Just In
- 23 min ago ಅಡ್ವೆಂಚರ್ ಬೈಕ್ ಪ್ರಿಯರಿಗೆ ಸಿಹಿಸುದ್ದಿ: ಬಿಡುಗಡೆಗೆ ಸಜ್ಜಾದ ಸುಜುಕಿ V-Strom 800 DE ಬೈಕ್
- 26 min ago Maruti Suzuki: 2024ರ ಮಾರುತಿ ಸ್ವಿಫ್ಟ್ ವಿಶೇಷತೆಗಳು: ಸನ್ರೂಫ್, 35 ಕಿ.ಮೀ ಮೈಲೇಜ್!
- 1 hr ago Hyundai Creta: ಜನಪ್ರಿಯ ಹ್ಯುಂಡೈ ಕ್ರೆಟಾ ಕಾರನ್ನು ಮನೆಗೆ ತರಬೇಕೇ.. ಆನ್-ರೋಡ್ ಬೆಲೆ ಎಷ್ಟು? EMI ಏನು?
- 1 hr ago ಯುಎಸ್ಎ, ಕೆನಡಾಗೂ ಕಾಲಿಟ್ಟ ಭಾರತೀಯ ಬೈಕ್: ಮುಂದುವರೆದ ವಿಶ್ವಗುರು ಭಾರತದ ನಾಗಾಲೋಟ
Don't Miss!
- News DK Shivakumar: ಕಾಂಗ್ರೆಸ್ ಭವಿಷ್ಯದಲ್ಲಿ ನನ್ನನ್ನು ಸಿಎಂ ಮಾಡಲಿದೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Lifestyle ವಿಭಿನ್ನ ಶೈಲಿಯಲ್ಲಿ ಮೊಟ್ಟೆ ಸಾಂಬಾರ್ ಮಾಡಿ..! ಇಲ್ಲಿದೆ ಸಿಂಪಲ್ ಅಡುಗೆ
- Movies STD ಬೂತ್ನಲ್ಲಿ ಕೆಲಸ ಮಾಡುವಾಗ 500 ರೂ. ಸಂಬಳ; ಶೋ ಆರಂಭಿಸಿದ ಮೇಲೆ ಗಳಿಸಿದ್ದೆಷ್ಟು ಕೋಟಿ?
- Sports IPL 2024: ಕೆಕೆಆರ್ ವಿರುದ್ಧದ ಪಂದ್ಯಕ್ಕೂ ಮುನ್ನ ಕ್ರಿಕೆಟ್ ಬಿಟ್ಟು ಆರ್ಸಿಬಿ ಆಟಗಾರರು ಮಾಡಿದ್ದೇನು?
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದುಬೈ ರಾಯಲ್ ಫ್ಯಾಮಿಲಿಯ ಸೂಪರ್ಕಾರುಗಳ ರ್ಯಾಲಿ
ಭಾರತದ ರಸ್ತೆಗಳಲ್ಲಿ ಸೂಪರ್ಕಾರುಗಳನ್ನು ಕಾಣುವುದು ಅಪರೂಪದ ದೃಶ್ಯವಾಗಿದೆ. ಆದರೆ ದುಬೈನಂತಹ ಶ್ರೀಮಂತ ರಾಷ್ಟ್ರದ ನಗರಗಳಲ್ಲಿ ಸೂಪರ್ ಕಾರುಗಳು ಸಾಮಾನ್ಯವಾಗಿವೆ. ದುಬೈನಲ್ಲಿ ನಡೆದ ಸೂಪರ್ಕಾರುಗಳ ರ್ಯಾಲಿಯ ಬಗ್ಗೆ ಮಾಹಿತಿ ಇಲ್ಲಿದೆ.
ವಿಶ್ವದಲ್ಲೇ ಅತಿ ಹೆಚ್ಚು ಸೂಪರ್ ಕಾರುಗಳನ್ನು ಹೊಂದಿರುವ ನಗರಗಳಲ್ಲಿ ದುಬೈ ಕೂಡ ಒಂದಾಗಿದೆ. ದುಬೈನ ರಾಜಮನೆತನದವರೆಗೆ ಸೂಪರ್ ಕಾರುಗಳ ಕ್ರೇಜ್ ಹೆಚ್ಚಿದೆ. ಆಗರ್ಭ ಶ್ರೀಮಂತರಾದ ಇವರು ಒಬ್ಬೊಬ್ಬರೂ ಹಲವು ಸೂಪರ್ಕಾರುಗಳನ್ನು ಹೊಂದಿರುತ್ತಾರೆ. ಇವರ ಕಾರುಗಳ ಕ್ರೇಜ್ ಎಷ್ಟು ಇದೆ ಅಂದರೆ ರಾಜಮನೆತನದವರು ತಮ್ಮ ಕಾರುಗಳಿಗೆ ಚಿನ್ನದ ಲೇಪನವನ್ನು ಮಾಡಿಸುತ್ತಾರೆ. ವಿಶ್ವದ ಅತಿ ದುಬಾರಿ ಸೂಪರ್ ಕಾರುಗಳೆಲ್ಲವನ್ನು ನೀವು ದುಬೈಗೆ ತೆರಳಿದರೆ ಒಟ್ಟಿಗೆ ನೋಡಬಹುದಾಗಿದೆ.
ದುಬೈನಲ್ಲಿ ಸೂಪರ್ಕಾರುಗಳ ಗುಂಪು ವರ್ಷ ವರ್ಷವೂ ರ್ಯಾಲಿಗಳನ್ನು ನಡೆಸುತ್ತಲೇ ಇರುತ್ತಾರೆ. ಇದರ ಭಾಗವಾಗಿ 2020ರ ವರ್ಷದ ಮೊದಲ ಸೂಪರ್ ಕಾರು ರ್ಯಾಲಿ ಒಂದನ್ನು ಆಯೋಜಿಸಿದ್ದಾರೆ.
ಈ ರ್ಯಾಲಿಯ ವೀಡಿಯೋವನ್ನು ಮೊ ವ್ಲಾಗ್ಸ್ ತಮ್ಮ ಯುಟ್ಯೂಬ್ ಚಾನೆಲ್ನಲ್ಲಿ ಅಪ್ಲೋಡ್ ಮಾಡಿದೆ. ಈ ವೀಡಿಯೋದಲ್ಲಿ ರೋಲ್ಸ್ ರಾಯ್ಸ್ ನಂತಹ ಅಲ್ಟ್ರಾ ಐಷಾರಾಮಿ ಕಾರುಗಳನ್ನು ಕಾಣಬಹುದು.
ಈ ರ್ಯಾಲಿಯಲ್ಲಿ ಲ್ಯಾಂಬೊರ್ಗಿನಿ ಅವೆಂಟಡೊರ್ ಸ್ಪೋರ್ಟ್ಸ್ ಕಾರುಗಳು ಪಾಲ್ಗೊಂಡಿದ್ದವು. ಈ ಸ್ಪೋರ್ಟ್ಸ್ ಕಾರ್ ಅನ್ನು ವ್ಲಾಗ್ಗರ್ ಬ್ಲ್ಯಾಕ್ ಬಣ್ಣದೊಂದಿಗೆ ಕಸ್ಟಮೈಸ್ ಮಾಡಲಾಗಿದೆ. ಈ ಸೂಪರ್ಕಾರುಗಳ ವೀಡಿಯೋದಲ್ಲಿ ಭರ್ಜರಿ ಎಕ್ಸಾಸ್ಟ್ ಸೌಂಡ್ ಅನ್ನು ಕೇಳಬಹುದು.
ಈ ರ್ಯಾಲಿಯಲ್ಲಿ ಲ್ಯಾಂಬೊರ್ಗಿನಿ ಅವೆಂಟಡಾರ್ ಮತ್ತು ಗಲ್ಲಾರ್ಡೊಸ್, ಪೋರ್ಷೆ 911, ಮೆಕ್ಲಾರೆನ್ 720, ಮೆಕ್ಲಾರೆನ್ 570 ಎಸ್, ಫೆರಾರಿ, ಲ್ಯಾಂಬೊರ್ಗಿನಿ ಉರುಸ್, ಮರ್ಸಿಡಿಸ್-ಎಎಂಟಿ ಜಿಟಿ ಮತ್ತು ಮುಂತಾದ ಕಾರುಗಳು ಭಾಗಿಯಾಗಿದ್ದವು.
ಈ ರ್ಯಾಲಿಯಲ್ಲಿ ದುಬೈ ಪೊಲೀಸ್ ಇಲಾಖೆಯ ಎರಡು ಸೂಪರ್ಕಾರುಗಳು ಬೆಂಗಾವಲು ಆಗಿ ಪ್ರಯಾಣಿಸಿದವು. ದುಬೈ ಪೊಲೀಸರು ಬುಗಾಟಿ ವೇರೊನ್ರಂತಹ ಸೂಪರ್ ಕಾರುಗಳನ್ನು ಹೊಂದಿದ್ದಾರೆ.
ವಿಶ್ವದ ಅತ್ಯಂತ ಎತ್ತರ ಕಟ್ಟಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ದುಬೈ ನಗರ ವಿಶ್ವದಲ್ಲೇ ವೇಗದ ಕಾರನ್ನು ಹೊಂದುವ ಮೂಲಕ ದುಬೈ ಪೊಲೀಸರು ಗಿನ್ನಿಸ್ ದಾಖಲೆ ಪುಸ್ತಕದಲ್ಲಿ ಸೇರ್ಪಡೆಯಾಗಿದ್ದಾರೆ. ದುಬೈ ಪೊಲೀಸರ ಬಳಿ ಈಗ ದುಬಾರಿ ಲಕ್ಷುರಿ ಬುಗಾಟಿ ವೇಯ್ರಾನ್ ಕಾರುಗಳಿವೆ.
ರ್ಯಾಲಿಯಲ್ಲಿ ಮರ್ಸಿಡಿಸ್ ಎಂಎಂಜಿ ಜಿಟಿ ಮತ್ತು ಮಾಸೆರೋಟಿ ಗ್ರ್ಯಾನ್ಟ್ಯುರಿಸ್ಮೊ ಸೂಪರ್ಕಾರುಗಳು ಭಾಗವಹಿಸಿದ್ದವು. ಈ ರ್ಯಾಲಿಗೆ ಪೊಲೀಸ್ ಸೂಪರ್ಕಾರುಗಳು ಕೂಡ ಬೆಂಗಾವಲು ಒದಗಿಸಿದ್ದವು. ಪೊಲೀಸರು ಸ್ಕೈಡ್ರೈವ್ ದುಬೈನಲ್ಲಿ ಜಾಗವನ್ನು ತೆರವುಗೊಳಿಸುತ್ತಾರೆ. ಅಲ್ಲಿಗೆ ಎಲ್ಲಾ ಸೂಪರ್ಕಾರುಗಳು ಆ ಜಾಗಕ್ಕೆ ಪ್ರವೇಶಿಸುತ್ತವೆ.
ಈ ಜಾಗದಲ್ಲಿ ತಮ್ಮ ಕಾರುಗಳೊಂದಿಗೆ ಮಾಲೀಕರು ಪೋಟೋ ಕ್ಲಿಕ್ಕಿಸಿದ್ದರು. ಸ್ವಲ್ಪ ಸಮಯದ ನಂತರ ದುಬೈ ರಾಜಮನೆತನದ ಸದಸ್ಯರೊಬ್ಬರು ತಮ್ಮ ಸೂಪರ್ಕಾರನ್ನು ಪ್ರದರ್ಶಿಸುತ್ತಾರೆ. ಅವರ ಕಾರು ಮೆಕ್ಲಾರೆನ್ ಸೆನ್ನಾ ಆಗಿದೆ. ಈ ಕಾರು ಆಕರ್ಷಕ ಲುಕ್ ಅನ್ನು ಹೊಂದಿದೆ. ಮೆಕ್ಲಾರೆನ್ ಸೆನ್ನಾ ಕಾರಿನಲ್ಲಿ 4.0 ಲೀಟರ್ ವಿ8 ಎಂಜಿನ್ ಅನ್ನು ಅಳವಡಿಸಲಾಗಿದೆ.
ಈ ಎಂಜಿನ್ 800 ಬಿಹೆಚ್ಪಿ ಪವರ್ ಮತ್ತು 800 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಕಾರು ಗಂಟೆಗೆ 407 ಕಿ.ಮೀ ವೇಗದಲ್ಲಿ ಸಂಚರಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಕಾರಿನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 335 ಕಿಮೀ ಆಗಿದೆ. ಕೇವಲ 2.8 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಕ್ರಮಿಸುತ್ತದೆ.
ಈ ಕಾರಿನ ಬೆಲೆಯು 1 ಮಿಲಿಯನ್ ಡಾಲರ್ ಆಗಿದೆ. ಮೆಕ್ಲಾರೆನ್ ಇನ್ನೂ ಕೂಡ ಭಾರತದಲ್ಲಿ ಬಿಡುಗಡೆಯಾಗಿಲ್ಲ. ಈ ಬ್ರಿಟಿಷ್ ಸೂಪರ್ಕಾರು ಭವಿಷ್ಯದಲ್ಲಿ ಭಾರತದಲ್ಲಿ ಬಿಡುಗಡೆಯಾಗಬಹುದು. ಮಾರ್ಕ್ ಸೂಪರ್ ಕಾರುಗಳು ಭಾರತದಲ್ಲಿ ಬಿಡುಗಡೆಯಾದರೆ ಫೆರಾರಿ ಮತ್ತು ಲ್ಯಾಂಬೂರ್ಗಿನಿ ಕಾರುಗಳಿಗೆ ಪೈಪೋಟಿ ನೀಡಲಿದೆ.