ಲಾಕ್‌ಡೌನ್ ಎಫೆಕ್ಟ್: ಮನೆಯಲ್ಲಿಯೇ ವಾಹನಗಳನ್ನು ಸರ್ವಿಸ್ ಮಾಡಲಿದೆ ಡ್ರೂಮ್..!

ಡ್ರೂಮ್ ಕಂಪನಿಯು ಜಂಪ್‌ಸ್ಟಾರ್ಟ್ ಸೇವೆಯನ್ನು ಆರಂಭಿಸಿದೆ. ಈ ಸೇವೆಯಲ್ಲಿ ಗ್ರಾಹಕರ ವಾಹನಗಳನ್ನು ಅವರ ಮನೆಯಲ್ಲಿಯೇ ಸರ್ವಿಸ್ ಮಾಡಲಾಗುವುದು. ಕಂಪನಿಯ ಈ ಸೇವೆಯು ರೂ.499ರಿಂದ ಆರಂಭವಾಗಲಿದೆ.

ಲಾಕ್‌ಡೌನ್ ಎಫೆಕ್ಟ್: ಮನೆಯಲ್ಲಿಯೇ ವಾಹನಗಳನ್ನು ಸರ್ವಿಸ್ ಮಾಡಲಿದೆ ಡ್ರೂಮ್..!

ಈ ಸೇವೆಯಡಿಯಲ್ಲಿ ಎಲ್ಲಾ ದ್ವಿಚಕ್ರ ಹಾಗೂ ನಾಲ್ಕು ಚಕ್ರ ವಾಹನಗಳನ್ನು ಸರ್ವಿಸ್ ಮಾಡಲಾಗುವುದು. ಇವುಗಳಲ್ಲಿ ಖಾಸಗಿ ವಾಹನಗಳು, ಕ್ಯಾಬ್ ಸೇವಾ ಕಂಪನಿಗಳು, ಆಸ್ಪತ್ರೆಗಳು, ಲಾಜಿಸ್ಟಿಕ್ಸ್, ಖಾಸಗಿ ಹಾಗೂ ಸಾರ್ವಜನಿಕ ಬಸ್ ಮಾಲೀಕರು ಮತ್ತು ಹೋಟೆಲ್‌ಗಳು ಸೇರಿವೆ.

ಲಾಕ್‌ಡೌನ್ ಎಫೆಕ್ಟ್: ಮನೆಯಲ್ಲಿಯೇ ವಾಹನಗಳನ್ನು ಸರ್ವಿಸ್ ಮಾಡಲಿದೆ ಡ್ರೂಮ್..!

ಇದರ ಜೊತೆಗೆ ಕಂಪನಿಯು ಇನ್ನೂ ಹಲವು ಸೇವೆಗಳನ್ನು ಆರಂಭಿಸಿದೆ. ಇದರಲ್ಲಿ ಟೋಯಿಂಗ್, ಗ್ಯಾಸ್ ಫಿಲ್ಲಿಂಗ್, ಫ್ಲಾಟ್ ಟಯರ್ ರಿಪೇರಿ, ಪ್ರೆಶರ್ ವಾಟರ್ ಕ್ಲೀನಿಂಗ್, ಫುಲ್ ಟಾಪ್-ಅಪ್ ಆಯಿಲ್, ಲೂಬ್ರಿಕಂಟ್, ಕೂಲಂಟ್ ಸೇವೆಗಳು ಸೇರಿವೆ.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಲಾಕ್‌ಡೌನ್ ಎಫೆಕ್ಟ್: ಮನೆಯಲ್ಲಿಯೇ ವಾಹನಗಳನ್ನು ಸರ್ವಿಸ್ ಮಾಡಲಿದೆ ಡ್ರೂಮ್..!

ಈ ಸೇವೆಯನ್ನು ಪಡೆಯಲು ಗ್ರಾಹಕರು ಡ್ರೂಮ್‌ನ ಅಪ್ ಅಥವಾ ವೆಬ್‌ಸೈಟ್‌ನಲ್ಲಿರುವ ವಿಧಾನಗಳನ್ನು ಅನುಸರಿಸಬೇಕಾಗುತ್ತದೆ. ಸ್ಥಳ, ಸರ್ವಿಸ್‌ನ ವಿಧ, ಹೆಚ್ಚುವರಿ ಸರ್ವಿಸ್, ಟೈಂ ಸ್ಲಾಟ್ ಹಾಗೂ ಪಾವತಿ ವಿಧಾನವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ನಮೂದಿಸಬೇಕು.

ಲಾಕ್‌ಡೌನ್ ಎಫೆಕ್ಟ್: ಮನೆಯಲ್ಲಿಯೇ ವಾಹನಗಳನ್ನು ಸರ್ವಿಸ್ ಮಾಡಲಿದೆ ಡ್ರೂಮ್..!

ಇದಾದ ನಂತರ ಡ್ರೂಮ್ ಕಂಪನಿಯು ತಂತ್ರಜ್ಞನನ್ನು ಸರ್ವಿಸ್ ಮಾಡಲು ಕಳುಹಿಸುತ್ತದೆ. ಸರ್ವಿಸ್ ಪೂರ್ತಿಯಾದ ನಂತರ, ಪೂರ್ಣ ಸರ್ವಿಸ್ ರಿಪೋರ್ಟ್ ಅನ್ನು ಗ್ರಾಹಕರಿಗೆ ಕಳುಹಿಸಲಾಗುತ್ತದೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಲಾಕ್‌ಡೌನ್ ಎಫೆಕ್ಟ್: ಮನೆಯಲ್ಲಿಯೇ ವಾಹನಗಳನ್ನು ಸರ್ವಿಸ್ ಮಾಡಲಿದೆ ಡ್ರೂಮ್..!

ತಂತ್ರಜ್ಞರು ಮನೆಯಲ್ಲಿ ಸರ್ವಿಸ್ ಮಾಡುವಾಗ ಗ್ರಾಹಕರು ತಾವು ನಮೂದಿಸಿರುವ ಸರ್ವಿಸ್ ಜೊತೆಗೆ ಹೆಚ್ಚುವರಿ ಸರ್ವಿಸ್‌ಗಳನ್ನು ಸಹ ಸೇರಿಸಬಹುದು.

ಲಾಕ್‌ಡೌನ್ ಎಫೆಕ್ಟ್: ಮನೆಯಲ್ಲಿಯೇ ವಾಹನಗಳನ್ನು ಸರ್ವಿಸ್ ಮಾಡಲಿದೆ ಡ್ರೂಮ್..!

ಈ ಸರ್ವಿಸ್ ಬಗ್ಗೆ ಮಾತನಾಡಿರುವ ಡ್ರೂಮ್ ಕಂಪನಿಯ ಸಿಇಒ ಹಾಗೂ ಸ್ಥಾಪಕರಾದ ಸಂದೀಪ್ ಅಗರ್‌ವಾಲ್‌ರವರು ಲಾಕ್‌ಡೌನ್‌ನಿಂದಾಗಿ ದೇಶಾದ್ಯಂತ 2.5 ಮಿಲಿಯನ್ ವಾಹನಗಳುಕಾರ್ಯನಿರ್ವಹಿಸದೇ ಸ್ಥಗಿತಗೊಂಡಿವೆ. ಈ ಕಾರಣಕ್ಕೆ ಈ ಸೇವೆಯನ್ನು ಆರಂಭಿಸಲಾಗಿದೆ ಎಂದು ಹೇಳಿದರು.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಲಾಕ್‌ಡೌನ್ ಎಫೆಕ್ಟ್: ಮನೆಯಲ್ಲಿಯೇ ವಾಹನಗಳನ್ನು ಸರ್ವಿಸ್ ಮಾಡಲಿದೆ ಡ್ರೂಮ್..!

ಈ ಸೇವೆಯ ಮೂಲಕ ಯಾವುದೇ ವಾಹನವನ್ನು ಎಲ್ಲಿ ಬೇಕಾದರೂ ಪರಿಶೀಲಿಸಬಹುದು. ಇತ್ತೀಚೆಗೆ ಜರ್ಮ್ ಶೀಲ್ಡ್ ಸೇವೆಯನ್ನುಆರಂಭಿಸಲಾಗಿದೆ. ಮುಂಬರುವ ದಿನಗಳಲ್ಲಿ ಇನ್ನೂ ಹಲವು ಸೇವೆಗಳನ್ನು ಆರಂಭಿಸಲಾಗುವುದು ಎಂದು ಅವರು ಹೇಳಿದರು.

Most Read Articles

Kannada
English summary
Droom launches tech enabled doorstep vehicle service. Read in Kannada.
Story first published: Thursday, May 7, 2020, 15:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X