ಸ್ಕೈ ಲೈನ್ ಪ್ರೊ ಎಲೆಕ್ಟ್ರಿಕ್ ಬಸ್‌ಗಳನ್ನು ಪರಿಚಯಿಸಲಿದೆ ಐಷರ್

Written By:

ದೇಶದ ಪ್ರಮುಖ ವಾಣಿಜ್ಯ ವಾಹನಗಳ ಉತ್ಪಾದನೆ ಮಾಡುವ ಐಷರ್ ಸಂಸ್ಥೆಯು ಭಾರತೀಯ ಮಾರುಕಟ್ಟೆಗಾಗಿ ಶೂನ್ಯ ಮಾಲಿನ್ಯದ ಪ್ರಪ್ರಥಮ ವಿದ್ಯುತ್ ಚಾಲಿತ ಬಸ್ಸನ್ನು ಪರಿಚಯಿಸುತ್ತಿದೆ. ಐಷರ್ ಎಲೆಕ್ಟ್ರಿಕ್ ಬಸ್ಸುಗಳು ಸ್ಕೈ ಲೈನ್ ಪ್ರೊ ಎಂಬ ಹೆಸರಿನಿಂದ ಅರಿಯಲ್ಪಡಲಿದೆ.

ಸ್ಕೈ ಲೈನ್ ಪ್ರೊ ಎಲೆಕ್ಟ್ರಿಕ್ ಬಸ್‌ಗಳನ್ನು ಪರಿಚಯಿಸಲಿದೆ ಐರಿಷ್

ಎಲೆಕ್ಟ್ರಿಕ್ ಎಂಜಿನ್ ಪ್ರೇರಿತ ವಾಹನಗಳಿಗೆ ಸಾಕಷ್ಟು ಬೇಡಿಕೆ ಸೃಷ್ಠಿಯಾಗುತ್ತಿದ್ದು, ಇದೀಗ ಮೊದಲ ಬಾರಿಗೆ ಸಾರ್ವಜನಿಕ ಸಾರಿಗೆ ವಲಯದಲ್ಲಿ ಎಲೆಕ್ಟ್ರಿಕ್ ಬಸ್ಸುಗಳನ್ನು ಪರಿಚಯಿಸಲು ಮುಂದಾಗಿರುವ ಐಷರ್ ಸಂಸ್ಥೆಯು ಎಲೆಕ್ಟ್ರಿಕ್ ಪವರ್ ಟ್ರೈನ್, ಬ್ಯಾಟರಿ ಮ್ಯಾನೆಜ್‌ಮೆಂಟ್ ಸಿಸ್ಟಂ ಹೊಂದಿರುವ ಬಸ್ಸುಗಳನ್ನು ಅಭಿವೃದ್ಧಿ ಮಾಡಿದೆ.

ಸ್ಕೈ ಲೈನ್ ಪ್ರೊ ಎಲೆಕ್ಟ್ರಿಕ್ ಬಸ್‌ಗಳನ್ನು ಪರಿಚಯಿಸಲಿದೆ ಐರಿಷ್

ಮಾಲಿನ್ಯ ರಹಿತ ಅಥವಾ ಶೂನ್ಯ ಮಾಲಿನ್ಯದ ಐಷರ್ ಎಲೆಕ್ಟ್ರಿಕ್ ಬಸ್ಸುಗಳನ್ನು ಭಾರತೀಯ ರಸ್ತೆ ಪರಿಸ್ಥಿತಿಗೆ ಅನುಗುಣವಾಗಿ ರಚಿಸಲಾಗಿದ್ದು, ಒಂದು ಬಾರಿ ಚಾರ್ಜ್ ಮಾಡಿದ್ದಲ್ಲಿ 177 ಕಿಮಿ ಮೈಲೇಜ್ ಒದಗಿಸುವ ಗುಣ ಹೊಂದಿವೆ.

ಸ್ಕೈ ಲೈನ್ ಪ್ರೊ ಎಲೆಕ್ಟ್ರಿಕ್ ಬಸ್‌ಗಳನ್ನು ಪರಿಚಯಿಸಲಿದೆ ಐರಿಷ್

ಜೊತೆಗೆ ಸ್ಕೈ ಲೈನ್ ಪ್ರೊ ಫ್ಲ್ಯಾಟ್ ಫಾರ್ಮ್ ಆಧಾರ ಮೇಲೆ ಹೊಸ ಬಸ್ಸುಗಳನ್ನು ನಿರ್ಮಾಣ ಮಾಡಲಾಗಿದ್ದು, ಸುಧಾರಿತ ಸುರಕ್ಷಾ ತಂತ್ರಜ್ಞಾನಗಳೊಂದಿಗೆ 9 ಮೀಟರ್ ಉದ್ದ ಹೊಂದಿರುವ ಈ ವಿನೂತನ ಬಸ್ಸುಗಳು ಏರ್ ಕಂಡೀಷನ್ ಪ್ರೇರಿತ ವಾಹನಗಳಾಗಿವೆ.

ಸ್ಕೈ ಲೈನ್ ಪ್ರೊ ಎಲೆಕ್ಟ್ರಿಕ್ ಬಸ್‌ಗಳನ್ನು ಪರಿಚಯಿಸಲಿದೆ ಐರಿಷ್

ಭಾರತದಲ್ಲಿ ಕೆಪಿಐಟಿ ಟೆಕ್ನಾಲಜಿ ಲಿಮಿಟೆಡ್ ಜೊತೆಗೂಡಿ ಈ ಎಲೆಕ್ಟ್ರಿಕ್ ಬಸ್ಸುಗಳನ್ನು ನಿರ್ಮಾಣ ಮಾಡಿರುವ ಐಷರ್ ಸಂಸ್ಥೆಯು ಮಧ್ಯಪ್ರದೇಶದಲ್ಲಿರುವ ತನ್ನ ವಾಹನ ಉತ್ಪಾದನಾ ಕೇಂದ್ರದಲ್ಲಿ ಈ ಹೊಸ ಬಸ್ಸುಗಳನ್ನು ಅಭಿವೃದ್ಧಿ ಮಾಡುತ್ತಿದೆ.

ಸ್ಕೈ ಲೈನ್ ಪ್ರೊ ಎಲೆಕ್ಟ್ರಿಕ್ ಬಸ್‌ಗಳನ್ನು ಪರಿಚಯಿಸಲಿದೆ ಐರಿಷ್

ಈ ಬಗ್ಗೆ ಐಷರ್ ವಾಣಿಜ್ಯ ವಾಹನ ವಿಭಾಗದ ಎಂಡಿ ವಿನೋದ್ ಅಗರವಾಲ್ ಮಾತನಾಡಿದ್ದು 'ಭವಿಷ್ಯದ ಎಲೆಕ್ಟ್ರಿಕ್ ವಾಹನಗಳಿಗೆ ಭಾರತದಲ್ಲಿ ಉತ್ತಮ ಮಾರುಕಟ್ಟೆಯಿದ್ದು, ಕೆಪಿಐಟಿ ಟೆಕ್ನಾಲಜಿ ಲಿಮಿಟೆಡ್ ಜೊತೆಗೂಡಿ ಅತ್ಯುತ್ತಮ ಎಲೆಕ್ಟ್ರಿಕ್ ಬಸ್ಸುಗಳನ್ನು ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ' ಎಂದಿದ್ದಾರೆ.

ಸ್ಕೈ ಲೈನ್ ಪ್ರೊ ಎಲೆಕ್ಟ್ರಿಕ್ ಬಸ್‌ಗಳನ್ನು ಪರಿಚಯಿಸಲಿದೆ ಐರಿಷ್

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ದೇಶಾದ್ಯಂತ ಈಗಾಗಲೇ ಹಲವಾರು ವಾಹನ ಉತ್ಪಾದಕರು ಎಲೆಕ್ಟ್ರಿಕ್ ಬಸ್ ನಿರ್ಮಾಣಕ್ಕೆ ಬೃಹತ್ ಯೋಜನೆಗಳನ್ನು ರೂಪಿಸುತ್ತಿದ್ದು, ಇದೀಗ ಪ್ರತಿಷ್ಠಿತ ಐಷರ್ ಸಂಸ್ಥೆಯು ಕೂಡಾ ತನ್ನ ಮೊದಲ ಎಲೆಕ್ಟ್ರಿಕ್ ಬಸ್ಸುನ್ನು ನಿರ್ಮಾಣಕ್ಕೆ ಮುಂದಾಗಿರುವುದು ಗಮನಾರ್ಹ.

Trending DriveSpark YouTube Videos

Subscribe To DriveSpark Kannada YouTube Channel - Click Here

English summary
Eicher Introduces Skyline Pro Electric Bus In India.

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark