ಲಾಕ್‌ಡೌನ್‌ನಿಂದ ಆಟೋಮೊಬೈಲ್ ಕಂಪನಿಗಳ ಮೇಲಾದ ಪರಿಣಾಮಗಳೇನು ಗೊತ್ತಾ?

ಭಾರತದಲ್ಲಿ ಲಾಕ್‌ಡೌನ್ ಅವಧಿಯನ್ನು ಮೇ 3ರವರೆಗೆ ವಿಸ್ತರಿಸಲಾಗಿದೆ. ಕೋವಿಡ್ -19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ತೆಗೆದುಕೊಂಡಿರುವ ಈ ನಿರ್ಧಾರವನ್ನು ಭಾರತದ ಆಟೋ ಮೊಬೈಲ್ ಉದ್ಯಮ ಸ್ವಾಗತಿಸಿದ್ದು, ಸರ್ಕಾರಕ್ಕೆ ಎಲ್ಲಾ ರೀತಿಯ ನೆರವನ್ನು ನೀಡುವುದಾಗಿ ತಿಳಿಸಿದೆ.

ಲಾಕ್‌ಡೌನ್‌ನಿಂದ ಆಟೋಮೊಬೈಲ್ ಕಂಪನಿಗಳ ಮೇಲಾದ ಪರಿಣಾಮಗಳೇನು ಗೊತ್ತಾ?

ಇದಕ್ಕೆ ಅನುಗುಣವಾಗಿ ಬಹುತೇಕ ಎಲ್ಲಾ ವಾಹನ ತಯಾರಕ ಕಂಪನಿಗಳು ತಮ್ಮ ಉಚಿತ ವಾರಂಟಿ ಹಾಗೂ ಸರ್ವಿಸ್ ಅವಧಿಯನ್ನು ವಿಸ್ತರಿಸಿವೆ. ಇವುಗಳಲ್ಲಿ ರೆನಾಲ್ಟ್, ವೋಲ್ವೋ ಕಂಪನಿಗಳು ಸೇರಿವೆ. ಟೊಯೊಟಾ ಕಂಪನಿಯು ಪರಿಹಾರ ನಿಧಿಗೆ ಹಣ ದೇಣಿಗೆ ನೀಡಿದೆ.

ಲಾಕ್‌ಡೌನ್‌ನಿಂದ ಆಟೋಮೊಬೈಲ್ ಕಂಪನಿಗಳ ಮೇಲಾದ ಪರಿಣಾಮಗಳೇನು ಗೊತ್ತಾ?

ಬಾಷ್ ಕಂಪನಿಯು ರೂ.50 ಕೋಟಿಗಳ ದೇಣಿಗೆ ನೀಡಿದೆ. ಇದರ ಜೊತೆಗೆ ಆಟೋಮೊಬೈಲ್ ಕಂಪನಿಗಳು ಮಾಸ್ಕ್ ಸೇರಿದಂತೆ ಅಗತ್ಯ ವಸ್ತುಗಳನ್ನು ತಯಾರಿಸುತ್ತಿವೆ. ಹ್ಯುಂಡೈ ಕಂಪನಿಯು ಟೆಸ್ಟಿಂಗ್ ಕಿಟ್‌ಗಳನ್ನು ಒದಗಿಸಿರುವ ಜೊತೆಗೆ ವೆಂಟಿಲೇಟರ್‌ಗಳನ್ನು ಉತ್ಪಾದಿಸುತ್ತಿದೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಲಾಕ್‌ಡೌನ್‌ನಿಂದ ಆಟೋಮೊಬೈಲ್ ಕಂಪನಿಗಳ ಮೇಲಾದ ಪರಿಣಾಮಗಳೇನು ಗೊತ್ತಾ?

ಇದಿಷ್ಟು ಆಟೋಮೊಬೈಲ್ ಕಂಪನಿಗಳ ಸಹಾಯ ಹಸ್ತದ ವಿಷಯವಾಗಿದೆ. ಆಟೋಮೊಬೈಲ್ ಕಂಪನಿಗಳು ಸಂಕಷ್ಟಕ್ಕೂ ಸಿಲುಕಿವೆ. ಲಾಕ್‌ಡೌನ್ ಅವಧಿಯನ್ನು ವಿಸ್ತರಿಸಿರುವ ಕಾರಣಕ್ಕೆ ಬಿಎಸ್ 4 ವಾಹನಗಳ ಮಾರಾಟಕ್ಕೆ ವಿಧಿಸಲಾಗಿದ್ದ ಗಡುವು ಸಹ ಮುಂದಕ್ಕೆ ಹೋಗಿದೆ.

ಲಾಕ್‌ಡೌನ್‌ನಿಂದ ಆಟೋಮೊಬೈಲ್ ಕಂಪನಿಗಳ ಮೇಲಾದ ಪರಿಣಾಮಗಳೇನು ಗೊತ್ತಾ?

ವಾಹನಗಳ ಮಾರಾಟವನ್ನು ಹೆಚ್ಚಿಸಲು ಕಂಪನಿಗಳು ಈಗ ಆನ್‌ಲೈನ್ ಮಾರಾಟದತ್ತ ಗಮನ ಹರಿಸಿವೆ. ಎಂಜಿ ಮೋಟಾರ್, ಟಾಟಾ ಮೋಟಾರ್ಸ್, ಹ್ಯುಂಡೈ, ಬಿಎಂಡಬ್ಲ್ಯು ಮುಂತಾದ ಕಂಪನಿಗಳು ಆನ್‌ಲೈನ್‌ನಲ್ಲಿ ಕಾರುಗಳನ್ನು ಖರೀದಿಸುವ ಆಯ್ಕೆಯನ್ನು ನೀಡಿವೆ. ಆದರೆ ದ್ವಿಚಕ್ರ ವಾಹನಗಳ ಆನ್‌ಲೈನ್ ಮಾರಾಟವನ್ನು ಇನ್ನೂ ಆರಂಭಿಸಿಲ್ಲ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಲಾಕ್‌ಡೌನ್‌ನಿಂದ ಆಟೋಮೊಬೈಲ್ ಕಂಪನಿಗಳ ಮೇಲಾದ ಪರಿಣಾಮಗಳೇನು ಗೊತ್ತಾ?

ಸರ್ಕಾರವು ಲಾಕ್‌ಡೌನ್‌ನಿಂದ ನೀಡುವ ವಿನಾಯಿತಿಯಲ್ಲಿ ವಾಹನ ಉದ್ಯಮದ ಉತ್ಪಾದನೆಯೂ ಸೇರಿರಲಿದೆ ಎಂಬ ಭರವಸೆಯನ್ನು ವಾಹನ ಉದ್ಯಮವು ಹೊಂದಿದೆ. ಆದರೆ ಇದುವರೆಗೂ ಇದರ ಬಗ್ಗೆ ಯಾವುದೇ ಮಾಹಿತಿ ದೊರೆತಿಲ್ಲ.

ಲಾಕ್‌ಡೌನ್‌ನಿಂದ ಆಟೋಮೊಬೈಲ್ ಕಂಪನಿಗಳ ಮೇಲಾದ ಪರಿಣಾಮಗಳೇನು ಗೊತ್ತಾ?

ಆಟೋಮೊಬೈಲ್ ಉದ್ಯಮವು ಮೊದಲೇ ಸಂಕಷ್ಟಕ್ಕೆ ಸಿಲುಕಿತ್ತು. ಈಗ ಉತ್ಪಾದನೆ ಸ್ಥಗಿತಗೊಂಡಿರುವುದರಿಂದ ದಿನಕ್ಕೆ ಸಾವಿರಾರು ಕೋಟಿ ನಷ್ಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆಟೋಮೊಬೈಲ್ ಕಂಪನಿಗಳು ಪರಿಹಾರದ ಪ್ಯಾಕೇಜ್‌ ನೀಡಬೇಕೆಂದು ಹಾಗೂ ಜಿಎಸ್‌ಟಿಯಲ್ಲಿ ಪರಿಹಾರ ನೀಡಬೇಕೆಂದು ಒತ್ತಾಯಿಸಿವೆ.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಲಾಕ್‌ಡೌನ್‌ನಿಂದ ಆಟೋಮೊಬೈಲ್ ಕಂಪನಿಗಳ ಮೇಲಾದ ಪರಿಣಾಮಗಳೇನು ಗೊತ್ತಾ?

ಉತ್ಪಾದನೆಯನ್ನು ಮೇ 3ರವರೆಗೆ ಸ್ಥಗಿತಗೊಳಿಸಲಾಗಿದೆ. ಅದರ ನಂತರ ಪರಿಸ್ಥಿತಿ ಸುಧಾರಿಸಬಹುದೆಂದು ನಿರೀಕ್ಷಿಸಲಾಗಿದೆ. ಲಾಕ್‌ಡೌನ್ ಮೇ 3ರವರೆಗೆ ವಿಸ್ತರಿಸಿರುವ ಹಿನ್ನೆಲೆಯಲ್ಲಿ ಮುಂದಿನ ವಾರವು ಸಹ ಮಾರಾಟ ಹಾಗೂ ಉತ್ಪಾದನೆಯಲ್ಲಿ ಯಾವುದೇ ಬದಲಾವಣೆಗಳಾಗುವುದಿಲ್ಲ.

Article Published On: Monday, April 20, 2020, 19:15 [IST]
English summary
Covid 19 effects on Indian Auto Industry. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+