ಅತಿ ಕಡಿಮೆ ಬೆಲೆಯ ಮಿನಿ ಎಲೆಕ್ಟ್ರಿಕ್ ವಾಹನವನ್ನು ಅನಾವರಣಗೊಳಿಸಿದ ಸಿಟ್ರನ್

ಸಿಟ್ರನ್ ಸಂಸ್ಥೆಯು ಈಗಾಗಲೇ ಕಾರು ಮಾರಾಟದಲ್ಲಿ ಜಾಗತಿಕವಾಗಿ ಗುರುತಿಸಿಕೊಂಡಿದ್ದು, ಶೀಘ್ರದಲ್ಲೇ ಎಲೆಕ್ಟ್ರಿಕ್ ಕಾರು ಮಾದರಿಗಳನ್ನು ಸಹ ಬಿಡುಗಡೆಗೊಳಿಸಲು ಸಿದ್ದತೆ ನಡೆಸಿದೆ. ಸಿಟ್ರನ್ ಸಂಸ್ಥೆಯು ಅನಾವರಣಗೊಳಿಸಲಾಗಿರುವ ಮಿನಿ ಎಲೆಕ್ಟ್ರಿಕ್ ವಾಹನವು ಸಾಕಷ್ಟು ಸದ್ದು ಮಾಡುತ್ತಿದ್ದು, ಅತಿ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಮಾದರಿ ಮಾದರಿ ಇದಾಗಿದೆ.

ಅತಿ ಕಡಿಮೆ ಬೆಲೆಯ ಮಿನಿ ಎಲೆಕ್ಟ್ರಿಕ್ ವಾಹನವನ್ನು ಅನಾವರಣಗೊಳಿಸಿದ ಸಿಟ್ರನ್

ಫ್ರೆಂಚ್ ಆಟೋ ಉತ್ಪಾದನಾ ಸಂಸ್ಥೆಯಾದ ಸಿಟ್ರನ್ ಶೀಘ್ರದಲ್ಲೇ ಭಾರತದಲ್ಲೂ ಹೊಸ ಕಾರು ಮಾರಾಟವನ್ನು ಆರಂಭಿಸುತ್ತಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಎಸ್‌ಯುವಿ, ಎಂಪಿವಿ, ಸೆಡಾನ್ ಮತ್ತು ಹ್ಯಾಚ್‌ಬ್ಯಾಕ್ ಕಾರುಗಳನ್ನು ಬಿಡುಗಡೆಗೊಳಿಸಲು ಭರ್ಜರಿ ಸಿದ್ದತೆ ನಡೆಸಿದೆ. ಇದರೊಂದಿಗೆ ಎಲೆಕ್ಟ್ರಿಕ್ ಕಾರುಗಳ ಬಿಡುಗಡೆಗೂ ಸಾಕಷ್ಟು ತಯಾರಿ ನಡೆಸಿರುವ ಸಿಟ್ರನ್ ಸಂಸ್ಥೆಯು ವಿನೂತನ ಮಾದರಿಯ ಮಿನಿ ಎಲೆಕ್ಟ್ರಿಕ್ ವಾಹನ ಮಾದರಿಯೊಂದನ್ನು ಅನಾವರಣಗೊಳಿಸಿದೆ.

ಅತಿ ಕಡಿಮೆ ಬೆಲೆಯ ಮಿನಿ ಎಲೆಕ್ಟ್ರಿಕ್ ವಾಹನವನ್ನು ಅನಾವರಣಗೊಳಿಸಿದ ಸಿಟ್ರನ್

2 ಸೀಟರ್ ಆವೃತ್ತಿಯಾಗಿರುವ ಸಿಟ್ರನ್ ಹೊಸ ಮಿನಿ ಎಲೆಕ್ಟ್ರಿಕ್ ವಾಹನವು ಕ್ವಾಡ್ರಿಸೈಕಲ್ ವಿಭಾಗದಲ್ಲಿ ಗುರುತಿಸಿಕೊಂಡಿದ್ದು, ಹೊಸ ಎಲೆಕ್ಟ್ರಿಕ್ ವಾಹನವನ್ನು 'ಆಮಿ' ಎಂದು ಕರೆಯಲಾಗಿದೆ.

ಅತಿ ಕಡಿಮೆ ಬೆಲೆಯ ಮಿನಿ ಎಲೆಕ್ಟ್ರಿಕ್ ವಾಹನವನ್ನು ಅನಾವರಣಗೊಳಿಸಿದ ಸಿಟ್ರನ್

ಆಮಿ ಎಲೆಕ್ಟ್ರಿಕ್ ವಾಹನವು 5.5kWh ಲಿಥೀಯಂ ಅಯಾನ್ ಬ್ಯಾಟರಿ ಪ್ಯಾಕ್ ಹೊಂದಿದ್ದು, ನಗರಪ್ರದೇಶದಲ್ಲಿನ ಸಂಚಾರಕ್ಕೆ ಉತ್ತಮ ಆಯ್ಕೆಯಾಗಲಿದೆ. 6kW ಮೋಟಾರ್‌ನೊಂದಿಗೆ ಪ್ರತಿ ಗಂಟೆಗೆ 42 ಕಿ.ಮೀ ಟಾಪ್ ಸ್ಪೀಡ್ ಹೊಂದಿರುವ ಆಮಿ ವಾಹನವು ಪ್ರತಿ ಚಾರ್ಜ್‌ಗೆ ಗರಿಷ್ಠ70 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ.

ಅತಿ ಕಡಿಮೆ ಬೆಲೆಯ ಮಿನಿ ಎಲೆಕ್ಟ್ರಿಕ್ ವಾಹನವನ್ನು ಅನಾವರಣಗೊಳಿಸಿದ ಸಿಟ್ರನ್

ಜೊತೆಗೆ ಸಾಮಾನ್ಯ ಚಾರ್ಜಿಂಗ್ ಸಾಕೆಟ್ ಮೂಲಕವೇ ಚಾರ್ಜಿಂಗ್ ಮಾಡಿಕೊಳ್ಳಬಹುದಾಗಿದ್ದು, ಗರಿಷ್ಠ ಮೂರು ಗಂಟೆಗಳ ಅವಧಿಯಲ್ಲಿ ಪೂರ್ಣ ಪ್ರಮಾಣದ ಚಾರ್ಜ್‌ಗೊಳ್ಳಲಿದೆ. ಈ ಮೂಲಕ ಹೊಸ ಆಮಿ ವಾಹನವನ್ನು ವ್ಯಯಕ್ತಿಕ ಬಳಕೆಗೆ ಮಾತ್ರವಲ್ಲದೆ ವಾಣಿಜ್ಯ ಬಳಕೆಗೂ ಬಳಕೆ ಮಾಡಬಹುದು ಎಂದು ಹೇಳಿಕೊಂಡಿರುವ ಸಿಟ್ರನ್ ಸಂಸ್ಥೆಯು ಸಾಮಾನ್ಯ ಕಾರಿನಲ್ಲಿರುವಂತೆ ಹಲವಾರು ಕಾರ್ ಕನೆಕ್ಟೆಡ್ ಫೀಚರ್ಸ್‌ಗಳನ್ನು ನೀಡಲಾಗಿದೆ.

ಅತಿ ಕಡಿಮೆ ಬೆಲೆಯ ಮಿನಿ ಎಲೆಕ್ಟ್ರಿಕ್ ವಾಹನವನ್ನು ಅನಾವರಣಗೊಳಿಸಿದ ಸಿಟ್ರನ್

ಆಮಿ ಬೆಲೆ(ಅಂದಾಜು)

ಸದ್ಯ ಯುರೋಪಿನ ಪ್ರಮುಖ ಮಾರುಕಟ್ಟೆಗಳಲ್ಲಿ ಖರೀದಿಗೆ ಲಭ್ಯವಾಗಲಿರುವ ಆಮಿ ಎಲೆಕ್ಟ್ರಿಕ್ ವಾಹನವು ಭಾರತೀಯ ರೂಪಾಯಿ ಮೌಲ್ಯದಲ್ಲಿ ರೂ.4.50 ಲಕ್ಷ ಬೆಲೆ ಹೊಂದಿದ್ದು, ಖರೀದಿ ಬೇಡವಾಗಿದ್ದಲ್ಲಿ ತಿಂಗಳು ಅಥವಾ ವರ್ಷದ ಲೆಕ್ಕಾಚಾರದಲ್ಲಿ ಮಾಲೀಕತ್ವದ ಆಧಾರದ ಮೇಲೂ ಹೊಸ ಎಲೆಕ್ಟ್ರಿಕ್ ವಾಹನವನ್ನು ಬಳಕೆ ಮಾಡಿಕೊಂಡು ಹಿಂದಿರುಗಿಸಬಹುದಾಗಿದೆ.

ಅತಿ ಕಡಿಮೆ ಬೆಲೆಯ ಮಿನಿ ಎಲೆಕ್ಟ್ರಿಕ್ ವಾಹನವನ್ನು ಅನಾವರಣಗೊಳಿಸಿದ ಸಿಟ್ರನ್

ಜೊತೆಗೆ ಕಾರ್ ಶೇರಿಂಗ್ ಮೊಬಿಲಿಟಿಯಲ್ಲೂ ಆಮಿ ಎಲೆಕ್ಟ್ರಿಕ್ ವಾಹನವು ಸದ್ದು ಮಾಡಲಿದ್ದು, ಪ್ರತಿ ಗಂಟೆಯ ಆಧಾರದ ಮೇಲೂ ಬಾಡಿಗೆಗೆ ಕೂಡಾ ಪಡೆಯಬಹುದಾಗಿದೆ. ಇದರಿಂದ ಹೊಸ ಎಲೆಕ್ಟ್ರಿಕ್ ವಾಹನವು ಭವಿಷ್ಯದಲ್ಲಿ ಸಾಕಷ್ಟು ಬೇಡಿಕೆ ಪಡೆದುಕೊಳ್ಳುವ ಸಾಧ್ಯತೆಗಳಿದ್ದು, ಭಾರತದಲ್ಲೂ ಹೊಸ ಎಲೆಕ್ಟ್ರಿಕ್ ವಾಹನವು ಗಮನಸೆಳೆಯುವುದರಲ್ಲಿ ಯಾವುದೇ ಅನುಮಾನವಿಲ್ಲ.

ಅತಿ ಕಡಿಮೆ ಬೆಲೆಯ ಮಿನಿ ಎಲೆಕ್ಟ್ರಿಕ್ ವಾಹನವನ್ನು ಅನಾವರಣಗೊಳಿಸಿದ ಸಿಟ್ರನ್

ಭಾರತದಲ್ಲಿ ಈಗಾಗಲೇ ಹೊಸ ಕಾರು ಮಾರಾಟಕ್ಕೆ ಅಂತಿಮ ಹಂತದ ಸಿದ್ದತೆ ನಡೆಸಿರುವ ಸಿಟ್ರನ್ ಸಂಸ್ಥೆಯು ಮಾರಾಟ ಮಳಿಗೆಗಳ ನಿರ್ಮಾಣಕ್ಕೂ ಚಾಲನೆ ನೀಡಿದ್ದು, ದೇಶದ ಪ್ರಮುಖ 10 ನಗರಗಳಲ್ಲಿ ಸಿಟ್ರನ್ ಸಂಸ್ಥೆಯು ಹೊಸ ಕಾರು ಮಾರಾಟಕ್ಕೆ ಚಾಲನೆ ನೀಡುತ್ತಿದೆ.

ಅತಿ ಕಡಿಮೆ ಬೆಲೆಯ ಮಿನಿ ಎಲೆಕ್ಟ್ರಿಕ್ ವಾಹನವನ್ನು ಅನಾವರಣಗೊಳಿಸಿದ ಸಿಟ್ರನ್

ಯುರೋಪ್ ಮಾರುಕಟ್ಟೆಯ ಎರಡನೇ ಅತಿದೊಡ್ಡ ಕಾರು ಉತ್ಪಾದನಾ ಸಂಸ್ಥೆಯಾಗಿರುವ ಪಿಎಸ್‌ಎ ಗ್ರೂಪ್‌‌ನ ಅಂಗಸಂಸ್ಥೆಯಾಗಿ ಸಿಟ್ರನ್, ಮೊದಲ ಹಂತದಲ್ಲಿ ಸಿ5 ಏರ್‌ಕ್ರಾಸ್ ಬಿಡುಗಡೆಯ ನಂತರ ಮತ್ತಷ್ಟು ಹೊಸ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ.

ಅತಿ ಕಡಿಮೆ ಬೆಲೆಯ ಮಿನಿ ಎಲೆಕ್ಟ್ರಿಕ್ ವಾಹನವನ್ನು ಅನಾವರಣಗೊಳಿಸಿದ ಸಿಟ್ರನ್

ಸಿಟ್ರನ್ ಸಂಸ್ಥೆಯ ಸ್ಥಳೀಯವಾಗಿಯೇ ಉತ್ಪಾದನೆಗಾಗಿ ಭಾರೀ ಪ್ರಮಾಣದ ಹೂಡಿಕೆ ಮಾಡಿದ್ದು, ಮೊದಲ ಹಂತವಾಗಿ ದೇಶದ ಆಯ್ದ ಪ್ರಮುಖ 10 ನಗರಗಳಲ್ಲಿ ಮಾತ್ರವೇ ಕಾರು ಮಾರಾಟಕ್ಕೆ ಚಾಲನೆ ನೀಡಲು ನಿರ್ಧರಿಸಿದೆ.

ಅತಿ ಕಡಿಮೆ ಬೆಲೆಯ ಮಿನಿ ಎಲೆಕ್ಟ್ರಿಕ್ ವಾಹನವನ್ನು ಅನಾವರಣಗೊಳಿಸಿದ ಸಿಟ್ರನ್

ಇನ್ನು ಸಿಟ್ರನ್ ಸಂಸ್ಥೆಯು ಸದ್ಯ ಚೆನ್ನೈನಲ್ಲಿರುವ ಅಸೆಂಬ್ಲಿ ಘಟಕದ ನಿರ್ಮಾಣ ಯೋಜನೆಯನ್ನು ಪೂರ್ಣಗೊಳಿಸಿದ್ದು, ಸಿಬ್ಬಂದಿ ನೇಮಕ, ಮಾರುಕಟ್ಟೆ ಅಧ್ಯಯನ ಮತ್ತು ಕಾರು ಮಾರಾಟಕ್ಕೆ ಅನುಕೂಲಕರ ಪ್ರದೇಶಗಳಲ್ಲಿ ಅಧಿಕೃತ ಮಾರಾಟ ಮಳಿಗೆಗಳ ನಿರ್ಮಾಣದ ಮೇಲೆ ಹೆಚ್ಚು ಹೂಡಿಕೆ ಮಾಡುತ್ತಿದೆ.

More from DriveSpark

Article Published On: Friday, February 28, 2020, 16:51 [IST]
English summary
Citroen AMI Mini Electric Car Unveiled. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+