ಕರೋನಾ ವೈರಸ್: ಹೊಸ ವಿಧಾನದ ಮೂಲಕ ಜನರ ಬಳಿ ಬರಲಿರುವ ಪೊಲೀಸರು

ಭಾರತದ ಅನೇಕ ನಗರಗಳು ಕರೋನಾ ವೈರಸ್ ಸೋಂಕಿಗೆ ತುತ್ತಾಗಿವೆ. ಅವುಗಳಲ್ಲಿ ಚೆನ್ನೈ ನಗರವು ಸಹ ಒಂದು. ಕರೋನಾ ವೈರಸ್ ಪೀಡಿತ ಪ್ರದೇಶಗಳಲ್ಲಿ ಜನರನ್ನು ಸಂಪರ್ಕಿಸಲು ಚೆನ್ನೈ ಪೊಲೀಸರು ಹೊಸ ವಿಧಾನವನ್ನು ಕಂಡುಹಿಡಿದಿದ್ದಾರೆ. ಇದರಿಂದಾಗಿ ಸೋಂಕು ತಗುಲುವ ಅಪಾಯವಿರುವುದಿಲ್ಲ.

ಕರೋನಾ ವೈರಸ್: ಹೊಸ ವಿಧಾನದ ಮೂಲಕ ಜನರ ಬಳಿ ಬರಲಿರುವ ಪೊಲೀಸರು

ಚೆನ್ನೈನಲ್ಲಿರುವ ಅನೇಕ ಪ್ರದೇಶಗಳನ್ನು ಹಾಟ್ ಸ್ಪಾಟ್‌ಗಳನ್ನಾಗಿ ಗುರುತಿಸಲಾಗಿದೆ. ಈ ಪ್ರದೇಶಗಳಲ್ಲಿ ಜನರನ್ನು ಹೊರಬರದಂತೆ ತಡೆಯಲು ಪೊಲೀಸರನ್ನು ನಿಯೋಜಿಸಲಾಗಿದೆ. ಚೆನ್ನೈ ಪೊಲೀಸರು ಈಗ ರೋಬೋಟ್ ಕಾಪ್ ಎಲ್‌ಡಿಯನ್ನು ಬಳಸಲು ಆರಂಭಿಸಿದ್ದಾರೆ. ಇದರ ಸಹಾಯದಿಂದ ಪೊಲೀಸರು ಆ ಹಾಟ್ ಸ್ಪಾಟ್ ಪ್ರದೇಶಗಳನ್ನು ಪರಿಶೀಲಿಸಬಹುದು.

ಕರೋನಾ ವೈರಸ್: ಹೊಸ ವಿಧಾನದ ಮೂಲಕ ಜನರ ಬಳಿ ಬರಲಿರುವ ಪೊಲೀಸರು

ಈ ರೋಬೋಟ್ ಅನ್ನು ರಿಮೋಟ್ ಕಂಟ್ರೋಲ್ ಮೂಲಕ ನಿಯಂತ್ರಿಸಬಹುದು. ವೈರ್‌ಲೈಸ್ ಕನೆಕ್ಟಿವಿಟಿ ಮೂಲಕ ಈ ರೋಬೋಟ್ ಅನ್ನು 1 ಕಿ.ಮೀ ದೂರದಿಂದ ನಿಯಂತ್ರಿಸಬಹುದು. ಪೊಲೀಸರು ಇನ್ನಿತರ ಕಾರ್ಯಗಳನ್ನು ಸಹ ಈ ರೋಬೋಟ್ ಮೂಲಕ ನಿರ್ವಹಿಸಬಹುದು.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಕರೋನಾ ವೈರಸ್: ಹೊಸ ವಿಧಾನದ ಮೂಲಕ ಜನರ ಬಳಿ ಬರಲಿರುವ ಪೊಲೀಸರು

ಇವುಗಳಲ್ಲಿ ಮೇಲ್ವಿಚಾರಣೆ, ಸ್ಥಳೀಯ ಜನರನ್ನು ಸಂಪರ್ಕಿಸುವುದು ಸೇರಿದಂತೆ ಹಲವು ಕಾರ್ಯಗಳಿವೆ. ಈ ರೋಬೋಟ್‌ನಲ್ಲಿ ಮೇಲ್ವಿಚಾರಣೆಗಾಗಿ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಜೊತೆಗೆ ಟೂ ವೇ ಇಂಟರ್‌ಕಾಮ್ ಅಳವಡಿಸಲಾಗಿದೆ.

ಕರೋನಾ ವೈರಸ್: ಹೊಸ ವಿಧಾನದ ಮೂಲಕ ಜನರ ಬಳಿ ಬರಲಿರುವ ಪೊಲೀಸರು

ಈ ಇಂಟರ್‌ಕಾಮ್ ಮೂಲಕ ಪೊಲೀಸರು ಸಾರ್ವಜನಿಕರನ್ನು ತಲುಪುವುದು ಮಾತ್ರವಲ್ಲದೆ ಸಾರ್ವಜನಿಕರೂ ಸಹ ತಮ್ಮ ವಿಷಯಗಳನ್ನು ಪೊಲೀಸರಿಗೆ ತಿಳಿಸಬಹುದು. ಈ ರೋಬೋಟ್ ಕೂಪ್ ಎಲ್‌ಡಿ ನಿಖರ ಚಲನಶೀಲತೆಗಾಗಿ ಸ್ಟೀಯರಿಂಗ್ ಕಂಟ್ರೋಲ್‌ನಂತಹ ಹಲವು ಫೀಚರ್‌ಗಳನ್ನು ಹೊಂದಿದೆ.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಇದರ ಜೊತೆಗೆ ಎಲ್ಇಡಿ ಡಿಸ್ಪ್ಲೇಯನ್ನು ಸಹ ಅಳವಡಿಸಲಾಗಿದೆ. ಈ ಡಿಸ್ಪ್ಲೇಯಲ್ಲಿ ಯಾವುದೇ ಸಂದೇಶವನ್ನು ನೋಡಬಹುದು. ಈ ರೋಬೋಟ್ ಅನ್ನು ಬಳಸಲು, ಪೊಲೀಸರು ಬ್ಯಾರಿಕೇಡ್‌ಗಳ ಹಿಂದೆ ನಿಂತು ಈ ರೋಬೋಟ್ ಮೂಲಕ ಜನರನ್ನು ಸಂಪರ್ಕಿಸಬೇಕಾಗುತ್ತದೆ.

ಕರೋನಾ ವೈರಸ್: ಹೊಸ ವಿಧಾನದ ಮೂಲಕ ಜನರ ಬಳಿ ಬರಲಿರುವ ಪೊಲೀಸರು

ಪೊಲೀಸರು ಈ ರೋಬೋಟ್ ತಯಾರಿಸಲು ಅನೇಕ ಸಂಸ್ಥೆಗಳ ನೆರವನ್ನು ಪಡೆದಿದ್ದಾರೆ. ಈ ರೋಬೋಟ್ ಅನ್ನು ತಯಾರಿಸಲು ಸುಮಾರು ಒಂದು ವಾರ ತೆಗೆದುಕೊಳ್ಳಲಾಗಿದೆ. ಈ ರೋಬೋಟ್ ಅನ್ನು ರೋಬೋಥಾಟ್ಸ್, ಸೈ-ಫೈ ಇನ್ನೋವೇಶನ್ ಮತ್ತು ಕ್ಯಾಲಿಡೈ ಮೋಟರ್ ವರ್ಕ್ಸ್ ತಯಾರಿಸಿವೆ. ಈ ರೋಬೋಟ್ ಪೊಲೀಸರ ಕೆಲಸವನ್ನು ಸುಲಭಗೊಳಿಸುತ್ತದೆ.

Most Read Articles

Kannada
English summary
Chennai police using Robots in Covid19 containment zones. Read in Kannada.
Story first published: Tuesday, May 5, 2020, 19:02 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X