ಪಿಟ್‌ಸ್ಟಾಪ್ ಸಹಭಾಗಿತ್ವದಲ್ಲಿ ಮನೆ ಬಾಗಿಲಲ್ಲೇ ಸರ್ವೀಸ್ ಮಾಡಲಿದೆ ಶೆಲ್
ಶೆಲ್ ಲೂಬ್ರಿಕಂಟ್ ಕಂಪನಿಯು ಬೆಂಗಳೂರು ಮೂಲದ ಪಿಟ್‌ಸ್ಟಾಪ್‌ನೊಂದಿಗೆ ಸಹಭಾಗಿತ್ವ ಮಾಡಿಕೊಂಡಿದೆ. ಈ ಸಹಭಾಗಿತ್ವದಲ್ಲಿ ಎರಡು ಕಂಪನಿಗಳು ತಮ್ಮ ಗ್ರಾಹಕರಿಗೆ ಡೋರ್ ಡೆಲಿವರಿ ಸೇವೆಯನ್ನು ಒದಗಿಸಲಿವೆ. ಕರೋನಾ ವೈರಸ್ ಸೋಂಕು ಹರಡದಂತೆ ತಡೆಯಲು ಎರಡು ಕಂಪನಿಗಳು ಪಾಲುದಾರಿಕೆ ಮಾಡಿಕೊಂಡಿವೆ.

ಈ ಸಹಭಾಗಿತ್ವದಲ್ಲಿ, ಗ್ರಾಹಕರಿಗೆ ಸುರಕ್ಷಿತವಾದ ವೆಹಿಕಲ್ ಮೆಂಟೆನೆನ್ಸ್ ಅನುಭವವನ್ನು ನೀಡಲಾಗುವುದು. ಶೆಲ್ ಲೂಬ್ರಿಕಂಟ್ ಅನೇಕ ರೀತಿಯ ಆಯಿಲ್‌ಗಳನ್ನು ಉತ್ಪಾದಿಸುತ್ತದೆ. ಈ ಆಯಿಲ್‌ಗಳನ್ನು ವಾಹನಗಳನ್ನು ಸರ್ವೀಸ್ ಮಾಡುವ ಸಮಯದಲ್ಲಿ ಬಳಸಲಾಗುತ್ತದೆ.

ಪಿಟ್‌ಸ್ಟಾಪ್‌ನ ಮೊಬೈಲ್ ಸರ್ವೀಸ್‌ನಿಂದಾಗಿ ಗ್ರಾಹಕರು ಸುರಕ್ಷಿತವಾದ ಹಾಗೂ ವಿಶ್ವಾಸಾರ್ಹವಾದ ಸೇವೆಯನ್ನು ಪಡೆಯಲಿದ್ದಾರೆ. ಎರಡು ಕಂಪನಿಗಳ ಸಹಭಾಗಿತ್ವದಿಂದಾಗಿ ವಾಹನಗಳನ್ನು ಸರ್ವೀಸ್‌ಗೆ ನೀಡುವ ಗ್ರಾಹಕರಿಗೆ ಅನುಕೂಲವಾಗಲಿದೆ.
MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಕರೋನಾ ವೈರಸ್‌ನಿಂದಾಗಿ ವಾಹನ ಮೆಕ್ಯಾನಿಕ್‌ಗಳ ಆದಾಯಕ್ಕೆ ಕತ್ತರಿ ಬಿದ್ದಿದೆ. ಶೆಲ್ ಹಾಗೂ ಪಿಟ್‌ಸ್ಟಾಪ್‌ನ ಹೊಸ ಸೇವೆಯಿಂದಾಗಿ ಅವರ ಪರಿಸ್ಥಿತಿ ಸುಧಾರಿಸಬಹುದು.

ಈ ಹೊಸ ಸಹಭಾಗಿತ್ವದಡಿಯಲ್ಲಿ ಡೋರ್ ಡೆಲಿವರಿ ಸೇವೆ ನೀಡಲು 500 ವ್ಯಾನ್‌ಗಳನ್ನು ಬಳಸಲಾಗುವುದು. ಇವುಗಳಲ್ಲಿ ಸಂಪೂರ್ಣವಾಗಿ ತರಬೇತಿ ಪಡೆದ ಮೆಕಾನಿಕ್‌ಗಳನ್ನು ವಾಹನಗಳ ಸರ್ವೀಸ್ ಮಾಡಲು ಹಾಗೂ ಮೆಂಟೆನೆನ್ಸ್ ಮಾಡಲು ನಿಯೋಜಿಸಲಾಗುವುದು.
MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಮೊದಲ ಹಂತದಲ್ಲಿ, ದೇಶದ ಒಟ್ಟು 20 ನಗರಗಳಲ್ಲಿ ಈ ಸೇವೆಯನ್ನು ಆರಂಭಿಸಲಾಗುವುದು. ಇವುಗಳಲ್ಲಿ ಬೆಂಗಳೂರು, ದೆಹಲಿ-ಎನ್‌ಸಿಆರ್, ಮುಂಬೈ, ಪುಣೆ ಹಾಗೂ ಹೈದರಾಬಾದ್ ನಗರಗಳು ಸೇರಿವೆ. ಈ ವ್ಯಾನ್‌ನಲ್ಲಿರುವ ಎಲ್ಲಾ ಮೆಕಾನಿಕ್‌ಗಳಿಗೆ ಸುರಕ್ಷತಾ ಕ್ರಮಗಳನ್ನು ಅನುಸರಿಸಲು ತರಬೇತಿ ನೀಡಲಾಗಿದೆ.

ಈ ಸುರಕ್ಷತಾ ಕ್ರಮಗಳಲ್ಲಿ ಪಿಪಿಇ ಬಳಕೆ, ವಾಹನಗಳ ಸ್ವಚ್ವತೆ ಸೇರಿದೆ. ಗ್ರಾಹಕರು ತಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಪಿಟ್‌ಸ್ಟಾಪ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಂಡು ಈ ಡೋರ್ ಡೆಲಿವರಿ ಸೇವೆಯನ್ನು ಪಡೆಯಬಹುದು.


Click it and Unblock the Notifications