ಎಂಜಿ ಮೋಟಾರ್‍‍ಗೂ ತಟ್ಟಿದ ಕರೊನಾ ವೈರಸ್ ಬಿಸಿ..!

ಕರೊನಾ ವೈರಸ್ ಮಹಾಮಾರಿ ಇಡೀ ಜಗತ್ತನ್ನೇ ತಲ್ಲಣಗೊಳಿಸಿದೆ. ಈ ಮಹಾಮಾರಿ ಈಗಾಗಲೇ ಹಲವರ ಪ್ರಾಣ ತೆಗೆದಿದೆ. ಈ ವೈರಸ್ ಚೀನಾ ದೇಶದಲ್ಲಿ ಕಾಣಿಸಿಕೊಂಡಿದ್ದು, ಜಗತ್ತಿನಾದ್ಯಂತವಿರುವ ಜನರನ್ನು ಭಯಕ್ಕೆ ದೂಡಿದೆ.

ಎಂಜಿ ಮೋಟಾರ್‍‍ಗೂ ತಟ್ಟಿದ ಕರೊನಾ ವೈರಸ್ ಬಿಸಿ..!

ಈ ವೈರಸ್ ಹಲವು ದಿನಗಳ ಹಿಂದೆಯೇ ಪತ್ತೆಯಾಗಿದ್ದರೂ ಅದರ ಪರಿಣಾಮವೀಗ ಕಾಣಿಸಿಕೊಳ್ಳುತ್ತಿದೆ. ಈ ವೈರಸ್ ಕೇವಲ ಜನರನ್ನು ಮಾತ್ರ ಕಾಡುತ್ತಿಲ್ಲ. ಬದಲಿಗೆ ಈ ವೈರಸ್ ಚೀನಾದ ಕಂಪನಿಗಳ ಮೇಲೂ ಪರಿಣಾಮವನ್ನು ಬೀರಿದೆ.

ಎಂಜಿ ಮೋಟಾರ್‍‍ಗೂ ತಟ್ಟಿದ ಕರೊನಾ ವೈರಸ್ ಬಿಸಿ..!

ಈ ಕಂಪನಿಗಳ ಪೈಕಿ ಹೆಚ್ಚು ತೊಂದರೆಗೀಡಾಗಿರುವುದು ಭಾರತಕ್ಕೆ ಕೆಲವೇ ತಿಂಗಳ ಹಿಂದಷ್ಟೇ ಕಾಲಿಟ್ಟಿರುವ ಎಂಜಿ ಮೋಟಾರ್. ಎಂಜಿ ಬ್ರಿಟಿಷ್ ಮೂಲದ ಕಂಪನಿಯಾಗಿದ್ದರೂ ಚೀನಾ ಮೂಲದ ಸೈಕ್ ಕಂಪನಿಯಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.

ಎಂಜಿ ಮೋಟಾರ್‍‍ಗೂ ತಟ್ಟಿದ ಕರೊನಾ ವೈರಸ್ ಬಿಸಿ..!

ಎಂಜಿ ಕಂಪನಿಯು ಇತ್ತೀಚಿಗಷ್ಟೆ ತನ್ನ ಎಲೆಕ್ಟ್ರಿಕ್ ಕಾರ್ ಆದ ಝಡ್‍ಎಸ್ ಎಲೆಕ್ಟ್ರಿಕ್ ಕಾರ್ ಅನ್ನು ಬಿಡುಗಡೆಗೊಳಿಸಿದೆ. ಎಂಜಿ ಕಂಪನಿಯು ಈ ಎಲೆಕ್ಟ್ರಿಕ್ ಕಾರ್ ಅನ್ನು ಚೀನಾದಲ್ಲಿ ಬೌಜುನ್ 530 ಎಂಬ ಹೆಸರಿನಲ್ಲಿ ಮಾರಾಟ ಮಾಡುತ್ತದೆ.

ಎಂಜಿ ಮೋಟಾರ್‍‍ಗೂ ತಟ್ಟಿದ ಕರೊನಾ ವೈರಸ್ ಬಿಸಿ..!

ಎಂಜಿ ಝಡ್‍ಎಸ್ ಎಲೆಕ್ಟ್ರಿಕ್ ಕಾರಿನ ಬಿಡಿಭಾಗಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಈಗ ಈ ರೀತಿಯಾಗಿ ಆಮದು ಮಾಡಿಕೊಳ್ಳಲಾಗುತ್ತಿರುವ ಬಿಡಿಭಾಗಗಳ ಮೇಲೆ ಭೀತಿ ಆವರಿಸಿದೆ.

ಎಂಜಿ ಮೋಟಾರ್‍‍ಗೂ ತಟ್ಟಿದ ಕರೊನಾ ವೈರಸ್ ಬಿಸಿ..!

ಕರೊನಾ ವೈರಸ್‍ ಚೀನಾದಿಂದ ಆಮದು ಮಾಡಿಕೊಳ್ಳಲಾಗುವ ವಸ್ತುಗಳ ಮೇಲೆ ಪರಿಣಾಮ ಉಂಟು ಮಾಡಿದೆ. ಈ ಕಾರಣಕ್ಕೆ ಎಂಜಿ ಮೋಟಾರ್ ಕಾರುಗಳ ಉತ್ಪಾದನೆಯ ಮೇಲೆ ಪರಿಣಾಮ ಬೀರಿದೆ. ಇದಕ್ಕೆ ಮುಖ್ಯ ಕಾರಣ ಪ್ರಮುಖ ಬಿಡಿಭಾಗಗಳು ಚೀನಾದಿಂದ ಆಮದಾಗ ಬೇಕಾಗಿರುವುದು.

ಎಂಜಿ ಮೋಟಾರ್‍‍ಗೂ ತಟ್ಟಿದ ಕರೊನಾ ವೈರಸ್ ಬಿಸಿ..!

ಬಿಡಿಭಾಗಗಳು ಚೀನಾದಿಂದ ಆಮದಾಗಾದ ಹೊರತು ಎಂಜಿ ಮೋಟಾರ್‍‍ನ ವಾಹನಗಳು ಉತ್ಪಾದನೆಯಾಗುವುದಿಲ್ಲ. ಎಂಜಿ ಮೋಟಾರ್ ಹೆಕ್ಟರ್ ಎಸ್‍‍ಯುವಿಗಾಗಿ 16,000 ಕ್ಕೂ ಹೆಚ್ಚು ಬುಕ್ಕಿಂಗ್ ಹಾಗೂ ಝಡ್‍ಎಸ್ ಎಲೆಕ್ಟ್ರಿಕ್ ಕಾರಿಗಾಗಿ 2,409 ಬುಕ್ಕಿಂಗ್‍‍ಗಳನ್ನು ಪಡೆದಿದೆ.

ಎಂಜಿ ಮೋಟಾರ್‍‍ಗೂ ತಟ್ಟಿದ ಕರೊನಾ ವೈರಸ್ ಬಿಸಿ..!

ಈ ಕಾರುಗಳ ಬಿಡಿಭಾಗಗಳನ್ನು ಚೀನಾದಲ್ಲಿರುವ ಶಾಂಘೈನಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಆದರೆ ಈ ನಗರವು ಕರೊನಾ ವೈರಸ್ ಹಾವಳಿಯಿಂದ ತತ್ತರಿಸಿದೆ. ಇದರಿಂದಾಗಿ ಎಂಜಿ ಮೋಟಾರ್‍‍ನ ಭಾರತದಲ್ಲಿನ ಉತ್ಪಾದನೆ ಹಾಗೂ ಯುರೋಪ್, ಏಷ್ಯಾಗಳ ರಫ್ತಿಗೆ ತೊಂದರೆಯಾಗಲಿದೆ ಎಂಬುದು ಕಂಪನಿಯ ಅಧಿಕಾರಿಗಳ ಅಭಿಪ್ರಾಯ.

ಎಂಜಿ ಮೋಟಾರ್‍‍ಗೂ ತಟ್ಟಿದ ಕರೊನಾ ವೈರಸ್ ಬಿಸಿ..!

ಸದ್ಯ ಉತ್ಪಾದನೆಯಾಗಿರುವ ಹೆಕ್ಟರ್ ಹಾಗೂ ಝಡ್‍ಎಸ್ ಕಾರುಗಳ ಸಂಖ್ಯೆಯು ಸಣ್ಣ ಪ್ರಮಾಣದಲ್ಲಿದ್ದು, ಇವುಗಳನ್ನು ಸದ್ಯದಲ್ಲಿಯೇ ವಿತರಿಸಲಾಗುವುದು. ಈ ಎರಡೂ ಕಾರುಗಳು ಭಾರತದಲ್ಲಿ ಜನಪ್ರಿಯವಾಗಿವೆ.

ಎಂಜಿ ಮೋಟಾರ್‍‍ಗೂ ತಟ್ಟಿದ ಕರೊನಾ ವೈರಸ್ ಬಿಸಿ..!

ಈ ಕಾರಣಕ್ಕೆ ಸಾವಿರಾರು ಬುಕ್ಕಿಂಗ್‍‍ಗಳನ್ನು ಪಡೆದಿವೆ. ಎಂಜಿ ಮೋಟಾರ್ ಭಾರತದಲ್ಲಿ ತನ್ನ ಮೊದಲ ಕಾರ್ ಆಗಿ ಹೆಕ್ಟರ್ ಎಸ್‍‍ಯುವಿಯನ್ನು ಹಾಗೂ ಎರಡನೇ ಕಾರ್ ಆಗಿ ಝಡ್‍ಎಸ್ ಎಲೆಕ್ಟ್ರಿಕ್ ಕಾರ್ ಅನ್ನು ಬಿಡುಗಡೆಗೊಳಿಸಿತ್ತು.

ಎಂಜಿ ಮೋಟಾರ್‍‍ಗೂ ತಟ್ಟಿದ ಕರೊನಾ ವೈರಸ್ ಬಿಸಿ..!

ಝಡ್‍ಎಸ್ ಎಲೆಕ್ಟ್ರಿಕ್ ಕಾರುಗಳು ಬೇರೆ ಕಂಪನಿಯ ಎಲೆಕ್ಟ್ರಿಕ್ ಕಾರುಗಳಿಗಿಂತ ಕಡಿಮೆ ಬೆಲೆಯನ್ನು ಹೊಂದಿವೆ. ಇದರ ಜೊತೆಗೆ ಈ ಕಾರಿನಲ್ಲಿರುವ ಟೆಕ್ನಿಕಲ್ ಅಂಶಗಳು, ಈ ಕಾರು ನೀಡುವ ಮೈಲೇಜ್‍‍ನಿಂದಾಗಿ ಈ ಕಾರು ಹೆಚ್ಚಿನ ಸಂಖ್ಯೆಯ ಬೇಡಿಕೆಯನ್ನು ಹೊಂದಿದೆ.

ಎಂಜಿ ಮೋಟಾರ್‍‍ಗೂ ತಟ್ಟಿದ ಕರೊನಾ ವೈರಸ್ ಬಿಸಿ..!

ಎಂಜಿ ಝಡ್ಎಸ್ ಎಲೆಕ್ಟ್ರಿಕ್ ಕಾರಿನಲ್ಲಿ 44.5 ಕಿ.ವ್ಯಾನ ಲಿಥಿಯಂ ಐಯಾನ್ ಬ್ಯಾಟರಿಯನ್ನು ಅಳವಡಿಸಲಾಗಿದೆ. ಈ ಬ್ಯಾಟರಿಯನ್ನು ಪೂರ್ತಿಯಾಗಿ ಚಾರ್ಜ್ ಮಾಡಿದರೆ ಈ ಕಾರು 340 ಕಿ.ಮೀ ಚಲಿಸುತ್ತದೆ. ಈ ಎಲೆಕ್ಟ್ರಿಕ್ ಕಾರು 8.5 ಸೆಕೆಂಡುಗಳಲ್ಲಿ 0 - 100 ಕಿ.ಮೀ ವೇಗವನ್ನು ಕ್ರಮಿಸುತ್ತದೆ.

ಎಂಜಿ ಮೋಟಾರ್‍‍ಗೂ ತಟ್ಟಿದ ಕರೊನಾ ವೈರಸ್ ಬಿಸಿ..!

ಝಡ್‍ಎಸ್ ಎಲೆಕ್ಟ್ರಿಕ್ ಕಾರು 50 ಕಿ.ವ್ಯಾನ ಡಿಸಿ ಫಾಸ್ಟ್ ಚಾರ್ಜಿಂಗ್ ಪಾಯಿಂಟ್‍‍ನಲ್ಲಿ 0 - 80% ವರೆಗೂ ಕೇವಲ 50 ನಿಮಿಷಗಳಲ್ಲಿ ಚಾರ್ಜ್ ಆಗುತ್ತದೆ. ಈ ಕಾರಿನಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಹಲವಾರು ಫೀಚರ್‍‍ಗಳನ್ನು ನೀಡಲಾಗಿದೆ. ಝಡ್‍ಎಸ್ ಎಲೆಕ್ಟ್ರಿಕ್ ಕಾರು ಯುರೋ ಎನ್‍‍ಸಿ‍ಎ‍‍ಪಿ ಕ್ರಾಶ್ ಟೆಸ್ಟ್ ನಲ್ಲಿ 5 ಸ್ಟಾರ್ ರೇಟಿಂಗ್ ಪಡೆದಿದೆ.

ಎಂಜಿ ಮೋಟಾರ್‍‍ಗೂ ತಟ್ಟಿದ ಕರೊನಾ ವೈರಸ್ ಬಿಸಿ..!

ಇತ್ತೀಚಿಗೆ ನಡೆಸಲಾದ ಕ್ರಾಶ್ ಟೆಸ್ಟ್ ನಲ್ಲಿ ಈ ಕಾರು ಇಷ್ಟು ರೇಟಿಂಗ್ ಪಡೆದಿದೆ. ಈ ಎಲೆಕ್ಟ್ರಿಕ್ ಕಾರು 6 ಏರ್‍‍ಬ್ಯಾಗ್, ಎ‍‍ಬಿ‍ಎಸ್, ಬ್ರೇಕ್ ಅಸಿಸ್ಟ್, ಹಿಲ್ ಸ್ಟಾರ್ಟ್ ಅಸಿಸ್ಟ್, ಹಿಲ್ ಡಿಸೆಂಟ್ ಕಂಟ್ರೋಲ್, ಎಲೆಕ್ಟ್ರಾನಿಕ್ ಸ್ಟಾಬಿಲಿಟಿ ಕಂಟ್ರೋಲ್, ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್, ಟಯರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂಗಳನ್ನು ಹೊಂದಿದೆ.

Article Published On: Friday, January 31, 2020, 16:08 [IST]
English summary
Corona virus affects MG Motor in India. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+