ಅಕ್ಟೋಬರ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಕಾಂಪ್ಯಾಕ್ಟ್ ಎಸ್‌ಯುವಿಗಳಿವು

ದೇಶಿಯ ಮಾರುಕಟ್ಟೆಯಲ್ಲಿ ಕಾಂಪ್ಯಾಕ್ಟ್ ಎಸ್‌ಯುವಿಗಳ ಮಾರಾಟವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ಸೆಗ್ ಮೆಂಟ್ ವಿಶ್ವದ ಅತ್ಯಂತ ಸ್ಪರ್ಧಾತ್ಮಕ ಸೆಗ್ ಮೆಂಟ್ ಗಳಲ್ಲಿ ಒಂದಾಗಿದೆ.

ಅಕ್ಟೋಬರ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಕಾಂಪ್ಯಾಕ್ಟ್ ಎಸ್‌ಯುವಿಗಳಿವು

ಇತ್ತೀಚಿನ ದಿನಗಳಲ್ಲಿ ಈ ಸೆಗ್ ಮೆಂಟಿನಲ್ಲಿ ಹಲವಾರು ಹೊಸ ವಾಹನಗಳು ಬಿಡುಗಡೆಯಾಗಿವೆ. ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ವಾಹನಗಳು ಬಿಡುಗಡೆಯಾಗಲಿವೆ. ಈ ವರ್ಷದ ಅಕ್ಟೋಬರ್‌ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಕಾಂಪ್ಯಾಕ್ಟ್ ಎಸ್‌ಯುವಿಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ನೋಡೋಣ. ಈ ಪಟ್ಟಿಯಲ್ಲಿ ಮಾರುತಿ ಸುಜುಕಿ ಕಂಪನಿಯ ವಿಟಾರಾ ಬ್ರೆಝಾ ಪ್ರಥಮ ಸ್ಥಾನದಲ್ಲಿದೆ.

ಅಕ್ಟೋಬರ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಕಾಂಪ್ಯಾಕ್ಟ್ ಎಸ್‌ಯುವಿಗಳಿವು

ಅಕ್ಟೋಬರ್ ನಲ್ಲಿ ಈ ಎಸ್‌ಯುವಿಯ 12,087 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. ಹೊಸ ಹೊಸ ಎಸ್‌ಯುವಿಗಳ ಬಿಡುಗಡೆಯ ಮಧ್ಯೆಯೂ ಮಾರುತಿ ಸುಜುಕಿ ಬ್ರೆಝಾ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಅಕ್ಟೋಬರ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಕಾಂಪ್ಯಾಕ್ಟ್ ಎಸ್‌ಯುವಿಗಳಿವು

ಕಿಯಾ ಮೋಟಾರ್ಸ್ ಕಂಪನಿಯ ಸೊನೆಟ್ ಎರಡನೇ ಸ್ಥಾನದಲ್ಲಿದೆ. ಅಕ್ಟೋಬರ್ ನಲ್ಲಿ ಈ ಎಸ್‌ಯುವಿಯ 11,721 ಯೂನಿಟ್ ಗಳು ಮಾರಾಟವಾಗಿವೆ. ಕಿಯಾ ಸೊನೆಟ್ 50 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್ ಗಳನ್ನು ಪಡೆದಿದೆ. ತನ್ನ ಪ್ರತಿ ಸ್ಪರ್ಧಿಗಳನ್ನು ಹಿಂಡಿಕ್ಕಿ ಸೊನೆಟ್ ಎರಡನೇ ಸ್ಥಾನಕ್ಕೆ ಏರಿದೆ.

ಅಕ್ಟೋಬರ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಕಾಂಪ್ಯಾಕ್ಟ್ ಎಸ್‌ಯುವಿಗಳಿವು

ಹ್ಯುಂಡೈ ವೆನ್ಯೂ ಎರಡನೆಯ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಕುಸಿದಿದೆ. ಅಕ್ಟೋಬರ್ ನಲ್ಲಿ ಈ ಎಸ್‌ಯುವಿಯ 8,828 ಯುನಿಟ್‌ಗಳು ಮಾರಾಟವಾಗಿವೆ. ಹ್ಯುಂಡೈ ವೆನ್ಯೂ ಎಸ್‌ಯುವಿಯ ಮಾರಾಟವು ಕಳೆದ ವರ್ಷದ ಅಕ್ಟೋಬರ್ ಗಿಂತ 3%ನಷ್ಟು ಹೆಚ್ಚಾಗಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಅಕ್ಟೋಬರ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಕಾಂಪ್ಯಾಕ್ಟ್ ಎಸ್‌ಯುವಿಗಳಿವು

ಇನ್ನು ನಾಲ್ಕನೇ ಸ್ಥಾನದಲ್ಲಿರುವ ಟಾಟಾ ನೆಕ್ಸಾನ್‌ನ ಮಾರಾಟವು ಹಿಂದಿನ ವರ್ಷಕ್ಕಿಂತ 55%ನಷ್ಟು ಹೆಚ್ಚಳವಾಗಿದೆ. ಅಕ್ಟೋಬರ್ ತಿಂಗಳಿನಲ್ಲಿ ನೆಕ್ಸಾನ್ ಎಸ್‌ಯುವಿಯ 6,888 ಯೂನಿಟ್ ಗಳು ಮಾರಾಟವಾಗಿವೆ.

ಸ್ಥಾನ ಮಾದರಿಗಳು ಅಕ್ಟೋಬರ್ 2020 ಅಕ್ಟೋಬರ್ 2019 ಬೆಳವಣಿಗೆ (%)
1 ಮಾರುತಿ ವಿಟಾರಾ ಬ್ರೆಝಾ 12,087 10,227 18
2 ಕಿಯಾ ಸೊನೆಟ್ 11,721 0 -
3 ಹ್ಯುಂಡೈ ವೆನ್ಯೂ 8,828 8,576 3
4 ಟಾಟಾ ನೆಕ್ಸಾನ್ 6,888 4,438 55
5 ಮಹೀಂದ್ರಾಎಕ್ಸ್‌ಯುವಿ 300 4,882 3,045 60
6 ಫೋರ್ಡ್ ಇಕೋಸ್ಪೋರ್ಟ್ 4,599 4,326 6
7 ಟೊಯೊಟಾ ಅರ್ಬನ್ ಕ್ರೂಸರ್ 3,006 0 -
8 ಹೋಂಡಾ ಡಬ್ಲ್ಯುಆರ್ - ವಿ 1,100 1,367 -20
9 ಮಹೀಂದ್ರಾ ಟಿಯುವಿ 300 - 1,246 -
ಅಕ್ಟೋಬರ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಕಾಂಪ್ಯಾಕ್ಟ್ ಎಸ್‌ಯುವಿಗಳಿವು

ಮಹೀಂದ್ರಾ ಕಂಪನಿಯ ಎಕ್ಸ್‌ಯುವಿ 300 ಮಾರಾಟದಲ್ಲಿ 60%ನಷ್ಟು ಬೆಳವಣಿಗೆಯನ್ನು ದಾಖಲಿಸಿದ್ದು, ಅಕ್ಟೋಬರ್‌ ತಿಂಗಳಿನಲ್ಲಿ 4,882 ಯೂನಿಟ್‌ಗಳನ್ನು ಮಾರಾಟ ಮಾಡಲಾಗಿದೆ. ಈ ಮೂಲಕ ಎಕ್ಸ್‌ಯುವಿ 300 ಈ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಅಕ್ಟೋಬರ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಕಾಂಪ್ಯಾಕ್ಟ್ ಎಸ್‌ಯುವಿಗಳಿವು

ಫೋರ್ಡ್ ಕಂಪನಿಯ ಇಕೋಸ್ಪೋರ್ಟ್ 4,599 ಯುನಿಟ್ ಗಳ ಮಾರಾಟದೊಂದಿಗೆ ಆರನೇ ಸ್ಥಾನದಲ್ಲಿದೆ. ಈ ವಾಹನವು ಕಳೆದ ಬಾರಿಗಿಂತ ಈ ಬಾರಿ 6%ನಷ್ಟು ಹೆಚ್ಚು ಮಾರಾಟವನ್ನು ದಾಖಲಿಸಿದೆ.

ಅಕ್ಟೋಬರ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಕಾಂಪ್ಯಾಕ್ಟ್ ಎಸ್‌ಯುವಿಗಳಿವು

ಕೆಲವೇ ದಿನಗಳ ಹಿಂದೆ ಬಿಡುಗಡೆಯಾದ ಟೊಯೊಟಾ ಕಂಪನಿಯ ಅರ್ಬನ್ ಕ್ರೂಸರ್ ವಾಹನದ 3,006 ಯೂನಿಟ್ ಗಳು ಅಕ್ಟೋಬರ್ ತಿಂಗಳಿನಲ್ಲಿ ಮಾರಾಟವಾಗಿವೆ. ಮಾರುತಿ ಸುಜುಕಿ ಕಂಪನಿಯ ಬ್ರೆಝಾ ವಾಹನದ ರಿಬ್ಯಾಡ್ಜ್ ಆವೃತ್ತಿಯಾದ ಈ ಎಸ್‌ಯುವಿಯಲ್ಲಿ ಟೊಯೊಟಾ ಕಂಪನಿಯು ಹಲವಾರು ಬದಲಾವಣೆಗಳನ್ನು ಮಾಡಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಅಕ್ಟೋಬರ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಕಾಂಪ್ಯಾಕ್ಟ್ ಎಸ್‌ಯುವಿಗಳಿವು

ಹೋಂಡಾ ಕಂಪನಿಯ ಡಬ್ಲ್ಯುಆರ್ ವಿ ವಾಹನದ 1,100 ಯೂನಿಟ್ ಗಳು ಅಕ್ಟೋಬರ್ ನಲ್ಲಿ ಮಾರಾಟವಾಗಿವೆ. ಕಿಯಾ ಸೊನೆಟ್ ಹಾಗೂ ಟೊಯೊಟಾ ಅರ್ಬನ್ ಕ್ರೂಸರ್ ವಾಹನಗಳ ಬಿಡುಗಡೆಯ ನಂತರ ಈ ಸೆಗ್ ಮೆಂಟಿನ ಮಾರಾಟವು 60%ನಷ್ಟು ಹೆಚ್ಚಾಗಿದೆ.

Article Published On: Wednesday, November 4, 2020, 21:01 [IST]
English summary
Compact SUVs sold in domestic market during October 2020. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+