ವಿಶ್ವದ ನಂ 1 ವಿಮಾನ ನಿಲ್ದಾಣದ ವಿಶೇಷತೆಗಳೇನು ಗೊತ್ತಾ?

ವಿಮಾನಗಳಿಗೆ ಹಾಗೂ ವಿಮಾನ ನಿಲ್ದಾಣಗಳಿಗೆ ರ‍್ಯಾಂಕ್ ನೀಡುವ ಬ್ರಿಟಿಷ್ ಮೂಲದ ವೆಬ್‌ಸೈಟ್ ಸ್ಕೈಟ್ರಾಕ್ಸ್ 2020ರ ವಿಶ್ವ ವಿಮಾನ ನಿಲ್ದಾಣ ಪ್ರಶಸ್ತಿಯನ್ನು ಬಿಡುಗಡೆಗೊಳಿಸಿದೆ. ಇದರಲ್ಲಿ ದೆಹಲಿಯಲ್ಲಿರುವ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ದೇಶದ ಅತ್ಯುತ್ತಮ ವಿಮಾನ ನಿಲ್ದಾಣವಾಗಿ ಹೊರಹೊಮ್ಮಿದೆ.

ವಿಶ್ವದ ನಂ 1 ವಿಮಾನ ನಿಲ್ದಾಣದ ವಿಶೇಷತೆಗಳೇನು ಗೊತ್ತಾ?

ಇದರ ಜೊತೆಗೆ ದೆಹಲಿ ವಿಮಾನ ನಿಲ್ದಾಣವು ಮಧ್ಯ ಏಷ್ಯಾದ ಅತ್ಯುತ್ತಮ ವಿಮಾನ ನಿಲ್ದಾಣ ಎಂಬ ಪ್ರಶಸ್ತಿಯನ್ನು ಸಹ ಪಡೆದಿದೆ. ಸ್ಕೈಟ್ರಾಕ್ಸ್, ದೆಹಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು 50 ಅತ್ಯುತ್ತಮ ವಿಮಾನ ನಿಲ್ದಾಣಗಳ ಪಟ್ಟಿಯಲ್ಲಿ ಸ್ಥಾನ ನೀಡಿದೆ. ಕಳೆದ ವರ್ಷ 59​​ರಲ್ಲಿದ್ದ ಈ ವಿಮಾನ ನಿಲ್ದಾಣದ ರ‍್ಯಾಂಕಿಂಗ್ ಈ ಬಾರಿ 50ಕ್ಕೆ ಏರಿದೆ. ಭಾರತದ ಬೆಂಗಳೂರು, ಮುಂಬೈ ಹಾಗೂ ಹೈದರಾಬಾದ್ ವಿಮಾನ ನಿಲ್ದಾಣಗಳು ಸಹ ಟಾಪ್ 100ನಲ್ಲಿ ಸ್ಥಾನ ಪಡೆದಿವೆ.

ವಿಶ್ವದ ನಂ 1 ವಿಮಾನ ನಿಲ್ದಾಣದ ವಿಶೇಷತೆಗಳೇನು ಗೊತ್ತಾ?

ಕಳೆದ ವರ್ಷ 64ನೇ ಸ್ಥಾನ ಪಡೆದಿದ್ದ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಈ ಬಾರಿ 52ನೇ ಸ್ಥಾನ ಪಡೆದಿದೆ. ಕಳೆದ ಬಾರಿ 69ನೇ ಸ್ಥಾನದಲ್ಲಿದ್ದ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಈ ಬಾರಿ 68ನೇ ಸ್ಥಾನ ಪಡೆದಿದೆ. 66ನೇ ಸ್ಥಾನದಲ್ಲಿದ್ದ ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಈ ಬಾರಿ 71ನೇ ಸ್ಥಾನಕ್ಕೆ ಕುಸಿದಿದೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ವಿಶ್ವದ ನಂ 1 ವಿಮಾನ ನಿಲ್ದಾಣದ ವಿಶೇಷತೆಗಳೇನು ಗೊತ್ತಾ?

ಸಿಂಗಾಪುರದ ಚಾಂಗಿ ವಿಮಾನ ನಿಲ್ದಾಣಕ್ಕೆ ಸತತ ಎಂಟನೇ ವರ್ಷವೂ ಅತ್ಯುತ್ತಮ ವಿಮಾನ ನಿಲ್ದಾಣ ಎಂಬ ಪ್ರಶಸ್ತಿಯನ್ನು ನೀಡಲಾಗಿದೆ. ಟೋಕಿಯೊದ ಹನೆಡಾ ವಿಮಾನ ನಿಲ್ದಾಣ ಎರಡನೇ ಸ್ಥಾನದಲ್ಲಿ, ದೋಹಾದ ಹಮದ್ ವಿಮಾನ ನಿಲ್ದಾಣ ಮೂರನೇ ಸ್ಥಾನದಲ್ಲಿ, ದಕ್ಷಿಣ ಕೊರಿಯಾದ ಇಂಚಿಯಾನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಾಲ್ಕನೇ ಸ್ಥಾನದಲ್ಲಿ ಹಾಗೂ ಜರ್ಮನಿಯ ಮ್ಯೂನಿಚ್ ವಿಮಾನ ನಿಲ್ದಾಣ ಐದನೇ ಸ್ಥಾನದಲ್ಲಿವೆ.

ವಿಶ್ವದ ನಂ 1 ವಿಮಾನ ನಿಲ್ದಾಣದ ವಿಶೇಷತೆಗಳೇನು ಗೊತ್ತಾ?

ಪ್ಯಾರಿಸ್‌ನ ಪ್ಯಾಸೆಂಜರ್ ಟರ್ಮಿನಲ್ ಎಕ್ಸ್‌ಪೋದಲ್ಲಿ ಏಪ್ರಿಲ್ 1ರಂದು ಪ್ರಶಸ್ತಿ ಪ್ರದಾನ ಸಮಾರಂಭವನ್ನು ನಿಗದಿಪಡಿಸಲಾಗಿತ್ತು, ಆದರೆ ಕರೋನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವನ್ನು ರದ್ದುಪಡಿಸಲಾಗಿದೆ. ಮೇ 10 ರಂದು ಯೂಟ್ಯೂಬ್‌ನಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿಗಳನ್ನು ಘೋಷಿಸಲಾಯಿತು.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ವಿಶ್ವದ ನಂ 1 ವಿಮಾನ ನಿಲ್ದಾಣದ ವಿಶೇಷತೆಗಳೇನು ಗೊತ್ತಾ?

ಸಿಂಗಾಪುರದ ಚಾಂಗಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಅದರ ವಿಶೇಷ ಫೀಚರ್‌ಗಳಿಂದಾಗಿ ವಿಶ್ವದಾದ್ಯಂತ ಜನಪ್ರಿಯವಾಗಿದೆ. ಈ ವಿಮಾನ ನಿಲ್ದಾಣದಲ್ಲಿ ಆರ್ಕಿಡ್ ಹಾಗೂ ಬಟರ್‌ಫ್ಲೈ ಪಾರ್ಕ್‌ಗಳನ್ನು ನಿರ್ಮಿಸಲಾಗಿದೆ. ಈ ಪಾರ್ಕ್‌ಗಳನ್ನು ಈ ನಿಲ್ದಾಣಕ್ಕೆ ಬರುವ ಪ್ರತಿಯೊಬ್ಬ ಪ್ರಯಾಣಿಕರೂ ಇಷ್ಟಪಡುತ್ತಾರೆ.

ವಿಶ್ವದ ನಂ 1 ವಿಮಾನ ನಿಲ್ದಾಣದ ವಿಶೇಷತೆಗಳೇನು ಗೊತ್ತಾ?

ವಿಮಾನ ನಿಲ್ದಾಣದಲ್ಲಿ ಗ್ಲಾಸ್ ವಾಲ್‌ಗಳ ನಡುವೆ ರೇನ್ ಫಾರೆಸ್ಟ್ ನಿರ್ಮಿಸಲಾಗಿದೆ. ಜೊತೆಗೆ ವಿಶ್ವದ ಅತಿ ಉದ್ದದ ಇನ್‌ಡೋರ್ ವಾಟರ್ ಫಾಲ್ ಅನ್ನು ಈ ರೇನ್ ಫಾರೆಸ್ಟ್‌ನಲ್ಲಿ ನಿರ್ಮಿಸಲಾಗಿದೆ. ಆಕರ್ಷಕವಾಗಿರುವ ಈ ದೃಶ್ಯವನ್ನು ಸಾಕಷ್ಟು ಜನರು ವೀಕ್ಷಿಸುತ್ತಾರೆ.

Most Read Articles

Kannada
English summary
Delhi Airport ranked as best in India. Read in Kannada.
Story first published: Friday, May 15, 2020, 16:25 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X