ಬೆಂಗಳೂರಿನಲ್ಲಿ 3 ಎಸ್ ಡೀಲರ್‍ಶಿಪ್ ಆರಂಭಿಸಿದ ಐಷರ್
ವಿಇ ಕಮರ್ಷಿಯಲ್ ವೆಹಿಕಲ್ಸ್ ನ ಭಾಗವಾದ ಐಷರ್ ಟ್ರಕ್ ಹಾಗೂ ಬಸ್, ತನ್ನ 3 ಎಸ್ ಅಂದರೆ ಸೇಲ್ಸ್, ಸರ್ವಿಸ್ ಹಾಗೂ ಸ್ಪೇರ್ ಡೀಲರ್‍ಶಿಪ್ ಘಟಕವನ್ನು ನಮ್ಮ ಬೆಂಗಳೂರಿನಲ್ಲಿ ಆರಂಭಿಸಿದೆ. ಈ ಘಟಕವನ್ನು ಅಗಸ್ತ್ಯಾದ ಸಹಭಾಗಿತ್ವದಲ್ಲಿ ಆರಂಭಿಸಲಾಗಿದೆ.

ಬೆಂಗಳೂರು - ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ನೆಲಮಂಗಲದಲ್ಲಿ ಈ ಘಟಕವನ್ನು ಆರಂಭಿಸಲಾಗಿದೆ. ಐಷರ್ ಈ ಮಾರ್ಗದಲ್ಲಿ ಸಂಚರಿಸುವ ತನ್ನ ಟ್ರಕ್ ಹಾಗೂ ಬಸ್‍ಗಳಿಗೆ ವಿಶ್ವ ದರ್ಜೆಯ ಸರ್ವಿಸ್ ಅನ್ನು ನೀಡುವ ಉದ್ದೇಶವನ್ನು ಹೊಂದಿದೆ.

ಈ ಡೀಲರ್‍ಶಿಪ್ ಲಾಂಗ್‍ಫೋರ್ಡ್ ರಸ್ತೆ ಹಾಗೂ ಮೈಸೂರು ರಸ್ತೆಯಲ್ಲಿ ಎರಡು ಐಷರ್ ಸೇಲ್ಸ್ ಔಟ್‍ಲೆಟ್‍ಗಳನ್ನು ಹೊಂದಿದೆ. ಸದ್ಯಕ್ಕೆ ದೇಶಾದ್ಯಂತ ಐಷರ್ ಕಂಪನಿಯ 296 ಡೀಲರ್‍ಶಿಪ್‍ಗಳಿವೆ. ಈ ಡೀಲರ್‍ಶಿಪ್‍ಗಳು 5-55ಟಿ ರೇಂಜ್‍ನಲ್ಲಿರುವ ಟ್ರಕ್ ಹಾಗೂ ಬಸ್ ಸೆಗ್‍ಮೆಂಟ್‍ಗಳಿಗೆ ಸರ್ವಿಸ್ ನೀಡುತ್ತಿವೆ.

ನೆಲಮಂಗಲದಲ್ಲಿ ಆರಂಭಿಸಿದ ಡೀಲರ್‍ಶಿಪ್‍ನೊಂದಿಗೆ ಐಷರ್ ಕಂಪನಿಯು ಕರ್ನಾಟಕದಲ್ಲಿ 27 ಡೀಲರ್‍ಶಿಪ್‍ಗಳನ್ನು ಹೊಂದಿದಂತಾಗಿದೆ. ಇದರಲ್ಲಿ 14 ಡೀಲರ್‍ಶಿಪ್‍ಗಳು 3 ಎಸ್ ಆಗಿದ್ದು, 9 ಡೀಲರ್‍ಶಿಪ್‍ಗಳು ಬೆಂಗಳೂರಿನ ಸುತ್ತಮುತ್ತಲಿನಲ್ಲಿವೆ.

ಹೊಸ ಡೀಲರ್‍ಶಿಪ್ ಉದ್ಘಾಟನಾ ಸಮಾರಂಭದಲ್ಲಿ ಗ್ರಾಹಕರು, ಫೈನಾನ್ಸಿಯರ್‍ಗಳು ಹಾಗೂ ನಗರದ ಗಣ್ಯ ವ್ಯಕ್ತಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ವ್ಯವಹಾರದ ದೃಷ್ಟಿಯಿಂದ ಹೇಳುವುದಾದರೆ, ಬೆಂಗಳೂರು ನಗರ ಹಾಗೂ ಗ್ರಾಮಾಂತರದ ವ್ಯವಹಾರವು ಕರ್ನಾಟಕದ ಒಟ್ಟಾರೆ ವ್ಯವಹಾರದ ಅರ್ಧ ಭಾಗಕ್ಕಿಂತ ಹೆಚ್ಚಾಗಿದೆ.

ಇದರ ಜೊತೆಗೆ ಇ-ಕಾಮರ್ಸ್ ಹಾಗೂ ಲಾಜಿಸ್ಟಿಕ್ಸ್ ಗಳು ಹೆಚ್ಚಿನ ಪ್ರಮಾಣದಲ್ಲಿ ಅಭಿವೃದ್ಧಿ ಹೊಂದುತ್ತಿರುವುದರಿಂದ ಟ್ರಕ್‍ಗಳ ಮಾರಾಟವೂ ಸಹ ಹೆಚ್ಚಾಗುತ್ತಿದೆ. ಐಷರ್ ಕಂಪನಿಯು ಕಳೆದ ಕೆಲವು ವರ್ಷಗಳಿಂದ ಟ್ರಕ್‍ಗಳ ಮಾರಾಟದಲ್ಲಿ 32% ಹಾಗೂ ಬಸ್ಸುಗಳ ಮಾರಾಟದಲ್ಲಿ 25% ಹಾಗೂ ಭಾರೀ ತೂಕದ ಟ್ರಕ್‍ಗಳ ಮಾರಾಟದಲ್ಲಿ 6%ನಷ್ಟು ಬೆಳವಣಿಗೆಯನ್ನು ಹೊಂದಿದೆ.

ಐಷರ್ ಕಂಪನಿಯು ಬೆಂಗಳೂರಿನಲ್ಲಿರುವ ಬಸ್ಸುಗಳ ಸೇವೆಯಲ್ಲಿ ಮುಂಚೂಣಿಯಲ್ಲಿದ್ದು, ಸರ್ಕಾರಿ ಸಂಸ್ಥೆಯಲ್ಲಿಯೂ ಹೆಚ್ಚಿನ ಪ್ರಮಾಣದಲ್ಲಿ ಬಸ್ಸುಗಳನ್ನು ಓಡಿಸುತ್ತಿದೆ. ಹೊಸ 3 ಎಸ್ ಡೀಲರ್‍ಶಿಪ್ ಆರಂಭಿಸಿದ ನಂತರ ವಿಇ ಕಮರ್ಷಿಯಲ್ ವೆಹಿಕಲ್ಸ್ ಎಂಡಿ ಹಾಗೂ ಸಿಇಒ ವಿನೋದ್ ಅಗರ್‍ವಾಲ್‍ರವರು ಮಾತನಾಡಿದ್ದಾರೆ.

ಬೆಂಗಳೂರಿನಲ್ಲಿ 3 ಎಸ್ ಡೀಲರ್‍ಶಿಪ್ ಅನ್ನು ಆರಂಭಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಈ ಡೀಲರ್‍ಶಿಪ್‍ನಲ್ಲಿ ಗ್ರಾಹಕರಿಗೆ ಎಲ್ಲಾ ರೀತಿಯ ಸೇವೆಯನ್ನು ನೀಡಲಾಗುವುದು. ಐಟಿಯ ಜೊತೆಗೆ ಬೆಂಗಳೂರು ನಗರವು ಸಾರಿಗೆಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಹೊಂದಿದೆ. ಇದರಿಂದಾಗಿ ಐಷರ್ ತನ್ನ ಬಸ್ ಪ್ರೊಫೈಲ್ ಅನ್ನು ಮತ್ತಷ್ಟು ವಿಸ್ತರಿಸಲಿದೆ ಎಂದು ಅವರು ಹೇಳಿದರು.

ವಿಇ ಕಮರ್ಷಿಯಲ್ ವೆಹಿಕಲ್ಸ್ ಲಿಮಿಟೆಡ್ ಬಗ್ಗೆ:
ವಿಇ ಕಮರ್ಷಿಯಲ್ ವೆಹಿಕಲ್ಸ್ ಲಿಮಿಟೆಡ್ (ವಿಇಸಿವಿ) ವೊಲ್ವೊ ಗ್ರೂಪ್ ಹಾಗೂ ಐಷರ್ ಮೋಟಾರ್ಸ್ ಲಿಮಿಟೆಡ್‍ನ ಜಂಟಿ ಸಹಭಾಗಿತ್ವವಾಗಿದೆ. ಈ ಸಹಭಾಗಿತ್ವವು 2008ರ ಜುಲೈನಿಂದ ಕಾರ್ಯಾಚರಿಸುತ್ತಿದೆ. ಈ ಸಹಭಾಗಿತ್ವದಲ್ಲಿ ಐಷರ್ ಕಂಪನಿಯ ಟ್ರಕ್ ಹಾಗೂ ಬಸ್‍ಗಳ ಜೊತೆಗೆ ವೊಲ್ವೊ ಟ್ರಕ್‍ಗಳನ್ನು ಮಾರಾಟ ಮಾಡಲಾಗುತ್ತದೆ.

ಇವುಗಳ ಜೊತೆಗೆ ಇಂಜಿನ್ ತಯಾರಿಕೆ, ವೊಲ್ವೊ ಕಂಪನಿಯ ರಫ್ತು, ನಾನ್ ಆಟೋಮೋಟಿವ್ ಎಂಜಿನ್ ಹಾಗೂ ಐಷರ್‍ನ ಬಿಡಿಭಾಗಗಳನ್ನು ತಯಾರಿಸಲಾಗುತ್ತದೆ. ಈ ಕಂಪನಿಯು ಹಲವು ಬ್ರಾಂಡಿನ, ಹಲವು ವಿಭಾಗದ ವಿಇ ಕಂಪನಿಯು ಕಮರ್ಷಿಯಲ್ ವಾಹನಗಳನ್ನು ಆಧುನಿಕಗೊಳಿಸುವಲ್ಲಿ ಭಾರತದ ಆಟೋಮೊಬೈಲ್ ಸೆಗ್‍ಮೆಂಟಿನಲ್ಲಿ ಮುಂಚೂಣಿಯಲ್ಲಿದೆ.


Click it and Unblock the Notifications








