ಎಲೆಕ್ಟ್ರಿಕ್ ವಾಹನಗಳ ಮೇಲಿನ ರಸ್ತೆ ತೆರಿಗೆ ರದ್ದುಗೊಳಿಸಿದ ನಂತರ ಮತ್ತೊಂದು ಸಿಹಿಸುದ್ದಿ

ಗಂಭೀರ ಸಮಸ್ಯೆಗಳಿಗೆ ಕಾರಣವಾಗಿರುವ ಮಾಲಿನ್ಯ ಪ್ರಮಾಣವನ್ನು ಪರಿಣಾಮಕಾರಿಯಾಗಿ ತಗ್ಗಿಸುವ ನಿಟ್ಟಿನಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವಾರು ಯೋಜನೆಗಳಿಗೆ ಜಾರಿಗೆ ತಂದಿದ್ದು, ದೆಹಲಿ ಸರ್ಕಾರವು ಹೊಸ ಇವಿ ವಾಹನ ನೀತಿ ಜಾರಿಗೊಳಿಸುವ ಮಹತ್ವದ ಬದಲಾವಣೆಯ ನೀರಿಕ್ಷೆಯಲ್ಲಿದೆ.

ಎಲೆಕ್ಟ್ರಿಕ್ ವಾಹನಗಳ ಮೇಲಿನ ರಸ್ತೆ ತೆರಿಗೆ ರದ್ದುಗೊಳಿಸಿದ ನಂತರ ಮತ್ತೊಂದು ಸಿಹಿಸುದ್ದಿ

ಹೊಸ ಇವಿ ವಾಹನ ನೀತಿ ಮೂಲಕ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸುವ ಮಹತ್ವದ ನಿರ್ಧಾರ ತೆಗೆದುಕೊಂಡಿರುವ ದೆಹಲಿ ಸರ್ಕಾರವು ಕಳೆದ ವಾರವಷ್ಟೇ ಎಲೆಕ್ಟ್ರಿಕ್ ವಾಹನಗಳಿಗೆ ರಸ್ತೆ ತೆರಿಗೆಯಿಂದ ವಿನಾಯ್ತಿ ನೀಡಿತ್ತು. ಇದೀಗ ಮತ್ತೊಂದು ಪ್ರಮುಖ ನಿರ್ಧಾರ ಪ್ರಕಟಿಸಿರುವ ದೆಹಲಿ ಸರ್ಕಾರವು ಎಲೆಕ್ಟ್ರಿಕ್ ವಾಹನ ನೋಂದಣಿ ಶುಲ್ಕವನ್ನು ತೆಗೆದುಹಾಕಿದ್ದು, ಇವಿ ವಾಹನ ಖರೀದಿದಾರರಿಗೆ ಗರಿಷ್ಠ ಲಾಭ ನೀಡುತ್ತಿದೆ.

ಎಲೆಕ್ಟ್ರಿಕ್ ವಾಹನಗಳ ಮೇಲಿನ ರಸ್ತೆ ತೆರಿಗೆ ರದ್ದುಗೊಳಿಸಿದ ನಂತರ ಮತ್ತೊಂದು ಸಿಹಿಸುದ್ದಿ

2025ರ ವೇಳೆಗೆ ಶೇ.25ರಷ್ಟು ಎಲೆಕ್ಟ್ರಿಕ್ ವಾಹನಗಳ ಬಳಕೆಯ ಗುರಿ ಹೊಂದಿರುವ ದೆಹಲಿ ಸರ್ಕಾರವು ಪರಿಣಾಮಕಾಗಿಯಾಗಿ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಒತ್ತು ನೀಡಲು ಹೊಸ ಕ್ರಮಗಳನ್ನು ಪ್ರಕಟಿಸುತ್ತಿದೆ.

ಎಲೆಕ್ಟ್ರಿಕ್ ವಾಹನಗಳ ಮೇಲಿನ ರಸ್ತೆ ತೆರಿಗೆ ರದ್ದುಗೊಳಿಸಿದ ನಂತರ ಮತ್ತೊಂದು ಸಿಹಿಸುದ್ದಿ

ಸದ್ಯ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶೇ. 0.29ರಷ್ಟು ಮಾತ್ರವೇ ಎಲೆಕ್ಟ್ರಿಕ್ ವಾಹನಗಳ ಬಳಕೆ ಚಾಲ್ತಿಯಲ್ಲಿದ್ದು, ಲಾಕ್‌ಡೌನ್ ವೇಳೆ ತಗ್ಗಿದ್ದ ಮಾಲಿನ್ಯ ಪ್ರಮಾಣವು ಇದೀಗ ಮತ್ತೆ ಉಲ್ಬಣಗೊಂಡಿದೆ. ಮಾಲಿನ್ಯ ತಡೆಯಲು ಮತ್ತು ಎಲೆಕ್ಟ್ರಿಕ್ ವಾಹನಗಳ ಬಳಕೆ ಉತ್ತೇಜಿಸಲು ಹೊಸ ಕ್ರಮಗಳು ಅನಿವಾರ್ಯವಾಗಿದ್ದು, ಡೀಸೆಲ್ ವಾಹನಗಳ ಬಳಕೆ ಮೇಲೆ ಹಂತ ಹಂತವಾಗಿ ನಿರ್ಬಂಧ ಹೇರಲಾಗುತ್ತಿದೆ.

ಎಲೆಕ್ಟ್ರಿಕ್ ವಾಹನಗಳ ಮೇಲಿನ ರಸ್ತೆ ತೆರಿಗೆ ರದ್ದುಗೊಳಿಸಿದ ನಂತರ ಮತ್ತೊಂದು ಸಿಹಿಸುದ್ದಿ

ಮಾಲಿನ್ಯ ತಡೆಯುವ ಉದ್ದೇಶದಿಂದಾಗಿ ಕಳೆದ 2 ದಿನಗಳ ಹಿಂದಷ್ಟೇ ಹೊಸ ನಿಯಮ ಜಾರಿಗೊಳಿಸಿರುವ ದೆಹಲಿ ಸರ್ಕಾರವು ಸಿಗ್ನಲ್‌ಗಳಲ್ಲಿ ಕೆಂಪು ದೀಪವಿರುವ ಸಂದರ್ಭದಲ್ಲಿ ನಿಲುಗಡೆಯಾಗುವ ವಾಹನಗಳು ಕಡ್ಡಾಯವಾಗಿ ಬಂದ್ ಮಾಡುವಂತೆ ನಿಯಮ ಜಾರಿಗೆ ತಂದಿದೆ.

ಎಲೆಕ್ಟ್ರಿಕ್ ವಾಹನಗಳ ಮೇಲಿನ ರಸ್ತೆ ತೆರಿಗೆ ರದ್ದುಗೊಳಿಸಿದ ನಂತರ ಮತ್ತೊಂದು ಸಿಹಿಸುದ್ದಿ

ದೆಹಲಿಯಲ್ಲಿನ ಪ್ರಮುಖ ಸಿಗ್ನಲ್‌ಗಳಲ್ಲಿ ವಾಹನ ದಟ್ಟಣೆಯ ಸಮಯಗಳಲ್ಲಿ ಕನಿಷ್ಠ 60 ಸೆಕೆಂಡುಗಳಿಂದ 180 ಸೆಕೆಂಡುಗಳ ಕಾಲ ನಿಲುಗಡೆ ಮಾಡಲಾಗುತ್ತದೆ. ಈ ವೇಳೆ ಹಲವು ವಾಹನ ಮಾಲೀಕರು ಎಂಜಿನ್ ಬಂದ್ ಮಾಡದೆ ವಾಹನಗಳನ್ನು ಹಾಗೆಯೇ ನಿಲ್ಲಿಸಿರುತ್ತಾರೆ. ಈ ವೇಳೆ ಕೂಡಾ ಹೆಚ್ಚಿನ ಮಟ್ಟದ ಮಾಲಿನ್ಯ ಉತ್ಪಿತ್ತಿಯಾಗುತ್ತಿದೆ ಎನ್ನುವ ದೂರಗಳ ಹಿನ್ನಲೆಯಲ್ಲಿ ಸಿಗ್ನಲ್‌ಗಳಲ್ಲಿ ವಾಹನ ನಿಲುಗಡೆ ಸಂದರ್ಭದಲ್ಲಿ ಕಡ್ಡಾಯವಾಗಿ ಎಂಜಿನ್ ಬಂದ್ ಮಾಡುವ ಬಗ್ಗೆ ಆದೇಶ ಹೊರಡಿಸಿದೆ.

ಎಲೆಕ್ಟ್ರಿಕ್ ವಾಹನಗಳ ಮೇಲಿನ ರಸ್ತೆ ತೆರಿಗೆ ರದ್ದುಗೊಳಿಸಿದ ನಂತರ ಮತ್ತೊಂದು ಸಿಹಿಸುದ್ದಿ

ಇನ್ನು ಎಲೆಕ್ಟ್ರಿಕ್ ವಾಹನ ಬಳಕೆಯನ್ನು ಉತ್ತೇಜಿಸಲು ಈಗಾಗಲೇ ಹಲವಾರು ಯೋಜನೆಗಳನ್ನು ಜಾರಿಗೆ ತಂದಿರುವ ದೆಹಲಿ ಸರ್ಕಾರವು ಕೇಂದ್ರದ ಫೇಮ್ 2 ಯೋಜನೆಯ ಜೊತೆ ಜೊತೆಗೆ ರಾಜ್ಯ ಸರ್ಕಾರದ ಎಲೆಕ್ಟ್ರಿಕ್ ವಾಹನಗಳ ನೀತಿ ಹಲವಾರು ವಿನಾಯ್ತಿಗಳನ್ನು ಘೋಷಣೆ ಮಾಡಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಎಲೆಕ್ಟ್ರಿಕ್ ವಾಹನಗಳ ಮೇಲಿನ ರಸ್ತೆ ತೆರಿಗೆ ರದ್ದುಗೊಳಿಸಿದ ನಂತರ ಮತ್ತೊಂದು ಸಿಹಿಸುದ್ದಿ

ಹೆಚ್ಚುತ್ತಿರುವ ಡೀಸೆಲ್ ಮತ್ತು ಪೆಟ್ರೋಲ್ ಚಾಲಿಕ ವಾಹನಗಳಿಂದಾಗಿ ದೆಹಲಿಯಲ್ಲಿ ಭಾರೀ ಪ್ರಮಾಣದ ಮಾಲಿನ್ಯ ಉತ್ಪತ್ತಿಯಾಗುತ್ತಿರುವ ಹಲವಾರು ಸಮಸ್ಯೆಗಳಿಗೆ ಕಾರಣವಾಗುತ್ತಿದ್ದು, ರಾಜ್ಯ ಇವಿ ವಾಹನ ನೀತಿ ಅಡಿ ಎಲೆಕ್ಟ್ರಿಕ್ ವಾಹನಗಳ ಖರೀದಿಯನ್ನು ಉತ್ತೇಜಿಸಲಾಗುತ್ತಿದೆ.

ಎಲೆಕ್ಟ್ರಿಕ್ ವಾಹನಗಳ ಮೇಲಿನ ರಸ್ತೆ ತೆರಿಗೆ ರದ್ದುಗೊಳಿಸಿದ ನಂತರ ಮತ್ತೊಂದು ಸಿಹಿಸುದ್ದಿ

ದೆಹಲಿ ಸರ್ಕಾರವು ಈಗಾಗಲೇ ಎಲೆಕ್ಟ್ರಿಕ್ ವಾಹನಗಳ ಖರೀದಿದಾರರಿಗೆ ಗರಿಷ್ಠ ಪ್ರಮಾಣದ ಸಬ್ಸಡಿ ಯೋಜನೆಯನ್ನು ಜಾರಿಗೆ ತಂದಿದ್ದು, ಇದೀಗ ರಸ್ತೆ ತೆರಿಗೆ ಮತ್ತು ನೋಂದಣಿ ಶುಲ್ಕದಿಂದ ವಿನಾಯ್ತಿ ನೀಡಿರುವುದು ಮಹತ್ವದ ನಿರ್ಧಾರವಾಗಿದೆ. ಇದು ಮುಂಬರುವ ದಿನಗಳಲ್ಲಿ ಇವಿ ವಾಹನಗಳ ಉತ್ಪಾದನೆ ಮತ್ತು ಮಾರಾಟಕ್ಕೆ ಪೂರಕವಾದ ಅಂಶವಾಗಿದ್ದು, ಗ್ರಾಹಕರು ಕೂಡಾ ಡೀಸೆಲ್ ಮತ್ತು ಪೆಟ್ರೋಲ್ ಬದಲಾಗಿ ಇವಿ ವಾಹನಗಳ ಖರೀದಿಯತ್ತ ಗಮಮಸೆಳೆಯಲು ಸಹಕಾರಿಯಾಗಿದೆ.

MOST READ: ಬಿಡುಗಡೆಗೆ ಸಿದ್ದವಾದ ಹೋಂಡಾದ ಮೊದಲ ಎಲೆಕ್ಟ್ರಿಕ್ ಕಾರು

ಎಲೆಕ್ಟ್ರಿಕ್ ವಾಹನಗಳ ಮೇಲಿನ ರಸ್ತೆ ತೆರಿಗೆ ರದ್ದುಗೊಳಿಸಿದ ನಂತರ ಮತ್ತೊಂದು ಸಿಹಿಸುದ್ದಿ

ಹಾಗೆಯೇ ಇವಿ ವಾಹನಗಳ ಖರೀದಿಗೆ ಉತ್ತೇಜಿಸಲು ಹೆಚ್ಚಿನ ಸಂಖ್ಯೆಯ ಸಾರ್ವಜನಿಕ ಬಳಕೆಯ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ತೆರೆಯಲಾಗುತ್ತಿದ್ದು, ಇದೇ ತಿಂಗಳಾಂತ್ಯಕ್ಕೆ ಕನಿಷ್ಠ 200 ಇವಿ ನಿಲ್ದಾಣಗಳಿಗೆ ಚಾಲನೆ ನೀಡುವುದಾಗಿ ದೆಹಲಿ ಸರ್ಕಾರವು ಸ್ಪಷ್ಟಪಡಿಸಿದೆ.

Most Read Articles

Kannada
English summary
Registration Fee On Electric Vehicles Waived Off In Delhi. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X