ವೈರಸ್ ಭೀತಿ: ಹೊಸ ಸುರಕ್ಷಾ ಮಾರ್ಗಸೂಚಿಯೆಂತೆ ಗ್ರಾಹಕ ಸೇವೆಗಳನ್ನು ಆರಂಭಿಸಿದ ಮಾರುತಿ ಸುಜುಕಿ

ಇಡೀ ವಿಶ್ವವನ್ನೇ ಆತಂಕಕ್ಕೆ ತಳ್ಳಿರುವ ಕರೋನಾ ವೈರಸ್ ಮಟ್ಟ ಹಾಕುವುದಕ್ಕಾಗಿ ಸದ್ಯ ಮೂರನೇ ಹಂತದ ಲಾಕ್‌ಡೌನ್ ವಿಧಿಸಿರುವ ಕೇಂದ್ರ ಸರ್ಕಾರವು ಆರ್ಥಿಕ ಪುನಶ್ಚೇತನಕ್ಕಾಗಿ ಕೈಗಾರಿಕಾ ವಲಯಕ್ಕೆ ಷರತ್ತುಬದ್ದ ವಿನಾಯ್ತಿಗಳನ್ನು ಘೋಷಿಸಿದ್ದು, ಆಟೋ ಕಂಪನಿಗಳು ಕೂಡಾ ಹೊಸ ಮಾರ್ಗಸೂಚಿ ಅನುಸಾರವಾಗಿ ವಾಹನ ಉತ್ಪಾದನೆ ಮತ್ತು ಮಾರಾಟ ಪ್ರಕ್ರಿಯೆಯನ್ನು ಪುನಾರಂಭಿಸಿವೆ.

ಹೊಸ ಸುರಕ್ಷಾ ಮಾರ್ಗಸೂಚಿಯೆಂತೆ ಗ್ರಾಹಕ ಸೇವೆಗಳನ್ನು ಆರಂಭಿಸಿದ ಮಾರುತಿ

ದೇಶದ ಅತಿದೊಡ್ಡ ಕಾರು ಉತ್ಪಾದನಾ ಕಂಪನಿಯಾದ ಮಾರುತಿ ಸುಜುಕಿ ಕೂಡಾ ಕೇಂದ್ರ ಸರ್ಕಾರದ ಹೊಸ ಮಾರ್ಗಸೂಚಿ ಪ್ರಕಾರ ಕಾರು ಉತ್ಪಾದನೆಯನ್ನು ಪುನಾರಂಭಿಸಿದ್ದು, ಮನೆಸಾರ್ ಮತ್ತು ಗುರುಗ್ರಾಮ್‌ನಲ್ಲಿರುವ ಎರಡು ವಾಹನ ಉತ್ಪಾದನಾ ಘಟಕಗಳಲ್ಲಿ ಗರಿಷ್ಠ ಮಟ್ಟದ ಸುರಕ್ಷಾ ಸೌಲಭ್ಯಗಳೊಂದಿಗೆ ಉತ್ಪಾದನಾ ಪ್ರಕ್ರಿಯೆಗ ಮರುಚಾಲನೆ ನೀಡಿದೆ. ಇದಕ್ಕಾಗಿಯೇ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಸೋಂಕು ಹರಡದಂತೆ ಗರಿಷ್ಠ ಎಚ್ಚರಿಕೆ ವಹಿಸಲಾಗಿದೆ.

ಹೊಸ ಸುರಕ್ಷಾ ಮಾರ್ಗಸೂಚಿಯೆಂತೆ ಗ್ರಾಹಕ ಸೇವೆಗಳನ್ನು ಆರಂಭಿಸಿದ ಮಾರುತಿ

ಉತ್ಪಾದನಾ ಘಟಕಗಳಲ್ಲಿ ಶೇ.33 ರಷ್ಟು ಪ್ರಮಾಣದ ಉದ್ಯೋಗಿಗಳೊಂದಿಗೆ ಉತ್ಪಾದನಾ ಚಟುವಟಿಕೆಗಳನ್ನು ಕೈಗೊಳ್ಳಲಾಗಿದ್ದು, ಉದ್ಯೋಗದ ಸ್ಥಳದಲ್ಲಿ ಸಾಮಾಜಿಕ ಅಂತರದ ಜೊತೆಗೆ ಗುಣಮಟ್ಟದ ಮಾಸ್ಕ್, ಹ್ಯಾಂಡ್ ಸ್ಯಾನಿಟೈಜರ್ ಮತ್ತು ಹ್ಯಾಂಡ್ ಗ್ಲೌಸ್ ಬಳಕೆಯು ಕಡ್ಡಾಯವಾಗಿ ಬಳಕೆ ಮಾಡಲಿದೆ.

MOST READ: ಕರೋನಾ ವೈರಸ್: ಹೊಸ ವಿಧಾನದ ಮೂಲಕ ಜನರ ಬಳಿ ಬರಲಿರುವ ಪೊಲೀಸರು..

ಹೊಸ ಸುರಕ್ಷಾ ಮಾರ್ಗಸೂಚಿಯೆಂತೆ ಗ್ರಾಹಕ ಸೇವೆಗಳನ್ನು ಆರಂಭಿಸಿದ ಮಾರುತಿ

ಹಾಗೆಯೇ ಅಧಿಕೃತ ವಾಹನಗಳ ಮಾರಾಟ ಮಳಿಗೆಗಳಲ್ಲೂ ಹೆಚ್ಚಿನ ಮಟ್ಟದ ಸುರಕ್ಷಾ ಕ್ರಮಗಳನ್ನು ತೆಗದುಕೊಳ್ಳಲಾಗುತ್ತಿದ್ದು, ನಿಯಮಿತವಾಗಿ ಟೆಸ್ಟಿಂಗ್ ವಾಹನಗಳ ಸ್ವಚ್ಚತೆ, ಸಿಬ್ಬಂದಿಯ ಆರೋಗ್ಯ ತಪಾಸಣೆ, ಸಿಬ್ಬಂದಿ ನಡುವೆ ಸಾಮಾಜಿಕ ಅಂತರ, ಹ್ಯಾಂಡ್ ಸ್ಯಾನಿಟೈಜ್ ಮತ್ತು ಫೇಸ್ ಶೀಲ್ಡ್ ಕಡ್ಡಾಯ ಬಳಕೆ ಮಾಡಬೇಕಿದೆ.

ಹೊಸ ಸುರಕ್ಷಾ ಮಾರ್ಗಸೂಚಿಯೆಂತೆ ಗ್ರಾಹಕ ಸೇವೆಗಳನ್ನು ಆರಂಭಿಸಿದ ಮಾರುತಿ

ಇದಲ್ಲದೇ ಗ್ರಾಹಕರ ಸೇವೆಗಳನ್ನು ಕೈಗೊಳ್ಳುವ ಸಿಬ್ಬಂದಿಯು ನಿಗದಿತ ಸ್ಥಳದಿಂದ ಹೊರಹೊಗುವಾಗ ಮತ್ತು ಒಳಬರುವಾಗ ಥರ್ಮಾಮೀಟರ್‌ನಿಂದ ಟೆಸ್ಟಿಂಗ್ ಕಡ್ಡಾಯವಾಗಿದ್ದು, ಸರ್ವೀಸ್‌ಗೆ ಬರುವ ವಾಹನಗಳನ್ನು ಕೂಡಾ ಪೂರ್ತಿಯಾಗಿ ನಂಜುನಿರೋಧಕ ರಸಾಯನಿಕಗಳಿಂದ ಶುಚಿಗೊಳಿಸಿಯೇ ವಿತರಣೆ ಮಾಡುತ್ತಿದೆ.

MOST READ: ಕರೋನಾ ಸಂಕಷ್ಟ: ಟ್ಯಾಕ್ಸಿ ಮತ್ತು ಆಟೋ ಚಾಲಕರಿಗೆ ವಿಶೇಷ ಪ್ಯಾಕೇಜ್ ಘೋಷಣೆ

ಹೊಸ ಸುರಕ್ಷಾ ಮಾರ್ಗಸೂಚಿಯೆಂತೆ ಗ್ರಾಹಕ ಸೇವೆಗಳನ್ನು ಆರಂಭಿಸಿದ ಮಾರುತಿ

ಈ ಕುರಿತು ಹಲವಾರು ಗ್ರಾಹಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ವೈರಸ್ ಭೀತಿಯ ನಡುವೆಯೂ ಯಾವುದೇ ಆತಂಕವಿಲ್ಲದೆ ಪ್ರಯಾಣಿಸಲು ನೆರವಾಗುವಂತೆ ಸ್ಯಾನಿಟೈಜ್ ಮಾಡಿರುವ ಮಾರುತಿ ಕಂಪನಿಗೆ ಧನ್ಯವಾದ ತಿಳಿಸಿದ್ದಾರೆ.

ಹೊಸ ಸುರಕ್ಷಾ ಮಾರ್ಗಸೂಚಿಯೆಂತೆ ಗ್ರಾಹಕ ಸೇವೆಗಳನ್ನು ಆರಂಭಿಸಿದ ಮಾರುತಿ

ಇನ್ನು ವಾಹನಗಳನ್ನು ನೇರವಾಗಿ ಶೋರೂಂನಲ್ಲಿ ವಿತರಣೆಗೆ ಅವಕಾಶ ಇಲ್ಲವಾದರೂ ಹೊಸ ಮಾರ್ಗ ಕಂಡುಕೊಂಡಿರುವ ವಾಹನ ಕಂಪನಿಗಳು ಹೊಸ ಸುರಕ್ಷಾ ಮಾರ್ಗಸೂಚಿಯೆಂತೆ ಆನ್‌ಲೈನ್ ಬುಕ್ಕಿಂಗ್ ಪಡೆದುಕೊಂಡು ಗ್ರಾಹಕರ ಮನೆ ಬಾಗಿಲಿಗೆ ಉತ್ಪನ್ನಗಳನ್ನು ತಲುಪಿಸುತ್ತಿವೆ.

MOST READ: ಲಾಕ್‌ಡೌನ್‌ನಿಂದ ತತ್ತರಿಸಿರುವ ಆಟೋ ಕಂಪನಿಗಳಿಗೆ ಇದೀಗ ಮತ್ತೊಂದು ಸಂಕಷ್ಟ

ಹೊಸ ಸುರಕ್ಷಾ ಮಾರ್ಗಸೂಚಿಯೆಂತೆ ಗ್ರಾಹಕ ಸೇವೆಗಳನ್ನು ಆರಂಭಿಸಿದ ಮಾರುತಿ

ಈ ವೇಳೆಯೂ ಗ್ರಾಹಕರಿಗೆ ಗರಿಷ್ಠ ಸುರಕ್ಷತೆಯೊಂದಗೆ ವಾಹನಗಳನ್ನು ವಿತರಣೆ ಮಾಡಲಿರುವ ಆಟೋ ಕಂಪನಿಗಳು ಸೋಂಕು ಹರಡದಂತೆ ಗರಿಷ್ಠ ಮುಂಜಾಗ್ರತೆ ಕೈಗೊಳ್ಳುತ್ತಿದ್ದು, ಸಂಕಷ್ಟದ ನಡುವೆಯೂ ಉದ್ಯಮ ವ್ಯವಹಾರವನ್ನು ಕಾಯ್ದುಕೊಳ್ಳಲು ಹರಸಾಹಸಪಡುತ್ತಿವೆ.

More from DriveSpark

Article Published On: Saturday, May 9, 2020, 20:56 [IST]
English summary
Covid-19: Maruti Suzuki Pickup Person Follow Safety Guidelines, Happy Customer Gives Good Feedback. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+