ಬಿಎಸ್-6 ದಟ್ಸನ್ ಗೋ, ಗೋ ಪ್ಲಸ್ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ
ದಟ್ಸನ್ ಇಂಡಿಯಾ ಕಂಪನಿಯು ತನ್ನ ಬಿಎಸ್-6 ದಟ್ಸನ್ ಗೋ ಮತ್ತು ಗೋ ಪ್ಲಸ್ ಕಾರುಗಳನ್ನು ಈ ವರ್ಷದ ಮೇ ತಿಂಗಳಲ್ಲಿ ಭಾರತದಲ್ಲಿ ಬಿಡುಗಡೆಗೊಳಿಸಿತ್ತು. ಇದೀಗ ದಟ್ಸನ್ ಕಂಪನಿಯು ಈ ಕಾರುಗಳ ಮೇಲೆ ಭರ್ಜರಿ ರಿಯಾಯಿತಿಯನ್ನು ಘೋಷಿಸಿದೆ.

ದಟ್ಸನ್ ಗೋ ಮತ್ತು ಗೋ ಪ್ಲಸ್ ಕಾರುಗಳಿಗೆ ಒಟ್ಟು ರೂ.25,000 ಗಳವರೆಗೆ ರಿಯಾಯಿತಿಯನ್ನು ಘೋಷಿಸಿದೆ. ಇದರಲ್ಲಿ ರೂ.10,000 ವಿನಿಮಯ ಬೋನಸ್ ಮತ್ತು ರೂ.10,000 ಗಳವರೆಗೆ ಕಾರ್ಪೋರೇಟ್ ಬೋನಸ್ ಅನ್ನು ಒಳಗೊಂಡಿದೆ. ಇದರೊಂದಿಗೆ ಇತರ ಆಫರ್ ಗಳು ಕೂಡ ಲಭ್ಯವಿದೆ. ಆದರೆ ದಟ್ಸನ್ ಕಂಪನಿಯು ಈ ಕಾರುಗಳ ಮೇಲೆ ಯಾವುದೇ ನಗದು ರಿಯಾಯಿತಿಗಳನ್ನು ನೀಡಲಾಗಿಲ್ಲ.

ಇನ್ನು ದಟ್ಸನ್ ಗೋ ಮತ್ತು ಗೋ ಪ್ಲಸ್ ಒಂದೇ ಮಾದರಿಯ 1.2-ಲೀಟರ್ ಮೂರು ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ ಐದು-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯು 68 ಬಿಹೆಚ್‌ಪಿ ಪವರ್ ಅನ್ನು ಉತ್ಪಾದಿಸುತ್ತದೆ.
MOST READ: ಭರ್ಜರಿಯಾಗಿ ಮಾರಾಟವಾಯ್ತು ಫೋಕ್ಸ್‌ವ್ಯಾಗನ್ ಟಿ-ರಾಕ್ ಎಸ್‍ಯುವಿ

ಇನ್ನು ಸಿವಿಟಿ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯು 75 ಬಿಹೆಚ್‌ಪಿ ಮತ್ತು 104 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ದಟ್ಸನ್ ಗೋ ಮತ್ತು ಗೋ ಪ್ಲಸ್ ಕಾರುಗಳಲ್ಲಿ ಸಿವಿಟಿ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯು ಹೊಂದಿರುವುದು ಭಾರತೀಯ ಮಾರುಕಟ್ಟೆಯಲ್ಲಿ ಗ್ರಾಹಕರನ್ನು ಸೆಳೆಯಲು ಸಹಕಾರಿಯಾಗಿದೆ.

ಹೊಸ ದಟ್ಸನ್ ಗೋ ಮತ್ತು ಗೋ ಪ್ಲಸ್ ಕಾರುಗಳು ಡಿ, ಎ, ಟಿ, ಟಿ ಸಿವಿಟಿ, ಟಿ ಸಿವಿಟಿ ಮತ್ತು ಟಿ(ಒ) ಎಂಬ ರೂಪಾಂತರಗಳಲ್ಲಿ ಲಭ್ಯವಿದೆ. ಈ ಕಾರುಗಳು ಆಕರ್ಷಕ ಲುಕ್ ಅನ್ನು ಹೊಂದಿದೆ.
MOST READ: ಬೆಂಗಳೂರಿನಲ್ಲಿ ಸ್ಪಾಟ್ ಟೆಸ್ಟ್ ನಡೆಸಿದ ನಿಸ್ಸಾನ್ ಮ್ಯಾಗ್ನೆಟ್ ಎಸ್‍ಯುವಿ

ಈ ದಟ್ಸನ್ ಗೋ ಕಾರಿನ ಬೆಲೆಯು ರೂ.3.99 ಲಕ್ಷಗಳಾದರೆ, ಗೋ ಪ್ಲಸ್ ಎಂಪಿವಿಯ ಬೆಲೆಯು ರೂ.4.19 ಲಕ್ಷಗಳಾಗಿದೆ. ಈ ಎಲ್ಲಾ ಬೆಲೆಗಳು ಭಾರತದ ಎಕ್ಸ್ ಶೋರೂಂ ಪ್ರಕಾರವಾಗಿದೆ.

ಈ ಎರಡು ಕಾರುಗಳಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಏರ್‍ಬ್ಯಾಗ್, ಇಬಿಡಿ ಹೊಂದಿರುವ ಎಬಿಎಸ್, ರೇರ್ ಪಾರ್ಕಿಂಗ್ ಅಸಿಸ್ಟ್ ಸೆನ್ಸಾರ್, ಹೈ ಸ್ಪೀಡ್ ವಾರ್ನಿಂಗ್, ಚಾಲಕ ಹಾಗೂ ಸಹ ಪ್ರಯಾಣಿಕರಿಗೆ ಸೀಟ್ ಬೆಲ್ಟ್ ರಿಮ್ಯಾಂಡರ್‍ಗಳನ್ನು ಹೊಂದಿದೆ.
MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಹೊಸ ದಟ್ಸನ್ ಗೋ ಮತ್ತು ಗೋ ಪ್ಲಸ್ ಕಾರುಗಳಲ್ಲಿ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ಪಿಯಾನೋ ಬ್ಲ್ಯಾಕ್ ಫಿನಿಶ್ ಮತ್ತು ಸಿಲ್ವರ್ ಬೆಜೆಲ್‌ಗಳು, ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಮ್ಯಾನುವಲ್ ಆಗಿ ಹೊಂದಾಣಿಕೆ ಮಾಡಬಹುದಾದ ಮಿರರ್ ಅನ್ನು ಹೊಂದಿದೆ.

ಭಾರತೀಯ ಮಾರುಕಟ್ಟೆಯಲ್ಲಿ ದಟ್ಸನ್ ಗೋ ಕಾರು ಹ್ಯುಂಡೈ ಸ್ಯಾಂಟ್ರೊ, ಮಾರುತಿ ಸುಜುಕಿ ವ್ಯಾಗನ್ಆರ್ ಮತ್ತು ಟಾಟಾ ಟಿಯಾಗೊ ಕಾರುಗಳಿಗೆ ಪೈಪೋಟಿಯನ್ನು ನೀಡುತ್ತದೆ. ಇನ್ನು ದಟ್ಸನ್ ಗೋ ಪ್ಲಸ್ ಮಾದರಿ ಮಾರುತಿ ಸುಜುಕಿ ಇಕೋ ಮತ್ತು ರೆನಾಲ್ಟ್ ಟ್ರೈಬರ್ ಕಾರುಗಳಿಗೆ ಪೈಪೋಟಿ ನೀಡುತ್ತದೆ.


Click it and Unblock the Notifications








