ಸಿ3 ಸ್ಪೋರ್ಟಿ ಹೆಸರಿನೊಂದಿಗೆ ಬಿಡುಗಡೆಯಾಗಲಿದೆ ಸಿಟ್ರನ್ ಹೊಸ ಕಂಪ್ಯಾಕ್ಟ್ ಎಸ್‌ಯುವಿ
ಪಿಎಸ್ಎ ಗ್ರೂಪ್‌ನ ಸಿಟ್ರನ್ ಕಂಪನಿಯು ಭಾರತದಲ್ಲಿ 2021ಕ್ಕೆ ಕಾರು ಮಾರಾಟ ಆರಂಭಿಸಲು ಸಿದ್ದತೆ ನಡೆಸಿದ್ದು, ಸಿಟ್ರನ್ ಬಿಡುಗಡೆ ಮಾಡುವ ಕಾರುಗಳಲ್ಲಿ ಕಂಪ್ಯಾಕ್ಟ್ ಎಸ್‌ಯುವಿ ಕೂಡಾ ಪ್ರಮುಖ ಕಾರು ಮಾದರಿಯಾಗಿದೆ.

ಗ್ರಾಹಕರ ಬೇಡಿಕೆ ವಿವಿಧ ಮಾದರಿಯ ಹ್ಯಾಚ್‌ಬ್ಯಾಕ್, ಸೆಡಾನ್, ಎಸ್‌ಯುವಿ ಮತ್ತು ಎಂಪಿವಿ ಕಾರುಗಳನ್ನು ಬಿಡುಗಡೆಗೆ ಸಿದ್ದವಾಗಿರುವ ಫ್ರೆಂಚ್ ಮೂಲದ ಸಿಟ್ರನ್ ಕಂಪನಿಯು ಮೊದಲ ಹಂತದಲ್ಲಿ ಎಸ್‌ಯುವಿ ಮಾದರಿಯನ್ನು ನಂತರದಲ್ಲಿ ಕಂಪ್ಯಾಕ್ಟ್ ಎಸ್‌ಯುವಿ ಕಾರನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದ್ದು, ಹೊಸ ಕಂಪ್ಯಾಕ್ಟ್ ಎಸ್‌ಯುವಿ ಕಾರನ್ನು ಸದ್ಯಕ್ಕೆ ಭಾರತದಲ್ಲಿ ಸಿ21 ಎನ್ನುವ ಕೋಡ್‌ನೊಂದಿಗೆ ರೋಡ್ ಟೆಸ್ಟಿಂಗ್ ನಡೆಸಲಾಗುತ್ತಿದೆ.

ಹೊಸ ಕಂಪ್ಯಾಕ್ಟ್ ಈಗಾಗಲೇ ಯುರೋಪಿನ ಪ್ರಮುಖ ಮಾರುಕಟ್ಟೆಗಳಲ್ಲಿ ವಿವಿಧ ಹೆಸರಿನೊಂದಿಗೆ ಮಾರಾಟವಾಗುತ್ತಿದ್ದು, ಗ್ರಾಹಕರ ಬೇಡಿಕೆಯೆಂತೆ ಸಾಮಾನ್ಯ ಕಾರು ಮಾದರಿಯ ಜೊತೆಗೆ ಎಲೆಕ್ಟ್ರಿಕ್ ಆವೃತ್ತಿಯನ್ನು ಸಹ ಪಡೆದುಕೊಂಡಿದೆ.

ಎಲೆಕ್ಟ್ರಿಕ್ ಆವೃತ್ತಿಯು ಸಿ3 ಸ್ಟೋರ್ಟಿ ಹೆಸರಿನೊಂದಿಗೆ ಬಿಡುಗಡೆಗೊಂಡಿದ್ದು, ಅದೇ ಕಾರು ಇದೀಗ ಭಾರತದಲ್ಲೂ ಸಿ3 ಸ್ಪೋರ್ಟಿ ಹೆಸರಿನೊಂದಿಗೆ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಸದ್ಯ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಯಲ್ಲಿ ಮಾತ್ರವೇ ಖರೀದಿಗೆ ಲಭ್ಯವಿರಲಿದ್ದು, ಎಲೆಕ್ಟ್ರಿಕ್ ಆವೃತ್ತಿಯು ತದನಂತರ ಬಿಡುಗಡೆಯಾಗಲಿದೆ.

ಸದ್ಯ ಹೊಸ ಕಾರುನ್ನು ಭಾರತದಲ್ಲಿ ಸಿ21 ಕೋಡ್ ನೆಮ್ ಆಧಾರದ ಮೇಲೆ ರೋಡ್ ಟೆಸ್ಟಿಂಗ್ ನಡೆಸಲಾಗುತ್ತಿದ್ದು, ಹಲವಾರು ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಲಿರುವ ಹೊಸ ಕಾರು ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಲಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿರುವ ಬಹುತೇಕ ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳು ಆರಂಭಿಕವಾಗಿ ರೂ.6.50 ಲಕ್ಷದಿಂದ ಟಾಪ್ ಮಾದರಿಗಳು ರೂ. 12 ಲಕ್ಷ ಬೆಲೆ ಅಂತರದಲ್ಲಿ ಮಾರಾಟವಾಗುತ್ತಿದ್ದು, ಇದನ್ನೇ ಪ್ರಧಾನವಾಗಿಟ್ಟುಕೊಂಡಿರುವ ಸಿಟ್ರನ್ ಕಂಪನಿಯು ಅಂತರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯವಾಗಿರುವ ಸಿ3 ಏರ್‌ಕ್ರಾಸ್ ಕಾರನ್ನು ಭಾರತದಲ್ಲಿ ಬದಲಿ ಹೆಸರಿನೊಂದಿಗೆ ಬಿಡುಗಡೆ ಮಾಡುತ್ತಿದೆ.

ಸಿ3 ಏರ್‌ಕ್ರಾಸ್ ಕಾರು 1.2-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಪಡೆದುಕೊಳ್ಳುವ ಸಾಧ್ಯತೆಗಳಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.7 ಲಕ್ಷದಿಂದ ರೂ.11 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗಲಿದೆ.

ದೇಶಿಯ ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ಸಿಟ್ರನ್ ಹೊಸ ಕಾರುಗಳು ಮಹತ್ವದ ಬದಲಾಣೆಗಳೊಂದಿಗೆ ಅಭಿವೃದ್ದಿಗೊಳ್ಳಲಿದ್ದು, ಸಿ5 ಏರ್‌ಕ್ರಾಸ್ ಕಾರು ಕಿಯಾ ಸೆಲ್ಟೊಸ್, ಟಾಟಾ ಹ್ಯಾರಿಯರ್, ಜೀಪ್ ಕಂಪಾಸ್ ಕಾರುಗಳಿಗೆ ಸರಿಸಮನಾದ ತಾಂತ್ರಿಕ ಅಂಶಗಳೊಂದಿಗೆ ಬಿಡುಗಡೆಯಾಗಲಿದ್ದರೆ ಸಿ3 ಏರ್‌ಕ್ರಾಸ್ ಕಾರು ಮಾರುತಿ ಸುಜುಕಿ ಬ್ರೆಝಾ, ಹ್ಯುಂಡೈ ವೆನ್ಯೂ, ಟಾಟಾ ನೆಕ್ಸಾನ್ ಮತ್ತು ಮಹೀಂದ್ರಾ ಎಕ್ಸ್‌ಯುವಿ300 ಕಾರುಗಳಿಗೆ ಪೈಪೋಟಿ ನೀಡಲಿದೆ.


Click it and Unblock the Notifications








