ವಿಮಾನಯಾನ ಪ್ರಯಾಣಿಕರಿಗೆ ಕ್ವಾರೆಂಟೈನ್ ನಿಯಮಗಳನ್ನು ಬಿಡುಗಡೆಗೊಳಿಸಿದ ವಿಮಾನಯಾನ ಇಲಾಖೆ

ಲಾಕ್‌ಡೌನ್ ಕಾರಣಕ್ಕೆ ಸ್ತಗಿತಗೊಂಡಿದ್ದ ದೇಶಿಯ ವಿಮಾನಯಾನವು ಮೇ 25ರಿಂದ ಆರಂಭವಾಗಲಿದೆ. ಇದಕ್ಕಾಗಿ ಬುಕ್ಕಿಂಗ್‌ಗಳನ್ನು ಆರಂಭಿಸಲಾಗಿದೆ. ವಿಮಾನಯಾನದ ಅವಧಿಯಲ್ಲಿ ಕೋವಿಡ್ -19 ಸೋಂಕು ಹರಡದಂತೆ ತಡೆಯಲು ಸರ್ಕಾರವು ಹಲವು ನಿಯಮಗಳನ್ನು ಜಾರಿಗೆ ತಂದಿದೆ.

ವಿಮಾನಯಾನ ಪ್ರಯಾಣಿಕರಿಗೆ ಕ್ವಾರೆಂಟೈನ್ ನಿಯಮಗಳನ್ನು ಬಿಡುಗಡೆಗೊಳಿಸಿದ ವಿಮಾನಯಾನ ಇಲಾಖೆ

ಈ ಬಗ್ಗೆ ಡಿಜಿಟಲ್ ಪತ್ರಿಕಾಗೋಷ್ಠಿ ಮೂಲಕ ಮಾಹಿತಿ ನೀಡಿರುವ ವಿಮಾನಯಾನ ಸಚಿವ ಹರ್‌ದೀಪ್ ಸಿಂಗ್ ಪುರಿರವರು ಮೇ 25ರಿಂದ ದೇಶಿಯ ವಿಮಾನದಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಕ್ವಾರೆಂಟೈನ್ ಕಡ್ಡಾಯವಲ್ಲ. ಮೊದಲಿನಂತೆ 14 ದಿನಗಳ ಕ್ವಾರೆಂಟೈನ್‌ಗೆ ಒಳಗಾಗುವಂತಿಲ್ಲ ಎಂದು ಹೇಳಿದರು. ಕೆಲವು ದಿನಗಳ ಹಿಂದೆ ವಿಮಾನ ಪ್ರಯಾಣವನ್ನು ಆರಂಭಿಸಲು ನಿರ್ಧರಿಸಲಾಗಿತ್ತು.

ವಿಮಾನಯಾನ ಪ್ರಯಾಣಿಕರಿಗೆ ಕ್ವಾರೆಂಟೈನ್ ನಿಯಮಗಳನ್ನು ಬಿಡುಗಡೆಗೊಳಿಸಿದ ವಿಮಾನಯಾನ ಇಲಾಖೆ

ಆದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವಿನ ಹೊಂದಾಣಿಕೆಯ ಕೊರತೆಯಿಂದಾಗಿ ಸ್ಪಷ್ಟ ನಿರ್ಧಾರಕ್ಕೆ ಬರಲು ವಿಳಂಬವಾಯಿತು. ಲಾಕ್‌ಡೌನ್ ತೆಗೆದು ಹಾಕಿದ ನಂತರ ವಿಮಾನವು ಎಲ್ಲಿಂದ ಚಲಿಸಲಿದೆ ಎಂಬುದನ್ನು ಕೇಂದ್ರ ಸರ್ಕಾರವು ನಿರ್ಧರಿಸಲು ಸಾಧ್ಯವಿಲ್ಲ ಎಂದು ವಿಮಾನಯಾನ ಇಲಾಖೆ ಹೇಳಿದೆ.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ವಿಮಾನಯಾನ ಪ್ರಯಾಣಿಕರಿಗೆ ಕ್ವಾರೆಂಟೈನ್ ನಿಯಮಗಳನ್ನು ಬಿಡುಗಡೆಗೊಳಿಸಿದ ವಿಮಾನಯಾನ ಇಲಾಖೆ

ವಿಮಾನಗಳ ಹಾರಾಟಕ್ಕೆ ರಾಜ್ಯ ಸರ್ಕಾರಗಳ ಅನುಮತಿಯೂ ಅಗತ್ಯವಾಗಿದೆ. ವಿಮಾನಯಾನ ಇಲಾಖೆಯು ಟ್ವೀಟ್ ಮಾಡುವ ಮೂಲಕ ಈ ಮಾಹಿತಿಯನ್ನು ನೀಡಿದೆ. ವಿಮಾನಯಾನ ಪುನರಾರಂಭದ ನಂತರ ವಿಮಾನಗಳು ಕಡಿಮೆ ಸಾಮರ್ಥ್ಯದಲ್ಲಿ ಹಾರಾಟ ನಡೆಸಲಿದ್ದು, ಪ್ರಯಾಣಿಕರ ಸಂಖ್ಯೆ ಸೀಮಿತ ಸಂಖ್ಯೆಯಲ್ಲಿರುತ್ತದೆ.

ವಿಮಾನಯಾನ ಪ್ರಯಾಣಿಕರಿಗೆ ಕ್ವಾರೆಂಟೈನ್ ನಿಯಮಗಳನ್ನು ಬಿಡುಗಡೆಗೊಳಿಸಿದ ವಿಮಾನಯಾನ ಇಲಾಖೆ

ವಿಮಾನಯಾನದ ಸಂದರ್ಭದಲ್ಲಿ ವಿಮಾನಗಳ ಸಿಬ್ಬಂದಿ ಹಾಗೂ ಪ್ರಯಾಣಿಕರ ಸುರಕ್ಷತೆಗಾಗಿ ಕೇಂದ್ರ ಸರ್ಕಾರವು ಹಲವು ನಿಯಮಗಳನ್ನು ಜಾರಿಗೊಳಿಸಿದೆ. ಇದರಿಂದ ವಿಮಾನಗಳಲ್ಲಿ ಪೂರ್ಣ ಪ್ರಮಾಣದ ಸುರಕ್ಷತೆಯನ್ನು ಕಾರ್ಯಗತಗೊಳಿಸಬಹುದು. ಇವುಗಳಲ್ಲಿ ಆರೋಗ್ಯ ಸೇತು ಆ್ಯಪ್ ಬಳಕೆ, ಟ್ರಾಲಿಗಳ ಸೀಮಿತ ಬಳಕೆ ಇತ್ಯಾದಿಗಳು ಸೇರಿವೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ವಿಮಾನಯಾನ ಪ್ರಯಾಣಿಕರಿಗೆ ಕ್ವಾರೆಂಟೈನ್ ನಿಯಮಗಳನ್ನು ಬಿಡುಗಡೆಗೊಳಿಸಿದ ವಿಮಾನಯಾನ ಇಲಾಖೆ

ಹೊಸ ಮಾರ್ಗಸೂಚಿಗಳ ಪ್ರಕಾರ, ಪ್ರಯಾಣಿಕರು ವಿಮಾನ ನಿಲ್ದಾಣದ ಟರ್ಮಿನಲ್‌ಗೆ ಹೋಗುವ ಮೊದಲು ಥರ್ಮಲ್ ಸ್ಕ್ಯಾನಿಂಗ್‌ಗೆ ಒಳಗಾಗಬೇಕಾಗುತ್ತದೆ. ಎಲ್ಲಾ ಪ್ರಯಾಣಿಕರು ತಮ್ಮ ಮೊಬೈಲ್‌ನಲ್ಲಿ ಆರೋಗ್ಯ ಸೇತು ಅಪ್ಲಿಕೇಶನ್ ಹೊಂದಿರಬೇಕು. 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಅವಕಾಶ ನೀಡುವುದಿಲ್ಲ.

ವಿಮಾನಯಾನ ಪ್ರಯಾಣಿಕರಿಗೆ ಕ್ವಾರೆಂಟೈನ್ ನಿಯಮಗಳನ್ನು ಬಿಡುಗಡೆಗೊಳಿಸಿದ ವಿಮಾನಯಾನ ಇಲಾಖೆ

ವಿಮಾನ ಹೊರಡುವ ಎರಡು ಗಂಟೆಗಳ ಮೊದಲು ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಬರಬೇಕು. ಎಲ್ಲಾ ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್ ಹಾಗೂ ಹ್ಯಾಂಡ್‌ಗ್ಲೌಸ್‌ಗಳನ್ನು ಧರಿಸಬೇಕು. ಈ ಎಲ್ಲಾ ನಿಯಮಗಳನ್ನು ಪಾಲಿಸಿದವರಿಗೆ ಮಾತ್ರವೇ ವಿಮಾನದಲ್ಲಿ ಪ್ರಯಾಣ ಮಾಡಲು ಅನುಮತಿ ನೀಡಲಾಗುತ್ತದೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ವಿಮಾನಯಾನ ಪ್ರಯಾಣಿಕರಿಗೆ ಕ್ವಾರೆಂಟೈನ್ ನಿಯಮಗಳನ್ನು ಬಿಡುಗಡೆಗೊಳಿಸಿದ ವಿಮಾನಯಾನ ಇಲಾಖೆ

ವಿಮಾನ ಪ್ರಯಾಣದ ನಂತರ ಪ್ರಯಾಣಿಕರನ್ನು ಕ್ವಾರೆಂಟೈನ್‌ಗೆ ಒಳಪಡಿಸಬೇಕೇ, ಬೇಡವೇ ಎಂಬುದು ರಾಜ್ಯ ಸರ್ಕಾರಗಳ ವಿವೇಚನೆಗೆ ಬಿಡಲಾಗಿದೆ. ಇತ್ತೀಚೆಗಷ್ಟೇ ಅಸ್ಸಾಂ ನಾಯಕ ಹೇಮಂತ್ ಬಿಸ್ವಾ ಶರ್ಮಾರವರು ವಿಮಾನ ಪ್ರಯಾಣಿಕರನ್ನು ಕ್ವಾರೆಂಟೈನ್‌ಗೆ ಒಳಪಡಿಸಲಾಗುವುದು ಎಂದು ಹೇಳಿದ್ದಾರೆ.

Article Published On: Friday, May 22, 2020, 19:43 [IST]
English summary
Quarantine regulations for Domestic Flight passengers. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+