ಕರೋನಾ ವೈರಸ್ ಎಫೆಕ್ಟ್: ಹೊಸ ಟೆಕ್ನಾಲಜಿಗಳನ್ನು ಅಳವಡಿಸಿದ ವಿಮಾನ ನಿಲ್ದಾಣ ಪ್ರಾಧಿಕಾರ

ದೆಹಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹಲವಾರು ಹೊಸ ತಂತ್ರಜ್ಞಾನ ಆಧಾರಿತ ಸೌಲಭ್ಯಗಳನ್ನು ಆರಂಭಿಸಲಾಗಿದೆ. ಅಲ್ಟ್ರಾ ವಯೋಲೆಟ್ ಕಿರಣಗಳನ್ನು ಬಳಸಿ ಪ್ರಯಾಣಿಕರ ಲಗೇಜ್‌ಗಳನ್ನು ಸೋಂಕುರಹಿತಗೊಳಿಸಲಾಗುತ್ತದೆ. ಟರ್ಮಿನಲ್ ಅನ್ನು ಸೋಂಕುರಹಿತಗೊಳಿಸಲು ಮೊಬೈಲ್ ಅಲ್ಟ್ರಾ ವಯೋಲೆಟ್ ಟವರ್‌ಗಳನ್ನು ನಿರ್ಮಿಸಲಾಗಿದೆ.

ಕರೋನಾ ವೈರಸ್ ಎಫೆಕ್ಟ್: ಹೊಸ ಟೆಕ್ನಾಲಜಿಗಳನ್ನು ಅಳವಡಿಸಿದ ವಿಮಾನ ನಿಲ್ದಾಣ ಪ್ರಾಧಿಕಾರ

ಪ್ರಯಾಣಿಕರ ಲಗೇಜ್, ಟ್ರಾಲಿ, ಟ್ರೇಗಳನ್ನು ಸೋಂಕುರಹಿತಗೊಳಿಸಲು ಅಲ್ಟ್ರಾ ವಯೋಲೆಟ್ ಡಿವೈಸ್‌ಗಳನ್ನು ಅಳವಡಿಸಲಾಗಿದೆ. ವಿಮಾನ ನಿಲ್ದಾಣಕ್ಕೆ ಪ್ರವೇಶಿಸುವ ಪ್ರಯಾಣಿಕರ ಬೂಟುಗಳನ್ನು ಸೋಂಕುರಹಿತವಾಗಿಸಲು ವಿಶೇಷ ಡೋರುಗಳನ್ನು ಅಳವಡಿಸಲಾಗಿದ್ದು, ಈ ಡೋರುಗಳು ಶೂಗಳಲ್ಲಿರುವ ಕೊಳೆಯನ್ನು ತೆಗೆಯುತ್ತವೆ.

ಕರೋನಾ ವೈರಸ್ ಎಫೆಕ್ಟ್: ಹೊಸ ಟೆಕ್ನಾಲಜಿಗಳನ್ನು ಅಳವಡಿಸಿದ ವಿಮಾನ ನಿಲ್ದಾಣ ಪ್ರಾಧಿಕಾರ

ವಿಮಾನ ಹಾರಾಟದ ಕಾರ್ಯಾಚರಣೆಗಳು ಪುನರಾರಂಭವಾದ ನಂತರ ಪ್ರಯಾಣಿಕರ ಸುರಕ್ಷತೆಗೆ ದೆಹಲಿ ವಿಮಾನ ನಿಲ್ದಾಣ ಪ್ರಾಧಿಕಾರವು (ಡಿಐಎಎಲ್) ಆದ್ಯತೆಯನ್ನು ನೀಡಲಿದೆ. ಡಿಐಎಎಲ್ ಅತ್ಯಾಧುನಿಕ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಿದ್ದು, ಎಲ್ಲಾ ಲಗೇಜ್ ಟ್ರೇ ಹಾಗೂ ಟ್ರಾಲಿಗಳನ್ನು ಅಲ್ಟ್ರಾ ವಯೋಲೆಟ್ ಕಿರಣಗಳಿಂದ ಸೋಂಕುರಹಿತಗೊಳಿಸಲಿದೆ.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಕರೋನಾ ವೈರಸ್ ಎಫೆಕ್ಟ್: ಹೊಸ ಟೆಕ್ನಾಲಜಿಗಳನ್ನು ಅಳವಡಿಸಿದ ವಿಮಾನ ನಿಲ್ದಾಣ ಪ್ರಾಧಿಕಾರ

ಬಳಸಿದ ಟ್ರಾಲಿಗಳು ಹಾಗೂ ಟ್ರೇಗಳು ಒಂದಾದ ನಂತರ ಮತ್ತೊಂದು ಸೋಂಕುರಹಿತವಾಗಲಿವೆ. ಅವುಗಳನ್ನು ಐದು ಸೆಕೆಂಡುಗಳಲ್ಲಿ ಸೋಂಕುರಹಿತಗೊಳಿಸಲಾಗುವುದು. ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್ 3ರಲ್ಲಿ ಅಲ್ಟ್ರಾ ವಯೋಲೆಟ್ ಸುರಂಗವನ್ನು ಸ್ಥಾಪಿಸಲಾಗಿದ್ದು, ಇದು ಪ್ರಯಾಣಿಕರ ಬ್ಯಾಗ್‌ಗಳನ್ನು ಸೋಂಕುರಹಿತಗೊಳಿಸುತ್ತದೆ. ಲಗೇಜ್ ಬೆಲ್ಟ್ ಪ್ರದೇಶದಲ್ಲಿ ಇದರ ಮೂಲಮಾದರಿಯನ್ನು ಸ್ಥಾಪಿಸಲಾಗಿದೆ.

ಕರೋನಾ ವೈರಸ್ ಎಫೆಕ್ಟ್: ಹೊಸ ಟೆಕ್ನಾಲಜಿಗಳನ್ನು ಅಳವಡಿಸಿದ ವಿಮಾನ ನಿಲ್ದಾಣ ಪ್ರಾಧಿಕಾರ

ಪ್ರಯಾಣಿಕರು ಈ ಅಲ್ಟ್ರಾ ವಯೋಲೆಟ್ ಸ್ಕ್ಯಾನಿಂಗ್ ಪ್ರಕ್ರಿಯೆಯನ್ನು ಬ್ಯಾಗೇಜ್ ರಿಕ್ಲಾಮ್ ಹಾಲ್‌ನಲ್ಲಿರುವ ಸಿಸಿಟಿವಿಯಲ್ಲಿ ವೀಕ್ಷಿಸಬಹುದು. ಬ್ಯಾಗ್‌ಗಳನ್ನು ಸೋಂಕುರಹಿತಗೊಳಿಸಲು ಹೆಚ್ಚಿನ ತೀವ್ರತೆಯ ಅಲ್ಟ್ರಾ ವಯೋಲೆಟ್ ಲ್ಯಾಂಪ್‌ಗಳನ್ನು ಬಳಸಲಾಗುತ್ತಿದೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಕರೋನಾ ವೈರಸ್ ಎಫೆಕ್ಟ್: ಹೊಸ ಟೆಕ್ನಾಲಜಿಗಳನ್ನು ಅಳವಡಿಸಿದ ವಿಮಾನ ನಿಲ್ದಾಣ ಪ್ರಾಧಿಕಾರ

ದೆಹಲಿ ವಿಮಾನ ನಿಲ್ದಾಣದ ನೌಕರರು ಐದು ದಿನಗಳ ಪರಿಶ್ರಮದಿಂದ ಅಲ್ಟ್ರಾ ವಯೋಲೆಟ್ ಮೂಲಮಾದರಿಯನ್ನು ಅಭಿವೃದ್ಧಿಪಡಿಸಿದ್ದಾರೆ. ವಿಮಾನ ನಿಲ್ದಾಣದ ವಿವಿಧ ಸ್ಥಳಗಳಲ್ಲಿ ಯಶಸ್ವಿ ಪ್ರಯೋಗಗಳನ್ನು ನಡೆಸಿದ್ದಾರೆ. ಸೋಂಕುರಹಿತ ಪ್ರಕ್ರಿಯೆಯನ್ನು ಅಲ್ಟ್ರಾ ವಯೋಲೆಟ್ ಲ್ಯಾಂಪ್‌ಗಳ ಮೂಲಕ ವೇಗಗೊಳಿಸಲಾಗುತ್ತದೆ. ಮುಚ್ಚಿದ ವಾತಾವರಣದಲ್ಲಿಯೂ ಸಹ ನಡೆಸಬಹುದು.

ಕರೋನಾ ವೈರಸ್ ಎಫೆಕ್ಟ್: ಹೊಸ ಟೆಕ್ನಾಲಜಿಗಳನ್ನು ಅಳವಡಿಸಿದ ವಿಮಾನ ನಿಲ್ದಾಣ ಪ್ರಾಧಿಕಾರ

ವಿಮಾನ ನಿಲ್ದಾಣದೊಳಗೆ ಗಾಳಿಯ ಗುಣಮಟ್ಟವನ್ನು ಕಾಪಾಡಿಕೊಳ್ಳಲು ವಿಮಾನ ನಿಲ್ದಾಣದಲ್ಲಿ 700ಕ್ಕೂ ಹೆಚ್ಚು ಅಲ್ಟ್ರಾ ವಯೋಲೆಟ್ ಲ್ಯಾಂಪ್‌ ಹಾಗೂ ಮೊಬೈಲ್ ಸೋಂಕುನಿವಾರಕ ಟವರ್‌ಗಳನ್ನು ಅಳವಡಿಸಲಾಗಿದೆ. ಈ ಟವರ್‌ಗಳನ್ನು ಟರ್ಮಿನಲ್‌ನ ಮೂಲೆಯಲ್ಲಿಡಲಾಗುವುದು. ಅಲ್ಲಿ ಅಲ್ಟ್ರಾ ವಯೋಲೆಟ್ ಲ್ಯಾಂಪ್‌ಗಳನ್ನು ವಿಶೇಷ ಪ್ರದೇಶಗಳಲ್ಲಿಟ್ಟು ಸೋಂಕುರಹಿತಗೊಳಿಸಲಾಗುತ್ತದೆ.

Article Published On: Tuesday, May 12, 2020, 17:51 [IST]
English summary
Delhi Airport will use Ultraviolet disinfectant towers and equipments. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+