ಕರೋನಾ ಭೀತಿ ಹಿನ್ನೆಲೆ: ಬಂದ್ ಆಗಲಿವೆ ಶೋರೂಂಗಳು

ಕರೋನಾ ವೈರಸ್ ನಿಂದಾಗಿ ಇಡೀ ಜಗತ್ತು ನರಳುತ್ತಿದೆ. ಕರೋನಾ ವೈರಸ್ ವಿಶ್ವದ 120ಕ್ಕೂ ಹೆಚ್ಚು ದೇಶಗಳನ್ನು ಕಾಡುತ್ತಿದೆ. ಚೀನಾ ಹಾಗೂ ಇಟಲಿ ದೇಶಗಳಲ್ಲಿ ಹೆಕ್ಕು ಜೀವ ಹಾನಿಯಾಗಿದೆ. ವಿಶ್ವಾದ್ಯಂತ ಸುಮಾರು 5,000ಕ್ಕೂ ಹೆಚ್ಚು ಜನರು ಕರೋನಾ ವೈರಸ್ನಿಂದ ಸಾವನ್ನಪ್ಪಿದ್ದಾರೆ.

ಕರೋನಾ ಭೀತಿ ಹಿನ್ನೆಲೆ: ಬಂದ್ ಆಗಲಿವೆ ಶೋರೂಂಗಳು

1.70 ಲಕ್ಷಕ್ಕೂ ಹೆಚ್ಚು ಜನರು ಕರೋನಾ ವೈರಸ್ ಸೋಂಕಿಗೆ ಒಳಗಾಗಿದ್ದಾರೆ. ಕರೋನಾ ವೈರಸ್ ವಿರುದ್ಧ ಇಡೀ ಜಗತ್ತು ಹೋರಾಡುತ್ತಿದೆ. ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಕು ಜನರು ಸೇರದಂತೆ ಜನರಿಗೆ ಸೂಚಿಸಲಾಗಿದೆ. ಭಾರತದಲ್ಲಿ ಕರೋನಾ ವೈರಸ್ ಸೋಂಕಿನ 114 ಪ್ರಕರಣಗಳು ದಾಖಲಾಗಿವೆ.

ಕರೋನಾ ಭೀತಿ ಹಿನ್ನೆಲೆ: ಬಂದ್ ಆಗಲಿವೆ ಶೋರೂಂಗಳು

ಹೆಚ್ಚಿನ ಜನಸಂಖ್ಯೆಯ ಹೊರತಾಗಿಯೂ, ವಿಶ್ವದ ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಕರೋನಾ ವೈರಸ್ ಪ್ರಮಾಣ ಚಿಕ್ಕದು ಎಂಬುದು ಸಮಾಧಾನಕರ. ಭಾರತದಲ್ಲಿಯೂ ಕರೋನಾ ವೈರಸ್ ವೇಗವಾಗಿ ಹರಡುತ್ತಿದೆ. ಮಹಾರಾಷ್ಟ್ರ, ಕೇರಳ ಹಾಗೂ ಕರ್ನಾಟಕ ರಾಜ್ಯಗಳಲ್ಲಿ ಹೆಚ್ಚಿನ ಸಂಖ್ಯೆಯ ಪ್ರಕರಣಗಳು ದಾಖಲಾಗಿವೆ.

ಕರೋನಾ ಭೀತಿ ಹಿನ್ನೆಲೆ: ಬಂದ್ ಆಗಲಿವೆ ಶೋರೂಂಗಳು

ಕರೋನಾ ಹರಡುವುದನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಹಾಗೂ ಆಯಾ ರಾಜ್ಯಗಳು ವಿವಿಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ. ಇದರ ಅಂಗವಾಗಿ ಕೆಲವು ರಾಜ್ಯ ಸರ್ಕಾರಗಳು ವಾಹನ ಮಾರಾಟಗಾರರಿಗೆ ಶೋರೂಂಗಳನ್ನು ಬಂದ್ ಮಾಡಲು ಆದೇಶಿಸಿರುವ ವರದಿಗಲಾಗಿವೆ. ಇದಕ್ಕೆ ಒಡಿಶಾ ರಾಜ್ಯ ಉದಾಹರಣೆಯಾಗಿದೆ.

ಕರೋನಾ ಭೀತಿ ಹಿನ್ನೆಲೆ: ಬಂದ್ ಆಗಲಿವೆ ಶೋರೂಂಗಳು

ವರದಿಗಳ ಪ್ರಕಾರ, ಮುಂದಿನ ಆದೇಶ ಬರುವವರೆಗೂ ಕಾಂಜಮ್ ಪ್ರದೇಶದಲ್ಲಿ ವಾಹನದ ಶೋ ರೂಂಗಳನ್ನು ತಾತ್ಕಾಲಿಕವಾಗಿ ಮುಚ್ಚುವಂತೆ ಅಲ್ಲಿನ ರಾಜ್ಯ ಸರ್ಕಾರ ಆದೇಶಿಸಿದೆ. ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಕೆಲವು ಡೀಲರ್ ಗಳಿಗೂ ಇದೇ ರೀತಿಯ ಆದೇಶ ಹೊರಡಿಸಲಾಗಿದೆ ಎಂದು ವರದಿಯಾಗಿದೆ.

ಕರೋನಾ ಭೀತಿ ಹಿನ್ನೆಲೆ: ಬಂದ್ ಆಗಲಿವೆ ಶೋರೂಂಗಳು

ಈ ಆದೇಶವನ್ನು ಉಲ್ಲಂಘಿಸಿ ಶೋ ರೂಂಗಳನ್ನು ತೆರೆದರೆ ಕ್ರಮ ಕೈಗೊಳ್ಳಲಾಗುವುದು ಎಂದು ವರದಿಯಾಗಿದೆ. ಇದರಿಂದ ಆಟೋ ವಿತರಕರು ಆಘಾತಕ್ಕೆ ಒಳಗಾಗಿದ್ದಾರೆ. ಏಕೆಂದರೆ ಭಾರತದಲ್ಲಿ ಬಿಎಸ್ -6 ನಿಯಮಗಳು ಜಾರಿಗೆ ಬರಲು 15 ದಿನಗಳಿಗಿಂತ ಕಡಿಮೆ ಅವಧಿ ಇದೆ. ಬಿಎಸ್ -6 ನಿಯಮಗಳು ಏಪ್ರಿಲ್ 1 ರಿಂದ ಜಾರಿಗೆ ಬರಲಿವೆ.

ಕರೋನಾ ಭೀತಿ ಹಿನ್ನೆಲೆ: ಬಂದ್ ಆಗಲಿವೆ ಶೋರೂಂಗಳು

ತಮ್ಮ ಬಳಿಯಿರುವ ಬಿಎಸ್ -4 ವಾಹನಗಳನ್ನು ತೆರವುಗೊಳಿಸಲು ಡೀಲರ್ ಗಳು ಮುಂದಾಗಿದ್ದಾರೆ. ಈಗ ಕರೋನಾ ವೈರಸ್ ಭಯದಿಂದಾಗಿ, ಡೀಲರ್ ಗಳು ಮುಂದೆ ಏನು ಮಾಡಬೇಕೆಂದು ದಾರಿ ತೋಚದೆ ಕಂಗಾಲಾಗಿದ್ದಾರೆ.

ಕರೋನಾ ಭೀತಿ ಹಿನ್ನೆಲೆ: ಬಂದ್ ಆಗಲಿವೆ ಶೋರೂಂಗಳು

ಈಗ ಸರ್ಕಾರದ ಈ ಆದೇಶದಿಂದಾಗಿ ವಾಹನ ಡೀಲರ್ ಗಳು ಗಾಬರಿಗೊಂಡಿದ್ದಾರೆ. ಉತ್ತರ ಭಾರತದ ಮಾರಾಟಗಾರರ ಉದ್ಯೋಗಿಯೊಬ್ಬರು ಮಾತನಾಡಿ, ಕರೋನಾ ವೈರಸ್ ನಿಂದಾಗಿ ಈಗಾಗಲೇ ಗ್ರಾಹಕರ ಸಂಖ್ಯೆ ಕಡಿಮೆಯಾಗಿದೆ.

ಕರೋನಾ ಭೀತಿ ಹಿನ್ನೆಲೆ: ಬಂದ್ ಆಗಲಿವೆ ಶೋರೂಂಗಳು

ನಮ್ಮ ಬಳಿಯಿರುವ ಬಿಎಸ್ -4 ವಾಹನಗಳನ್ನು ಮಾರಾಟ ಮಾಡುವ ನಮ್ಮ ಪ್ರಯತ್ನಗಳಿಗೆ ಸರ್ಕಾರದ ಈ ಆದೇಶದಿಂದ ಅಡ್ಡಿಯಾಗಿದೆ ಎಂದು ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಲು ಫೆಡರೇಶನ್ ಆಫ್ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ ​​(ಎಫ್‌ಎಡಿಎ) ನಿರಾಕರಿಸಿದೆ.

ಸೂಚನೆ: ಈ ಚಿತ್ರಗಳನ್ನು ರೆಫರೆನ್ಸ್ ಗಾಗಿ ಬಳಸಲಾಗಿದೆ.

More from DriveSpark

Article Published On: Tuesday, March 17, 2020, 13:04 [IST]
English summary
Corona virus: Odisha Maharashtra state authorities asks auto dealers to shut operations. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+