ಕಾಂಟ್ಯಾಕ್ಟ್ ಲೆಸ್ ಕಾರು ಪಾರ್ಕಿಂಗ್ ಸೇವೆ ಆರಂಭಿಸಿದ ವಿಮಾನ ನಿಲ್ದಾಣ ಪ್ರಾಧಿಕಾರ

ಹೈದರಾಬಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾರತದ ಮೊದಲ ಕಾಂಟ್ಯಾಕ್ಟ್ ಲೆಸ್ ಕಾರ್ ಪಾರ್ಕಿಂಗ್ ಸೇವೆಯನ್ನು ಆರಂಭಿಸಲಾಗಿದೆ. ಇದರಡಿಯಲ್ಲಿ ಕಾರು ವಿಮಾನ ನಿಲ್ದಾಣಕ್ಕೆ ಪ್ರವೇಶಿಸಿದ ನಂತರ ಪ್ರಯಾಣಿಕನು ಸೇವೆಯನ್ನು ಪಡೆಯಲು ಯಾವುದೇ ವ್ಯಕ್ತಿಯ ಸಂಪರ್ಕಕ್ಕೆ ಬರಬೇಕಾದ ಅವಶ್ಯಕತೆಯಿಲ್ಲ.

ಕಾಂಟ್ಯಾಕ್ಟ್ ಲೆಸ್ ಕಾರು ಪಾರ್ಕಿಂಗ್ ಸೇವೆ ಆರಂಭಿಸಿದ ವಿಮಾನ ನಿಲ್ದಾಣ ಪ್ರಾಧಿಕಾರ

ವಿಮಾನ ನಿಲ್ದಾಣದಲ್ಲಿ ಕಾಂಟ್ಯಾಕ್ಟ್ ಲೆಸ್ ಬೋರ್ಡಿಂಗ್ ಸಹ ಆರಂಭಿಸಲಾಗಿದೆ ಎಂದು ಹೈದರಾಬಾದ್ ವಿಮಾನ ನಿಲ್ದಾಣ ಪ್ರಾಧಿಕಾರವು ತಿಳಿಸಿದೆ. ವಿಮಾನ ನಿಲ್ದಾಣ ಪ್ರಾಧಿಕಾರದ ಪ್ರಕಾರ, ಕಾಂಟ್ಯಾಕ್ಟ್ ಲೆಸ್ ಕಾರು ಪಾರ್ಕಿಂಗ್ ನಲ್ಲಿ ಫಾಸ್ಟ್ ಟ್ಯಾಗ್ ಪ್ರಮುಖ ಪಾತ್ರ ವಹಿಸಲಿದೆ. ಫಾಸ್ಟ್ ಟ್ಯಾಗ್ ಅಳವಡಿಸಿಕೊಂಡು ವಿಮಾನ ನಿಲ್ದಾಣದೊಳಗೆ ಬರುವ ಕಾರುಗಳಿಂದ ಟೋಲ್ ಪಾವತಿ ಮಾಡಿಕೊಳ್ಳಲಾಗುತ್ತದೆ. ಇದಕ್ಕಾಗಿ ಹೈದರಾಬಾದ್ ವಿಮಾನ ನಿಲ್ದಾಣ ಪ್ರಾಧಿಕಾರವು ರಾಷ್ಟ್ರೀಯ ಎಲೆಕ್ಟ್ರಾನಿಕ್ ಟೋಲ್ ಕಲೆಕ್ಷನ್ (ಎನ್‌ಇಟಿಸಿ) ಹಾಗೂ ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ನೊಂದಿಗೆ ಸಹಭಾಗಿತ್ವವನ್ನು ಮಾಡಿಕೊಂಡಿದೆ.

ಕಾಂಟ್ಯಾಕ್ಟ್ ಲೆಸ್ ಕಾರು ಪಾರ್ಕಿಂಗ್ ಸೇವೆ ಆರಂಭಿಸಿದ ವಿಮಾನ ನಿಲ್ದಾಣ ಪ್ರಾಧಿಕಾರ

ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಹಾಗೂ ಸಂದರ್ಶಕರಿಗೆ ಕಾಂಟ್ಯಾಕ್ಟ್ ಲೆಸ್ ಕಾರ್ ಪಾರ್ಕಿಂಗ್ ಸೇವೆ ನೀಡಲಾಗುತ್ತದೆ ಎಂದು ಹೈದರಾಬಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ ತಿಳಿಸಿದೆ. ಕರೋನಾ ವೈರಸ್ ವಿರುದ್ಧದ ಮುನ್ನೆಚ್ಚರಿಕೆಯಾಗಿ ಕಾಂಟ್ಯಾಕ್ಟ್ ಲೆಸ್ ಕಾರ್ ಪಾರ್ಕಿಂಗ್ ಸೇವೆಯನ್ನು ಆರಂಭಿಸಲಾಗಿದೆ.

MOST READ:ಪೊಲೀಸರಿಗೆ ತಲೆ ನೋವು ತಂದಿಟ್ಟ ಸೀಜ್ ಆದ ವಾಹನಗಳು

ಕಾಂಟ್ಯಾಕ್ಟ್ ಲೆಸ್ ಕಾರು ಪಾರ್ಕಿಂಗ್ ಸೇವೆ ಆರಂಭಿಸಿದ ವಿಮಾನ ನಿಲ್ದಾಣ ಪ್ರಾಧಿಕಾರ

ವಿಮಾನ ನಿಲ್ದಾಣದ ಪಾರ್ಕಿಂಗ್ ನೊಳಗೆ ಬರುವ ವಾಹನಗಳ ಮೇಲಿರುವ ಫಾಸ್ಟ್ ಟ್ಯಾಗ್ ಸ್ಟಿಕ್ಕರ್ ಗಳನ್ನು ಸ್ಕ್ಯಾನಿಂಗ್ ಯಂತ್ರದಿಂದ ಆಟೋಮ್ಯಾಟಿಕ್ ಆಗಿ ಸ್ಕ್ಯಾನ್ ಮಾಡಲಾಗುತ್ತದೆ. ಸ್ಕ್ಯಾನಿಂಗ್ ನಂತರ ಫಾಸ್ಟ್ ಟ್ಯಾಗ್ ನಲ್ಲಿರುವ ಖಾತೆಯಿಂದ ಶುಲ್ಕವನ್ನು ಕಡಿತಗೊಳಿಸಲಾಗುತ್ತದೆ.

ಕಾಂಟ್ಯಾಕ್ಟ್ ಲೆಸ್ ಕಾರು ಪಾರ್ಕಿಂಗ್ ಸೇವೆ ಆರಂಭಿಸಿದ ವಿಮಾನ ನಿಲ್ದಾಣ ಪ್ರಾಧಿಕಾರ

ಈ ಪ್ರಕ್ರಿಯೆಯಲ್ಲಿ, ಪ್ರಯಾಣಿಕನು ಎಲ್ಲಿಯೂ ಮ್ಯಾನುವಲ್ ಆಗಿ ಪಾವತಿಸುವ ಅಗತ್ಯವಿಲ್ಲ. ವಾಹನಗಳನ್ನು ರಿಜಿಸ್ಟ್ರೇಷನ್ ಮಾಡಲು ಹಾಗೂ ಫಿಟ್‌ನೆಸ್ ಸರ್ಟಿಫಿಕೇಟ್ ಗಳನ್ನು ಪಡೆಯಲು ಫಾಸ್ಟ್ ಟ್ಯಾಗ್ ವಿವರಗಳನ್ನು ನೀಡುವುದು ಕಡ್ಡಾಯವೆಂದು ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಇಲಾಖೆಯು ಪ್ರಕಟಿಸಿದೆ.

MOST READ:ಒಂದೇ ದಿನದಲ್ಲಿ ಸಾವಿರಕ್ಕೂ ಹೆಚ್ಚು ಆಂಬ್ಯುಲೆನ್ಸ್ ಪಡೆದ ಜಗನ್ ಸರ್ಕಾರ

ಕಾಂಟ್ಯಾಕ್ಟ್ ಲೆಸ್ ಕಾರು ಪಾರ್ಕಿಂಗ್ ಸೇವೆ ಆರಂಭಿಸಿದ ವಿಮಾನ ನಿಲ್ದಾಣ ಪ್ರಾಧಿಕಾರ

ವಾಹನಕ್ಕೆ ಸಂಬಂಧಿಸಿದ ಅಗತ್ಯ ದಾಖಲೆಗಳಲ್ಲಿ ಫಾಸ್ಟ್ ಟ್ಯಾಗ್ ಅನ್ನು ಸಹ ಸೇರಿಸಲಾಗಿದೆ. ಫಾಸ್ಟ್ ಟ್ಯಾಗ್ ಸ್ಟಿಕ್ಕರ್ ಗಳನ್ನು ವಾಹನಗಳ ಮೇಲೆ ಅಂಟಿಸುವುದು ವಾಹನ ಮಾರಾಟಗಾರರ ಜವಾಬ್ದಾರಿಯಾಗಿದೆ ಎಂದು ಸಾರಿಗೆ ಇಲಾಖೆ ಸ್ಪಷ್ಟಪಡಿಸಿದೆ.

ಕಾಂಟ್ಯಾಕ್ಟ್ ಲೆಸ್ ಕಾರು ಪಾರ್ಕಿಂಗ್ ಸೇವೆ ಆರಂಭಿಸಿದ ವಿಮಾನ ನಿಲ್ದಾಣ ಪ್ರಾಧಿಕಾರ

ಆಟೋಮೊಬೈಲ್ ಅಸೋಸಿಯೇಷನ್ ಫಾಡಾ ಸರ್ಕಾರದ ಈ ನಿರ್ಧಾರಕ್ಕೆ ಆಕ್ಷೇಪವನ್ನು ವ್ಯಕ್ತಪಡಿಸಿದೆ. ಫಾಸ್ಟ್ ಟ್ಯಾಗ್ ನೀಡಲು ಡೀಲರ್ ಗಳ ಮೇಲೆ ಹೆಚ್ಚುವರಿ ಹೊರೆ ಬೀಳಲಿದೆ ಎಂದು ಫಾಡಾ ಹೇಳಿದೆ.

Most Read Articles

Kannada
English summary
Contactless car parking service started at Hyderabad International Airport. Read in Kannada.
Story first published: Monday, July 13, 2020, 19:40 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X