ಮತ್ತಷ್ಟು ಹತ್ತಿರವಾಗಲಿದೆ ಈ ಎರಡು ನಗರಗಳ ನಡುವಿನ ಅಂತರ

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (ಎನ್‌ಹೆಚ್‌ಎಐ) ದೆಹಲಿಯ ದ್ವಾರಕಾ ಎಕ್ಸ್‌ಪ್ರೆಸ್ ವೇಯನ್ನು ವಿಸ್ತರಿಸುತ್ತಿದೆ. ಈ ಎಕ್ಸ್‌ಪ್ರೆಸ್‌ವೇ ದೆಹಲಿ, ಹರಿಯಾಣ, ಚಂಡೀಗಢಕ್ಕೆ ಸಂಪರ್ಕ ನೀಡುತ್ತದೆ. ಈ ಎಕ್ಸ್‌ಪ್ರೆಸ್ ವೇಯ ವಿಸ್ತರಣೆ ಪೂರ್ತಿಯಾದ ನಂತರ ದೆಹಲಿಯಿಂದ ಚಂಡೀಗಢವನ್ನು 2 ಗಂಟೆಗಳಲ್ಲಿ ತಲುಪಬಹುದು.

ಮತ್ತಷ್ಟು ಹತ್ತಿರವಾಗಲಿದೆ ಈ ಎರಡು ನಗರಗಳ ನಡುವಿನ ಅಂತರ

ದೆಹಲಿ ಹಾಗೂ ಚಂಡೀಗಢ ನಡುವಿನ ಅಂತರ 260 ಕಿ.ಮೀಗಳಾಗಿದೆ. ದ್ವಾರಕಾ ಎಕ್ಸ್‌ಪ್ರೆಸ್ ಹೆದ್ದಾರಿ ದೆಹಲಿ ಹಾಗೂ ಚಂಡೀಗಢದ ದೂರವನ್ನು 20 ಕಿ.ಮೀಗಳಷ್ಟು ಇಳಿಸಲಿದೆ. ಈ ಎಕ್ಸ್‌ಪ್ರೆಸ್ ವೇಯನ್ನು 5 ಲೇನ್‌ಗಳಿಗೆ ವಿಸ್ತರಿಸಲಾಗುತ್ತಿದೆ. ಎಕ್ಸ್‌ಪ್ರೆಸ್ ವೇ ವಿಸ್ತರಣೆಯಾದ ನಂತರ ಈ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳು ಪ್ರತಿ ಗಂಟೆಗೆ 120 ಕಿ.ಮೀ ವೇಗದಲ್ಲಿ ಚಲಿಸಬಹುದು.

ಮತ್ತಷ್ಟು ಹತ್ತಿರವಾಗಲಿದೆ ಈ ಎರಡು ನಗರಗಳ ನಡುವಿನ ಅಂತರ

ವಾಹನಗಳ ಗರಿಷ್ಠ ವೇಗದ ಮಿತಿ ಪ್ರತಿ ಗಂಟೆಗೆ 120 ಕಿ.ಮೀಗಳಾಗುವ ಕಾರಣಕ್ಕೆ ಪ್ರಯಾಣಿಕರು ಈ ಎರಡೂ ನಗರಗಳ ನಡುವೆ ಕೇವಲ 2 ಗಂಟೆಗಳಲ್ಲಿ ಪ್ರಯಾಣಿಸಬಹುದು. ಎನ್‌ಹೆಚ್‌ಎಐ ಅಧಿಕಾರಿಯೊಬ್ಬರ ಪ್ರಕಾರ, ಪ್ರಯಾಣಿಕರು ಅರ್ಬನ್ ಎಕ್ಸ್ ಟೆಂಷನ್ ರೋಡ್ ಮೂಲಕ ಬಹದ್ದೂರ್‌ಗಢದ ಕೆಎಂಪಿ ಎಕ್ಸ್‌ಪ್ರೆಸ್ ವೇ ತಲುಪಬಹುದು.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಮತ್ತಷ್ಟು ಹತ್ತಿರವಾಗಲಿದೆ ಈ ಎರಡು ನಗರಗಳ ನಡುವಿನ ಅಂತರ

ಕೆಎಂಪಿ ಎಕ್ಸ್‌ಪ್ರೆಸ್‌ವೇನಲ್ಲಿ 10 ಕಿ.ಮೀ ಪ್ರಯಾಣಿಸಿದ ನಂತರ ದೆಹಲಿ-ಕತ್ರ ಎಕ್ಸ್‌ಪ್ರೆಸ್ ವೇ ಕಡೆಗೆ ತಿರುಗಬಹುದು. ದೆಹಲಿ-ಕತ್ರಾ ಎಕ್ಸ್‌ಪ್ರೆಸ್‌ವೇಯಲ್ಲಿ 80 ಕಿ.ಮೀ ಸಂಚರಿಸಿದ ನಂತರ ಹರಿಯಾಣ ಎಕ್ಸ್‌ಪ್ರೆಸ್‌ವೇನಲ್ಲಿರುವ ಅಂಬಾಲಾ ತಿರುವು ಸಿಗಲಿದೆ. ಈ ತಿರುವಿನ ಮೂಲಕ ಪ್ರಯಾಣಿಕರು ಚಂಡೀಗಢವನ್ನು ತಲುಪಬಹುದು.

ಮತ್ತಷ್ಟು ಹತ್ತಿರವಾಗಲಿದೆ ಈ ಎರಡು ನಗರಗಳ ನಡುವಿನ ಅಂತರ

ಎಕ್ಸ್‌ಪ್ರೆಸ್‌ವೇಯಲ್ಲಿರುವ ಎಲ್ಲಾ ಇಂಟರ್ ಚೇಂಜ್ ಗಳಲ್ಲಿ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲಾಗಿದೆ. ಇದರಿಂದ ಪ್ರಯಾಣಿಕರಿಗೆ ಯಾವುದೇ ತೊಂದರೆಯುಂಟಾಗುವುದಿಲ್ಲ. ಎನ್‌ಹೆಚ್‌ಎಐ ದೆಹಲಿ ಹಾಗೂ ಮುಂಬೈ ನಗರಗಳ ನಡುವೆ ಡಿಎನ್‌ಡಿ ಎಕ್ಸ್‌ಪ್ರೆಸ್ ವೇ ನಿರ್ಮಿಸುತ್ತಿದೆ. ಈ ಎಕ್ಸ್‌ಪ್ರೆಸ್ ವೇ ಮುಂದಿನ ತಿಂಗಳು ಉದ್ಘಾಟನೆಯಾಗಲಿದೆ.

MOST READ:ಒಂದೇ ದಿನದಲ್ಲಿ ಸಾವಿರಕ್ಕೂ ಹೆಚ್ಚು ಆಂಬ್ಯುಲೆನ್ಸ್ ಪಡೆದ ಜಗನ್ ಸರ್ಕಾರ

ಮತ್ತಷ್ಟು ಹತ್ತಿರವಾಗಲಿದೆ ಈ ಎರಡು ನಗರಗಳ ನಡುವಿನ ಅಂತರ

ಈ ಎಕ್ಸ್‌ಪ್ರೆಸ್‌ವೇನಲ್ಲಿ 60 ಕಿ.ಮೀಗಳವರೆಗೆ ಯಾವುದೇ ಸಿಗ್ನಲ್ ಟ್ರ್ಯಾಕ್ ನಿರ್ಮಿಸುತ್ತಿಲ್ಲ. ಇದರಿಂದಾಗಿ ವಾಹನಗಳು ಯಾವುದೇ ಅಡೆತಡೆಯಿಲ್ಲದೆ ಸಂಚರಿಸಲು ಸಾಧ್ಯವಾಗಲಿದೆ. ಎನ್‌ಹೆಚ್‌ಎಐ ಈ ಎಲ್ಲ ಯೋಜನೆಗಳನ್ನು 2023ರ ವೇಳೆಗೆ ಪೂರ್ಣಗೊಳಿಸುವ ಉದ್ದೇಶವನ್ನು ಹೊಂದಿದೆ.

ಮತ್ತಷ್ಟು ಹತ್ತಿರವಾಗಲಿದೆ ಈ ಎರಡು ನಗರಗಳ ನಡುವಿನ ಅಂತರ

ಕೇಂದ್ರ ಸಾರಿಗೆ ಸಚಿವರಾದ ನಿತಿನ್ ಗಡ್ಕರಿರವರು ಈಗಾಗಲೇ ಮುಂದಿನ 2 ವರ್ಷಗಳ ಅವಧಿಯಲ್ಲಿ ದೇಶಾದ್ಯಂತ ರಸ್ತೆ, ಹೆದ್ದಾರಿ ಹಾಗೂ ಎಕ್ಸ್‌ಪ್ರೆಸ್ ವೇಗಳ ನಿರ್ಮಾಣ ಕಾರ್ಯಕ್ಕಾಗಿ ರೂ.15 ಲಕ್ಷ ಕೋಟಿ ವಿನಿಯೋಗಿಸುವುದಾಗಿ ಘೋಷಿಸಿದ್ದಾರೆ. ಇದರ ಜೊತೆಗೆ ಕೇಂದ್ರ ಸರ್ಕಾರವು ಕೋವಿಡ್ -19 ಸಂಕಷ್ಟದ ಸಮಯದಲ್ಲಿ ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಪ್ರಮಾಣದ ಕೈಗಾರಿಕೆಗಳಿಗಾಗಿ ವಿಶೇಷ ಪ್ಯಾಕೇಜ್ ಘೋಷಿಸಿದೆ.

Most Read Articles

Kannada
English summary
Delhi to Chandigarh distance will be covered in 2 hours by 2023. Read in Kannada.
Story first published: Thursday, July 16, 2020, 13:42 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X