ಕರೋನಾ ವೈರಸ್ ಭೀತಿ: ಸ್ವಚ್ವವಾಗಲಿವೆ ಸರ್ಕಾರಿ ಬಸ್ಸುಗಳು

ಕರೋನಾ ವೈರಸ್ ಪ್ರಪಂಚದಾದ್ಯಂತ ವೇಗವಾಗಿ ಹರಡುತ್ತಿದೆ. ಕರೋನಾ ವೈರಸ್ ಚೀನಾ ಹಾಗೂ ಇಟಲಿ ದೇಶಗಳಲ್ಲಿ ಹಲವರನ್ನು ಬಲಿ ಪಡೆದಿದೆ. ಇಲ್ಲಿಯವರೆಗೆ, 4,000 ಕ್ಕೂ ಹೆಚ್ಚು ಜನರು ಕರೋನಾ ವೈರಸ್ ನಿಂದ ಸಾವನ್ನಪ್ಪಿದ್ದಾರೆ.

ಕರೋನಾ ವೈರಸ್ ಭೀತಿ: ಸ್ವಚ್ವವಾಗಲಿವೆ ಸರ್ಕಾರಿ ಬಸ್ಸುಗಳು

ಪ್ರಪಂಚದಾದ್ಯಂತ ಲಕ್ಷಾಂತರ ಜನರು ಈ ವೈರಸ್ ಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕರೋನಾ ವೈರಸ್ ಭಾರತವನ್ನು ಸಹ ಬಿಟ್ಟಿಲ್ಲ. ಪ್ರಪಂಚದ ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಪರಿಸ್ಥಿತಿ ತೀರಾ ಹದಗೆಡದಿದ್ದರೂ ವೇಗವಾಗಿ ಹರಡುತ್ತಿದೆ.

ಕರೋನಾ ವೈರಸ್ ಭೀತಿ: ಸ್ವಚ್ವವಾಗಲಿವೆ ಸರ್ಕಾರಿ ಬಸ್ಸುಗಳು

ಕರೋನಾ ಹರಡುವುದನ್ನು ತಡೆಯಲು ಕೇಂದ್ರ ಸರ್ಕಾರ ಹಾಗೂ ಸಂಬಂಧಪಟ್ಟ ರಾಜ್ಯ ಸರ್ಕಾರಗಳು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ. ಅದರಲ್ಲೂ ವಿಶೇಷವಾಗಿ ದೇಶದ ರಾಜಧಾನಿ ದೆಹಲಿಯಲ್ಲಿ ಮುನ್ನೆಚ್ಚರಿಕೆಗಳನ್ನು ತೀವ್ರಗೊಳಿಸಲಾಗಿದೆ.

ಕರೋನಾ ವೈರಸ್ ಭೀತಿ: ಸ್ವಚ್ವವಾಗಲಿವೆ ಸರ್ಕಾರಿ ಬಸ್ಸುಗಳು

ಸಾರ್ವಜನಿಕ ಸಾರಿಗೆಯಿಂದಲೂ ಕರೋನಾ ವೈರಸ್ ಹರಡುವ ಸಾಧ್ಯತೆಗಳಿರುತ್ತವೆ. ಈ ಹಿನ್ನೆಲೆಯಲ್ಲಿ ದೆಹಲಿ ಸರ್ಕಾರ ಕಠಿಣ ಕ್ರಮಗಳನ್ನು ತೆಗೆದು ಕೊಳ್ಳುತ್ತಿದೆ. ಬೇರೆ ರಾಜ್ಯಗಳಿಂದ

ದೆಹಲಿಯ ಅಂತರರಾಜ್ಯ ಬಸ್ ಟರ್ಮಿನಲ್ ಪ್ರವೇಶಿಸುವ ಬಸ್ಸುಗಳು ಪ್ರಮಾಣಪತ್ರವನ್ನು ಸಲ್ಲಿಸಬೇಕಾಗುತ್ತದೆ.

ಕರೋನಾ ವೈರಸ್ ಭೀತಿ: ಸ್ವಚ್ವವಾಗಲಿವೆ ಸರ್ಕಾರಿ ಬಸ್ಸುಗಳು

ಈ ಬಸ್‌ಗಳು ಕರೋನಾ ಸೋಂಕು ಹರಡದಂತೆ ಸ್ವಚ್ವಗೊಳಿಸಲಾಗಿದೆ ಎಂದು ಖಚಿತಪಡಿಸಿ ಪ್ರಮಾಣೀಕರಿಸಬೇಕು. ಕರೋನಾ ವೈರಸ್ ಹರಡುವುದನ್ನು ತಡೆಯಲು ದೆಹಲಿ ರಾಜ್ಯ ಸರ್ಕಾರ ಈ ಈ ಪ್ರಮಾಣಪತ್ರವನ್ನು ಕಡ್ಡಾಯಗೊಳಿಸಿದೆ. ದೆಹಲಿ ಸರ್ಕಾರ ಶೀಘ್ರದಲ್ಲೇ ಆಟೋಗಳನ್ನು ಸ್ವಚ್ವಗೊಳಿಸಲು ಮುಂದಾಗಲಿದೆ ಎಂದು ವರದಿಗಳು ತಿಳಿಸಿವೆ.

ಕರೋನಾ ವೈರಸ್ ಭೀತಿ: ಸ್ವಚ್ವವಾಗಲಿವೆ ಸರ್ಕಾರಿ ಬಸ್ಸುಗಳು

ಆಟೋ ರಿಕ್ಷಾ ಹಾಗೂ ಮಿನಿ ಬಸ್ಸುಗಳು ಸೇರಿದಂತೆ ವಾಹನಗಳ ಚಾಲಕರಿಗೆ ನಾವು ಈಗಾಗಲೇ ಕೆಲವು ಸುರಕ್ಷತಾ ಸೂಚನೆಗಳನ್ನು ನೀಡಿದ್ದೇವೆ ಎಂದು ದೆಹಲಿ ರಾಜ್ಯ ಸರ್ಕಾರದ ಅಧಿಕಾರಿಗಳು ತಿಳಿಸಿದ್ದಾರೆ. ಜಾಗೃತಿ ಮೂಡಿಸಲು, ವಾಹನಗಳನ್ನು ಸ್ವಚ್ವವಾಗಿಡುವ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.

ಕರೋನಾ ವೈರಸ್ ಭೀತಿ: ಸ್ವಚ್ವವಾಗಲಿವೆ ಸರ್ಕಾರಿ ಬಸ್ಸುಗಳು

ಪ್ರತಿದಿನ ವಾಹನಗಳು ರಸ್ತೆಗಿಳಿಯುವ ಮೊದಲು ಸ್ವಚ್ವಗೊಳಿಸುವಂತೆ ಸೂಚಿಸಲಾಗುತ್ತದೆ. ಜೊತೆಗೆ ಕರೋನಾ ಹರಡುವುದನ್ನು ತಡೆಯಲು ಏನು ಮಾಡಬಹುದು? ಏನು ಮಾಡಬಾರದು? ಎಂಬುದನ್ನೂ ಸಹ ವಿವರಿಸಲಾಗಿದೆ.

ಕರೋನಾ ವೈರಸ್ ಭೀತಿ: ಸ್ವಚ್ವವಾಗಲಿವೆ ಸರ್ಕಾರಿ ಬಸ್ಸುಗಳು

ಇದರಿಂದ ಪ್ರಯಾಣಿಕರಿಗೆ ಮಾತ್ರವಲ್ಲದೇ, ಚಾಲಕರಿಗೂ ಅನುಕೂಲವಾಗಲಿದೆ. ಮಿನಿ ಬಸ್ ಮಾಲೀಕರು ತಮ್ಮ ವಾಹನಗಳನ್ನು ಪ್ರತಿದಿನ ಸ್ವಚ್ವಗೊಳಿಸಬೇಕು. ಪ್ರತಿದಿನ ತಮ್ಮ ವಾಹನಗಳನ್ನು ಸ್ವಚ್ವಗೊಳಿಸಲಾಗದ ಸಣ್ಣ ವಾಹನಗಳ ಮಾಲೀಕರಿಗೆ ಸಹಾಯ ಮಾಡಲು ಸರ್ಕಾರ ಯೋಜಿಸುತ್ತಿದೆ.

ಕರೋನಾ ವೈರಸ್ ಭೀತಿ: ಸ್ವಚ್ವವಾಗಲಿವೆ ಸರ್ಕಾರಿ ಬಸ್ಸುಗಳು

ಈ ಬಗ್ಗೆ ಇನ್ನೂ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ. ಈಗಾಗಲೇ ದೆಹಲಿ ಸಾರಿಗೆ ನಿಗಮದ ಬಸ್ ಡಿಪೋಗಳ ಬಳಿಯಿರುವ ಆಟೋ ಹಾಗೂ ಟ್ಯಾಕ್ಸಿಗಳನ್ನು ಸ್ವಚ್ವಗೊಳಿಸಲು ಆರಂಭಿಸಲಾಗಿದೆ. ದೆಹಲಿಯಲ್ಲಿ ಸರಿಸುಮಾರು 1 ಲಕ್ಷ ಆಟೋಗಳಿವೆ.

ಕರೋನಾ ವೈರಸ್ ಭೀತಿ: ಸ್ವಚ್ವವಾಗಲಿವೆ ಸರ್ಕಾರಿ ಬಸ್ಸುಗಳು

ಈ ವಾಹನಗಳನ್ನು ದೆಹಲಿ ಸಾರಿಗೆ ನಿಗಮದ ಬಸ್ ಡಿಪೋ ಹಾಗೂ ಕ್ಲಸ್ಟರ್ ಬಸ್ ಡಿಪೋಗಳಲ್ಲಿ ಉಚಿತವಾಗಿ ಸ್ವಚ್ವಗೊಳಿಸಲಾಗುತ್ತಿದೆ. ಈಗಾಗಲೇ ಪ್ರತಿದಿನ ಬಸ್‌ಗಳನ್ನು ಸ್ವಚ್ವಗೊಳಿಸಲಾಗುತ್ತಿದೆ.

ಕರೋನಾ ವೈರಸ್ ಭೀತಿ: ಸ್ವಚ್ವವಾಗಲಿವೆ ಸರ್ಕಾರಿ ಬಸ್ಸುಗಳು

ಹೊರಗಿನ ರಾಜ್ಯಗಳಿಂದ ದೆಹಲಿಗೆ 3,467 ಬಸ್ಸುಗಳು ಚಲಿಸುತ್ತವೆ. ದೆಹಲಿಯಿಂದ ಉತ್ತರ ಪ್ರದೇಶಕ್ಕೆ 1,519 ಬಸ್ಸುಗಳು ಚಲಿಸುತ್ತವೆ. ಹರಿಯಾಣದಿಂದ 757 ಹಾಗೂ ಉತ್ತರಾಖಂಡದಿಂದ 313 ಬಸ್‌ಗಳು ಚಲಿಸುತ್ತವೆ.

ಕರೋನಾ ವೈರಸ್ ಭೀತಿ: ಸ್ವಚ್ವವಾಗಲಿವೆ ಸರ್ಕಾರಿ ಬಸ್ಸುಗಳು

ದೆಹಲಿ ಸರ್ಕಾರಿ ಬಸ್ಸುಗಳನ್ನು ಪ್ರತಿದಿನ ಸ್ವಚ್ವಗೊಳಿಸುತ್ತಿರುವುದರಿಂದ ದೆಹಲಿ ಮೆಟ್ರೋ ರೈಲು ನಿಗಮವು ಸಹ ತನ್ನ ರೈಲುಗಳು ಹಾಗೂ ನಿಲ್ದಾಣಗಳನ್ನು ಸೋಂಕಿನಿಂದ ಮುಕ್ತಗೊಳಿಸಲುಸ್ವಚ್ವತಾ ಕಾರ್ಯವನ್ನು ಕೈಗೊಂಡಿದೆ.

Most Read Articles

Kannada
English summary
Corona virus sanitisation paper must for interstate buses in Delhi. Read in Kannada.
Story first published: Monday, March 16, 2020, 17:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X