಯವನ್ನು ನಿವಾರಿಸಬಹುದು ಎಂದು ಹೇಳಿದರು.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಬೀಟಲ್ ಕಾರನ್ನು ಎಲೆಕ್ಟ್ರಿಕ್ ವಾಹನವಾಗಿ ಬದಲಿಸಿದ ಸಿಇಆರ್‌ಸಿಎ

ವಾಯುಮಾಲಿನ್ಯದ ಸಮಸ್ಯೆಯನ್ನು ತಡೆಗಟ್ಟುವ ಅತ್ಯಂತ ಪರಿಣಾಮಕಾರಿ ಮಾರ್ಗವೆಂದರೆ ಎಲೆಕ್ಟ್ರಿಕ್ ವಾಹನಗಳ ಬಳಕೆ. ಎಲೆಕ್ಟ್ರಿಕ್ ವಾಹನಗಳು ಯಾವುದೇ ವಿಷಕಾರಿ ಅನಿಲವನ್ನು ಪರಿಸರಕ್ಕೆ ಬಿಡುಗಡೆ ಮಾಡದ ಕಾರಣ ಅವುಗಳನ್ನು 100% ಮಾಲಿನ್ಯ ಮುಕ್ತವೆಂದು ಪರಿಗಣಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಬೀಟಲ್ ಕಾರನ್ನು ಎಲೆಕ್ಟ್ರಿಕ್ ವಾಹನವಾಗಿ ಬದಲಿಸಿದ ಸಿಇಆರ್‌ಸಿಎ

ದೆಹಲಿಯಲ್ಲಿ ಹೊಸ ಎಲೆಕ್ಟ್ರಿಕ್ ವೆಹಿಕಲ್ ಪಾಲಿಸಿ ಜಾರಿಗೆ ಬಂದ ನಂತರ 3,000ಕ್ಕೂ ಹೆಚ್ಚು ಎಲೆಕ್ಟ್ರಿಕ್ ವಾಹನಗಳನ್ನು ರಿಜಿಸ್ಟರ್ ಮಾಡಲಾಗಿದೆ. ದೆಹಲಿಯಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ಈ ನೀತಿಯನ್ನು ಜಾರಿಗೆ ತರಲಾಗಿದ್ದು ಜನರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

Most Read Articles

Kannada
English summary
Cerca retrofits Beetle car into a electric vehicle. Read in Kannada.
Story first published: Wednesday, November 18, 2020, 17:28 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X