ಎಲೆಕ್ಟ್ರಿಕ್‌ ಆವೃತ್ತಿಯಲ್ಲಿ ಬಿಡುಗಡೆಯಾಯ್ತು ಹೆಮ್ಮೆಯ ಅಂಬಾಸಿಡರ್ ಕಾರು

ಕಳೆದ ವಾರ ಬಿಡುಗಡೆಯಾದ ಡಿಸಿ ಡಿಸೈನ್‌ನ ಎಲೆಕ್ಟ್ರಿಕ್ ಅಂಬಾಸಿಡರ್ ಕಾರು ಇಂಟರ್‌ನೆಟ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಕಾರಿನ ಅನೇಕ ಮಾಹಿತಿಗಳನ್ನು ಬಿಡುಗಡೆಗೊಳಿಸಲಾಗಿದೆ.

ಎಲೆಕ್ಟ್ರಿಕ್‌ ಆವೃತ್ತಿಯಲ್ಲಿ ಬಿಡುಗಡೆಯಾಯ್ತು ಹೆಮ್ಮೆಯ ಅಂಬಾಸಿಡರ್ ಕಾರು

ಡಿಸಿ ಡಿಸೈನ್‌ ಸಂಸ್ಥಾಪಕ ದಿಲೀಪ್ ಚಾಪ್ರಿಯಾ ಈ ಎಲೆಕ್ಟ್ರಿಕ್ ಅಂಬಾಸಿಡರ್ ಬಗ್ಗೆ ಸಾಕಷ್ಟು ಮಾಹಿತಿಯನ್ನು ಎಲೆಕ್ಟ್ರಿಕ್ ವೆಹಿಕಲ್ ವೆಬ್‌ಸೈಟ್‌ನೊಂದಿಗೆ ಹಂಚಿಕೊಂಡಿದ್ದಾರೆ. ಇದರ ವಿವರಗಳನ್ನು ಈ ಲೇಖನದಲ್ಲಿ ನೋಡೋಣ.

ಎಲೆಕ್ಟ್ರಿಕ್‌ ಆವೃತ್ತಿಯಲ್ಲಿ ಬಿಡುಗಡೆಯಾಯ್ತು ಹೆಮ್ಮೆಯ ಅಂಬಾಸಿಡರ್ ಕಾರು

ಸ್ವಿಸ್ ಎಂಜಿನಿಯರಿಂಗ್

ಸ್ವಿಟ್ಜರ್ಲೆಂಡ್ ಮೂಲದ ಕಂಪನಿಯೊಂದು ಎಲೆಕ್ಟ್ರಿಕ್ ಆಂಬ್ಯುಲೇಟರ್‌ನಿಂದ ಕಾರ್ ಬ್ಯಾಟರಿ, ಎಲೆಕ್ಟ್ರಿಕ್ ಮೋಟರ್‌ವರೆಗೆ ಎಲ್ಲವನ್ನೂ ಅಭಿವೃದ್ಧಿಪಡಿಸಿದೆ. ಆದರೆ ದಿಲೀಪ್ ಚಾಪ್ರಿಯಾರವರು ಆ ಕಂಪನಿಯ ಹೆಸರನ್ನು ಬಹಿರಂಗಪಡಿಸಲಿಲ್ಲ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಎಲೆಕ್ಟ್ರಿಕ್‌ ಆವೃತ್ತಿಯಲ್ಲಿ ಬಿಡುಗಡೆಯಾಯ್ತು ಹೆಮ್ಮೆಯ ಅಂಬಾಸಿಡರ್ ಕಾರು

ಈ ಕಾರ್ ಅನ್ನು ರೆಗ್ಯುಲರ್ ಅಂಬಾಸಿಡರ್ ಕಾರಿಗಿಂತ 125 ಎಂಎಂ ಹೆಚ್ಚು ಉದ್ದ ಹಾಗೂ 170 ಎಂಎಂ ಹೆಚ್ಚು ಅಗಲವಿರುವಂತೆ ವಿನ್ಯಾಸಗೊಳಿಸಲಾಗಿದೆ. ಇದರಿಂದ ಇಂಟಿರಿಯರ್ ಆಕರ್ಷಕವಾಗಿ ಕಾಣುತ್ತದೆ.

ಎಲೆಕ್ಟ್ರಿಕ್‌ ಆವೃತ್ತಿಯಲ್ಲಿ ಬಿಡುಗಡೆಯಾಯ್ತು ಹೆಮ್ಮೆಯ ಅಂಬಾಸಿಡರ್ ಕಾರು

ಇಂಟಿರಿಯರ್

ಈ ಕಾರಿನ ಇಂಟಿರಿಯರ್ ಕೆಲವು ವರ್ಷಗಳ ಹಿಂದೆ ಡಿಸಿ ಡಿಸೈನ್ ಕಂಪನಿ ಬಿಡುಗಡೆಗೊಳಿಸಿದ್ದ ಅಂಬಾಸಿಡರ್ ಆಂಬ್ರಾಯ್ಡ್‌ನ ಇಂಟಿರಿಯರ್ ಫೀಚರ್‌ಗಳ ಮೇಲೆ ಆಧಾರಿತವಾಗಿದೆ. ಈ ಫೀಚರ್‌ಗಳು ಐಷಾರಾಮಿಯಾಗಿದ್ದು ಆಕರ್ಷಕವಾಗಿರುತ್ತವೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಎಲೆಕ್ಟ್ರಿಕ್‌ ಆವೃತ್ತಿಯಲ್ಲಿ ಬಿಡುಗಡೆಯಾಯ್ತು ಹೆಮ್ಮೆಯ ಅಂಬಾಸಿಡರ್ ಕಾರು

ಎಜುಕೇಷನ್ ಡೋರ್‌ಗಳು

ಈ ಕಾರಿನಲ್ಲಿ ಎಜುಕೇಷನ್ ಡೋರ್‌ಗಳನ್ನು ಅಳವಡಿಸಲಾಗಿದೆ. ಅಂದರೆ ಈ ಡೋರ್‌ಗಳು ಮೇಲ್ಮುಖವಾಗಿ ತೆರೆಯುವಂತೆ ವಿನ್ಯಾಸಗೊಳಿಸಲಾಗಿದೆ. ಎಜುಕೇಷನ್ ಡೋರ್‌ಗಳು ಹೇಗೆ ಕಾಣುತ್ತವೆ ಎಂಬುದನ್ನು ನೋಡಲು ಮರ್ಸಿಡಿಸ್ ಬೆಂಜ್ ಎಸ್‌ಎಲ್‌ಎಸ್ ಎಎಂಜಿ ಕಾರುಗಳಲ್ಲಿ ಕಾಣಬಹುದು. ಈ ಕಾರಿನಲ್ಲೂ ಅದೇ ರೀತಿಯ ಎಜುಕೇಷನ್ ಡೋರ್‌ಗಳನ್ನು ಅಳವಡಿಸಲಾಗಿದೆ.

ಎಲೆಕ್ಟ್ರಿಕ್‌ ಆವೃತ್ತಿಯಲ್ಲಿ ಬಿಡುಗಡೆಯಾಯ್ತು ಹೆಮ್ಮೆಯ ಅಂಬಾಸಿಡರ್ ಕಾರು

ಪರ್ಫಾಮೆನ್ಸ್

ಈ ಕಾರಿನಲ್ಲಿ ಹೆಚ್ಚು ಎಫಿಶಿಯಂಟ್ ಆದ ಎಲೆಕ್ಟ್ರಿಕ್ ಮೋಟಾರ್ ಹಾಗೂ ಬ್ಯಾಟರಿ ಪ್ಯಾಕೇಜ್ ಅಳವಡಿಸಲಾಗಿದೆ. ಈ ಎಲೆಕ್ಟ್ರಿಕ್ ಕಾರು ಕೇವಲ 4 ಸೆಕೆಂಡುಗಳಲ್ಲಿ ಗಂಟೆಗೆ 0 - 60 ಕಿಮೀ ವೇಗವನ್ನು ಕ್ರಮಿಸುತ್ತದೆ.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಎಲೆಕ್ಟ್ರಿಕ್‌ ಆವೃತ್ತಿಯಲ್ಲಿ ಬಿಡುಗಡೆಯಾಯ್ತು ಹೆಮ್ಮೆಯ ಅಂಬಾಸಿಡರ್ ಕಾರು

ರೇಂಜ್

ಈ ಕಾರಿನಲ್ಲಿರುವ ಬ್ಯಾಟರಿ ಹಾಗೂ ಎಲೆಕ್ಟ್ರಿಕ್ ಮೋಟರ್‌ನ ವಿವರಗಳನ್ನು ಬಹಿರಂಗಪಡಿಸಿಲ್ಲ. ಆದರೆ ಬ್ಯಾಟರಿಯನ್ನು ಪೂರ್ತಿಯಾಗಿ ಚಾರ್ಜ್ ಮಾಡಿದ ನಂತರ 250 ಕಿ.ಮೀಗಳವರೆಗೆ ಚಲಿಸಬಹುದೆಂದು ಹೇಳಲಾಗಿದೆ.

ಎಲೆಕ್ಟ್ರಿಕ್‌ ಆವೃತ್ತಿಯಲ್ಲಿ ಬಿಡುಗಡೆಯಾಯ್ತು ಹೆಮ್ಮೆಯ ಅಂಬಾಸಿಡರ್ ಕಾರು

ಈ ಕಾರು ಬಿಡುಗಡೆಯಾದಾಗಿನಿಂದ ಹಲವಾರು ಜನರು ಈ ಕಾರಿನ ಬಗ್ಗೆ ವಿಚಾರಿಸಿದ್ದಾರೆ ಎಂದು ದಿಲೀಪ್ ಚಪ್ರಿಯಾ ಹೆಮ್ಮೆಯಿಂದ ಹೇಳುತ್ತಾರೆ.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಎಲೆಕ್ಟ್ರಿಕ್‌ ಆವೃತ್ತಿಯಲ್ಲಿ ಬಿಡುಗಡೆಯಾಯ್ತು ಹೆಮ್ಮೆಯ ಅಂಬಾಸಿಡರ್ ಕಾರು

ಮಾರಾಟ

ಕಾರು ಬಿಡುಗಡೆಯಾದ ನಂತರ ಈ ಕಾರ್ ಅನ್ನು ಯಾವಾಗ ಮಾರಾಟ ಮಾಡಲಾಗುವುದು ಎಂದು ಅನೇಕರು ವಿಚಾರಿಸಿದ್ದಾರೆ. ಮುಂದಿನ ವರ್ಷದ ಅಂತ್ಯದ ವೇಳೆಗೆ ಈ ಕಾರನ್ನು ಮಾರಾಟ ಮಾಡಲು ಡಿಸಿ ಡಿಸೈನ್ ಚಿಂತನೆ ನಡೆಸಿದೆ.

ಎಲೆಕ್ಟ್ರಿಕ್‌ ಆವೃತ್ತಿಯಲ್ಲಿ ಬಿಡುಗಡೆಯಾಯ್ತು ಹೆಮ್ಮೆಯ ಅಂಬಾಸಿಡರ್ ಕಾರು

ಉತ್ಪಾದನೆ

ಈ ಎಲೆಕ್ಟ್ರಿಕ್ ಅಂಬಾಸಿಡರ್ ಕಾರ್ ಅನ್ನು ಡಿಸಿ ಅವಂತಿ ಕಾರು ಘಟಕದಲ್ಲಿ ಉತ್ಪಾದಿಸಲಾಗುತ್ತದೆ. ಭಾರತದಲ್ಲಿ ಮಾತ್ರವಲ್ಲದೆ ವಿಶ್ವದಾದ್ಯಂತ ಒಟ್ಟು 5,000 ಯೂನಿಟ್‌ಗಳನ್ನು ಉತ್ಪಾದಿಸಿ ಮಾರಾಟ ಮಾಡಲಾಗುವುದು.

ಎಲೆಕ್ಟ್ರಿಕ್‌ ಆವೃತ್ತಿಯಲ್ಲಿ ಬಿಡುಗಡೆಯಾಯ್ತು ಹೆಮ್ಮೆಯ ಅಂಬಾಸಿಡರ್ ಕಾರು

ಬೆಲೆ

ಈ ಕಾರಿನ ಬೆಲೆ ಎಕ್ಸ್‌ಶೋ ರೂಂ ದರದಂತೆ ರೂ.35 ಲಕ್ಷಗಳಾಗುವ ಸಾಧ್ಯತೆಗಳಿವೆ. ಈ ಕಾರು ಐಷಾರಾಮಿ, ಎಫಿಶಿಯಂಟ್ ಎಲೆಕ್ಟ್ರಿಕ್ ಕಾರು ಮಾದರಿಯಾಗಿ ಸ್ಥಾನ ಪಡೆಯಲಿದೆ.

ಎಲೆಕ್ಟ್ರಿಕ್‌ ಆವೃತ್ತಿಯಲ್ಲಿ ಬಿಡುಗಡೆಯಾಯ್ತು ಹೆಮ್ಮೆಯ ಅಂಬಾಸಿಡರ್ ಕಾರು

ಕಾರಿನ ಕುರಿತು

15 ವರ್ಷಗಳ ಹಿಂದಿನವರೆಗೂ ಅಂಬಾಸಿಡರ್ ಕಾರು ಪ್ರಧಾನ ಮಂತ್ರಿಗಳಿಂದ ಅಧಿಕಾರಿಗಳವರೆಗೆ ಎಲ್ಲರ ನೆಚ್ಚಿನ ಕಾರ್ ಆಗಿತ್ತು. ಹೊಸ ಎಲೆಕ್ಟ್ರಿಕ್ ಅಂಬಾಸಿಡರ್ ಕಾರನ್ನು ಪ್ರಧಾನಿ ಹಾಗೂ ಇತರರು ಬಳಸಿದ ಕಾರುಗಳ ಇನ್‌ಪುಟ್‌ನಿಂದ ತಯಾರಿಸಲಾಗಿದೆ ಎಂದು ದಿಲೀಪ್ ಚಪ್ರಿಯಾ ಹೇಳಿದರು.

Most Read Articles

Kannada
English summary
DC Electric Ambassador secrets revealed. Read in Kannada.
Story first published: Wednesday, April 15, 2020, 11:22 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X