ಲಾಕ್‌ಡೌನ್ ಎಫೆಕ್ಟ್: ಗಣನೀಯ ಪ್ರಮಾಣದಲ್ಲಿ ಕುಸಿದ ಪೆಟ್ರೋಲ್-ಡೀಸೆಲ್ ಮಾರಾಟ

ಇಡೀ ಜಗತ್ತು ಈಗ ಸಂಕಷ್ಟದ ಸಮಯವನ್ನು ಎದುರಿಸುತ್ತಿದೆ. ಕರೋನಾ ವೈರಸ್ ಹರಡುವುದನ್ನು ತಡೆಯಲು ವಿಶ್ವದ ಬಹುತೇಕ ದೇಶಗಳಲ್ಲಿ ಲಾಕ್‌ಡೌನ್ ಜಾರಿಗೊಳಿಸಲಾಗಿದೆ. ಇದರಿಂದಾಗಿ ಜನರು ತಮ್ಮ ಮನೆಗಳೊಳಗೆ ಬಂಧಿಯಾಗಿದ್ದಾರೆ. ಇದು ಜನರಿಗೆ ಹೊಸ ರೀತಿಯ ಅನುಭವ.

ಲಾಕ್‌ಡೌನ್ ಎಫೆಕ್ಟ್: ಗಣನೀಯ ಪ್ರಮಾಣದಲ್ಲಿ ಕುಸಿದ ಪೆಟ್ರೋಲ್-ಡೀಸೆಲ್ ಮಾರಾಟ

ಭಾರತದಲ್ಲಿ ಮೊದಲ ಹಂತದ ಲಾಕ್‌ಡೌನ್ ಅನ್ನು ಮಾರ್ಚ್ 24ರಿಂದ ಏಪ್ರಿಲ್ 14ರವರೆಗೆ ಜಾರಿಗೊಳಿಸಲಾಯಿತು. ಈಗ ಮೇ 17ರವರೆಗೆ ವಿಸ್ತರಿಸಲಾಗಿದೆ. ವಾಹನಗಳ ಸಂಚಾರವಿರದ ಕಾರಣ, ಪೆಟ್ರೋಲ್ ಹಾಗೂ ಡೀಸೆಲ್ ಮಾರಾಟವು ಏಪ್ರಿಲ್‌ ತಿಂಗಳಿನಲ್ಲಿ ತೀವ್ರವಾಗಿ ಕುಸಿದಿದೆ.

ಲಾಕ್‌ಡೌನ್ ಎಫೆಕ್ಟ್: ಗಣನೀಯ ಪ್ರಮಾಣದಲ್ಲಿ ಕುಸಿದ ಪೆಟ್ರೋಲ್-ಡೀಸೆಲ್ ಮಾರಾಟ

ವಿಶ್ವದ ಅತಿದೊಡ್ಡ ವಾಹನ ಮಾರುಕಟ್ಟೆಗಳಲ್ಲಿ ಒಂದಾದ ಭಾರತವು ವಿಶ್ವದಲ್ಲಿಯೇ ಹೆಚ್ಚಿನ ಪ್ರಮಾಣದಲ್ಲಿ ಪೆಟ್ರೋಲ್, ಡೀಸೆಲ್ ಆಮದು ಮಾಡಿಕೊಳ್ಳುತ್ತದೆ. ಲಾಕ್‌ಡೌನ್ ಕಾರಣಕ್ಕೆ ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬಳಕೆ ತೀವ್ರವಾಗಿ ಕುಸಿದಿದೆ.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಲಾಕ್‌ಡೌನ್ ಎಫೆಕ್ಟ್: ಗಣನೀಯ ಪ್ರಮಾಣದಲ್ಲಿ ಕುಸಿದ ಪೆಟ್ರೋಲ್-ಡೀಸೆಲ್ ಮಾರಾಟ

ಏಪ್ರಿಲ್ ತಿಂಗಳ ಕೊನೆಯ 10 ದಿನಗಳ ಮಾಹಿತಿಯು ಪೆಟ್ರೋಲ್, ಡೀಸೆಲ್‌ನಲ್ಲಿ ಬೇಡಿಕೆ ಹೆಚ್ಚುತ್ತಿರುವ ಲಕ್ಷಣಗಳನ್ನು ತೋರಿಸಿದೆ. ಏಪ್ರಿಲ್ 20ರಿಂದ ಲಾಕ್‌ಡೌನ್‌ನಲ್ಲಿ ಕೆಲವು ವಿನಾಯಿತಿಗಳನ್ನು ನೀಡಿರುವುದೇ ಇದಕ್ಕೆ ಮುಖ್ಯ ಕಾರಣ. ಮೇ 4ರಿಂದ ಇನ್ನಷ್ಟು ವಿನಾಯಿತಿ ನೀಡಲಾಗಿದ್ದು, ಇಂಧನದ ಬೇಡಿಕೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಗಳಿವೆ.

ಲಾಕ್‌ಡೌನ್ ಎಫೆಕ್ಟ್: ಗಣನೀಯ ಪ್ರಮಾಣದಲ್ಲಿ ಕುಸಿದ ಪೆಟ್ರೋಲ್-ಡೀಸೆಲ್ ಮಾರಾಟ

ಪೆಟ್ರೋಲ್ ಮಾರಾಟವು ಏಪ್ರಿಲ್ ತಿಂಗಳ ಮೊದಲಾರ್ಧದಲ್ಲಿ 64%ನಷ್ಟು ಕುಸಿದಿತ್ತು. ದ್ವಿತೀಯಾರ್ಧದಲ್ಲಿ ಬೇಡಿಕೆ ಸ್ವಲ್ಪ ಹೆಚ್ಚಾದ ಕಾರಣ ಏಪ್ರಿಲ್ ತಿಂಗಳಿನಲ್ಲಿ ಒಟ್ಟಾರೆ 61%ನಷ್ಟು ಕುಸಿತ ಉಂಟಾಗಿತ್ತು. ಏಪ್ರಿಲ್ ಮೊದಲಾರ್ಧದಲ್ಲಿ ಡೀಸೆಲ್ ಮಾರಾಟವು 61%ನಷ್ಟು ಕುಸಿದಿತ್ತು.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಲಾಕ್‌ಡೌನ್ ಎಫೆಕ್ಟ್: ಗಣನೀಯ ಪ್ರಮಾಣದಲ್ಲಿ ಕುಸಿದ ಪೆಟ್ರೋಲ್-ಡೀಸೆಲ್ ಮಾರಾಟ

ಏಪ್ರಿಲ್ 20ರ ನಂತರ ನೀಡಲಾದ ಕೆಲ ವಿನಾಯಿತಿಗಳ ಕಾರಣದಿಂದಾಗಿ ಏಪ್ರಿಲ್ ತಿಂಗಳಿನಲ್ಲಿ ಡೀಸೆಲ್ ಮಾರಾಟವು 56.5%ನಷ್ಟು ಕುಸಿತ ಕಂಡಿತ್ತು. ಏಪ್ರಿಲ್ ತಿಂಗಳಿನಲ್ಲಿ ಭಾರತದಲ್ಲಿ 870,000 ಟನ್ ಪೆಟ್ರೋಲ್ ಮಾರಾಟ ಮಾಡಲಾಗಿದೆ. 2019ರ ಏಪ್ರಿಲ್ ತಿಂಗಳಿನಲ್ಲಿ ಈ ಪ್ರಮಾಣವು 2.23 ಮಿಲಿಯನ್ ಟನ್‌ಗಳಾಗಿತ್ತು.

ಲಾಕ್‌ಡೌನ್ ಎಫೆಕ್ಟ್: ಗಣನೀಯ ಪ್ರಮಾಣದಲ್ಲಿ ಕುಸಿದ ಪೆಟ್ರೋಲ್-ಡೀಸೆಲ್ ಮಾರಾಟ

2019ರ ಏಪ್ರಿಲ್‌ ತಿಂಗಳಿನಲ್ಲಿ 6.56 ಮಿಲಿಯನ್ ಟನ್ ಡೀಸೆಲ್ ಮಾರಾಟ ಮಾಡಲಾಗಿತ್ತು. ಈ ಪ್ರಮಾಣವು ಏಪ್ರಿಲ್‌ 2020ರಲ್ಲಿ 2.84 ಮಿಲಿಯನ್ ಟನ್‌ಗಳಿಗೆ ಇಳಿದಿದೆ. ಎಟಿಎಫ್ - ಏವಿಯೇಷನ್ ​​ಟರ್ಬೈನ್ ಇಂಧನದ ಬಳಕೆಯು ಪೆಟ್ರೋಲ್ ಹಾಗೂ ಡೀಸೆಲ್ ಬಳಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಕುಸಿದಿದೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಲಾಕ್‌ಡೌನ್ ಎಫೆಕ್ಟ್: ಗಣನೀಯ ಪ್ರಮಾಣದಲ್ಲಿ ಕುಸಿದ ಪೆಟ್ರೋಲ್-ಡೀಸೆಲ್ ಮಾರಾಟ

ಏವಿಯೇಷನ್ ಟರ್ಬೈನ್ ಇಂಧನಗಳ ಬಳಕೆ 91.5%ನಷ್ಟು ಕುಸಿದಿದೆ. ಹೆಚ್ಚಿನ ವಿಮಾನಯಾನ ಸಂಸ್ಥೆಗಳು ಸೇವೆಯನ್ನು ನಿಲ್ಲಿಸಿರುವುದೇ ಇದಕ್ಕೆ ಮುಖ್ಯ ಕಾರಣ. ಏಪ್ರಿಲ್ 20ರ ನಂತರ ಏವಿಯೇಷನ್ ​​ಟರ್ಬೈನ್ ಇಂಧನ ಬಳಕೆಯು ಸ್ವಲ್ಪ ಪ್ರಮಾಣದಲ್ಲಿ ಹೆಚ್ಚಾಗಿದೆ.

ಲಾಕ್‌ಡೌನ್ ಎಫೆಕ್ಟ್: ಗಣನೀಯ ಪ್ರಮಾಣದಲ್ಲಿ ಕುಸಿದ ಪೆಟ್ರೋಲ್-ಡೀಸೆಲ್ ಮಾರಾಟ

ಲಾಕ್‌ಡೌನ್‌ನಿಂದ ವಿನಾಯಿತಿ ನೀಡಿರುವ ಕಾರಣಕ್ಕೆ ಪೆಟ್ರೋಲ್ ಹಾಗೂ ಡೀಸೆಲ್ ಬೇಡಿಕೆ ಮತ್ತೆ ಏರಿಕೆಯಾಗುವ ನಿರೀಕ್ಷೆಗಳಿವೆ. ಆರ್ಥಿಕ ಪರಿಸ್ಥಿತಿಯನ್ನು ಸರಿ ದಾರಿಗೆ ತರುವ ಉದ್ದೇಶದಿಂದ ಸರ್ಕಾರವು ಲಾಕ್‌ಡೌನ್‌ನಲ್ಲಿ ವಿನಾಯಿತಿ ನೀಡಿದೆ.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಲಾಕ್‌ಡೌನ್ ಎಫೆಕ್ಟ್: ಗಣನೀಯ ಪ್ರಮಾಣದಲ್ಲಿ ಕುಸಿದ ಪೆಟ್ರೋಲ್-ಡೀಸೆಲ್ ಮಾರಾಟ

ಪೊಲೀಸರು ಅಗತ್ಯವಿಲ್ಲದೆ ಹೊರ ಬರುವವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಲಾಕ್‌ಡೌನ್ ಜಾರಿಗೆ ಬಂದಾಗಿನಿಂದ ಭಾರತದಾದ್ಯಂತ ಲಕ್ಷಾಂತರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ವಿಶೇಷ ಪಾಸ್‌ನೊಂದಿಗೆ ಪ್ರಯಾಣಿಸಲು ಸಾಧ್ಯವಿದ್ದರೂ, ಪೊಲೀಸರು ಅನಗತ್ಯವಾಗಿ ಹೊರಬರುವವರ ಮೇಲೆ ಕ್ರಮ ಕೈಗೊಳ್ಳುತ್ತಿದ್ದಾರೆ.

ಸೂಚನೆ: ಈ ಚಿತ್ರಗಳನ್ನು ರೆಫರೆನ್ಸ್‌ಗಾಗಿ ಬಳಸಲಾಗಿದೆ.

Article Published On: Tuesday, May 5, 2020, 12:51 [IST]
English summary
Petrol Diesel sales down in April 2020 in India. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+