Just In
Don't Miss!
- Movies
ರೈತರ ಪ್ರತಿಭಟನೆ: ಕೆಂಪುಕೋಟೆ ಮೇಲೆ ಭಾವುಟ ಹಾರಿಸಿದ್ದು ಸಿನಿಮಾ ನಟ ದೀಪ್ ಸಿಧು?
- News
18 ಮಹಿಳೆಯರ ಕೊಲೆ ಮಾಡಿದ್ದ ಸೀರಿಯಲ್ ಕಿಲ್ಲರ್ ಬಂಧನ; ಕೊಲೆಗೆ ಕಾರಣವೇನು?
- Finance
ಸತತ 4ನೇ ದಿನ ಇಳಿಕೆ ಕಂಡು ಒಂದು ತಿಂಗಳ ಕನಿಷ್ಠ ಮಟ್ಟಕ್ಕೆ ತಲುಪಿದ ಚಿನ್ನ
- Lifestyle
ಹೊಟ್ಟೆಯ ಬಲಭಾಗದಲ್ಲಿ ನೋವು, ಈ ತೊಂದರೆಗಳಿರಬಹುದು
- Sports
ವಿರಾಟ್ ಕೊಹ್ಲಿ ಮತ್ತು ನನ್ನ ಮಧ್ಯೆ ಏನೂ ಬದಲಾಗಿಲ್ಲ: ಅಜಿಂಕ್ಯ ರಹಾನೆ
- Education
ECIL Recruitment 2021: 3 ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ನೇರ ಸಂದರ್ಶನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ ಭಾರತದ ಮೊದಲ ಎಲೆಕ್ಟ್ರಿಕ್ ಟ್ರಕ್
ಪೆಟ್ರೋಲ್, ಡೀಸೆಲ್ ವಾಹನಗಳಿಂದಾಗಿ ಗಾಳಿಯ ಗುಣಮಟ್ಟವು ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಈ ಕಾರಣಕ್ಕೆ ಭಾರತವೂ ಸೇರಿದಂತೆ ವಿಶ್ವದೆಲ್ಲೆಡೆ ಎಲೆಕ್ಟ್ರಿಕ್ ವಾಹನಗಳಿಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ.

ಸರ್ಕಾರಗಳೂ ಸಹ ಪೆಟ್ರೋಲ್, ಡೀಸೆಲ್ ವಾಹನಗಳ ಬದಲು ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಹೆಚ್ಚಿಸುವ ಮೂಲಕ ಪರಿಸರವನ್ನು ರಕ್ಷಿಸಲು ಮುಂದಾಗಿವೆ. ಎಲೆಕ್ಟ್ರಿಕ್ ವಾಹನಗಳ ಬಗ್ಗೆ ಜನರಲ್ಲಿ ಆಸಕ್ತಿ ಹೆಚ್ಚುತ್ತಿರುವುದರಿಂದ ವಾಹನ ತಯಾರಕ ಕಂಪನಿಗಳು ಹೊಸ ಹೊಸ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸುತ್ತಿವೆ.

ಡೈಮ್ಲರ್, ಹೆವಿ ಡ್ಯೂಟಿ ಟ್ರಕ್ ಹಾಗೂ ಬಸ್ ಗಳನ್ನು ಉತ್ಪಾದಿಸುವ ಕಂಪನಿಯಾಗಿದೆ. ಈ ಕಂಪನಿಯನ್ನು 1926ರಲ್ಲಿ ಸ್ಥಾಪಿಸಲಾಯಿತು. ಈ ಕಂಪನಿಯನ್ನು 1998ರವರೆಗೆ ಡೈಮ್ಲರ್-ಬೆಂಝ್ ಎಂದು ಕರೆಯಲಾಗುತ್ತಿತ್ತು.
MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ನಂತರ ಈ ಕಂಪನಿಯ ಹೆಸರನ್ನು ಡೈಮ್ಲರ್ ಕ್ರಿಸ್ಲರ್ ಎಂದು ಕರೆಯಲಾಗುತ್ತಿದೆ. ಈ ಕಂಪನಿಯು ಜರ್ಮನಿಯ ಸ್ಟಟ್‌ಗಾರ್ಟ್ ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದ್ದು, ವಿಶ್ವಾದ್ಯಂತ ತನ್ನ ವಾಹನಗಳನ್ನು ಮಾರಾಟ ಮಾಡುತ್ತದೆ.

ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಡೈಮ್ಲರ್ ಕಂಪನಿಯು ಭಾರತದಲ್ಲಿ ಮೊದಲ ಬಾರಿಗೆ ಎಲೆಕ್ಟ್ರಿಕ್ ಟ್ರಕ್ ಅನ್ನು ಬಿಡುಗಡೆಗೊಳಿಸಲು ಮುಂದಾಗಿದೆ.
MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಈ ಕಾರಣಕ್ಕಾಗಿ ಡೈಮ್ಲರ್ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಭಾರೀ ಪ್ರಮಾಣದಲ್ಲಿ ಬಂಡವಾಳವನ್ನು ಹೂಡಿಕೆ ಮಾಡುತ್ತಿದೆ. ಜರ್ಮನಿ ಮೂಲದ ಆಟೋಮೊಬೈಲ್ ಕಂಪನಿಯಾದ ಡೈಮ್ಲರ್, ಭರತ್‌ಬೆಂಝ್ ಹಾಗೂ ಫುಸೊ ಬ್ರಾಂಡ್‌ಗಳ ಅಡಿಯಲ್ಲಿ ಮಧ್ಯಮ ಗಾತ್ರದ ಹಾಗೋ ಭಾರೀ ಗಾತ್ರದ ಟ್ರಕ್ ಹಾಗೂ ಬಸ್‌ಗಳನ್ನು ಉತ್ಪಾದಿಸುತ್ತದೆ.

ಡೈಮ್ಲರ್ ಕಂಪನಿಯು ಮುಂದಿನ ವರ್ಷ ಫ್ಯೂಚರ್ ಮೊಬಿಲಿಟಿ ಎಂಬ ಕಾರ್ಯಕ್ರಮವನ್ನು ಆಯೋಜಿಸಿದೆ. ಕಂಪನಿಯು ಫುಸೊ ಇ-ಸೆಂಟರ್ ಹೆಸರಿನ ಎಲೆಕ್ಟ್ರಿಕ್ ಟ್ರಕ್ ಅನ್ನು ಬಿಡುಗಡೆಗೊಳಿಸಲಿದೆ.
MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಈ ಟ್ರಕ್'ನ ಎರಡನೇ ತಲೆಮಾರಿನ ಮಾದರಿಯನ್ನು ಮುಂದಿನ ವರ್ಷ ಬಿಡುಗಡೆಗೊಳಿಸಲಾಗುವುದು. ಮೂಲಗಳ ಪ್ರಕಾರ ಇ-ಸೆಂಟರ್ ಟ್ರಕ್'ನಲ್ಲಿರುವ ಬ್ಯಾಟರಿಯನ್ನು ಪೂರ್ತಿಯಾಗಿ ಚಾರ್ಜ್ ಮಾಡಿದ ನಂತರ ಈ ಟ್ರಕ್ 100 ಕಿ.ಮೀಗಳವರೆಗೆ ಚಲಿಸಲಿದೆ.

ಈ ಟ್ರಕ್ 3,200 ಕೆ.ಜಿಗಳವರೆಗಿನ ಪೇಲೋಡ್ ಅನ್ನು ಸಾಗಿಸುವ ಸಾಮರ್ಥ್ಯವನ್ನು ಹೊಂದಿದೆ. ಭಾರತದಲ್ಲಿ ಹೊಸ ತಂತ್ರಜ್ಞಾನದ ವಾಹನಗಳನ್ನು ಪರಿಚಯಿಸುವುದರಲ್ಲಿ ಡೈಮ್ಲರ್ ಕಂಪನಿಯು ಮುಂಚೂಣಿಯಲ್ಲಿದೆ.
MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಡೈಮ್ಲರ್ ಭಾರತದಲ್ಲಿ ಭಾರತ್ ಸ್ಟೇಜ್ 5 ಟ್ರಕ್'ಗಳನ್ನು ಬಿಡುಗಡೆಗೊಳಿಸಿದ ಏಕೈಕ ಕಂಪನಿಯಾಗಿದೆ. ಬಿಎಸ್ 5 ಟ್ರಕ್ ಗಳ ಅಗತ್ಯವಿಲ್ಲದಿದ್ದರೂ ಕಂಪನಿಯು ಬಿಎಸ್ 5 ಟ್ರಕ್ ಅನ್ನು ಬಿಡುಗಡೆಗೊಳಿಸಿದೆ.