ಕರೋನಾ ಎಫೆಕ್ಟ್- ಮತ್ತಷ್ಟು ದುಬಾರಿಯಾಗಲಿದೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ

ಇಡೀ ವಿಶ್ವವೇ ಇದೀಗ ಕರೋನಾ ವೈರಸ್ ವಿರುದ್ದ ಹೋರಾಟ ನಡೆಸುತ್ತಿದ್ದು, ವೈರಸ್ ತಡೆಯುವ ಎಲ್ಲಾ ಪ್ರಯತ್ನಗಳನ್ನು ಕೈಗೊಳ್ಳಲಾಗುತ್ತಿದೆ. ಈ ನಡುವೆ ದೇಶದ ಆರ್ಥಿಕ ಪರಿಸ್ಥಿತಿಯು ಶೋಚನೀಯವಾಗುತ್ತಿದ್ದು, ಮಾಹಾಮಾರಿ ಕರೋನಾ ತಡೆಯಲು ಹೆಚ್ಚುವರಿ ಸಂಪನ್ಮೂಲ ಕ್ರೂಢೀಕರಣಕ್ಕೆ ಸರ್ಕಾರ ನಿರ್ಧರಿಸಿದೆ.

ಕರೋನಾ ಎಫೆಕ್ಟ್- ಮತ್ತಷ್ಟು ದುಬಾರಿಯಾಗಲಿದೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ

'ಹಣಕಾಸು ಮಸೂದೆ 2020'ರಲ್ಲಿ ಕೆಲವು ತಿದ್ದುಪಡಿ ಮಾಡಲು ಹಣಕಾಸು ಸಚಿವಾಲಯ ನಿರ್ಧರಿಸಿದ್ದು, ಇದರಲ್ಲಿ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ವಿಶೇಷ ಹೆಚ್ಚುವರಿ ಅಬಕಾರಿ ಸುಂಕವನ್ನು ವಿಧಿಸುವ ನಿರ್ಣಯಕ್ಕೆ ಬಂದಿದೆ. ಆದರೆ ಹೆಚ್ಚುವರಿ ಅಬಕಾರಿ ಸುಂಕ ಎಷ್ಟು ಏರಿಕೆಯಾಗಿದೆ ಎನ್ನುವ ಬಗ್ಗೆ ಯಾವುದೇ ನಿಖರ ಮಾಹಿತಿ ಇಲ್ಲವಾದರೂ ಹೊಸ ಅಬಕಾರಿ ಸುಂಕವನ್ನು ವಿಧಿಸಿದ ನಂತರ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯು ಪ್ರಸ್ತುತ ಮಾರುಕಟ್ಟೆಗಳಿಂತಲೂ ರೂ. 5ರಿಂದ ರೂ.8 ಏರಿಕೆಯಾಗುವ ಸಾಧ್ಯತೆಗಳಿವೆ.

ಕರೋನಾ ಎಫೆಕ್ಟ್- ಮತ್ತಷ್ಟು ದುಬಾರಿಯಾಗಲಿದೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ

ತುರ್ತು ಸಂದರ್ಭದಲ್ಲಿ ಆದಾಯ ಕ್ರೂಢೀಕರಣಕ್ಕಾಗಿ 'ಹಣಕಾಸು ಕಾಯ್ದೆ 2002'ರ ಎಂಟನೇ ಶೆಡ್ಯೂಲ್‌ಗೆ ತಿದ್ದುಪಡಿ ತರಲಾಗುತ್ತಿದ್ದು, ವಿಶೇಷ ಹೆಚ್ಚುವರಿ ಅಬಕಾರಿ ಸುಂಕದಡಿ ಪ್ರತಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ರೂ. 4 ರಿಂದ ರೂ. 18 ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಕರೋನಾ ಎಫೆಕ್ಟ್- ಮತ್ತಷ್ಟು ದುಬಾರಿಯಾಗಲಿದೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ

ಆದರೆ ಅಂತಿಮವಾಗಿ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಪ್ರಸ್ತುತ ಮಾರುಕಟ್ಟೆಗಳಿಂತಲೂ ರೂ. 5ರಿಂದ ರೂ.8 ಏರಿಕೆ ಮಾಡಲು ಅನುಮೋದನೆ ಸಿಗುವ ಸಾಧ್ಯತೆಗಳಿದ್ದು, ಪರಿಸ್ಥಿತಿ ಸುಧಾರಣೆಗೊಳ್ಳುವ ತನಕವು ವಾಹನ ಸವಾರರಿಗೆ ಹೆಚ್ಚುವರಿ ಶುಲ್ಕ ಬಿಸಿ ತಪ್ಪಿದ್ದಲ್ಲ.

ಕರೋನಾ ಎಫೆಕ್ಟ್- ಮತ್ತಷ್ಟು ದುಬಾರಿಯಾಗಲಿದೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ

ಇನ್ನು ಕರೋನಾ ವೈರಸ್ ಹರಡುವಿಕೆಯನ್ನು ತಡೆಯಲು ಜನತಾ ಕರ್ಫ್ಯೂಗೆ ಕರೆಕೊಟ್ಟ ನಂತರ ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಗತ್ಯ ಸೇವೆಗಳನ್ನು ಹೊರತುಪಡಿಸಿ ಎಲ್ಲಾ ವಾಣಿಜ್ಯ ಚಟುವಟಿಕೆಗಳ ಮೇಲೂ ನಿರ್ಬಂಧ ವಿಧಿಸಿದೆ. ಕರೋನಾ ವೈರಸ್ ಹರಡುವಿಕೆಯು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಪರಿಣಾಮಕಾರಿ ತಡೆಗಾಗಿ ಜನಸಂಪರ್ಕವನ್ನು ಸಾಧ್ಯವಾದಷ್ಟು ತಗ್ಗಿಸಲಾಗುತ್ತಿದೆ.

ಕರೋನಾ ಎಫೆಕ್ಟ್- ಮತ್ತಷ್ಟು ದುಬಾರಿಯಾಗಲಿದೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ

ಸಾಫ್ಟ್‌ವೇರ್ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಮನೆಯಿಂದಲೇ ಕಾರ್ಯನಿರ್ವಹಿಸುವ ಆಯ್ಕೆಯನ್ನು ನೀಡಲಾಗಿದ್ದು, ಉತ್ಪಾದನಾ ವಲಯದಲ್ಲಿನ ಕಾರ್ಮಿಕರಿಗೆ ಇಂತಹ ಆಯ್ಕೆ ಕಷ್ಟಸಾಧ್ಯ. ಇದರಿಂದಾಗಿ ಕೆಲವು ಕಡೆಗಳಲ್ಲಿ ಸಂಬಳ ಸಹಿತ ರಜೆ ಘೋಷಿಸಲಾಗಿದ್ದು, ಮುಂದಿನ ಆದೇಶದ ತನಕ ಯಾವುದೇ ವಾಣಿಜ್ಯ ಚಟುವಟಿಕೆಗಳನ್ನು ನಡೆಸದಂತೆ ಮಹತ್ವದ ಆದೇಶ ಹೊರಡಿಸಲಾಗಿದೆ.

ಕರೋನಾ ಎಫೆಕ್ಟ್- ಮತ್ತಷ್ಟು ದುಬಾರಿಯಾಗಲಿದೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ

ಇದರಿಂದಾಗಿ ಕೈಗಾರಿಕೊದ್ಯಮವು ಸಂಪೂರ್ಣ ಸ್ತಬ್ದಗೊಂಡಿದ್ದು, ವೈರಸ್ ಮಹಾಮಾರಿಯಿಂದಾಗಿ ತಪ್ಪಿಸಿಕೊಳ್ಳಲು ಆಟೋಉತ್ಪಾದನಾ ಕಂಪನಿಗಳು ಕೂಡಾ ತಾತ್ಕಾಲಿಕವಾಗಿ ವಾಹನಗಳ ಉತ್ಪಾದನೆಯನ್ನು ಬಂದ್ ಮಾಡಿವೆ.

ಕರೋನಾ ಎಫೆಕ್ಟ್- ಮತ್ತಷ್ಟು ದುಬಾರಿಯಾಗಲಿದೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ

ಮಾರ್ಚ್ 31ರ ತನಕವು ಯಾವುದೇ ಉತ್ಪಾದನಾ ಚಟುವಟಿಕೆಗಳನ್ನು ಕೈಗೊಳ್ಳದಿರಲು ನಿರ್ಧರಿಸಲಾಗಿದ್ದು, ಮಾರ್ಚ್ 31ರ ನಂತರವಷ್ಟೇ ಪರಿಸ್ಥಿತಿಗೆ ಅನುಗುಣವಾಗಿ ಮತ್ತೆ ಉತ್ಪಾದನಾ ಚಟುವಟಿಕೆ ಮುಂದುವರಿಸಬೇಕೆ? ಅಥವಾ ಬೇಡ ಎಂಬುವುದನ್ನು ನಿರ್ಧರಿಸಲಿದ್ದಾರೆ.

ಕರೋನಾ ಎಫೆಕ್ಟ್- ಮತ್ತಷ್ಟು ದುಬಾರಿಯಾಗಲಿದೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ

ದೇಶದ ಪ್ರಮುಖ ವಾಹನ ಉತ್ಪಾದನಾ ಕಂಪನಿಗಳಾದ ಮಾರುತಿ ಸುಜುಕಿ, ಹ್ಯುಂಡೈ, ಮಹೀಂದ್ರಾ, ಟೊಯೊಟಾ, ಟಾಟಾ ಮೋಟಾರ್ಸ್, ಫೋರ್ಡ್, ಹೋಂಡಾ, ರೆನಾಲ್ಟ್ ಮತ್ತು ನಿಸ್ಸಾನ್, ಫೋಕ್ಸ್‌ವ್ಯಾಗನ್, ಮರ್ಸಿಡಿಸ್ ಬೆಂಝ್, ಅಶೋಕ್ ಲೈಲ್ಯಾಂಡ್, ವೊಲ್ವೊ, ಹೀರೋ ಮೋಟೊಕಾರ್ಪ್, ಹೋಂಡಾ ಮೋಟಾರ್‌ಸೈಕಲ್, ಸುಜುಕಿ ಮೋಟಾರ್‌ಸೈಕಲ್, ಟಿವಿಎಸ್ ಮೋಟಾರ್, ಬಜಾಜ್ ಆಟೋ, ಯಮಹಾ, ರಾಯಲ್ ಎನ್‌ಫೀಲ್ಡ್ ಕಂಪನಿಗಳು ಈಗಾಗಲೇ ಅಧಿಕೃತವಾಗಿಯೇ ವಾಹನ ಉತ್ಪಾದನೆ ಬಂದ್ ಮಾಡಿರುವ ಬಗ್ಗೆ ಮಾಹಿತಿ ಹಂಚಿಕೊಂಡಿವೆ.

ಕರೋನಾ ಎಫೆಕ್ಟ್- ಮತ್ತಷ್ಟು ದುಬಾರಿಯಾಗಲಿದೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ

ಭಾರತದಲ್ಲಿ ಕರೋನಾ ವೈರಸ್ ಪರಿಣಾಮವಾಗಿ ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ದಿಯು ಕಳೆದ ಒಂದು ವಾರದಿಂದ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಾಣುತ್ತಿದ್ದು, ಆಟೋ ಉದ್ಯಮವು ಪ್ರತಿ ದಿನ ರೂ.1,500 ಕೋಟಿಯಷ್ಟು ನಷ್ಟ ಎದುರಿಸುತ್ತಿದೆ.

Most Read Articles

Kannada
English summary
Government To Increase Excise Duty on Petrol, Diesel To Increase By Up To ₹ 8 Per Litre. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X